Airtel New year plan: ಭಾರ್ತಿ ಏರ್‌ಟೆಲ್‌ನ ವಾರ್ಷಿಕ ಮೊಬೈಲ್ ರೀಚಾರ್ಜ್ ಪ್ಲ್ಯಾನ್‌ಗಳಲ್ಲಿ ಯಾವುದು ಉತ್ತಮ? ಇಲ್ಲಿದೆ 3 ಆಯ್ಕೆ
Bharti Airtel Yearly Prepaid Recharge Plans: ಹೊಸ ವರ್ಷ 2025ರಲ್ಲಿ ವಾರ್ಷಿಕ ಏರ್‌ಟೆಲ್ ಮೊಬೈಲ್ ಪ್ರೀಪೇಯ್ಡ್ ಪ್ಲ್ಯಾನ್‌ಗಳನ್ನು ನೀವು ಹುಡುಕುತ್ತಿರಬಹುದು. ಒಟ್ಟು ಮೂರು ವಾರ್ಷಿಕ ಪ್ರೀಪೇಯ್ಡ್ ಮೊಬೈಲ್ ರಿಚಾರ್ಜ್ ಪ್ಲ್ಯಾನ್‌ಗಳನ್ನು ಏರ್‌ಟೆಲ್ ಹೊಂದಿದೆ. ಅವುಗಳ ವಿವರ ಇಲ್ಲಿದೆ.
Bharti Airtel Yearly Prepaid Recharge Plans: ಭಾರ್ತಿ ಏರ್‌ಟೆಲ್ ಹಲವು ವಾರ್ಷಿಕ ಪ್ರಿಪೇಯ್ಡ್ ಮೊಬೈಲ್ ರಿಚಾರ್ಜ್ ಆಫರ್‌ಗಳನ್ನು ಹೊಂದಿದೆ. ಹೊಸ ವರ್ಷ 2025ರ ಹೊಸ್ತಿಲಲ್ಲಿ ಇರುವಾಗ ಏರ್‌ಟೆಲ್ ಗ್ರಾಹಕರು ಯಾವ ರೀಚಾರ್ಜ್ ಪ್ಲ್ಯಾನ್ ಉತ್ತಮವಾಗಿದೆ ಎಂದು ಪರಿಶೀಲಿಸುತ್ತಿರಬಹುದು. ಭಾರ್ತಿ ಏರ್‌ಟೆಲ್‌ನ ವಾರ್ಷಿಕ ಪ್ರಿಪೇಯ್ಡ್ ಯೋಜನೆಗಳನ್ನು ನೀವು ಹುಡುಕುತ್ತಿದ್ದರೆ ಇಲ್ಲೊಂದಿಷ್ಟು ಆಫರ್‌ಗಳು/ಡೀಲ್‌ಗಳು/ರೀಚಾರ್ಜ್ ಪ್ಲ್ಯಾನ್‌ಗಳ ವಿವರ ನೀಡಿದ್ದೇವೆ.
ಏರ್‌ಟೆಲ್ ವಾರ್ಷಿಕ ಪ್ಲ್ಯಾನ್‌ಗಳು
ಸಾಕಷ್ಟು ಜನರು ಈಗ ತಮ್ಮ ಮೊಬೈಲ್‌ಗೆ ವಾರ್ಷಿಕ ರೀಚಾರ್ಜ್ ಪ್ಲ್ಯಾನ್‌ಗಳನ್ನು ಹಾಕುತ್ತಿದ್ದಾರೆ. ವಿಶೇಷವಾಗಿ 2025ರ ಹೊಸ ವರ್ಷದ ಹೊಸ್ತಿಲಿನಲ್ಲಿ ಏನಾದರೂ ಆಫರ್‌ಗಳು ಇವೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಏರ್‌ಟೆಲ್‌ನ ಹಲವು ಆಫರ್‌ಗಳು ಆಕರ್ಷಕವಾಗಿವೆ. ಪ್ರತಿದಿನಕ್ಕೆ 2 ಜಿಬಿ ಮತ್ತು ಅದಕ್ಕೂ ಹೆಚ್ಚಿನ ಜಿಬಿ ಡೇಟಾ ಪಡೆಯುವ ಎರಡು ಆಫರ್‌ಗಳನ್ನು ಏರ್‌ಟೆಲ್ ನೀಡುತ್ತಿದೆ. ಇನ್ನೊಂದು ಪ್ಲ್ಯಾನ್ ಇಂಟರ್‌ನೆಟ್ ಹೆಚ್ಚು ಅಗತ್ಯವಿಲ್ಲದವರಿಗೆ ಸೂಕ್ತವಾಗಿದೆ. ಏರ್‌ಟೆಲ್‌ನ ಈ ವಾರ್ಷಿಕ ಪ್ರೀಪೇಯ್ಡ್ ಪ್ಲ್ಯಾನ್‌ಗಳ ವಿವರ ಮುಂದೆ ನೀಡಲಾಗಿದೆ.
