Budget 2025: ರೈಲ್ವೆ ಬಜೆಟ್‌ 3 ಲಕ್ಷ ಕೋಟಿ ರೂ.ಗೆ ತಲುಪುವ ನಿರೀಕ್ಷೆ, ವಂದೇ ಭಾರತ್‌, ಬುಲೆಟ್‌ ರೈಲುಗಳಿಗೆ ಬಲ; ಪ್ರಮುಖ 10 ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Budget 2025: ರೈಲ್ವೆ ಬಜೆಟ್‌ 3 ಲಕ್ಷ ಕೋಟಿ ರೂ.ಗೆ ತಲುಪುವ ನಿರೀಕ್ಷೆ, ವಂದೇ ಭಾರತ್‌, ಬುಲೆಟ್‌ ರೈಲುಗಳಿಗೆ ಬಲ; ಪ್ರಮುಖ 10 ಅಂಶಗಳು

Budget 2025: ರೈಲ್ವೆ ಬಜೆಟ್‌ 3 ಲಕ್ಷ ಕೋಟಿ ರೂ.ಗೆ ತಲುಪುವ ನಿರೀಕ್ಷೆ, ವಂದೇ ಭಾರತ್‌, ಬುಲೆಟ್‌ ರೈಲುಗಳಿಗೆ ಬಲ; ಪ್ರಮುಖ 10 ಅಂಶಗಳು

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಲಿರುವ ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ವಲಯಕ್ಕೆ ಏನೇನು ಆದ್ಯತೆಗಳು ಸಿಗಬಹುದು ಎನ್ನುವ ಪ್ರಮುಖಾಂಶಗಳ ಪಟ್ಟಿ ಇಲ್ಲಿದೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿರುವ ಬಜೆಟ್‌ನಲ್ಲಿ ರೈಲ್ವೆ ವಲಯದ ನಿರೀಕ್ಷೆಗಳು ಅಧಿಕ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿರುವ ಬಜೆಟ್‌ನಲ್ಲಿ ರೈಲ್ವೆ ವಲಯದ ನಿರೀಕ್ಷೆಗಳು ಅಧಿಕ.

ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು 2025-26 ರ ಆರ್ಥಿಕ ವರ್ಷಕ್ಕೆ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾದ ನಂತರ ಇದು ಎರಡನೇ ಬಜೆಟ್ ಆಗಿದೆ. ಜೂನ್ 2024 ರಲ್ಲಿ ತಮ್ಮ ಮಿತ್ರಪಕ್ಷಗಳೊಂದಿಗೆ ಸರ್ಕಾರವನ್ನು ರಚಿಸಿದ ನಂತರ ಪ್ರಧಾನಿ ಮೋದಿಯವರ ಮೂರನೇ ಅವಧಿಯ ಮೊದಲ ಪೂರ್ಣ ಬಜೆಟ್ ಅನ್ನು ಕಳೆದ ವರ್ಷ ಜುಲೈನಲ್ಲಿ ಮಂಡಿಸಲಾಯಿತು. ಈಗ ಮತ್ತೊಂದು ಬಜೆಟ್‌ ಮಂಡನೆಯಾಗುತ್ತಿದೆ. ಅದರಲ್ಲಿ ರೈಲ್ವೆ ವಲಯಕ್ಕೆ ಏನು ಸಿಗಬಹುದು ಎನ್ನುವ ಕುತೂಹಲಗಳಿವೆ.

  • 2024ರ ಜುಲೈ 23 ರಂದು ಮಂಡಿಸಿದ ಹಿಂದಿನ ಬಜೆಟ್‌ನಲ್ಲಿ ಸರ್ಕಾರವು ಭಾರತೀಯ ರೈಲ್ವೆಗೆ ಸುಮಾರು 2,62,200 ಕೋಟಿ ರೂ.ಗಳ ದಾಖಲೆಯ ಮೊತ್ತ ಹಂಚಿಕೆ ಮಾಡಿತ್ತು. ಅದರಲ್ಲಿ ಈವರೆಗೆ ಶೇ 80ರಷ್ಟು ಹಣ ಖರ್ಚಾಗಿದೆ. ಅದು ಮೂರು ತಿಂಗಳ ಅಂತರದಲ್ಲಿಯೇ ಮಂಡನೆಯಾದ ಬಜೆಟ್‌ ಗಿಂತ ಶೇ. 2ರಷ್ಟು ಅಧಿಕ.
