ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಂದಿನಿಂದ ಕೆಲವು ಬ್ಯಾಂಕುಗಳ ಕ್ರೆಡಿಟ್ ಕಾರ್ಡ್‌ ನಿಯಮ ಬದಲು, ಶುಲ್ಕ ಹೆಚ್ಚಳ, ಜುಲೈ ತಿಂಗಳ 6 ಮುಖ್ಯ ಹಣಕಾಸು ಡೆಡ್‌ಲೈನ್‌ಗಳು

ಇಂದಿನಿಂದ ಕೆಲವು ಬ್ಯಾಂಕುಗಳ ಕ್ರೆಡಿಟ್ ಕಾರ್ಡ್‌ ನಿಯಮ ಬದಲು, ಶುಲ್ಕ ಹೆಚ್ಚಳ, ಜುಲೈ ತಿಂಗಳ 6 ಮುಖ್ಯ ಹಣಕಾಸು ಡೆಡ್‌ಲೈನ್‌ಗಳು

Financial Deadlines: ಇಂದು ಜುಲೈ 1. ವಾಡಿಕೆಯಂತೆ ಪ್ರತಿ ತಿಂಗಳ 1ರಂದು ಕೆಲವು ಬದಲಾವಣೆಯಾಗುತ್ತವೆ. ಅದರಂತೆ, ಇಂದಿನಿಂದ ಕೆಲವು ಬ್ಯಾಂಕುಗಳ ಕ್ರೆಡಿಟ್ ಕಾರ್ಡ್‌ ನಿಯಮ ಬದಲಾಗುತ್ತಿದ್ದು, ಶುಲ್ಕ ಹೆಚ್ಚಳವೂ ಆಗಿದೆ. ಜುಲೈ ತಿಂಗಳ 6 ಮುಖ್ಯ ಹಣಕಾಸು ಡೆಡ್‌ಲೈನ್‌ಗಳು ಮತ್ತು ಅವುಗಳ ವಿವರ ಹೀಗಿದೆ.

ಇಂದಿನಿಂದ ಕೆಲವು ಬ್ಯಾಂಕುಗಳ ಕ್ರೆಡಿಟ್ ಕಾರ್ಡ್‌ ನಿಯಮ ಬದಲು, ಶುಲ್ಕ ಹೆಚ್ಚಳ, ಜುಲೈ ತಿಂಗಳ 6 ಮುಖ್ಯ ಹಣಕಾಸು ಡೆಡ್‌ಲೈನ್‌ಗಳು
ಇಂದಿನಿಂದ ಕೆಲವು ಬ್ಯಾಂಕುಗಳ ಕ್ರೆಡಿಟ್ ಕಾರ್ಡ್‌ ನಿಯಮ ಬದಲು, ಶುಲ್ಕ ಹೆಚ್ಚಳ, ಜುಲೈ ತಿಂಗಳ 6 ಮುಖ್ಯ ಹಣಕಾಸು ಡೆಡ್‌ಲೈನ್‌ಗಳು

ನವದೆಹಲಿ: ಹಣಕಾಸಿನ ದೃಷ್ಟಿಯಿಂದ ಜುಲೈ ತಿಂಗಳು ಮಹತ್ವದ್ದು. ಜುಲೈ 1 ರಿಂದ ಹಲವು ಆರ್ಥಿಕ ನಿಯಮಗಳ ಬದಲಾವಣೆ, ದರ ಏರಿಕೆ ಇತ್ಯಾದಿಗಳು ನಿಗದಿಯಾಗಿದ್ದು, ಒಂದೊಂದಾಗಿ ಜಾರಿಗೊಳ್ಳುತ್ತಿವೆ. ಪ್ರಮುಖ ಗಡವುಗಳು ಕೂಡ ಇದೇ ತಿಂಗಳು ಇರುವ ಕಾರಣ ತೆರಿಗೆದಾರರು ನೆನಪಿಡಬೇಕಾದ ಹಲವು ಅಂಶಗಳಿವೆ. ಆದಾಯ ತೆರಿಗೆ ರಿಟರ್ನ್‌ (ಐಟಿಆರ್) ಸಲ್ಲಿಕೆಗೆ ಜುಲೈ 31 ಕೊನೇ ದಿನ.

