Gold Price Today; ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಆಭರಣ ಖರೀದಿಗೆ ಶುಭದಿನ, ಚಿನ್ನ ಬೆಳ್ಳಿ ಧಾರಣೆ ಹೀಗಿದೆ-business news 22 carat gold price today in bengaluru mysuru mangaluru other cities states silver rate today aug 16 uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price Today; ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಆಭರಣ ಖರೀದಿಗೆ ಶುಭದಿನ, ಚಿನ್ನ ಬೆಳ್ಳಿ ಧಾರಣೆ ಹೀಗಿದೆ

Gold Price Today; ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ, ಆಭರಣ ಖರೀದಿಗೆ ಶುಭದಿನ, ಚಿನ್ನ ಬೆಳ್ಳಿ ಧಾರಣೆ ಹೀಗಿದೆ

Gold Rate Today; ಸುವಸ್ತುಗಳನ್ನು ಖರೀದಿಸುವಾಗ ಮುಹೂರ್ತ ನೋಡುವವರು ಅನೇಕರು. ಚಿನ್ನ ಬೆಳ್ಳಿ ಕೂಡ ಸುವಸ್ತುವಿನ ಪಟ್ಟಿಯಲ್ಲಿವೆ. ಶ್ರಾವಣ ಮಾಸದಲ್ಲಿ ಹಬ್ಬ ಹರಿದಿನಗಳು ಹೆಚ್ಚು. ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ಆಭರಣ ಖರೀದಿಗೆ ಶುಭದಿನವೂ ಹೌದು. ಚಿನ್ನ ಬೆಳ್ಳಿ ಧಾರಣೆ ಹುಡುಕುವವರಿಗಾಗಿ ಇಲ್ಲಿದೆ ಆ ಮಾಹಿತಿ.

Gold Rate Bengaluru Today; ಇಂದು ವರಮಹಾಲಕ್ಷ್ಮಿ ವ್ರತದ ಸಂಭ್ರಮ, ಸಡಗರ. ಆಭರಣ ಖರೀದಿಗೆ ಶುಭದಿನವೂ ಹೌದು. ಈ ದಿನದ ಚಿನ್ನ ಬೆಳ್ಳಿ ದರ ವಿವರ ಈ ವರದಿಯಲ್ಲಿದೆ.
Gold Rate Bengaluru Today; ಇಂದು ವರಮಹಾಲಕ್ಷ್ಮಿ ವ್ರತದ ಸಂಭ್ರಮ, ಸಡಗರ. ಆಭರಣ ಖರೀದಿಗೆ ಶುಭದಿನವೂ ಹೌದು. ಈ ದಿನದ ಚಿನ್ನ ಬೆಳ್ಳಿ ದರ ವಿವರ ಈ ವರದಿಯಲ್ಲಿದೆ.

ಬೆಂಗಳೂರು: ಇಂದು ವರಮಹಾಲಕ್ಷ್ಮಿ ವ್ರತ (Varamahalakshmi Vrata), ಶ್ರಾವಣ ಪುತ್ರದಾ ಏಕಾದಶಿ ಹೀಗೆ ಹಬ್ಬ ಹರಿದಿನಗಳ ಸಂಭ್ರಮ ಸಡಗರ. ಶುಭದಿನವಾದ ಕಾರಣ ಇಂದು ಚಿನ್ನಾಭರಣ ಖರೀದಿಗೆ ಹೋಗುವವರ ಸಂಖ್ಯೆ ಹೆಚ್ಚು. ಚಿನ್ನದ ದರ ಬಹುತೇಕ ಸ್ಥಿರವಾಗಿದೆ ಎಂಬುದೇ ಈ ದಿನ ಚಿನ್ನಾಭರಣ ಖರೀದಿಸುವವರಿಗೆ ಖುಷಿ ಸುದ್ದಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರಲ್ಲಿ ಚಿನ್ನದ ದರ (Gold Rate Bengaluru Today)ವನ್ನು ಗಮನಿಸುವುದಾದರೆ, ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಿನ್ನೆ (ಆಗಸ್ಟ್ 15) ಬೆಂಗಳೂರು ಚಿನಿವಾರ ಪೇಟೆಯಲ್ಲಿ ವಹಿವಾಟು ಇರಲಿಲ್ಲ. ಬುಧವಾರ (ಆಗಸ್ಟ್ 14) ರಂದು ವಹಿವಾಟು ಕೊನೆಗೊಂಡಾಗ ಸ್ಟಾಂಡರ್ಡ್‌ ಚಿನ್ನ (99.5 ಪರಿಶುದ್ಧ) 10 ಗ್ರಾಂಗೆ 72,600 ರೂಪಾಯಿ ಇತ್ತು. ಆಭರಣ ಚಿನ್ನದ ದರ ಗ್ರಾಂಗೆ 6,715 ರೂಪಾಯಿ ಇತ್ತು. ಇನ್ನು ಬೆಳ್ಳಿ ಸ್ಪಾಟ್‌ಗೆ ಕಿಲೋ ಒಂದರ ದರ 82,900 ರೂಪಾಯಿ ಇತ್ತು.

