ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  June Bank Holidays: ಜೂನ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 12 ದಿನ ರಜೆ; ಕರ್ನಾಟಕ ಸೇರಿ ರಾಜ್ಯವಾರು ವಿವರ ಇಲ್ಲಿದೆ

June Bank Holidays: ಜೂನ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 12 ದಿನ ರಜೆ; ಕರ್ನಾಟಕ ಸೇರಿ ರಾಜ್ಯವಾರು ವಿವರ ಇಲ್ಲಿದೆ

ಧಾರ್ಮಿಕ ಹಬ್ಬಗಳು ಹಾಗೂ ವಾರಾಂತ್ಯದ ರಜಾ ದಿನಗಳ ಹಿನ್ನೆಲೆಯಲ್ಲಿ ಜೂನ್ ತಿಂಗಳಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ಕನಿಷ್ಠ 12 ದಿನ ಮುಚ್ಚಲ್ಪಟ್ಟಿರುತ್ತವೆ. ಸಂಪೂರ್ಣ ಪಟ್ಟಿ ಇಲ್ಲಿದೆ.

ಜೂನ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 12 ದಿನ ರಜೆ; ಕರ್ನಾಟಕ ಸೇರಿ ರಾಜ್ಯವಾರು ವಿವರ ಇಲ್ಲಿದೆ
ಜೂನ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 12 ದಿನ ರಜೆ; ಕರ್ನಾಟಕ ಸೇರಿ ರಾಜ್ಯವಾರು ವಿವರ ಇಲ್ಲಿದೆ

ಬೆಂಗಳೂರು: ಬ್ಯಾಂಕ್‌ಗಳು ಡಿಜಿಟಲ್ ಆಗಿರುವುದರಿಂದ ಬಹುತೇಕ ವಹಿವಾಟುಗಳನ್ನು ಆನ್‌ಲೈನ್‌ನಲ್ಲೇ ಮಾಡಿಕೊಳ್ಳಬಹುದು. ಆದರೆ ಕೆಲವೊಂದು ವ್ಯವಹಾರಗಳಿಗಾಗಿ ಖುದ್ಧು ಬ್ಯಾಂಕ್‌ಗಳಿಗೆ ಭೇಟಿ ನೀಡಬೇಕಾಗುತ್ತದೆ. ಒಂದು ವೇಳೆ ನೀವೇನಾದರೂ ಜೂನ್‌ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ನೇರ ಭೇಟಿ ನೀಡಿ ವಹಿವಾಟು ನಡೆಸಬೇಕಿದ್ದರೆ ಆ ತಿಂಗಳಲ್ಲಿ ಯಾವೆಲ್ಲಾ ದಿನ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ ಅನ್ನೋದನ್ನು ತಿಳಿದುಕೊಂಡಿರಬೇಕು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ತಿಂಗಳ ಬ್ಯಾಂಕ್ ರಜೆಗಳ ವಿವರಗಳನ್ನು ಘೋಷಿಸುತ್ತದೆ. ಅದರಂತೆ 2024ರ ಜೂನ್ ತಿಂಗಳ ರಜಾ ದಿನಗಳ (June 2024 Bank Holiday List) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

ಧಾರ್ಮಿಕ ಹಬ್ಬಗಳು, ವಾರಾಂತ್ಯದ ರಜೆಗಳು, 2ನೇ ಮತ್ತು 4ನೇ ಶನಿವಾರ ಸೇರಿದಂತೆ ಜೂನ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಒಟ್ಟು 12 ರಜೆಗಳಿವೆ. ಸ್ಟೇಟ್ ಬ್ಯಾಂಕ್ ಇಂಡಿಯಾ ಸೇರಿದಂತೆ ಭಾರತದಾದ್ಯಂತ ಎಲ್ಲಾ ರಾಷ್ಟ್ರೀಯ ಮತ್ತು ಖಾಸಗಿ ಬ್ಯಾಂಕ್‌ಗಳು ತಮ್ಮ ಪ್ರಾದೇಶಿಕ ಹಬ್ಬಗಳ ಆಧಾರದ ಮೇಲೆ 2024ರ ಜೂನ್‌ನಲ್ಲಿ 12 ರಜಾ ದಿನಗಳನ್ನು ಹೊಂದಿವೆ. ಜೂನ್ ತಿಂಗಳಲ್ಲಿ ವಿಶೇಷವಾಗಿ 5 ಭಾನುವಾರಗಳು ಬಂದಿವೆ. ರಜಾದಿನಗಳನ್ನು ಮೊದಲೇ ತಿಳಿದುಕೊಂಡರೆ ನಿಮ್ಮ ಬ್ಯಾಂಕ್ ವ್ಯವಹಾರಗಳಿಗೆ ಪ್ಲಾನ್ ಮಾಡಿಕೊಳ್ಳಲು ನೆರವಾಗುತ್ತದೆ. ಇಂದರಿಂದಾಗಿ ಮುಂದಾಗುವ ಸಮಸ್ಯೆ, ಯಾವುದೇ ರೀತಿಯ ಗೊಂದಲಗಳನ್ನು ತಪ್ಪಿಸಬಹುದು. ಧಾರ್ಮಿಕ ಹಬ್ಬಗಳ ಹಿನ್ನೆಲೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್ ರಜಾ ದಿನಗಳ ಭಿನ್ನವಾಗಿರುತ್ತವೆ.

