ಫೆ 1 ರಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಹೆಚ್ಚಳ; 1500 ರೂಪಾಯಿಯಿಂದ 32500 ರೂ ತನಕ ಏರಿಕೆ, ಯಾವ ಕಾರಿಗೆ ಎಷ್ಟು ದರ ಹೆಚ್ಚಳ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಫೆ 1 ರಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಹೆಚ್ಚಳ; 1500 ರೂಪಾಯಿಯಿಂದ 32500 ರೂ ತನಕ ಏರಿಕೆ, ಯಾವ ಕಾರಿಗೆ ಎಷ್ಟು ದರ ಹೆಚ್ಚಳ

ಫೆ 1 ರಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಹೆಚ್ಚಳ; 1500 ರೂಪಾಯಿಯಿಂದ 32500 ರೂ ತನಕ ಏರಿಕೆ, ಯಾವ ಕಾರಿಗೆ ಎಷ್ಟು ದರ ಹೆಚ್ಚಳ

Maruti Suzuki Price Hike: ಮಾರುತಿ ಸುಜುಕಿ ಇಂಡಿಯಾ ವಾಹನಗಳ ಬೆಲೆ ಫೆಬ್ರವರಿ 1ರಿಂದ ಹೆಚ್ಚಳವಾಗಲಿದೆ. 1500 ರೂಪಾಯಿಯಿಂದ 32,500 ರೂಪಾಯಿ ಹೆಚ್ಚಳವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಯಾವ ಕಾರಿಗೆ ಎಷ್ಟು ದರ ಹೆಚ್ಚಳವಾಗಲಿದೆ ಎಂಬ ಪೂರ್ತಿ ವಿವರ ಇಲ್ಲಿದೆ.

ಫೆ 1 ರಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಹೆಚ್ಚಳವಾಗಲಿದೆ. (ಕಡತ ಚಿತ್ರ)
ಫೆ 1 ರಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಹೆಚ್ಚಳವಾಗಲಿದೆ. (ಕಡತ ಚಿತ್ರ) (Reuters / Anindito Mukherjee / File)

Maruti Suzuki Price Hike: ಮಾರುತಿ ಸುಜುಕಿ ಇಂಡಿಯಾದ ವಿವಿಧ ವಾಹನ ಮಾದರಿಗಳ ಬೆಲೆ 1500 ರೂಪಾಯಿಯಿಂದ 32500 ರೂಪಾಯಿ ತನಕ ಹೆಚ್ಚಳವಾಗಲಿದೆ. ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳ ಕಾರಣ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾಗಿ ಬಂದಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಗುರುವಾರ (ಜನವರಿ 23) ಘೋಷಿಸಿದೆ. ಈ ಕುರಿತ ದಾಖಲೆಗಳನ್ನು ಷೇರುಪೇಟೆ ನಿಯಂತ್ರಕ ಸಂಸ್ಥೆಗೂ ಸಲ್ಲಿಸಿದೆ.

