ಕೇಂದ್ರ ಬಜೆಟ್ 2025; ಮಧ್ಯಮ ವರ್ಗಕ್ಕೆ ಶಕ್ತಿ ತುಂಬುವ ಕಡೆಗೆ ಕೇಂದ್ರ ಸರ್ಕಾರದ ಒಲವು, 6 ಆದ್ಯತಾ ವಲಯಗಳಲ್ಲಿ ಸುಧಾರಣೆ
Budget 2025: ಬಡವರು, ಯುವಕರು, ರೈತರು ಮತ್ತು ಮಹಿಳೆಯರನ್ನು ಗುರಿಯಾಗಿಸಿಕೊಂಡು ಕೈಗೊಳ್ಳಲಿರುವ ಅಭಿವೃದ್ಧಿ ಕ್ರಮಗಳ ವಿವರಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಕೇಂದ್ರ ಬಜೆಟ್ 2025ರಲ್ಲಿ ವಿವರಿಸಿದರು.

Budget 2025: ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶನಿವಾರ (ಫೆ 1) ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025 ಮಂಡಿಸುತ್ತ, ಕೇಂದ್ರ ಸರ್ಕಾರವು ಕೈಗೊಳ್ಳಲಿರುವ ಅಭಿವೃದ್ಧಿ ಕ್ರಮಗಳನ್ನು ಪ್ರಸ್ತಾಪಿಸಿದ್ದು, ಬಡವರು, ಯುವಕರು, ರೈತರು ಮತ್ತು ಮಹಿಳೆಯರು ಸೇರಿ 10 ಮುಖ್ಯ ಅಂಶಗಳ ಮೇಲೆ ಈ ಸಲದ ಬಜೆಟ್ ಗಮನ ಕೇಂದ್ರೀಕರಿಸಿದೆ ಎಂದು ವಿವರಿಸಿದರು.
ಸತತ ಎಂಟನೇ ಬಜೆಟ್ ಅನ್ನು ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಧ್ಯಮ ವರ್ಗದ ಖರ್ಚು ಮಾಡುವ ಶಕ್ತಿಯನ್ನು ಹೆಚ್ಚಿಸುವುದು, ಅಂತರ್ಗತ ಅಭಿವೃದ್ಧಿಯನ್ನು ಉತ್ತೇಜಿಸುವುದು ಮತ್ತು ಬೆಳವಣಿಗೆಯನ್ನು ಬಲಪಡಿಸಲು ಖಾಸಗಿ ಹೂಡಿಕೆಯನ್ನು ಹೆಚ್ಚಿಸುವತ್ತ ಗಮನ ಹರಿಸಲಾಗುತ್ತದೆ ಎಂದು ಹೇಳಿದರು. ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು ನಾಲ್ಕು ವರ್ಷಗಳಲ್ಲಿ ನಿಧಾನಗತಿಯ ಬೆಳವಣಿಗೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಕಳೆದ 10 ವರ್ಷಗಳ ಸರ್ಕಾರದ ಅಭಿವೃದ್ಧಿ ದಾಖಲೆ ಮತ್ತು ರಚನಾತ್ಮಕ ಸುಧಾರಣೆಗಳು ಜಾಗತಿಕ ಗಮನ ಸೆಳೆದಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕೇಂದ್ರ ಬಜೆಟ್ 2025; ಆರು ಮುಖ್ಯ ಕ್ಷೇತ್ರಗಳಿಗೆ ಆದ್ಯತೆ
1) ತೆರಿಗೆ
2) ವಿದ್ಯುತ್ ವಲಯ
3)ಗಣಿಗಾರಿಕೆ
4) ನಗರಾಭಿವೃದ್ಧಿ
5) ನಿಯಂತ್ರಕ ಸುಧಾರಣೆ
6) ಕೃಷಿ ಕ್ಷೇತ್ರ
ಕೇಂದ್ರ ಬಜೆಟ್ 2025; ಮಧ್ಯಮ ವರ್ಗದ ಖರ್ಚು ಮಾಡುವ ಶಕ್ತಿ ಹೆಚ್ಚಿಸಲು ಕ್ರಮ
ಈ ಸರ್ಕಾರವು ಬೆಳವಣಿಗೆಯ ವೇಗವನ್ನು ಹೆಚ್ಚಿಸುವ, ಮಧ್ಯಮ ವರ್ಗವನ್ನು ಉನ್ನತೀಕರಿಸುವ ಬಗ್ಗೆ ಗಮನಹರಿಸುತ್ತದೆ. ನಾವು ದೇಶದ ಸಾಮರ್ಥ್ಯವನ್ನು ಅನ್ವೇಷಿಸಲು ಪ್ರಯಾಣವನ್ನು ಪ್ರಾರಂಭಿಸುತ್ತೇವೆ. ವಿಕಸಿತ ಭಾರತಕ್ಕಾಗಿ ನಮ್ಮ ಆಕಾಂಕ್ಷೆ ದೃಢ ನಿಶ್ಚಯದಿಂದ ಮುಂದೆ ಸಾಗಲು ಪ್ರೇರೇಪಿಸುತ್ತದೆ. ನಮ್ಮ ಆರ್ಥಿಕತೆಯು ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಅವರು ಸಂಸತ್ತಿನಲ್ಲಿ ಹೇಳಿದರು.
ತೆಲುಗು ಕವಿಯ ಹಾಡಿನ ಸಾಲುಗಳನ್ನು ಉಲ್ಲೇಖಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಆರೋಗ್ಯ ಸೇವೆ, ಶಿಕ್ಷಣ ಮತ್ತು ಕೃಷಿ ಕ್ಷೇತ್ರ ಮೇಲೆ ಈ ಸಲದ ಬಜೆಟ್ ಕೇಂದ್ರೀಕರಿಸಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರವು ಶುಕ್ರವಾರ ಬಿಡುಗಡೆ ಮಾಡಿರುವ ಆರ್ಥಿಕ ಸಮೀಕ್ಷೆ ವರದಿಯಲ್ಲಿ, ಏಪ್ರಿಲ್ 1 ರಿಂದ ಪ್ರಾರಂಭವಾಗುವ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ನಿಧಾನವಾಗಿ ಉಳಿಯುತ್ತದೆ ಮಧ್ಯಮ-ಅವಧಿಯ ಬೆಳವಣಿಗೆಯನ್ನು ಹೆಚ್ಚಿಸಲು ಭೂಮಿ ಮತ್ತು ಕಾರ್ಮಿಕರಂತಹ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಸುಧಾರಣೆಗಳು ಆಗುವುದರ ಕಡೆಗೆ ಗಮನಸೆಳೆಯಲಾಗಿದೆ.
ಹತ್ತಿರದ-ಅವಧಿಯ ಬೆಳವಣಿಗೆಯು 10 ವರ್ಷಗಳ ಸರಾಸರಿಗೆ ಅನುಗುಣವಾಗಿದ್ದರೂ, ಭಾರತವು ತನ್ನ ದೀರ್ಘಕಾಲೀನ ಆರ್ಥಿಕ ಗುರಿಗಳನ್ನು ಪೂರೈಸಲು ಮತ್ತು ಅದರ ದೊಡ್ಡ, ಯುವ ಜನಸಂಖ್ಯೆಗೆ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸಲು ಶೇಕಡಾ 8 ರಷ್ಟು ಬೆಳವಣಿಗೆಯ ದರವನ್ನು ಬಯಸುತ್ತದೆ.
ವಿಭಾಗ