ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  December Bank Holidays: 6 ದಿನ ಬ್ಯಾಂಕ್ ಮುಷ್ಕರ, ಕ್ರಿಸ್‌ಮಸ್ ಸೇರಿ ಸಾಲು ಸಾಲು ರಜೆ; ಡಿಸೆಂಬರ್ ಬ್ಯಾಂಕ್ ಹಾಲಿಡೇ ಪಟ್ಟಿ ಇಲ್ಲಿದೆ

December Bank Holidays: 6 ದಿನ ಬ್ಯಾಂಕ್ ಮುಷ್ಕರ, ಕ್ರಿಸ್‌ಮಸ್ ಸೇರಿ ಸಾಲು ಸಾಲು ರಜೆ; ಡಿಸೆಂಬರ್ ಬ್ಯಾಂಕ್ ಹಾಲಿಡೇ ಪಟ್ಟಿ ಇಲ್ಲಿದೆ

2023ರ ಡಿಸೆಂಬರ್‌ನಲ್ಲಿ ಬ್ಯಾಂಕ್‌ಗಳು 6 ದಿನಗಳ ಮುಷ್ಕರವನ್ನು ಹಮ್ಮಿಕೊಂಡಿವೆ. ಕ್ರಿಸ್‌ಮಸ್ ಸೇರಿ ವರ್ಷದ ಕೊನೆಯ ತಿಂಗಳಲ್ಲಿ ಬರುವ ರಜೆಗಳನ್ನು ತಿಳಿದುಕೊಳ್ಳಿ.

ಬೆಂಗಳೂರಿನ ಜೆಸಿ ನಗರದ ಮುಖ್ಯರಸ್ತೆಯಲ್ಲಿ ಎಸ್‌ಬಿಐ ಬ್ಯಾಂಕ್
ಬೆಂಗಳೂರಿನ ಜೆಸಿ ನಗರದ ಮುಖ್ಯರಸ್ತೆಯಲ್ಲಿ ಎಸ್‌ಬಿಐ ಬ್ಯಾಂಕ್

ದೆಹಲಿ: 2023ರ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ (December Holidays) ವಿವಿಧ ಬ್ಯಾಂಕ್‌ಗಳು ಮುಷ್ಕರಕ್ಕೆ (Bank Strike) ಮುಂದಾಗಿವೆ. ಕಾರಣದಿಂದ ಹಲವು ದಿನಗಳ ಮಟ್ಟಿಗೆ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ ಬಂದ್ ಆಗಿರುತ್ತವೆ.

ಟ್ರೆಂಡಿಂಗ್​ ಸುದ್ದಿ

ನೀವೇನಾದರೂ ಡಿಸೆಂಬರ್‌ನಲ್ಲಿ ಬ್ಯಾಂಕ್‌ ವ್ಯವಹಾರಗಳಿಗೆ (Bank Business) ಸಂಬಂಧಿಸಿದಂತೆ ಪ್ಲಾನ್‌ಗಳನ್ನು ಮಾಡಿಕೊಂಡಿದ್ದರೆ ತಪ್ಪದೆ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ನೋಡಿಕೊಳ್ಳುವುದು ಒಳ್ಳೆಯದು. ರಜೆ ಹೊರತುಪಡಿಸಿ ಉಳಿದ ಯಾವ ದಿನಗಳಲ್ಲಿ ಬ್ಯಾಂಕ್‌ಗೆ ತೆರಳಿ ವ್ಯವಹಾರಗಳನ್ನು ನಡೆಸಬೇಕು ಅನ್ನೋದು ನಿಮಗೆ ಚೆನ್ನಾಗಿ ಮನವರಿಕೆಯಾಗುತ್ತದೆ.

ಮೊಬೈಲ್ ಮತ್ತು ಇಂಟರ್‌ನೆಟ್ ಬ್ಯಾಂಕಿಂಗ್‌ ಚಟುವಟಿಕೆಗಳು ಯಾವುದೇ ಅಡತಡೆಗಳು ಇಲ್ಲದೆ ನಡೆಯುತ್ತವೆ. ಬ್ಯಾಂಕ್‌ ಒಕ್ಕೂಟಗಳು ಡಿಸೆಂಬರ್‌ನಲ್ಲಿ ಬರೋಬ್ಬರಿ 6 ದಿನಗಳ ಮುಷ್ಕರಕ್ಕೆ ಕರೆ ನೀಡಿವೆ. ಆದರೆ ಎಲ್ಲಾ ಬ್ಯಾಂಕ್‌ಗಳು ಈ ಆರೂ ದಿನ ಬಂದ್ ಆಗಿರುವುದಿಲ್ಲ. ಬದಲಾಗಿ ಒಂದೊಂದು ಬ್ಯಾಂಕ್ ಒಂದೊಂದು ದಿನ ಮುಷ್ಕರ ಮಾಡಲು ನಿರ್ಧರಿಸಿವೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) 6 ದಿನಗಳ ಮುಷ್ಕರ ನಡೆಸುವುದಾಗಿ ಈಗಾಗಲೇ ಘೋಷಣೆ ಮಾಡಿದೆ. ಅದರ ಸಂಪೂರ್ಣ ಪಟ್ಟಿ ಇಲ್ಲಿದೆ.