ಒಂದು ವರ್ಷದಿಂದ ವಹಿವಾಟು ಇಲ್ಲದೇ ಸ್ಥಗಿತಗೊಂಡಿರುವ ಪೇಟಿಎಂ ವ್ಯಾಲೆಟ್‌ ಜುಲೈ 20 ರಂದು ಪೂರ್ತಿಯಾಗಿ ಮುಚ್ಚಲ್ಪಡಲಿದೆ. ಎಸ್‌ಬಿಐ ಕಾರ್ಡ್‌ ನಿಯಮ ಜುಲೈ 1 ರಿಂದ ಬದಲಾಗುತ್ತಿದೆ. ಐಸಿಐಸಿಐ ಬ್ಯಾಂಕ್‌ ಶುಲ್ಕಗಳು ಇಂದಿನಿಂದ ಬದಲಾಗುತ್ತವೆ. ಹೀಗೆ ಹಲವು ಬದಲಾವಣೆಗಳು ಈ ತಿಂಗಳು ನಡೆಯಲಿದೆ.

ಜುಲೈ ತಿಂಗಳ ಪ್ರಮುಖ ಗಡುವುಗಳು

ಜುಲೈ 1: ಎಸ್‌ಬಿಐ ಕಾರ್ಡ್ ಕ್ರೆಡಿಟ್ ಕಾರ್ಡ್ ನಿಯಮಗಳು ಮತ್ತು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಶುಲ್ಕಗಳಲ್ಲಿ ಬದಲಾವಣೆಗಳು ಜಾರಿಗೆ ಬರುತ್ತವೆ.

ಟ್ರೆಂಡಿಂಗ್​ ಸುದ್ದಿ

ಜುಲೈ 15: ಏಕ್ಸಿಸ್ ಬ್ಯಾಂಕ್‌ಗೆ ಸಿಟಿಬ್ಯಾಂಕ್ ಕ್ರೆಡಿಟ್ ಕಾರ್ಡ್ ವಲಸೆ ಪೂರ್ಣಗೊಂಡಿದೆ.

ಜುಲೈ 20: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನಿಷ್ಕ್ರಿಯ ವ್ಯಾಲೆಟ್‌ಗಳನ್ನು ಮುಚ್ಚಲಿದೆ.

ಜುಲೈ 31: 2023-24ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ.

ವಹಿವಾಟು ನಡೆಸದ ಪೇಟಿಎಂ ವ್ಯಾಲೆಟ್ ಪೂರ್ತಿ ಬಂದ್

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಶೂನ್ಯ ಬ್ಯಾಲೆನ್ಸ್ ಹೊಂದಿರುವ ವ್ಯಾಲೆಟ್‌ಗಳನ್ನು ಜುಲೈ 20ರಂದು ಮುಚ್ಚಲಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಯಾವುದೇ ವಹಿವಾಟು ನಡೆಸಿಲ್ಲದ ವ್ಯಾಲೆಟ್ ಕೂಡ ಬಂದ್ ಆಗಲಿದೆ.. “ಕಳೆದ 1 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಯಾವುದೇ ವಹಿವಾಟುಗಳನ್ನು ಹೊಂದಿರದ ಮತ್ತು ಯಾವುದೇ ಬ್ಯಾಲೆನ್ಸ್ ಹೊಂದಿರದ ಎಲ್ಲಾ ವ್ಯಾಲೆಟ್‌ಗಳು ಜುಲೈ 20ರಿಂದ ಬಂದ್ ಆಗಲಿದೆ. ಎಲ್ಲ ಬಾಧಿತ ಬಳಕೆದಾರರಿಗೆ ಈ ಕುರಿತು ಸಂದೇಶ ರವಾನೆಯಾಗಿದೆ. ಬಳಕೆದಾರರಿಗೆ ತಮ್ಮ ವ್ಯಾಲೆಟ್ ಅನ್ನು ಮುಚ್ಚುವ ಮೊದಲು 30 ದಿನಗಳ ನೋಟಿಸ್ ಅವಧಿಯನ್ನು ನೀಡುವ ಕೆಲಸ ಮಾಡಲಾಗಿದೆ” ಎಂದು ಪೇಟಿಎಂ ಹೇಳಿದೆ.

