ಆದಾಯ ತೆರಿಗೆ ಬಜೆಟ್ 2025: 12 ಲಕ್ಷ ರೂ ತನಕ ಇನ್ನು ಆದಾಯ ತೆರಿಗೆ ಕಟ್ಟಬೇಕಿಲ್ಲ; ಇದು ಷರತ್ತು ಬದ್ಧ ವಿನಾಯಿತಿ ಎಂದ ನಿರ್ಮಲಾ ಸೀತಾರಾಮನ್
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆದಾಯ ತೆರಿಗೆ ಬಜೆಟ್ 2025: 12 ಲಕ್ಷ ರೂ ತನಕ ಇನ್ನು ಆದಾಯ ತೆರಿಗೆ ಕಟ್ಟಬೇಕಿಲ್ಲ; ಇದು ಷರತ್ತು ಬದ್ಧ ವಿನಾಯಿತಿ ಎಂದ ನಿರ್ಮಲಾ ಸೀತಾರಾಮನ್

ಆದಾಯ ತೆರಿಗೆ ಬಜೆಟ್ 2025: 12 ಲಕ್ಷ ರೂ ತನಕ ಇನ್ನು ಆದಾಯ ತೆರಿಗೆ ಕಟ್ಟಬೇಕಿಲ್ಲ; ಇದು ಷರತ್ತು ಬದ್ಧ ವಿನಾಯಿತಿ ಎಂದ ನಿರ್ಮಲಾ ಸೀತಾರಾಮನ್

ಆದಾಯ ತೆರಿಗೆ ಬಜೆಟ್ 2025: ಮಧ್ಯಮ ವರ್ಗದವರು ವಿಶೇಷವಾಗಿ ವೇತನದಾರರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ತೆರಿಗೆ ವಿನಾಯಿತಿ ಘೋಷಣೆ ಆಗಿದೆ. ವಾರ್ಷಿಕ 12ಲಕ್ಷ ರೂ ತನಕ ಇನ್ನು ಆದಾಯ ತೆರಿಗೆ ಕಟ್ಟಬೇಕಿಲ್ಲ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆಗೆ ಮೇಜು ತಟ್ಟಿದ್ರು ಸದಸ್ಯರು. ಆದರೆ, ಇದು ಷರತ್ತು ಬದ್ಧ ವಿನಾಯಿತಿ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದರು.

ಕೇಂದ್ರ ಬಜೆಟ್: ವಾರ್ಷಿಕ 12 ಲಕ್ಷ ರೂ ತನಕ ಆದಾಯದವರು ಇನ್ನು ತೆರಿಗೆ ಕಟ್ಟಬೇಕಿಲ್ಲ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆಗೆ ಮೇಜು ತಟ್ಟಿದ್ರು ಸದಸ್ಯರು.
ಕೇಂದ್ರ ಬಜೆಟ್: ವಾರ್ಷಿಕ 12 ಲಕ್ಷ ರೂ ತನಕ ಆದಾಯದವರು ಇನ್ನು ತೆರಿಗೆ ಕಟ್ಟಬೇಕಿಲ್ಲ ಎಂಬ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆಗೆ ಮೇಜು ತಟ್ಟಿದ್ರು ಸದಸ್ಯರು. (Sansad TV)

ಆದಾಯ ತೆರಿಗೆ ಬಜೆಟ್ 2025: ಭಾರತದ ಮಧ್ಯಮ ವರ್ಗ ಬಹಳ ಕಾತರದಿಂದ ಕಾಯುತ್ತಿದ್ದ ಮಹತ್ವದ ತೆರಿಗೆ ವಿನಾಯಿತಿ ಘೋಷಣೆಯಾಗಿದೆ. ವಾರ್ಷಿಕ 12 ಲಕ್ಷ ರೂ ತನಕ ಆದಾಯದವರು ಇನ್ನು ತೆರಿಗೆ ಕಟ್ಟಬೇಕಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಘೋಷಿಸಿದರು. ಈ ಘೋಷಣೆ ಬೆನ್ನಿಗೆ ಸದಸ್ಯರು ಮೇಜು ತಟ್ಟಿ ಖುಷಿ ವ್ಯಕ್ತಪಡಿಸಿದರು.