3999 ರೂಪಾಯಿಯ ಏರ್‌ಟೆಲ್ ವಾರ್ಷಿಕ ಯೋಜನೆ
ವಾರ್ಷಿಕ ಪ್ಲ್ಯಾನ್‌ಗಳಲ್ಲಿ ಹೆಚ್ಚು ದರದ ಮತ್ತು ಹೆಚ್ಚು ಆಫರ್‌ಗಳು ಇರುವ ಏರ್‌ಟೆಲ್ ಪ್ಲ್ಯಾನ್ ಇದಾಗಿದೆ. ಈ ಪ್ಲ್ಯಾನ್‌ನಲ್ಲಿ ಪ್ರತಿದಿನಕ್ಕೆ 2.5 ಜಿಬಿ ಡೇಟಾ ನೀಡಲಾಗುತ್ತದೆ. ಅನಿಯಮಿತ ಕರೆ ಮತ್ತು ಪ್ರತಿದಿನಕ್ಕೆ 100 ಎಸ್‌ಎಂಎಸ್ ಉಚಿತವಾಗಿ ದೊರಕುತ್ತದೆ. ಪ್ಲ್ಯಾನ್‌ನ ವ್ಯಾಲಿಡಿಟಿ 365 ದಿನಗಳು. ಪ್ರತಿದಿನದ ಡೇಟಾ ಮಿತಿ ಖಾಲಿಯಾದಗ ಇಂಟರ್‌ನೆಟ್ ಸ್ಪೀಡ್ 64 ಕೆಬಿಪಿಎಸ್‌ಗೆ ಇಳಿಯುತ್ತದೆ. 5ಜಿ ನೆಟ್‌ವರ್ಕ್ ಇರುವ ಪ್ರದೇಶಗಳಲ್ಲಿ ಗ್ರಾಹಕರು ಅನಿಯಮಿತ 5 ಜಿ ಡೇಟಾ ಎಂಜಾಯ್ ಮಾಡಬಹುದು ಎಂದು ಏರ್‌ಟೆಲ್ ತಿಳಿಸಿದೆ. 499 ರೂಪಾಯಿ ಮೌಲ್ಯದ ಒಂದು ವರ್ಷದ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆಯೂ ಈ ಆಫರ್‌ನೊಂದಿಗೆ ದೊರಕುತ್ತದೆ. ಒಟಿಟಿಯಲ್ಲಿ ಸಿನಿಮಾ, ವೆಬ್ ಸರಣಿ ಅಥವಾ ಇತರೆ ಕಂಟೆಂಟ್‌ಗಳನ್ನು ನೋಡಲು ಬಯಸುವವರಿಗೆ ಇದು ಪ್ರಯೋಜನಕಾರಿ. ಇದರೊಂದಿಗೆ ಏರ್‌ಟೆಲ್ ಎಕ್ಸ್‌ಟ್ರೀಮ್ ಅಪ್ಲಿಕೇಷನ್‌ನ ಉಚಿತ ಕಂಟೆಂಟ್‌ಗಳನ್ನೂ ಪಡೆಯಬಹುದು. ಮೂರು ತಿಂಗಳ ವ್ಯಾಲಿಡಿಟಿಯ ಅಪೊಲೊ 24ಬೈ7 ಮೆಂಬರ್‌ಷಿಪ್ ಕೂಡ ದೊರಕುತ್ತದೆ. ಉಚಿತ ಹೆಲೋಟ್ಯೂನ್‌ಗಳು, ಎಐ ಚಾಲಿತ ಸ್ಪ್ಯಾಮ್ ಸಂದೇಶ, ಕರೆಗಳ ಮೇಲೆ ನಿಗಾ ವಹಿಸುವ ಫೀಚರ್‌ಗಳು ದೊರಕುತ್ತವೆ. ವರ್ಷಕ್ಕೆ 3999 ರೂಪಾಯಿ ಎಂದರೆ ನಿಮಗೆ ತಿಂಗಳಿಗೆ 333 ರೂಪಾಯಿ ಖರ್ಚಾಗುತ್ತದೆ ಎಂದುಕೊಳ್ಳಬಹುದು.
