Earthquake: ನೇಪಾಳದ ಜಾಜರ್ಕೋಟ್‌ನಲ್ಲಿ ಪ್ರಬಲ ಭೂಕಂಪ; 70 ಸಾವು, ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Earthquake: ನೇಪಾಳದ ಜಾಜರ್ಕೋಟ್‌ನಲ್ಲಿ ಪ್ರಬಲ ಭೂಕಂಪ; 70 ಸಾವು, ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ

Earthquake: ನೇಪಾಳದ ಜಾಜರ್ಕೋಟ್‌ನಲ್ಲಿ ಪ್ರಬಲ ಭೂಕಂಪ; 70 ಸಾವು, ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ

̳Earthquake in Nepal: ನೇಪಾಳದ ಜಾಜರ್ಕೋಟ್‌ ಹಾಗೂ ಪಶ್ಚಿಮದ ರುಕುಮ್‌ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಪ್ರಬಲ ಭೂಕಂಪ ಸಂಭವಿಸಿದ್ದು 70 ಮಂದಿ ಸಾವನ್ನಪ್ಪಿರುವ ವರದಿಯಾಗಿದೆ ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.4ರಷ್ಟು ದಾಖಲಾಗಿದೆ.

ನೇಪಾಳದಲ್ಲಿ ಭೂಕಂಪ, 69 ಸಾವು (ಸಾಂದರ್ಭಿಕ ಚಿತ್ರ)
ನೇಪಾಳದಲ್ಲಿ ಭೂಕಂಪ, 69 ಸಾವು (ಸಾಂದರ್ಭಿಕ ಚಿತ್ರ) (Pc: Freepik, Pixaby)

̳Earthquake in Nepal: ನೇಪಾಳದಲ್ಲಿ ಭೂಕಂಪ ಸಂಭವಿಸಿದ್ದು 70 ಮಂದಿ ಬಲಿಯಾಗಿದ್ದಾರೆ. ಈ ಒಂದು ತಿಂಗಳಲ್ಲಿ ಸಂಭವಿಸಿದ ಮೂರನೇ ಭೂಕಂಪ ಇದಾಗಿದ್ದು ರಿಕ್ಟರ್‌ ಮಾಪಕದಲ್ಲಿ ಭೂಕಂಪದ ತೀವ್ರತೆ 6.4ರಷ್ಟು ದಾಖಲಾಗಿದೆ. ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದ್ದು ಜನರು ನಿದ್ರೆ ಮಾಡದೆ ಭಯದಿಂದ ರಾತ್ರಿ ಇಡೀ ಎಚ್ಚರವಾಗಿರವುದು ವರದಿಯಾಗಿದೆ.

ಶುಕ್ರವಾರ ರಾತ್ರಿ ಸಂಭವಿಸಿದ ಭೂಕಂಪ

ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿ 10 ಕಿಮೀ ಆಳದಲ್ಲಿದೆ ಎಂದು ಎನ್‌ಸಿಎಸ್‌ ತಿಳಿಸಿದೆ. ಶುಕ್ರವಾರ ರಾತ್ರಿ ನೇಪಾಳದ ಜಾಜರ್ಕೋಟ್‌ ಜಿಲ್ಲೆಯ ಲಮಿಡಾಂಡ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು ಜನರು ಕೂಡಲೇ ಭಯದಿಂದ ಮನೆ ಹೊರಗಡೆ ಓಡಿ ಬಂದಿದ್ದಾರೆ. ಆದರೆ ಭೂಕಂಪಕ್ಕೆ ಮನೆ, ಕಟ್ಟಡಗಳು ಕುಸಿದಿದ್ದು ಜಾಜರ್ಕೋಟ್‌ನಲ್ಲಿ 34, ಪಶ್ಚಿಮದ ರುಕುಮ್‌ ಜಿಲ್ಲೆಯಲ್ಲಿ 36 ಜನರು ಸಾವನ್ನಪ್ಪಿದ್ದು ಭೂಕಂಪಕ್ಕೆ ಒಟ್ಟು 70 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಉತ್ತರ ಭಾರತದಲ್ಲೂ ಭೂಮಿ ಕಂಪಿಸಿದ ಅನುಭವ

