ಕೇಂದ್ರ ಬಜೆಟ್ 2025: ಬಡವರು, ಯುವಕರು, ಕೃಷಿಕರು, ಸ್ತ್ರೀ ಕೇಂದ್ರಿತ ಅಭಿವೃದ್ಧಿಗೆ ಆದ್ಯತೆ; ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ - 10 ಅಂಶ
Budget 2025: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಫೆ 1) ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025 ಮಂಡಿಸಿದರು. ಬಡವರು, ಯುವಕರು, ಕೃಷಿಕರು ಮತ್ತು ಸ್ತ್ರೀ ಶಕ್ತಿ ಕೇಂದ್ರಿತ ಅಭಿವೃದ್ಧಿಗೆ ಆದ್ಯತೆ ನೀಡುತ್ತಿರುವುದಾಗಿ ಅವರು ತಮ್ಮ 8ನೇ ಬಜೆಟ್ ಭಾಷಣದಲ್ಲಿ ವಿವರಿಸಿದರು. 10 ಮುಖ್ಯ ಅಂಶಗಳ ವಿವರ.

Budget 2025: ಬಹುನಿರೀಕ್ಷಿತ ಕೇಂದ್ರ ಬಜೆಟ್ 2025-26 ಇಂದು (ಫೆ 1) ಲೋಕಸಭೆಯಲ್ಲಿ ಮಂಡನೆಯಾಗಿದೆ. ಬಡವರು, ಯುವಕರು, ಕೃಷಿಕರು ಮತ್ತು ನಾರಿ ಶಕ್ತಿಗೆ ಆದ್ಯತೆ ನೀಡುತ್ತಿರುವುದಾಗಿ ಅವರು ತಮ್ಮ 8ನೇ ಬಜೆಟ್ ಭಾಷಣದಲ್ಲಿ ವಿವರಿಸಿದರು. ಬಡವರು, ಯುವಕರು, ಕೃಷಿಕರು ಮತ್ತು ನಾರಿ ಶಕ್ತಿ ಕೇಂದ್ರಿತವಾಗಿ 10 ಮುಖ್ಯ ಅಂಶಗಳ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ಬಜೆಟ್ ಗಮನ ಕೇಂದ್ರೀಕರಿಸಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.
ಬಡವರು, ಯುವಕರು, ಕೃಷಿಕರು ಮತ್ತು ನಾರಿ ಶಕ್ತಿ ಕೇಂದ್ರಿತ ಕೇಂದ್ರ ಬಜೆಟ್ 2025 10 ಮುಖ್ಯ ಅಂಶಗಳು
1) ಸಕ್ಷಮ ಅಂಗನವಾಡಿ ಮತ್ತು ಪೋಷಣ್ 2.0 ಯೋಜನೆ; ಇದು ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಯೋಜನೆಯಾಗಿದ್ದು, ಅವರ ಪೌಷ್ಠಿಕತೆ ಕುರಿತು ಕಾಳಜಿಹೊಂದಿರುವಂಥದ್ದು.
2) ಐಐಟಿಗಳ ಸಾಮರ್ಥ್ಯ ವಿಸ್ತರಣೆ: 2014ರ ನಂತರ ಆರಂಭವಾಗಿರುವ 5 ಐಐಟಿಗಳಲ್ಲಿ ಹೆಚ್ಚುವರಿ ಮೂಲಸೌಕರ್ಯ ಒದಗಿಸಲಾಗುತ್ತದೆ. ಪರಿಣಾಮ ಹೆಚ್ಚುವರಿಯಾಗಿ 6500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಕಲಿಕೆಗೆ ಅವಕಾಶವಾಗುತ್ತದೆ.
3) ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಸೆಂಟರ್: ಭಾರತದ ಎಲ್ಲ ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳಲ್ಲಿ ಮುಂದಿನ ಮೂರು ವರ್ಷದ ಅವಧಿಯಲ್ಲಿ ಡೇ ಕೇರ್ ಕ್ಯಾನ್ಸರ್ ಸೆಂಟರ್ ಶುರುವಾಗಲಿದೆ. 200 ಸೆಂಟರ್‌ಗಳು ಮುಂದಿನ ವರ್ಷವೇ ಸ್ಥಾಪನೆಯಾಗಲಿದೆ.
4) ಭಾರತೀಯ ಭಾಷಾ ಪುಸ್ತಕ ಸ್ಕೀಮ್: ಭಾರತೀಯ ಭಾಷೆಯ ಪುಸ್ತಕಗಳನ್ನು ಡಿಜಿಟಲ್ ರೂಪದಲ್ಲಿ ಶಾಲಾ ಮತ್ತು ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಒದಗಿಸುವಂತಹ ಯೋಜನೆ.
