Middle class Memes: ಸೋಷಿಯಲ್‌ ಮೀಡಿಯಾದಲ್ಲಿ ಬಜೆಟ್‌ 2025 ಮೀಮ್ಸ್‌, ಜೋಕ್ಸ್‌ ವೈರಲ್‌; ನಗುವುದೋ ಅಳುವುದೋ ನೀವೇ ಹೇಳಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Middle Class Memes: ಸೋಷಿಯಲ್‌ ಮೀಡಿಯಾದಲ್ಲಿ ಬಜೆಟ್‌ 2025 ಮೀಮ್ಸ್‌, ಜೋಕ್ಸ್‌ ವೈರಲ್‌; ನಗುವುದೋ ಅಳುವುದೋ ನೀವೇ ಹೇಳಿ

Middle class Memes: ಸೋಷಿಯಲ್‌ ಮೀಡಿಯಾದಲ್ಲಿ ಬಜೆಟ್‌ 2025 ಮೀಮ್ಸ್‌, ಜೋಕ್ಸ್‌ ವೈರಲ್‌; ನಗುವುದೋ ಅಳುವುದೋ ನೀವೇ ಹೇಳಿ

Budget 2025 Middle class Memes: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ 2025 ಮಂಡನೆ ಮಾಡುತ್ತಿರುವ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಮಿಡಲ್‌ ಕ್ಲಾಸ್‌ ಮೀಮ್ಸ್‌, ಜೋಕ್ಸ್‌ಗಳ ವೈರಲ್‌ ಆಗುತ್ತಿವೆ. ಮಧ್ಯಮ ವರ್ಗದವರ ಬಜೆಟ್‌ ನಿರೀಕ್ಷೆಯನ್ನು ಈ ಬಜೆಟ್‌ ಪೂರೈಸುವುದೇ ಎಂಬ ಕುತೂಹಲದಿಂದ ಜನರು ಕಾಯುತ್ತಿದ್ದಾರೆ.

Middle class Memes: ಸೋಷಿಯಲ್‌ ಮೀಡಿಯಾದಲ್ಲಿ ಬಜೆಟ್‌ 2025 ಮೀಮ್ಸ್‌, ಜೋಕ್ಸ್‌ ವೈರಲ್‌
Middle class Memes: ಸೋಷಿಯಲ್‌ ಮೀಡಿಯಾದಲ್ಲಿ ಬಜೆಟ್‌ 2025 ಮೀಮ್ಸ್‌, ಜೋಕ್ಸ್‌ ವೈರಲ್‌

Budget 2025 Middle class Memes: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ 2025 ಮಂಡನೆ ಮಾಡುತ್ತಿದ್ದಾರೆ. ವಿವಿಧ ವಲಯಗಳಿಗೆ ಹೊಸ ಘೋಷಣೆಗಳನ್ನು ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಜೋಕ್ಸ್‌ಗಳು, ಮೀಮ್ಸ್‌ಗಳು ವೈರಲ್‌ ಆಗುತ್ತಿವೆ. ವಿಶೇಷವಾಗಿ ಮಧ್ಯಮ ವರ್ಗದವರ ಕನವರಿಕೆಗಳು ಹಾಸ್ಯಗಳಾಗಿ ವೈರಲ್‌ ಆಗುತ್ತಿವೆ. ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ಜೋಕ್ಸ್‌ಗಳು, ಬಜೆಟ್‌ ಕಾಮಿಡಿ ವಿಡಿಯೋಗಳು, ಚಿಂತನೆಗೆ ಹಚ್ಚುವ ಹಾಸ್ಯಗಳು, ನಗುವುದೋ ಅಳುವುದೋ ಎಂದು ಗೊಂದಲ ಹುಟ್ಟಿಸುವ ಮೀಮ್ಸ್‌ಗಳನ್ನು ನೋಡೋಣ ಬನ್ನಿ.

ವೇತನ ಪಡೆಯುವ ಆದಾಯ ತೆರಿಗೆ ಪಾವತಿದಾರರು ಚಳಿಯಲ್ಲಿ ನಡುಗುವ ನಾಯಿಯಂತೆ ಕಾಯುವ ವಿಡಿಯೋವನ್ನು ಒಬ್ಬರು ಹಂಚಿಕೊಂಡಿದ್ದಾರೆ.

ಇಂದು ಮಧ್ಯಮ ವರ್ಗದವರಿಗೆ ನೆರವಾಗುವಂತಹ ಬಜೆಟ್ ಮಂಡಿಸುತ್ತಿದ್ದಾರೆ.

 

ಕ್ರಾಂತಿಕಾರಿ ಬಜೆಟ್‌, ಎಪಿಕ್‌ ಬಜೆಟ್‌, ಮಾಸ್ಟರ್‌ ಸ್ಟ್ರೋಕ್‌ ಬಜೆಟ್‌, ಗೇಮ್‌ ಚೇಂಜರ್‌ ಬಜೆಟ್‌, ಐತಿಹಾಸಿಕ ಬಜೆಟ್‌, ಮಧ್ಯಮ ವರ್ಗದ ಬಜೆಟ್‌, ಅತ್ಯುತ್ತಮ ಬಜೆಟ್‌, ವಿಕಸಿತ ಬಜೆಟ್‌, ವಿರಟ್‌ ಬಜೆಟ್‌, ವಿರಾಟ್‌ ವಿಕಸಿತ ಬಜೆಟ್‌ ಎಂದು ಒಬ್ಬರು ನಿರ್ಮಲಾ ಸೀತಾರಾಮನ್‌ ಅವರ ವಿವಿಧ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

 

ಮಧ್ಯಮ ವರ್ಗವು ಬಜೆಟ್‌ನಲ್ಲಿ ಸಾಕಷ್ಟು ನಿರೀಕ್ಷೆ ಮಾಡುತ್ತಿದೆ. ಒಬ್ಬರು ಟೀವಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರಿಗೆ ಪೂಜೆ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಭಕ್ತಿಗೀತೆಯೂ ಕೇಳುತ್ತಿದೆ.

ಉದ್ಯಮಿಗಳು ಮತ್ತು ಕೃಷಿಕರು ಬಜೆಟ್‌ಗೆ ಪ್ರತಿಕ್ರಿಯೆ ನೀಡುವುದು ಹೀಗೆ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.