ಮುಂಬಯಿಯ ಚಿನಿವಾರ ಪೇಟೆಯಲ್ಲಿ ಬೆಳ್ಳಿದರ ಕಿಲೋಗೆ 80,921 ರೂಪಾಯಿ ಇತ್ತು. ಸ್ಟಾಂಡರ್ಡ್‌ ಚಿನ್ನದ (99.5 ಪರಿಶುದ್ಧ) ದರ 10 ಗ್ರಾಂಗೆ 70,510 ರೂಪಾಯಿ, ಅಪರಂಜಿ ಚಿನ್ನ 10 ಗ್ರಾಂಗೆ 70,793 ರೂಪಾಯಿ ಇತ್ತು.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್‌ ಆಭರಣ ಚಿನ್ನದ ದರ (22 carat gold rate)

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ದರ ಬುಧವಾರ (ಆಗಸ್ಟ್ 14) 10 ರೂಪಾಯಿ ಇಳಿಕೆಯಾಗಿತ್ತು. ನಿನ್ನೆ (ಆಗಸ್ಟ್ 15) 10 ರೂಪಾಯಿ ಏರಿಕೆಯಾಗಿದೆ. ಇಂದು ದೇಶದ ಮಟ್ಟದಲ್ಲಿ ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ ನಗರ ಮಟ್ಟದಲ್ಲಿ 10 ರೂಪಾಯಿ ಏರಿಕೆ ದಾಖಲಾಗಿದೆ.

ಬೆಂಗಳೂರು- 65,550 ರೂಪಾಯಿ.

ಮಂಗಳೂರು-65,550 ರೂಪಾಯಿ.

ಮೈಸೂರು-65,550 ರೂಪಾಯಿ.

ಚೆನ್ನೈ- 65,550 ರೂಪಾಯಿ.

ಮುಂಬೈ- 65,550 ರೂಪಾಯಿ.

ದೆಹಲಿ- 65,700 ರೂಪಾಯಿ.

ಕೋಲ್ಕತ- 65,550 ರೂಪಾಯಿ.

ಹೈದರಾಬಾದ್- 65,550 ರೂಪಾಯಿ.

ಕೇರಳ- 65,550 ರೂಪಾಯಿ.

ಪುಣೆ- 65,550 ರೂಪಾಯಿ.

ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate) ದ ದರ

ಬೆಂಗಳೂರು- 71,510 ರೂಪಾಯಿ.

ಮಂಗಳೂರು- 71,510 ರೂಪಾಯಿ.

ಮೈಸೂರು- 71,510 ರೂಪಾಯಿ.

ಚೆನ್ನೈ- 71,510 ರೂಪಾಯಿ.

ಮುಂಬೈ- 71,510 ರೂಪಾಯಿ.

ದೆಹಲಿ- 71,660 ರೂಪಾಯಿ.

ಕೋಲ್ಕತ- 71,510 ರೂಪಾಯಿ.

ಹೈದರಾಬಾದ್- 71,510 ರೂಪಾಯಿ.

ಕೇರಳ- 71,510ರೂಪಾಯಿ.

ಪುಣೆ-71,510 ರೂಪಾಯಿ.

ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today): ನಾಡಿನ ವಿವಿಧ ನಗರಗಳಲ್ಲಿ ಒಂದು ಕಿಲೋ ಬೆಳ್ಳಿ ದರ ಇಂದು (ಆಗಸ್ಟ್ 16) ಹೀಗಿದೆ. ಬೆಂಗಳೂರು-80,000 ರೂಪಾಯಿ, ಮೈಸೂರು- 80,000 ರೂಪಾಯಿ, ಮಂಗಳೂರು- 80,000 ರೂಪಾಯಿ, ಹೈದರಾಬಾದ್- 88,500 ರೂಪಾಯಿ, ಚೆನ್ನೈ- 88,500 ರೂಪಾಯಿ, ದೆಹಲಿ- 83,500 ರೂಪಾಯಿ, ಮುಂಬೈ- 83,500 ರೂಪಾಯಿ, ಕೋಲ್ಕತ್ತ-83,500 ರೂಪಾಯಿ ಇದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.