5) ಕೌಶಲ ಪರಿಣತಿಯ ಕೇಂದ್ರಗಳು: ಭಾರತಕ್ಕಾಗಿ ಮತ್ತು ಜಗತ್ತಿಗಾಗಿ ಎನ್ನುವಂತೆ ನಮ್ಮ ಯುವಜನರ ಕೌಶಲ ವೃದ್ಧಿಗಾಗಿ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸ್ಕಿಲ್ಲಿಂಗ್ ಸ್ಥಾಪನೆ.
6) ಅಟಲ್ ಟಿಂಕರಿಂಗ್ ಲ್ಯಾಬ್ಸ್: ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ 50,000 ಅಟಲ್ ಟಿಂಕರಿಂಗ್ ಲ್ಯಾಬ್ ಸ್ಥಾಪನೆಯಾಗಲಿದೆ.
7) ಶಿಕ್ಷಣಕ್ಕಾಗಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಎಐ: ಭಾರತದಲ್ಲಿ ಶಿಕ್ಷಣಕ್ಕಾಗಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸ್ಥಾಪಿಸುವುದಾಗಿ ಕೇಂದ್ರ ಬಜೆಟ್ 2025ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
8) ವೈದ್ಯಕೀಯ ಶಿಕ್ಷಣದ ವಿಸ್ತರಣೆ: ಮುಂದಿನ ಐದು ವರ್ಷದ ಅವಧಿಯಲ್ಲಿ ದೇಶದ ವೈದ್ಯಕೀಯ ಕಾಲೇಜುಗಳ ವೈದ್ಯಕೀಯ ಕಲಿಕಾರ್ಥಿಗಳ ಸೀಟುಗಳನ್ನು ಇನ್ನೂ 10,000 ಹೆಚ್ಚಿಸಲಾಗುತ್ತಿದೆ. ಮುಂದಿನ ವರ್ಷ 10,000 ಸೀಟುಗಳು ಸೇರ್ಪಡೆಯಾಗಲಿವೆ.
9) ಪಿಎಂ ಸ್ವನಿಧಿ: ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವಂತಹ ಪಿಎಂ ಸ್ವನಿಧಿ ಯೋಜನೆ ಪರಿಷ್ಕರಿಸಲಾಗುತ್ತಿದ್ದು, ಬ್ಯಾಂಕ್‌ಗಳಿಂದಲೂ ಸಾಲ ಪಡೆಯಲು ಅವಕಾಶ ನೀಡಲಾಗುತ್ತಿದೆ. ಯುಪಿಐ ಲಿಂಕ್ ಆಗಿರುವ ಕ್ರೆಡಿಟ್ ಕಾರ್ಡ್ ಮೂಲಕ 30,000 ರೂಪಾಯಿ ತನಕ ಸಾಲ ಮಿತಿ ಒದಗಿಸಲಾಗುತ್ತಿದೆ. ಇದು ಸ್ವ ಉದ್ಯೋಗಿಗಳ ಸಾಮರ್ಥ್ಯ ವೃದ್ಧಿಗೆ ನೆರವಾಗಲಿದೆ.
10) ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆ: ಆನ್‌ಲೈನ್ ಪ್ಲಾಟ್‌ಫಾರಂಗಳ ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಸರ್ಕಾರ ಗಮನಹರಿಸಿದೆ. ಅವರಿಗೆ ಐಡಿ ಕಾರ್ಡ್, ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ, ಪಿಎಂ ಜನ ಆರೋಗ್ಯ ಯೋಜನೆಯ ಮೂಲಕ ಆರೋಗ್ಯ ಸೇವೆ ಒದಗಿಸುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ಸರ್ಕಾರಿ ಸೆಕೆಂಡರಿ ಸ್ಕೂಲ್, ಪಿಎಚ್‌ಸಿಗಳಿಗೆ ಇಂಟರ್‌ನೆಟ್
ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವ ಮುಖ್ಯ ಯೋಜನೆಗಳ ಪೈಕಿ ಇನ್ನೊಂದು ಸರ್ಕಾರಿ ಸೆಕೆಂಡರಿ ಸ್ಕೂಲ್, ಪಿಎಚ್‌ಸಿಗಳಿಗೆ ಇಂಟರ್‌ನೆಟ್ ಸಂಪರ್ಕ. ಬ್ರಾಡ್ ಬ್ಯಾಂಡ್ ಸಂಪರ್ಕವನ್ನು ಭಾರತ್‌ನೆಟ್ ಯೋಜನೆ ಮೂಲಕ ಒದಗಿಸುವುದಾಗಿ ಕೇಂದ್ರ ಬಜೆಟ್ ಭಾಷಣದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ವಿಭಾಗ