3,599 ರೂಪಾಯಿಯ ಏರ್‌ಟೆಲ್ ವಾರ್ಷಿಕ ಯೋಜನೆ
ಮೇಲಿನ ಯೋಜನೆಗೆ ಹೋಲಿಸಿದರೆ ಈ ಯೋಜನೆಯ ದರ ತುಸು ಕಡಿಮೆ. ಈ ಪ್ಲ್ಯಾನ್‌ನಲ್ಲಿ ಪ್ರತಿದಿನಕ್ಕೆ 2.5 ಜಿಬಿ ಡೇಟಾ ದೊರಕುತ್ತದೆ. ಅನಿಯಮಿತ ಕರೆ ಮತ್ತು ಪ್ರತಿದಿನಕ್ಕೆ 100 ಎಸ್‌ಎಂಎಸ್ ಉಚಿತವಾಗಿ ದೊರಕುತ್ತದೆ. ಪ್ಲ್ಯಾನ್‌ನ ವ್ಯಾಲಿಡಿಟಿ 365 ದಿನಗಳು. ಪ್ರತಿದಿನದ ಡೇಟಾ ಮಿತಿ ಖಾಲಿಯಾದಾಗ ಇಂಟರ್‌ನೆಟ್ ಸ್ಪೀಡ್ 64 ಕೆಬಿಪಿಎಸ್‌ಗೆ ಇಳಿಯುತ್ತದೆ. 5ಜಿ ನೆಟ್‌ವರ್ಕ್ ಇರುವ ಪ್ರದೇಶಗಳಲ್ಲಿ ಗ್ರಾಹಕರು ಅನಿಯಮಿತ 5 ಜಿ ಡೇಟಾ ಎಂಜಾಯ್ ಮಾಡಬಹುದು. ಇದರೊಂದಿಗೆ ಏರ್‌ಟೆಲ್ ಎಕ್ಸ್‌ಟ್ರೀಮ್ ಅಪ್ಲಿಕೇಷನ್‌ನ ಉಚಿತ ಕಂಟೆಂಟ್‌ಗಳನ್ನೂ ಪಡೆಯಬಹುದು. ಮೂರು ತಿಂಗಳ ವ್ಯಾಲಿಡಿಟಿಯ ಅಪೊಲೊ 24ಬೈ7 ಮೆಂಬರ್‌ಷಿಪ್ ಕೂಡ ದೊರಕುತ್ತದೆ. ಉಚಿತ ಹೆಲೋಟ್ಯೂನ್‌ಗಳು, ಎಐ ಚಾಲಿತ ಸ್ಪ್ಯಾಮ್ ಸಂದೇಶ, ಕರೆಗಳ ಮೇಲೆ ನಿಗಾ ವಹಿಸುವ ಫೀಚರ್‌ಗಳು ದೊರಕುತ್ತವೆ. ಗಮನಿಸಿ ಈ ಯೋಜನೆಯಲ್ಲಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಮೊಬೈಲ್ ಚಂದಾದಾರಿಕೆ ಇಲ್ಲ. ಹೀಗಾಗಿ, ಈ ಪ್ಲ್ಯಾನ್‌ನ ದರ ತುಸು ಕಡಿಮೆಯಾಗಿದೆ.