ಫೆ 1 ರಿಂದ ಮಾರುತಿ ಸುಜುಕಿ ವಾಹನಗಳ ಬೆಲೆ ಹೆಚ್ಚಳ

ಮಾರುತಿ ಸುಜುಕಿ ಇಂಡಿಯಾ ಕಂಪನಿಯ ವಿವಿಧ ವಾಹನಗಳ ವಿಶೇಷವಾಗಿ ಕಾರುಗಳ ಬೆಲೆ ಫೆಬ್ರವರಿ 1 ರಿಂದ ಹೆಚ್ಚಳವಾಗಲಿದೆ. ಈ ಸಂಬಂಧ ಷೇರುಪೇಟೆ ನಿಯಂತ್ರಕ ಸಂಸ್ಥೆಗೆ ಮಾರುತಿ ಸುಜುಕಿ ಇಂಡಿಯಾ ಸಲ್ಲಿಸಿದ ದಾಖಲೆಗಳ ಪ್ರಕಾರ, "ಕಂಪನಿಯು ವೆಚ್ಚವನ್ನು ಸರಿದೂಗಿಸುವುದಕ್ಕಾಗಿ ಮತ್ತು ಗ್ರಾಹಕರ ಮೇಲೆ ಹೆಚ್ಚುವರಿ ಹೊರೆಯ ಪ್ರಭಾವವನ್ನು ಕಡಿಮೆ ಮಾಡಲು ಬದ್ಧವಾಗಿದೆ. ಆದಾಗ್ಯೂ, ಹೆಚ್ಚಾಗಿರುವ ಕೆಲವು ವೆಚ್ಚಗಳ ನಿರ್ವಹಣೆಯು ಕಷ್ಟವಾದ ಕಾರಣ ಅನಿವಾರ್ಯವಾಗಿ ಅದನ್ನು ಮಾರುಕಟ್ಟೆಗೆ ಅಂದರೆ ಗ್ರಾಹಕರಿಗೆ ವರ್ಗಾವಣೆ ಮಾಡಬೇಕಾಗಿ ಬಂದಿದೆ" ಎಂದು ಮಾರುತಿ ಸುಜುಕಿ ಹೇಳಿದೆ.

ಬೆಲೆ ಪರಿಷ್ಕರಣೆ ಬಳಿಕ ಕಾಂಪ್ಯಾಕ್ಟ್ ಕಾರು, ಸೆಲೆರಿಯೋಗಳ ಎಕ್ಸ್‌ ಶೋರೂಂ ಬೆಲೆ 32,500 ರೂಪಾಯಿ ತನಕ, ಪ್ರೀಮಿಯಂ ಮಾಡೆಲ್‌ ಇನ್ವಿಕ್ಟೋ ಮುಂತಾದವುಗಳ ಎಕ್ಸ್‌ ಶೋರೂಂ ಬೆಲೆ 30,000 ರೂಪಾಯಿ ತನಕ ಹೆಚ್ಚಳವಾಗಲಿದೆ.

1500 ರೂನಿಂದ 32500 ರೂ ತನಕ ಏರಿಕೆ, ಮಾರುತಿ ಸುಜುಕಿ ಯಾವ ಕಾರಿಗೆ ಎಷ್ಟು ದರ ಹೆಚ್ಚಳ

ಮಾರುತಿ ಸುಜುಕಿ ಸೆಲೆರಿಯೊಗೆ 32,500 ರೂಪಾಯಿ ಹೆಚ್ಚಳವಾಗಲಿದೆ. ಆದರೆ ಸಿಯಾಜ್ ಮತ್ತು ಜಿಮ್ನಿ ಬೆಲೆಗಳು 1,500 ರೂಪಾಯಿ ಹೆಚ್ಚಳವಾಗಲಿದೆ. ಮಾರುತಿ ಸುಜುಕಿ ಮಾಡೆಲ್‌ಗಳಿಗೆ ಅನುಗುಣವಾಗಿ ಬೆಲೆ ಹೆಚ್ಚಳದ ಪ್ರಮಾಣ ಹೀಗಿದೆ ನೋಡಿ