ಮಧ್ಯಮ ವರ್ಗಕ್ಕೆ ಖುಷಿ ಕೊಡುವ ಸುದ್ದಿಯನ್ನು ಪ್ರಕಟಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, “ಮಧ್ಯಮ ವರ್ಗವು ದೇಶದ ಅರ್ಥ ವ್ಯವಸ್ಥೆಗೆ ಶಕ್ತಿ ತುಂಬುವಂತಹ ಸಾಮರ್ಥ್ಯವನ್ನು ಹೊಂದಿರುವಂಥದ್ದು. ಅವರ ಕೊಡುಗೆಯನ್ನು ಗುರುತಿಸಿ, ನಾವು ನಿಯತಕಾಲಿಕವಾಗಿ ತೆರಿಗೆ ಹೊರೆಗಳನ್ನು ಕಡಿಮೆ ಮಾಡಿದ್ದೇವೆ. ವಾರ್ಷಿಕವಾಗಿ 12 ಲಕ್ಷ ರೂಪಾಯಿ ತನಕದ ಆದಾಯದ ಇರುವಂಥವರಿಗೆ ಯಾವುದೇ ಆದಾಯ ತೆರಿಗೆ ಇರುವುದಿಲ್ಲ ಎಂದು ಹೇಳಿದರು.

ಆದಾಯ ತೆರಿಗೆ ಬಜೆಟ್ 2025: ಹೊಸ ತೆರಿಗೆ ಪದ್ಧತಿಯಲ್ಲಿ 12 ಲಕ್ಷ ರೂ ತನಕ ತೆರಿಗೆ ಇಲ್ಲ

ಹೊಸ ತೆರಿಗೆ ಪದ್ಧತಿಯನ್ನು ಅನುಸರಿಸುವ ತೆರಿಗೆದಾರರ ವಾರ್ಷಿಕ ಆದಾಯ 12 ಲಕ್ಷ ರೂಪಾಯಿ ತನಕ ಇದ್ದರೆ ಅದಕ್ಕೆ ತೆರಿಗೆ ಇಲ್ಲ. ಆದರೆ, ಕ್ಯಾಪಿಟಲ್ ಗೇನ್ಸ್ ಮೂಲಕ ಆದಾಯ ಇದ್ದರೆ ಆಗ ಇದು ಅನ್ವಯವಾಗುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟವಾಗಿ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.

ಹೊಸ ತೆರಿಗೆ ಪದ್ಧತಿಯ ಪರಿಷ್ಕೃತ ತೆರಿಗೆ ಸ್ಲ್ಯಾಬ್‌ ವಿವರ ಹೀಗಿದೆ

0- 4 ಲಕ್ಷ ರೂಪಾಯಿ ತನಕ ತೆರಿಗೆ ಇಲ್ಲ

4 ಲಕ್ಷ ರೂ.- 8 ಲಕ್ಷ ರೂ ತನಕ ಶೇ 5 ತೆರಿಗೆ

8 ಲಕ್ಷ ರೂ- 12 ಲಕ್ಷ ರೂ ತನಕ ಶೇ 10 ತೆರಿಗೆ

12 ಲಕ್ಷ ರೂ- 16 ಲಕ್ಷ ರೂ ತನಕ ಶೇ 15 ತೆರಿಗೆ

16 ಲಕ್ಷ ರೂ- 20 ಲಕ್ಷ ರೂ ತನಕ ಶೇ 20 ತೆರಿಗೆ

20 ಲಕ್ಷ ರೂ - 24 ಲಕ್ಷ ರೂ ತನಕ ಶೇ 25 ತೆರಿಗೆ

24 ಲಕ್ಷ ರೂ ಮೇಲ್ಪಟ್ಟ ಆದಾಯಕ್ಕೆ ಶೇ 30 ತೆರಿಗೆ

ಕೇಂದ್ರ ಬಜೆಟ್ 2025ರಲ್ಲಿ ಉಲ್ಲೇಖವಾಗಿರುವ ಹೊಸ ಆದಾಯ ತೆರಿಗೆ ಸ್ಲ್ಯಾಬ್ ವಿವರ
ಕೇಂದ್ರ ಬಜೆಟ್ 2025ರಲ್ಲಿ ಉಲ್ಲೇಖವಾಗಿರುವ ಹೊಸ ಆದಾಯ ತೆರಿಗೆ ಸ್ಲ್ಯಾಬ್ ವಿವರ

ಹೊಸ ತೆರಿಗೆ ಪದ್ಧತಿಯ ಪರಿಷ್ಕೃತ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ, ವಾರ್ಷಿಕ ಆದಾಯ 12 ಲಕ್ಷ ರೂಪಾಯಿ ತನಕ ಇದ್ದರೆ ರಿಬೇಟ್ ಪ್ರಯೋಜನ ಪಡೆದು ಸಂಪೂರ್ಣ ತೆರಿಗೆ ವಿನಾಯಿತಿ ಪಡೆಯಬಹುದು.

