ಕೇಂದ್ರ ಬಜೆಟ್ 2024; ಮೋದಿ 3.0 ಬಜೆಟ್, 7ನೇ ಬಾರಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಇಂದು, ಲೈವ್ ಅಪ್ಡೇಟ್ಸ್ , ನೇರ ಪ್ರಸಾರ ವೀಕ್ಷಣೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೇಂದ್ರ ಬಜೆಟ್ 2024; ಮೋದಿ 3.0 ಬಜೆಟ್, 7ನೇ ಬಾರಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಇಂದು, ಲೈವ್ ಅಪ್ಡೇಟ್ಸ್ , ನೇರ ಪ್ರಸಾರ ವೀಕ್ಷಣೆ ವಿವರ

ಕೇಂದ್ರ ಬಜೆಟ್ 2024; ಮೋದಿ 3.0 ಬಜೆಟ್, 7ನೇ ಬಾರಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಇಂದು, ಲೈವ್ ಅಪ್ಡೇಟ್ಸ್ , ನೇರ ಪ್ರಸಾರ ವೀಕ್ಷಣೆ ವಿವರ

Budget 2024 Live Streaming: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2024 25 ಅನ್ನು ಇಂದು (ಜುಲೈ 23) ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಇದರ ನೇರ ಪ್ರಸಾರ, ಲೈವ್ ಸ್ಟ್ರೀಮಿಂಗ್‌ ಎಷ್ಟು ಗಂಟೆಗೆ, ಎಲ್ಲಿ ಪ್ರಸಾರವಾಗುತ್ತದೆ ಮತ್ತು ಇತರೆ ವಿವರ ಇಲ್ಲಿದೆ.

ಕೇಂದ್ರ ಬಜೆಟ್ 2024; ಮೋದಿ 3.0 ಬಜೆಟ್, 7ನೇ ಬಾರಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಇಂದು, ಲೈವ್ ಅಪ್ಡೇಟ್ಸ್ , ನೇರ ಪ್ರಸಾರ ವೀಕ್ಷಣೆ ವಿವರ
ಕೇಂದ್ರ ಬಜೆಟ್ 2024; ಮೋದಿ 3.0 ಬಜೆಟ್, 7ನೇ ಬಾರಿ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ಇಂದು, ಲೈವ್ ಅಪ್ಡೇಟ್ಸ್ , ನೇರ ಪ್ರಸಾರ ವೀಕ್ಷಣೆ ವಿವರ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜುಲೈ 23) ಬೆಳಿಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ 2024 25 ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿದ್ದು, ನಿರ್ಮಲಾ ಸೀತಾರಾಮನ್ ಅವರು 2019 ರಿಂದ ನಿರಂತರವಾಗಿ ಸತತವಾಗಿ ಮಂಡಿಸುತ್ತಿರುವ ದಾಖಲೆಯ 7ನೇ ಬಜೆಟ್ ಕೂಡ ಹೌದು. ಈ ವರ್ಷ ಅಂದರೆ 2024ರಲ್ಲಿ ಮಂಡನೆಯಾಗುತ್ತಿರುವ ಎರಡನೇ ಬಜೆಟ್ ಆಗಿರುತ್ತದೆ.

ಲೋಕಸಭೆ ಚುನಾವಣೆಗೂ ಮುನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2024ರ ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಮಂಡಿಸಿದ್ದರು. ಈ ಬಾರಿ ಮಂಡಿಸಲಿರುವ ಸಾಮಾನ್ಯ ಬಜೆಟ್ 2024 ಅಥವಾ ಪ್ರಸಕ್ತ ಹಣಕಾಸು ವರ್ಷದ (2024-25) ಪೂರ್ಣ ಪ್ರಮಾಣದ ಬಜೆಟ್‌ ಉದ್ಯಮ, ತೆರಿಗೆದಾರರು, ಮಧ್ಯಮ-ಆದಾಯದ ವರ್ಗದಂತಹ ಎಲ್ಲಾ ಕ್ಷೇತ್ರಗಳ ಕೆಲಸಗಳಿಗೆ ಅನುದಾನವನ್ನು ಒದಗಿಸಲಿದೆ. ಮೋದಿ 3.0 ಸರ್ಕಾರದಿಂದ ಅನೇಕ ದೊಡ್ಡ ಘೋಷಣೆಗಳನ್ನು ನಿರೀಕ್ಷಿಸಲಾಗುತ್ತಿದೆ.

ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರದಿಂದ ತೆರಿಗೆದಾರರು ಭಾರಿ ತೆರಿಗೆ ವಿನಾಯಿತಿ ಪಡೆಯುವ ಭರವಸೆಯಲ್ಲಿದ್ದಾರೆ. ಸರ್ಕಾರವು ಜಿಎಸ್‌ಟಿ ಸುಧಾರಣಾ ಕ್ರಮವನ್ನು ಕೂಡ ಘೋ‍ಷಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ನೀವು ಹಣಕಾಸು ಸಚಿವರ ಬಜೆಟ್ ಭಾಷಣವನ್ನು ಆನ್‌ಲೈನ್ ಮತ್ತು ಟಿವಿಯಲ್ಲಿ ಲೈವ್ ವೀಕ್ಷಿಸುವುದಕ್ಕೆ ಸಂಬಂಧಿಸಿದ ವಿವರ ಇಲ್ಲಿದೆ.