ಆಲ್ಟೋ ಕೆ 10 - 19,500 ರೂ ತನಕ

ಎಸ್‌ ಪ್ರೆಸ್ಸೋ - 5,000 ರೂ ತನಕ

ಸೆಲೆರಿಯೋ - 32,500 ರೂ ತನಕ

ವ್ಯಾಗನ್ ಆರ್ - 13,000 ರೂ ತನಕ

ಸ್ವಿಫ್ಟ್ - 5,000 ರೂ ತನಕ

ಡಿಝೈರ್ - 10,500 ರೂ ತನಕ

ಬ್ರೆಝ್ಝಾ - 10,500 ರೂ. ತನಕ

ಎರ್ಟಿಗಾ - 15,000 ರೂ ತನಕ

ಎಕೋ - 12,000 ರೂ ತನಕ

ಸೂಪರ್ ಕ್ಯಾರಿ - 10,000 ರೂ ತನಕ

ಇಗ್ನಿಸ್ - 6,000 ರೂ ತನಕ

ಬಲೆನೋ - 9,000 ರೂ ತನಕ

ಸಿಯಾಜ್ - 1,500 ರೂ ತನಕ

ಎಕ್ಸ್‌ಎಲ್‌6 - 10,000 ರೂ ತನಕ

ಫ್ರಾಂಕ್ಸ್‌ - 5,500 ರೂ ತನಕ

ಇನ್ವಿಕ್ಟೋ - 30,000 ರೂ ತನಕ

ಜಿಮ್ನಿ - 1,500 ರೂ ತನಕ

ಗ್ರಾಂಡ್ ವಿಟಾರಾ - 25,000 ರೂ ತನಕ

ಕೆಲವು ಕಾರುಗಳ ಬೆಲೆ ಗರಿಷ್ಠ ಏರಿದರೆ, ಇನ್ನು ಕೆಲವು 1500 ರೂ ಹೆಚ್ಚಳ

ಮಾರುತಿ ಸುಜುಕಿ ಇಂಡಿಯಾದ ಜನಪ್ರಿಯ ವ್ಯಾಗನ್-ಆರ್ ಮಾದರಿಯು ಅದರ ಬೆಲೆಯನ್ನು 15,000 ರೂ.ವರೆಗೆ ಹೆಚ್ಚಿಸಿದರೆ, ಸ್ವಿಫ್ಟ್‌ನ ಬೆಲೆ 5,000 ರೂ. SUV ಬ್ರೆಝಾ ಮತ್ತು ಗ್ರಾಂಡ್ ವಿಟಾರಾ ಕ್ರಮವಾಗಿ 20,000 ಮತ್ತು 25,000 ರೂಪಾಯಿ ಹಾಗೂ ಪ್ರವೇಶ ಮಟ್ಟದ ಸಣ್ಣ ಕಾರುಗಳು ಆಲ್ಟೊ ಕೆ10 ಬೆಲೆ 19,500 ರೂಪಾಯಿವರೆಗೆ ಮತ್ತು ಎಸ್-ಪ್ರೆಸ್ಸೊ 5,000 ರೂಪಾಯಿ ವರೆಗೆ ಏರಿಕೆಯಾಗಲಿದೆ.

ಪ್ರೀಮಿಯಂ ಕಾಂಪ್ಯಾಕ್ಟ್ ಮಾಡೆಲ್ ಬಲೆನೊ ಬೆಲೆ 9,000 ರೂ.ವರೆಗೆ, ಕಾಂಪ್ಯಾಕ್ಟ್ ಎಸ್‌ಯುವಿ ಫ್ರಾಂಕ್ಸ್‌ನ ಬೆಲೆ 5,500 ರೂ.ವರೆಗೆ ಮತ್ತು ಕಾಂಪ್ಯಾಕ್ಟ್ ಸೆಡಾನ್ ಡಿಜೈರ್‌ನ ಬೆಲೆ 10,000 ರೂ.ವರೆಗೆ ಹೆಚ್ಚಾಗುತ್ತದೆ ಎಂದು ಕಾರು ತಯಾರಕರು ತಿಳಿಸಿದ್ದಾರೆ. ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಪ್ರಸ್ತುತ ಪ್ರವೇಶ ಮಟ್ಟದ ಆಲ್ಟೊ ಕೆ-10 ನಿಂದ 3.99 ಲಕ್ಷದಿಂದ ಪ್ರಾರಂಭವಾಗುವ ಇನ್ವಿಕ್ಟೊದವರೆಗೆ 28.92 ಲಕ್ಷದವರೆಗೆ ಹಲವಾರು ವಾಹನಗಳನ್ನು ಮಾರಾಟ ಮಾಡುತ್ತಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.