ವಾರ್ಷಿಕ ಆದಾಯ 8 ಲಕ್ಷ ರೂಪಾಯಿ ಇದ್ದರೆ ಅಂಥವರು 30,000 ರೂಪಾಯಿ ತೆರಿಗೆ ವಿನಾಯಿತಿ ಪ್ರಯೋಜನ ಪಡೆಯಬಹುದು. ಅಂದರೆ ಈ ಆದಾಯದವರು ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ

ವಾರ್ಷಿಕ ಆದಾಯ 9 ಲಕ್ಷ ರೂಪಾಯಿ ಇದ್ದರೆ ಅಂಥವರು 40,000 ರೂಪಾಯಿ ತೆರಿಗೆ ವಿನಾಯಿತಿ ಪಡೆಯಲು ಅರ್ಹರಾಗಿದ್ದು ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ.

ವಾರ್ಷಿಕ ಆದಾಯ 10 ಲಕ್ಷ ರೂಪಾಯಿ ಇದ್ದರೆ ಅಂಥವರು 50,000 ರೂಪಾಯಿ ತೆರಿಗೆ ವಿನಾಯಿತಿ ಪಡೆಯಲು ಅರ್ಹರಾಗಿದ್ದು ತೆರಿಗೆ ಪಾವತಿಸಬೇಕಾಗಿಲ್ಲ

ವಾರ್ಷಿಕ ಆದಾಯ 11 ಲಕ್ಷ ರೂಪಾಯಿ ಇದ್ದರೆ ಅಂಥವರು 65,000 ರೂಪಾಯಿ ಪ್ರಯೋಜನ ಪಡೆದು ಆದಾಯ ತೆರಿಗೆ ಪಾವತಿ ಮಾಡಬೇಕಾಗಿಲ್ಲ.

ವಾರ್ಷಿಕ ಆದಾಯ 12 ಲಕ್ಷ ರೂಪಾಯಿ ಇದ್ದರೆ ಅಂಥವರು ವಾರ್ಷಿಕ 80,000 ರೂಪಾಯಿ ಪ್ರಯೋಜನ ಪಡೆದು ಆದಾಯ ತೆರಿಗೆ ಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಬಹುದು.

ಇನ್ನು, 16 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವಂಥವರು 50,000 ರೂಪಾಯಿ ಪ್ರಯೋಜನ ಪಡೆಯಬಹುದಾಗಿದ್ದು, 1,20,000 ರೂಪಾಯಿ ತೆರಿಗೆ ಪಾವತಿಸಬೇಕು.

20 ಲಕ್ಷ ರೂಪಾಯಿ ವಾರ್ಷಿಕ ಆದಾಯ ಇರುವಂಥವರು 90,000 ರೂಪಾಯಿ ಪ್ರಯೋಜನ ಪಡೆದು 2 ಲಕ್ಷ ರೂಪಾಯಿ ತೆರಿಗೆ ಪಾವತಿಸಬೇಕು.

ವಾರ್ಷಿಕ 24 ಲಕ್ಷ ರೂಪಾಯಿ ಆದಾಯ ಇರುವಂಥವರು 1,10,000 ರೂಪಾಯಿ ವಿನಾಯಿತಿ ಪ್ರಯೋಜನ ಪಡೆದುಕೊಂಡು 3 ಲಕ್ಷ ರೂಪಾಯಿ ತೆರಿಗೆ ಪಾವತಿಸಬೇಕು

ವಾರ್ಷಿಕ 50 ಲಕ್ಷ ರೂಪಾಯಿ ಆದಾಯ ಇರುವಂಥವರು 1,10,000 ರೂಪಾಯಿ ವಿನಾಯಿತಿ ಪ್ರಯೋಜನ ಪಡೆದುಕೊಂಡು 10.80 ಲಕ್ಷ ರೂಪಾಯಿ ತೆರಿಗೆ ಪಾವತಿಸಬೇಕು.

ವಾರ್ಷಿಕ 12 ಲಕ್ಷ ರೂಪಾಯಿ ತನಕದ ವಾರ್ಷಿಕ ಆದಾಯದವರಿಗೆ ಹೊಸ ತೆರಿಗೆ ಪದ್ಧತಿ ಪ್ರಕಾರ ಆದಾಯ ತೆರಿಗೆ ವಿನಾಯಿತಿ ಘೋಷಣೆ ಷರತ್ತು ಬದ್ಧ ವಿನಾಯಿತಿಯಾದರೂ ಅದರ ಪ್ರಯೋಜನ ಅನೇಕರಿಗೆ ಆಗಲಿದೆ ಎಂಬುದನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದರು. ಕೇಂದ್ರ ಬಜೆಟ್ 2025 -26 ಮಧ್ಯಮ ವರ್ಗದ ವೇತನದಾರರಲ್ಲಿ ಖುಷಿ ತುಂಬಿದ್ದು ವಾಸ್ತವ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.