Aadhaar Verification: ಖಾಸಗಿಯವರಿಗೂ ಆಧಾರ್ ದೃಢೀಕರಣಕ್ಕೆ ಅವಕಾಶ, ಕಾಯ್ದೆ ತಿದ್ದುಪಡಿ ಮಾಡಿದ ಭಾರತ ಸರ್ಕಾರ, 5 ಮುಖ್ಯ ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Aadhaar Verification: ಖಾಸಗಿಯವರಿಗೂ ಆಧಾರ್ ದೃಢೀಕರಣಕ್ಕೆ ಅವಕಾಶ, ಕಾಯ್ದೆ ತಿದ್ದುಪಡಿ ಮಾಡಿದ ಭಾರತ ಸರ್ಕಾರ, 5 ಮುಖ್ಯ ಅಂಶಗಳು

Aadhaar Verification: ಖಾಸಗಿಯವರಿಗೂ ಆಧಾರ್ ದೃಢೀಕರಣಕ್ಕೆ ಅವಕಾಶ, ಕಾಯ್ದೆ ತಿದ್ದುಪಡಿ ಮಾಡಿದ ಭಾರತ ಸರ್ಕಾರ, 5 ಮುಖ್ಯ ಅಂಶಗಳು

Aadhaar Verification: ಗ್ರಾಹಕ ಸೇವೆಗಳನ್ನು ಪೂರೈಸುವುದಕ್ಕಾಗಿ ಖಾಸಗಿ ಸಂಸ್ಥೆಗಳು ಆಧಾರ್ ದೃಢೀಕರಣವನ್ನು ಬಳಸುವುದಕ್ಕೆ ಅನುಮತಿಸುವುದಕ್ಕಾಗಿ ಆಧಾರ್ ಕಾಯ್ದೆಗೆ ಕೇಂದ್ರ ಸರ್ಕಾರವು ತಿದ್ದುಪಡಿ ಮಾಡಿದೆ. ಇದಕ್ಕೆ ಸಂಬಂಧಿಸಿದ 5 ಮುಖ್ಯ ಅಂಶಗಳು ಇಲ್ಲಿವೆ.

ಖಾಸಗಿಯವರಿಗೂ ಆಧಾರ್ ದೃಢೀಕರಣಕ್ಕೆ ಅವಕಾಶ ನೀಡುವುದ್ಕಕಾಗಿ ಭಾರತ ಸರ್ಕಾರ ಅಧಾರ್‌ ಕಾಯ್ದೆಗೆ ತಿದ್ದುಪಡಿ ಮಾಡಿದೆ
ಖಾಸಗಿಯವರಿಗೂ ಆಧಾರ್ ದೃಢೀಕರಣಕ್ಕೆ ಅವಕಾಶ ನೀಡುವುದ್ಕಕಾಗಿ ಭಾರತ ಸರ್ಕಾರ ಅಧಾರ್‌ ಕಾಯ್ದೆಗೆ ತಿದ್ದುಪಡಿ ಮಾಡಿದೆ (HT File Photo)

Aadhaar Verification: ಗ್ರಾಹಕರಿಗೆ ಸೇವೆಗಳನ್ನು ಒದಿಸುವುದಕ್ಕಾಗಿ ಆಧಾರ್ ದೃಢೀಕರಣ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ಪುನಃಸ್ಥಾಪಿಸಿದೆ. ಗ್ರಾಹಕ ಸೇವೆಗಳನ್ನು ಪೂರೈಸುವುದಕ್ಕಾಗಿ ಖಾಸಗಿ ಸಂಸ್ಥೆಗಳು ಆಧಾರ್ ದೃಢೀಕರಣವನ್ನು ಬಳಸುವುದಕ್ಕೆ ಅನುಮತಿಸುವುದಕ್ಕಾಗಿ ಆಧಾರ್ ಕಾಯ್ದೆಗೆ ಕೇಂದ್ರ ಸರ್ಕಾರವು ತಿದ್ದುಪಡಿ ಮಾಡಿದೆ. ಕಳೆದ ಶುಕ್ರವಾರ (ಜನವರಿ 31) ಇದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಪ್ರಕಟಿಸಿದೆ. 2018ರ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರದಲ್ಲಿ ಆಧಾರ್ ದುರ್ಬಳಕೆ ಕಾರಣ ಹಿಂಪಡೆಯಲಾಗಿದ್ದ ವ್ಯವಸ್ಥೆ ಇದಾಗಿತ್ತು. ಈಗ ಮತ್ತೆ ಖಾಸಗಿ ಸಂಸ್ಥೆಗಳವರಿಗೆ ಸಿಕ್ಕಿದೆ.