1,999 ರೂಪಾಯಿಯ ಏರ್‌ಟೆಲ್ ವಾರ್ಷಿಕ ಯೋಜನೆ
ವರ್ಕ್ ಫ್ರಮ್ ಹೋಮ್ ಇಲ್ಲ, ಇಂಟರ್‌ನೆಟ್ ಜಾಸ್ತಿ ಬೇಕಿಲ್ಲ ಅಥವಾ ಇಂಟರ್‌ನೆಟ್‌ಗಾಗಿ ನಮ್ಮಲ್ಲಿ ಬೇರೆ ವ್ಯವಸ್ಥೆ ಇವೆ ಎನ್ನುವವರಿಗೆ ಈ ಪ್ಲ್ಯಾನ್ ಬೆಸ್ಟ್. ಕೆಲವರ ಮೊಬೈಲ್‌ಗಳಲ್ಲಿ ಡಬಲ್ ಸಿಮ್ ಇರುತ್ತದೆ. ಎರಡೂ ಸಿಮ್‌ಗಳಿಗೂ ದೊಡ್ಡ ಪ್ಲ್ಯಾನ್ ಬೇಕಿಲ್ಲ. ಇಂಥವರಿಗೆ ಈ ಪ್ಲ್ಯಾನ್ ಬೆಸ್ಟ್. ನೆನಪಿಡಿ, ಈ ಯೋಜನೆಯಲ್ಲಿ ವರ್ಷಕ್ಕೆ (ಪ್ರತಿದಿನಕ್ಕಲ್ಲ) ದೊರಕುವುದು ಕೇವಲ 24 ಜಿಬಿ ಇಂಟರ್‌ನೆಟ್ ಮಾತ್ರ. ಇದರ ಇಂಟರ್‌ನೆಟ್ ಆಫ್ ಮಾಡಿಟ್ಟುಕೊಂಡು ಅಗತ್ಯಬಿದ್ದಾಗ ಮಾತ್ರ ಆನ್ ಮಾಡಿಕೊಳ್ಳುವುದು ಉತ್ತಮ. ಅನಿಯಮಿತ ಕರೆ ಮತ್ತು ಪ್ರತಿದಿನಕ್ಕೆ 100 ಎಸ್‌ಎಂಎಸ್ ಉಚಿತವಾಗಿ ದೊರಕುತ್ತದೆ. ಇದರೊಂದಿಗೆ ಏರ್‌ಟೆಲ್ ಎಕ್ಸ್‌ಟ್ರೀಮ್ ಅಪ್ಲಿಕೇಷನ್‌ನ ಉಚಿತ ಕಂಟೆಂಟ್‌ಗಳನ್ನೂ ಪಡೆಯಬಹುದು. ಮೂರು ತಿಂಗಳ ವ್ಯಾಲಿಡಿಟಿಯ ಅಪೊಲೊ 24ಬೈ7 ಮೆಂಬರ್‌ಷಿಪ್ ಕೂಡ ದೊರಕುತ್ತದೆ. ಉಚಿತ ಹೆಲೋಟ್ಯೂನ್‌ಗಳು, ಎಐ ಚಾಲಿತ ಸ್ಪ್ಯಾಮ್ ಸಂದೇಶ, ಕರೆಗಳ ಮೇಲೆ ನಿಗಾ ವಹಿಸುವ ಫೀಚರ್‌ಗಳು ದೊರಕುತ್ತವೆ.
ಇದಲ್ಲದೆ ಏರ್‌ಟೆಲ್‌ನಲ್ಲಿ ಇನ್ನೂ ಹಲವು ಇತರೆ ಮೊಬೈಲ್ ರೀಚಾರ್ಜ್ ಆಫರ್‌ಗಳು ಇವೆ. ಏರ್‌ಟೆಲ್ ಅಪ್ಲಿಕೇಷನ್ ಅಥವಾ ವೆಬ್‌ಸೈಟ್‌ಗಳಲ್ಲಿ ಇತರೆ ಆಫರ್‌ಗಳ ಮಾಹಿತಿ ಪಡೆಯಬಹುದು.
ಡಿಸ್‌ಕ್ಲೈಮರ್/ ಹಕ್ಕು ನಿರಾಕರಣೆ: ಮೊಬೈಲ್ ರೀಚಾರ್ಜ್‌ಗಳ ಕುರಿತು ಓದುಗರಿಗೆ ಮಾಹಿತಿ ನೀಡುವ ಉದ್ದೇಶದ ಬರಹವಿದು. ಯಾವುದೇ ಪ್ಲ್ಯಾನ್‌ಗಳನ್ನು ರೀಚಾರ್ಜ್ ಮಾಡಿಕೊಳ್ಳುವಂತೆ ಓದುಗರನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಒತ್ತಾಯಿಸುವುದಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಪ್ಲ್ಯಾನ್‌ಗಳ ಕುರಿತು ರಿಸರ್ಚ್ ಮಾಡಿ ಸ್ವಂತ ವಿಚೇಚನೆಯಿಂದ ನಿರ್ಧಾರ ತೆಗೆದುಕೊಳ್ಳಿರಿ.