2024ರ ಜೂನ್‌ನಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ

  1. ಜೂನ್ 9 ರಂದು ಬ್ಯಾಂಕ್ ರಜೆ: ಹಿಮಾಚಲ ಪ್ರದೇಶ, ಹರಿಯಾಣ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಮಹಾರಾಣಾ ಪ್ರತಾಪ್ ಜಯಂತಿಯ ನಿಮಿತ್ತ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ
  2. ಜೂನ್ 10 ರಂದು ಬ್ಯಾಂಕ್ ರಜೆ: ಪಂಜಾಬ್‌ನಲ್ಲಿ ಶ್ರೀ ಗುರು ಅರ್ಜುನ್ ದೇವ್ ಜಿ ಅವರರ ಹುತಾತ್ಮ ದಿನ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ
  3. ಜೂನ್ 14 ರಂದು ಬ್ಯಾಂಕ್ ರಜೆ: ಪಹಿಲಿ ರಾಜನ ವಿಶೇಷ ದಿನವಾದ ಕಾರಣ ಒಡಿಶಾದಲ್ಲಿ ಈ ದಿನದಂದು ಮುಚ್ಚಲ್ಪಟ್ಟಿರುತ್ತವೆ
  4. ಜೂನ್ 15 ರಂದು ಬ್ಯಾಂಕ್‌ಗಳಿಗೆ ರಜೆ: ವೈಎಂಎ ದಿನ ಕಾರಣದಿಂದ ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ರಾಜಾ ಸಂಕ್ರಾಂತಿಗಾಗಿ ಒಡಿಶಾದಲ್ಲೂ ಬ್ಯಾಂಕುಗಳು ಕೆಲಸ ಮಾಡಲ್ಲ.
  5. ಜೂನ್ 17 ರಂದು ಬ್ಯಾಂಕ್ ರಜೆ: ಬಕ್ರೀದ್ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ ಭಾರತದಾದ್ಯಂತ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ
  6. ಜೂನ್ 21 ರಂದು ಬ್ಯಾಂಕ್ ರಜೆ: ವಟ್ ಸಾವಿತ್ರಿ ವ್ರತಕ್ಕಾಗಿ ಹಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ.

ಇದನ್ನೂ ಓದಿ: 606 ಎಸ್‌ಒ ಹುದ್ದೆಗಳ ಭರ್ತಿಗೆ ಮುಂದಾದ ಯೂನಿಯನ್ ಬ್ಯಾಂಕ್

ವಾರಾಂತ್ಯದ ಬ್ಯಾಂಕ್ ರಜಾದಿನಗಳ ಪಟ್ಟಿ

  • ಜೂನ್ 8 ರಂದು ಭಾರತದಾದ್ಯಂತ ಎರಡನೇ ಶನಿವಾರಂದು ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ
  • ಜೂನ್ 22 ರಂದು ರಂದು ನಾಲ್ಕನೇ ಶನಿವಾರ ಕಾರಣ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ

ಈ ಮೇಲಿನ ದಿನಗಳನ್ನು ಹೊರತುಪಡಿಸಿದರರೆ ಜೂನ್ 2, 9, 16, 23 ಹಾಗೂ 30 ರಂದು ಭಾನುವಾರ ಇರುವುದರಿಂದ ಈ ದಿನಗಳಲ್ಲಿ ಭಾರತದಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳು ಮುಚ್ಚಲ್ಪಟ್ಟಿರುತ್ತವೆ. ಹಾಗಾಗಿ ಖುದ್ದು ಬ್ಯಾಂಕ್ ವಹಿವಾಟಿನ ಪ್ಲಾನ್ ನಿಮ್ಮದಾಗಿದ್ದರೆ ಈ ರಜಾ ದಿನಗಳನ್ನು ಹೊರತುಪಡಿಸಿ ಬ್ಯಾಂಕ್‌ಗಳಿಗೆ ಭೇಟಿ ನೀಡಿ ನಿಮ್ಮ ವ್ಯವಾಹರಗಳನ್ನು ಮಾಡಿಕೊಳ್ಳಬಹುದು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024