ಖಾಸಗಿಯವರಿಗೂ ಆಧಾರ್ ದೃಢೀಕರಣಕ್ಕೆ ಅವಕಾಶ, ಕಾಯ್ದೆ ತಿದ್ದುಪಡಿ- 5 ಮುಖ್ಯ ಅಂಶ

1) ಆಧಾರ್ ಕಾಯ್ದೆಯ ಸೆಕ್ಷನ್ 57ರ ಶಂಕಿತ ದುರ್ಬಳಕೆ ಕಾರಣ ಸುಪ್ರೀಂ ಕೋರ್ಟ್‌ ಖಾಸಗಿಯವರು ಆಧಾರ್ ದೃಢೀಕರಣ ಬಳಸುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ, ಖಾಸಗಿಯವರು ಆಧಾರ್ ದೃಢೀಕರಣ ಮಾಡುವುದನ್ನು ತಡೆಯಲಾಗಿತ್ತು. ಸೆಕ್ಷನ್‌ 57ರ ಪ್ರಕಾರ, ಖಾಸಗಿ ಸಂಸ್ಥೆಯವರು ವ್ಯವಹಾರದ ಉದ್ದೇಶಗಳಿಗೆ ಆಧಾರ್ ಕೇಳಿ ಪಡೆದು ದೃಢೀಕರಣಕ್ಕೆ ಬಳಸಬಹುದು.

2) ಈಗ ಉತ್ತಮ ಆಡಳಿತಕ್ಕಾಗಿ (ಸಾಮಾಜಿಕ ಕಲ್ಯಾಣ, ನಾವೀನ್ಯತೆ, ಜ್ಞಾನ) ತಿದ್ದುಪಡಿ ನಿಯಮಗಳು 2025 ರ ಅಧಿಸೂಚನೆ ಪ್ರಕಟಿಸಿರುವ ಕೇಂದ್ರ ಸರ್ಕಾರ, ಖಾಸಗಿ ಸಂಸ್ಥೆಯವರು ಗ್ರಾಹಕ ಸೇವೆ ಪೂರೈಕೆಗಾಗಿ ಆಧಾರ್ ದೃಢೀಕರಣ ವ್ಯವಸ್ಥೆ ಬಳಸಬಹುದು ಎಂದು ಹೇಳಿದೆ.

3) "ಸಚಿವಾಲಯ ಅಥವಾ ಇಲಾಖೆಯನ್ನು ಹೊರತು ಪಡಿಸಿ ಬೇರೆ ಯಾವುದೇ ಘಟಕ… ಈ ಆಧಾರ್ ದೃಢೀಕರಣ ಬಳಸಲು ಅಪೇಕ್ಷಿಸುವುದಾದರೆ ಅದಕ್ಕೆ ಸಂಬಂಧಿಸಿ, ಅದರ ಉದ್ದೇಶ ಸಮರ್ಥನೆಯೊಂದಿಗೆ ನಿಯಮ 3ರ ಪ್ರಕಾರ ಪ್ರಸ್ತಾಪವನ್ನು ಸಿದ್ಧಪಡಿಸಬೇಕು. ಅದನ್ನು ಸಂಬಂಧಪಟ್ಟ ಸಚಿವಾಲಯು ಅಥವಾ ಇಲಾಖೆಗೆ ಸಲ್ಲಿಸಬೇಕು" ಎಂದು ಅಧಿಸೂಚನೆ ವಿವರಿಸಿದೆ.

4) ಡಿಜಿಟಲ್‌ ಪ್ಲಾಟ್‌ಫಾರಂಗಳಲ್ಲಿ ಸಾಮಾಜಿಕ ಕಲ್ಯಾಣ ಪ್ರಯೋಜನಗಳು ಅನ್ಯರ ಪಾಲಾಗುವುದನ್ನು ತಪ್ಪಿಸಲು, ನಾವೀನ್ಯತೆಯನ್ನು ಸ್ಥಾಪಿಸಲು, ಜ್ಞಾನ ಪ್ರಸರಣ ಹಾಗೂ ಉತ್ತಮ ಆಡಳಿತವನ್ನು ಖಾತರಿಪಡಿಸುವುದಕ್ಕೆ ಆಧಾರ್ ದೃಢೀಕರಣವನ್ನು ಬಳಸಲು ನಿಯಮ 3 ಅವಕಾಶ ಮಾಡಿಕೊಡುತ್ತದೆ. ನಿಯಮ 3 ರ ಅಡಿಯಲ್ಲಿರುವ ಉಪ-ನಿಯಮಗಳಲ್ಲಿ ಒಂದು ಆಧಾರ್ ದೃಢೀಕರಣವು ಸ್ವಯಂಪ್ರೇರಿತ ಆಧಾರದ ಮೇಲೆ ಇರಬೇಕು ಎಂದು ಆದೇಶಿಸುತ್ತದೆ.