ಭೂಕಂಪ ಸಂಭವಿಸಿದ ಪ್ರದೇಶಗಳಿಗೆ ರಕ್ಷಣಾ ಕಾರ್ಯಕ್ಕಾಗಿ ಎಲ್ಲಾ ಮೂರು ಸೆಕ್ಯೂರಿಟಿ ಏಜೆನ್ಸಿಗಳನ್ನು ರವಾನಿಸಿರುವುದಾಗಿ ನೇಪಾಳದ ಪ್ರಧಾನಿ ಪುಷ್ಪ ಕಮಲ್‌ ದಹಾಲ್‌ ಮಾಹಿತಿ ನೀಡಿದ್ದಾರೆ. ಜಾಜರ್ಕೋಟ್‌ , ರುಕುಮ್‌ ಜಿಲ್ಲೆಯಲ್ಲಿ ಮಾತ್ರವಲ್ಲದೆ ದೈಲೇಖ್‌, ಸಲ್ಯಾನ್‌ ರೋಲ್ಪಾ ಜಿಲ್ಲೆಗಳಲ್ಲಿ ಕೂಡಾ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೇಪಾಳದಲ್ಲಿ ಭೂಕಂಪ ಸಂಭವಿಸಿದ ವೇಳೆ ಉತ್ತರ ಭಾರತದ ದೆಹಲಿ, ನೋಯ್ಡಾ, ಗುರುಗ್ರಾಮ್‌, ಬಿಹಾರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕೂಡಾ ಭೂಮಿ ಕಂಪಿಸಿದ ಅನುಭವವಾಗಿದೆ. ದೆಹಲಿಯಲ್ಲಿ ಪ್ರಮುಖ ಕಟ್ಟಡಗಳು ಕೂಡಾ ಕಂಪಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಒಂದು ತಿಂಗಳಲ್ಲಿ 3 ಬಾರಿ ಭೂಕಂಪ

ಕಳೆದ ಒಂದು ತಿಂಗಳಲ್ಲಿ ನೇಪಾಳದಲ್ಲಿ 3 ಬಾರಿ ಭೂಕಂಪ ಸಂಭವಿಸಿದೆ. ಅಕ್ಟೋಬರ್‌ 3 ರಂದು ಭೂಕಂಪ ಸಂಭವಿಸಿತ್ತು. ಆದರೆ ಸಾವು ಸೋವು ವರದಿ ಆಗಿರಲಿಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ ದೋತಿ ಜಿಲ್ಲೆಯಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 6 ಮಂದಿ ಬಲಿಯಾಗಿದ್ದರು. 2015ರಲ್ಲಿ ಸಂಭವಿಸಿದ್ದ ಭೂಕಂಪದಲ್ಲಿ 9,000 ಜನರು ಪ್ರಾಣ ಕಳೆದುಕೊಂಡಿದ್ದರು. ಆಗ ಭೂಕಂಪದ ತೀವ್ರತೆ 7.8ರಷ್ಟು ವರದಿಯಾಗಿತ್ತು. ಸಾವಿರಾರು ಮಂದಿ ಮನೆ, ಆಸ್ತಿ ಕಳೆದುಕೊಂಡಿದ್ದರು. ಇದೀಗ ಮತ್ತೆ ಭೂಕಂಪ ಸಂಭವಿಸಿದ್ದು ಜನರು ಭಯದಿಂದಲೇ ಬದುಕುವಂತಾಗಿದೆ. ಭೂಕಂಪ ಸಂಭವಿಸಿದ ಜಾಜರ್ಕೋಟ್‌, ಕಠ್ಮಂಡುವಿನಿಂದ 500 ಕಿಮೀ ದೂರದಲ್ಲಿದೆ.

ಶುಕ್ರವಾರ ಸಂಭವಿಸಿದ ಭೂಕಂಪದಲ್ಲಿ ಗಾಯಗೊಂಡವರನ್ನು ಜಾಜರ್ಕೋಟ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.