ಕೇಂದ್ರ ಬಜೆಟ್ 2024 25; ದಿನಾಂಕ ಮತ್ತು ಸಮಯ, ನೇರ ಪ್ರಸಾರ ಲೈವ್ ಸ್ಟ್ರೀಮಿಂಗ್‌ ವಿವರ

ಕೇಂದ್ರ ಬಜೆಟ್ ಮಂಡನೆ - ಇಂದು (ಜುಲೈ 23)

ಕೇಂದ್ರ ಬಜೆಟ್ ಮಂಡನೆ ಸಮಯ - ಬೆಳಗ್ಗೆ 11 ಗಂಟೆಗೆ

ಕೇಂದ್ರ ಬಜೆಟ್ ಮಂಡನೆ ಎಲ್ಲಿ - ಸಂಸತ್‌ನಲ್ಲಿ

ಕೇಂದ್ರ ಬಜಟ್ ಮಂಡಿಸುವವರು ಯಾರು- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರ ಬಜೆಟ್‌ 2024 25 ಲೈವ್ ಸ್ಟ್ರೀಮಿಂಗ್ ಅಪ್ಡೇಟ್ಸ್‌ ಎಲ್ಲೆಲ್ಲಿ:

ಕೇಂದ್ರ ಬಜೆಟ್ 2024ರ ನೇರ ಪ್ರಸ್ತುತಿಯನ್ನು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದು ಎಲ್ಲರಿಗೂ ಉಚಿತವಾಗಿ ನೋಡಲು ಲಭ್ಯವಿದ್ದು, ಅವುಗಳ ವಿವರ ಹೀಗಿದೆ.

1) ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಇದರ ಲೈವ್ ಅಪ್ಡೇಟ್ಸ್‌ಗಳನ್ನು ನೀವು ಪಡೆಯಬಹುದು ಅದಕ್ಕಾಗಿ Budget 2024 Live: ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೆಕ್ಕದಲ್ಲಿ ಏನಿದೆ? ನಿರೀಕ್ಷೆಗಳು ನೂರಾರು ಕ್ಲಿಕ್ ಮಾಡಿ.

2) ಹಣಕಾಸು ಸಚಿವಾಲಯದ ಅಂತರ್ಜಾಲ ತಾಣ - www.finmin.nic.in

3) ಸಂಸದ್‌ ಟಿವಿ, ದೂರದರ್ಶನ ಮತ್ತು ಯೂಟೂಬ್‌ಗಳಲ್ಲಿ ಕೇಂದ್ರ ಬಜೆಟ್ ಭಾಷಣದ ನೇರ ಪ್ರಸಾರ ಇರಲಿದೆ.

ಕೇಂದ್ರ ಬಜೆಟ್ 2024 PDF ಮತ್ತು ಪೂರ್ಣ ದಾಖಲೆಗಳು ಎಲ್ಲಿ ಲಭ್ಯ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್‌ ಪ್ರಸ್ತುತಿಯಾದ ಬಳಿಕ, ಕೇಂದ್ರ ಬಜೆಟ್ 2024 PDF ಮತ್ತು ವಿವರ ದಾಖಲೆಗಳು, ಹೈಲೈಟ್ಸ್‌ ಸೇರಿ ಕೇಂದ್ರ ಬಜೆಟ್ 2024 25ರ ಡಾಕ್ಯುಮೆಂಟ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿರುತ್ತವೆ. ಸರ್ಕಾರದ ಅಧಿಕೃತ ವೆಬ್‌ಸೈಟ್ www.indiabudget.gov.in ನಲ್ಲಿ ನೀವು ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಈ ದಾಖಲೆಗಳನ್ನು ಪಡೆಯಬಹುದು.

ಈ ವರ್ಷ ಜುಲೈನಲ್ಲಿ ಕೇಂದ್ರ ಬಜೆಟ್ ಅನ್ನು ಏಕೆ ಮಂಡಿಸಲಾಗುತ್ತದೆ?ಸಾಂಪ್ರದಾಯಿಕವಾಗಿ, ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಾಗುತ್ತದೆ. ಆದಾಗ್ಯೂ, ಇದು ಚುನಾವಣಾ ವರ್ಷವಾದ ಕಾರಣ 2024ರ ಲೋಕಸಭೆ ಚುನಾವಣೆಗೆ ಮೊದಲು ಫೆಬ್ರವರಿ 1 ರಂದು ಮಧ್ಯಂತರ ಬಜೆಟ್ ಅನ್ನು ಸರ್ಕಾರ ಮಂಡಿಸಿತ್ತು. ಈಗ ಹೊಸ ಸರ್ಕಾರ ರಚನೆಯಾಗಿದ್ದು, ಇಂದು 2024-2025 ರ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ ಅನ್ನು ಮಂಡನೆಯಾಗುತ್ತಿದೆ. ಇದು ಮುಂಬರುವ ವರ್ಷಕ್ಕೆ ತನ್ನ ಹಣಕಾಸಿನ ಕಾರ್ಯತಂತ್ರ ಮತ್ತು ನೀತಿ ಆದ್ಯತೆಗಳನ್ನು ರೂಪಿಸಲು ಹೊಸ ಆಡಳಿತಕ್ಕೆ ಅವಕಾಶ ಮಾಡಿಕೊಡುತ್ತದೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ತಾಜಾ ವಿದ್ಯಮಾನ ಮತ್ತು ಬಜೆಟ್‌ ವಿವರಣೆ, ರಾಜಕೀಯ ವಿಶ್ಲೇಷಣೆಗಳಿಗಾಗಿ kannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.