5) ಖಾಸಗಿ ಸಂಸ್ಥೆಗಳ ಅರ್ಜಿಗಳನ್ನು ಯುಐಡಿಎಐ (ಅನನ್ಯ ಗುರುತಿನ ಪ್ರಾಧಿಕಾರವು ಭಾರತದ ಅನನ್ಯ ಗುರುತಿನ ಪ್ರಾಧಿಕಾರ) ಪರಿಶೀಲಿಸುತ್ತದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ (ಮೀಟಿ) ಆಧಾರ್ ದೃಢೀಕರಣವನ್ನು ಬಳಸುವುದಕ್ಕಾಗಿ ಯುಐಡಿಎಐ ಶಿಫಾರಸಿನ ಆಧಾರದ ಮೇಲೆ ಅನುಮೋದನೆ ನೀಡುತ್ತದೆ. ಇದನ್ನು ಆಧರಿಸಿ ಸಂಬಂಧಪಟ್ಟ ಸಚಿವಾಲಯ ಅಥವಾ ಇಲಾಖೆ ಆಧಾರ್ ದೃಢೀಕರಣಕ್ಕೆ ಅನುಮತಿ ನೀಡುತ್ತದೆ ಎಂದು ಅಧಿಸೂಚನೆ ತಿಳಿಸಿದೆ.

ಪಾರದರ್ಶಕತೆ ಮತ್ತು ಒಳಗೊಳ್ಳುವಿಕೆಯನ್ನು ಸುಧಾರಿಸಲು ಆಧಾರ್ ಕಾಯ್ದೆಗೆ ತಿದ್ದುಪಡಿ

ಉತ್ತಮ ಆಡಳಿತಕ್ಕಾಗಿ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಒಳಗೊಳ್ಳುವಿಕೆಯನ್ನು ಸುಧಾರಿಸಲು ಸಹಾಯ ಮಾಡಲು ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

"ತಿದ್ದುಪಡಿಯು ನಾವೀನ್ಯತೆಯ ಸಕ್ರಿಯಗೊಳಿಸುವಿಕೆ, ಜ್ಞಾನದ ಹರಡುವಿಕೆ, ನಿವಾಸಿಗಳ ಜೀವನ ಸುಲಭತೆಯನ್ನು ಉತ್ತೇಜಿಸುವುದು ಮತ್ತು ಸೇವೆಗಳಿಗೆ ಉತ್ತಮ ಪ್ರವೇಶವನ್ನು ಶಕ್ತಗೊಳಿಸುವುದು ಮುಂತಾದ ಸಂಬಂಧಿತ ನಿರ್ದಿಷ್ಟ ಉದ್ದೇಶಗಳಿಗಾಗಿ ಸಾರ್ವಜನಿಕ ಹಿತಾಸಕ್ತಿಗಾಗಿ ವಿವಿಧ ಸೇವೆಗಳನ್ನು ಒದಗಿಸಲು ಆಧಾರ್ ದೃಢೀಕರಣ ಸೇವೆಯನ್ನು ಪಡೆಯಲು ಸರ್ಕಾರ ಮತ್ತು ಸರ್ಕಾರೇತರ ಘಟಕಗಳಿಗೆ ಅನುವು ಮಾಡಿಕೊಡುತ್ತದೆ. ಅವರು ಸೇವಾ ಪೂರೈಕೆದಾರರು ಮತ್ತು ಸೇವಾ ಅನ್ವೇಷಕರು ವಿಶ್ವಾಸಾರ್ಹ ವಹಿವಾಟುಗಳನ್ನು ಹೊಂದಲು ಸಹಾಯ ಮಾಡುತ್ತಾರೆ "ಎಂದು ಕೇಂದ್ರ ಸರ್ಕಾರ ಹೇಳಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.