ಯಾವ ದಿನ ಯಾವ ಬ್ಯಾಂಕ್ ಬಂದ್ ಆಗಲಿದೆ ಅನ್ನೋದ ಪಟ್ಟಿ

ಡಿಸೆಂಬರ್ 4 (ಸೋಮವಾರ) - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ಗಳಿಂದ ಮುಷ್ಕರ

ಡಿಸೆಂಬರ್ 5 (ಮಂಗಳವಾರ) - ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಪ್ ಇಂಡಿಯಾದಿಂದ ಮುಷ್ಕರ

ಡಿಸೆಂಬರ್ 6 (ಬುಧವಾರ) - ಕೆನರಾ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವತಿಯಿಂದ ಮುಷ್ಕರ

ಡಿಸೆಂಬರ್ 7 (ಗುರುವಾರ) - ಇಂಡಿಯನ್ ಬ್ಯಾಂಕ್, ಯುಕೋ ಬ್ಯಾಂಕ್‌ಗಳಿಂದ ಮುಷ್ಕರ

ಡಿಸೆಂಬರ್ 8 (ಶುಕ್ರವಾರ) - ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರದ ವತಿಯಿಂದ ಮುಷ್ಕರ

ಡಿಸೆಂಬರ್ 11 (ಸೋಮವಾರ) - ಎಲ್ಲಾ ಖಾಸಗಿ ಬ್ಯಾಂಕ್‌ಗಳಿಂದ ಮುಷ್ಕರ ನಡೆಯಲಿದೆ

ಇವುಗಳ ಹೊರತಾಗಿ ಬ್ಯಾಂಕ್‌ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಬದಲಾಗಿರುತ್ತವೆ. ರಾಜ್ಯಗಳಲ್ಲಿ ಆಚರಿಸುವ ಹಬ್ಬಗಳ ಅಥವಾ ಆ ರಾಜ್ಯಗಳಲ್ಲಿನ ನಿರ್ದಿಷ್ಟ ಸಂದರ್ಭಗಳ ಅಧಿಸೂಚನೆಯನ್ನು ಅವಲಂಬಿಸಿರುತ್ತದೆ.

ಆರ್‌ಬಿಐ ಪಟ್ಟಿಯ ಪ್ರಕಾರ ಡಿಸೆಂಬರ್‌ನಲ್ಲಿ ಬ್ಯಾಂಕ್‌ಗಳಿಗೆ 11 ದಿನ ರಜೆಗಳಿವೆ. ಅವು ಯಾವಾಗ ಅನ್ನೋದರ ವಿವರ ಈ ಕೆಳಗಿನಂತಿದೆ.

ಡಿಸೆಂಬರ್ 1 - ರಾಜ್ಯ ಉದ್ಘಾಟನಾ ದಿನ

ಡಿಸೆಂಬರ್ 4 - ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ

ಡಿಸೆಂಬರ್ 12 - ಪಾ-ತೋಗನ್ ನೆಂಗ್ಮಿಂಜ ಸಂಗ್ಮಾ

ಡಿಸೆಂಬರ್ 14 - ಲೋಸೂಂಗ್/ನಮ್ಸೂಂಗ್

ಡಿಸೆಂಬರ್ 18 - ಲೋ ಸೋಸೋ ಥಾಮ್ ಅವರ ಸಂಸ್ಮರಣಾ ದಿನ

ಡಿಸೆಂಬರ್ 19 - ಗೋವಾ ವಿಮೋಚನಾ ದಿನ

ಡಿಸೆಂಬರ್ 25 - ಕ್ರಿಸ್‌ಮಸ್

ಡಿಸೆಂಬರ್ 26 - ಕ್ರಿಸ್‌ಮಸ್ ಆಚರಣೆ

ಡಿಸೆಂಬರ್ 27 - ಕ್ರಿಸ್‌ಮಸ್

ಡಿಸೆಂಬರ್ 30 - ಯು ಕಿಯಾಂಗ್ ನಂಗ್ಬಾ

ಇವುಗಳ ಜೊತೆಗೆ ವಾರಾಂತ್ಯದಲ್ಲಿ ಬ್ಯಾಂಕ್‌ಗಳಿಗೆ ಇರುವ ರಜಾ ದಿನಗಳು

ಡಿಸೆಂಬರ್ 3 - ಭಾನುವಾರ

ಡಿಸೆಂಬರ್ 9 - ಎರಡನೇ ಶನಿವಾರ

ಡಿಸೆಂಬರ್ 10 - ಭಾನುವಾರ

ಡಿಸೆಂಬರ್ 17 - ಭಾನುವಾರ

ಡಿಸೆಂಬರ್ 23 - ನಾಲ್ಕನೇ ಶನಿವಾರ

ಡಿಸೆಂಬರ್ 24 - ಭಾನುವಾರ

ಟಿ20 ವರ್ಲ್ಡ್‌ಕಪ್ 2024