  • ಪ್ರಸ್ತುತ ದೇಶದ ಅಭಿವೃದ್ಧಿ ಮಾದರಿಯನ್ನು ಅವಲೋಕಿಸಿದರೆ, ಈ ಬಾರಿ ಸರ್ಕಾರ ರೈಲ್ವೆಗೆ ದಾಖಲೆಯ ಬಜೆಟ್ ಅನ್ನು ಮೀಸಲಿಡಬಹುದು ಎಂದು ನಿರೀಕ್ಷಿಸಲಾಗಿದೆ. ಈ ಬಾರಿ ಸರ್ಕಾರ ರೈಲ್ವೆ ಬಜೆಟ್ ಅನ್ನು ಶೇ.15 ರಿಂದ 20 ರಷ್ಟು ಹೆಚ್ಚಿಸಬಹುದು ಎಂದು ತಜ್ಞರು ನಂಬಿದ್ದಾರೆ, ಇದು ರೈಲ್ವೆಗೆ ಮೀಸಲಿಟ್ಟ ಬಜೆಟ್ ಪ್ರಮಾಣ ಸುಮಾರು 3 ಲಕ್ಷ ಕೋಟಿ ರೂ. ತಲುಪಬಹುದು.
  • ಬುಲೆಟ್ ರೈಲು ಯೋಜನೆ, ಕವಚ ವ್ಯವಸ್ಥೆ ಮತ್ತು ಟಿಕೆಟಿಂಗ್‌ನಂತಹ ಇತರ ಕಾರ್ಯಾಚರಣೆಗಳಿಗೆ ಎಐ ಬಳಕೆಯ ಮೇಲೆ ಸರ್ಕಾರ ಗಮನಹರಿಸಬಹುದು.
  • ರೈಲು ಅಪಘಾತಗಳನ್ನು ತಡೆಗಟ್ಟಲು ಹೆಚ್ಚು ಹೆಚ್ಚು ರೈಲುಗಳಲ್ಲಿ ರಕ್ಷಾಕವಚ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಸರ್ಕಾರವು ಏನಾದರೂ ಹೇಳಬಹುದು.
  • ಕಾರ್ಗೋ ಮೂಲಸೌಕರ್ಯದಲ್ಲಿ ಖಾಸಗಿ ವಲಯದ ಹೂಡಿಕೆಯನ್ನು ಆಕರ್ಷಿಸಲು ಅಮೃತ್ ಭಾರತ್ ಸ್ಟೇಷನ್ ಯೋಜನೆ ಮತ್ತು ಗತಿ ಶಕ್ತಿ ಮಲ್ಟಿ-ಮೋಡಲ್ ಕಾರ್ಗೋ ಟರ್ಮಿನಲ್ ಮೇಲೆಯೂ ಗಮನ ಹರಿಸು ನಿರೀಕ್ಷೆಗಳಿವೆ.
  • ಭಾರತದಲ್ಲಿ 90 ಹೊಸ ವಂದೇ ಭಾರತ್ ರೈಲು ಸೆಟ್‌ಗಳನ್ನು ಸೇವೆಗೆ ಸೇರಿಸುವ ಪ್ರಯತ್ನಗಳು ನಡೆದಿವೆ. ಇದರೊಂದಿಗೆ ಗೂಡ್ಸ್ ರೈಲುಗಳ ದೊಡ್ಡ ಕೋಚ್‌ಗಳಿಗೂ ಆರ್ಡರ್ ನೀಡುವ ಸಾಧ್ಯತೆಯಿದೆ. ಇದು ಈ ಬಜೆಟ್‌ನಲ್ಲಿ ಹೆಚ್ಚು ಆರ್ಥಿಕ ಬಲ ನೀಡುವ ಚಟುವಟಿಕೆ ಆಗಬಹುದು.
  • 2025 ರ ಬಜೆಟ್‌ನಲ್ಲಿ ಬುಲೆಟ್ ರೈಲಿನ ಬಲವನ್ನು ಆರ್ಥಿಕ ಸ್ವರೂಪದಲ್ಲಿ ಹೆಚ್ಚಿಸಬಹುದು. ಈಗಾಗಲೇ ಬುಲೆಟ್‌ ರೈಲು ವಿಚಾರವಾಗಿ ಭಾರತದಲ್ಲಿ ಪ್ರಯೋಗ ನಡೆದರೂ ಜಾರಿಯಾಗಿಲ್ಲ. ಚೆನ್ನೈ- ಮೈಸೂರು ನಡುವೆ ಬುಲೆಟ್‌ ರೈಲು ಆರಂಭಿಸುವ ಮಾರ್ಗ ಸಮೀಕ್ಷೆಗಳು ಇನ್ನೂ ನಡೆದಿವೆ.
  • ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ ಕಾರಿಡಾರ್ ಅನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಬೇಕಾದ ಆರ್ಥಿಕ ನೆರವು ನೀಡುವ ಘೋಷಣೆಯೂ ಈ ಬಾರಿ ಇರಬಹುದು.
  • ಹೆಚ್ಚುವರಿಯಾಗಿ ಈ ಬಜೆಟ್‌ನಲ್ಲಿ ಹೊಸ ವಂದೇ ಭಾರತ್ ಸ್ಲೀಪರ್ ಮತ್ತು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸಬಹುದು. ಕೆಲವು ಮಾಧ್ಯಮಗಳ ವರದಿಗಳ ಪ್ರಕಾರ, ಈ ಬಾರಿ 10 ವಂದೇ ಭಾರತ್ ಸ್ಲೀಪರ್ ಮತ್ತು 100 ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಬಜೆಟ್‌ನಲ್ಲಿ ಘೋಷಿಸಬಹುದು.
  • 2025 ರ ಕೇಂದ್ರ ಬಜೆಟ್‌ನಲ್ಲಿ ರಾಷ್ಟ್ರವ್ಯಾಪಿ ಮೆಟ್ರೋ ರೈಲು ಯೋಜನೆಗಳನ್ನು ಜಾರಿಗೆ ತರಲು ಸಮಗ್ರ ಐದು ವರ್ಷಗಳ ಯೋಜನೆಯನ್ನು ಪರಿಚಯಿಸುವ ಸಾಧ್ಯತೆಯಿದೆ. ಈ ದೀರ್ಘಾವಧಿಯ ಕ್ರಮವು ಭಾರತದಾದ್ಯಂತ ಮೆಟ್ರೋ ಮತ್ತು ಇಂಟರ್‌ಸಿಟಿ ಕ್ಷಿಪ್ರ ರೈಲು ಸಂಪರ್ಕವನ್ನು ಹೆಚ್ಚಿಸುವ ಭಾಗ. ಭಾರತವು ಪ್ರಸ್ತುತ 11 ರಾಜ್ಯಗಳ 23 ನಗರಗಳಲ್ಲಿ ಸುಮಾರು 1,000 ಕಿಲೋಮೀಟರ್‌ಗಳ ಮೆಟ್ರೋ ಮತ್ತು ಕ್ಷಿಪ್ರ ರೈಲು ಜಾಲಗಳನ್ನು ನಿರ್ವಹಿಸುತ್ತಿದೆ, ಹೆಚ್ಚುವರಿಯಾಗಿ 985 ಕಿಮೀ ಪ್ರಗತಿ ಹಂತದಲ್ಲಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.