ಎಸ್‌ಬಿಐ ಕಾರ್ಡ್ ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ಬದಲಾವಣೆ

ಎಸ್‌ಬಿಐ ಕ್ರೆಡಿಟ್‌ ಕಾರ್ಡ್ ಸೇರಿ ಹಲವಾರು ಕ್ರೆಡಿಟ್ ಕಾರ್ಡ್‌ಗಳಿಗೆ ಸರ್ಕಾರ-ಸಂಬಂಧಿತ ವಹಿವಾಟುಗಳ ಮೇಲಿನ ರಿವಾರ್ಡ್ ಪಾಯಿಂಟ್‌ಗಳ ಸಂಗ್ರಹ ಸ್ಥಗಿತವಾಗಲಿದೆ. ಅವುಗಳ ವಿವರ ಹೀಗಿದೆ,

ಏರ್ ಇಂಡಿಯಾ ಎಸ್ ಬಿಐ ಪ್ಲಾಟಿನಂ ಕಾರ್ಡ್

ಏರ್ ಇಂಡಿಯಾ ಎಸ್ ಬಿಐ ಸಿಗ್ನೇಚರ್ ಕಾರ್ಡ್

ಸೆಂಟ್ರಲ್ ಎಸ್ ಬಿಐ ಸೆಲೆಕ್ಟ್ + ಕಾರ್ಡ್

ಚೆನ್ನೈ ಮೆಟ್ರೋ ಎಸ್ ಬಿಐ ಕಾರ್ಡ್

ಕ್ಲಬ್ ವಿಸ್ತಾರಾ ಎಸ್ ಬಿಐ ಕಾರ್ಡ್

ಕ್ಲಬ್ ವಿಸ್ತಾರಾ ಎಸ್ ಬಿಐ ಕಾರ್ಡ್ ಪ್ರೈಮ್‌

ದೆಹಲಿ ಮೆಟ್ರೋ ಎಸ್ ಬಿಐ ಕಾರ್ಡ್

ಎತಿಹಾದ್ ಅತಿಥಿ ಎಸ್ ಬಿಐ ಕಾರ್ಡ್

ಎತಿಹಾದ್ ಅತಿಥಿ ಎಸ್ ಬಿಐ ಪ್ರೀಮಿಯರ್ ಕಾರ್ಡ್

ಫ್ಯಾಬ್ ಇಂಡಿಯಾ ಎಸ್ ಬಿಐ

ಕಾರ್ಡ್ ಫ್ಯಾಬ್ ಇಂಡಿಯಾ ಎಸ್ ಬಿಐ ಕಾರ್ಡ್ ಸೆಲೆಕ್ಟ್‌

ಐಆರ್ಸಿಟಿಸಿ ಎಸ್ಬಿಐ ಕಾರ್ಡ್

ಐಆರ್ಸಿಟಿಸಿ ಎಸ್ಬಿಐ ಕಾರ್ಡ್ ಪ್ರೀಮಿಯರ್

ಮುಂಬೈ ಮೆಟ್ರೋ ಎಸ್ಬಿಐ ಕಾರ್ಡ್

ನೇಚರ್ಸ್ ಬಾಸ್ಕೆಟ್ ಎಸ್ಬಿಐ ಕಾರ್ಡ್

ನೇಚರ್ಸ್ ಬಾಸ್ಕೆಟ್ ಎಸ್ ಬಿಐ ಕಾರ್ಡ್ ಎಲೈಟ್

ಓಲಾ ಮನಿ ಎಸ್ ಬಿಐ ಕಾರ್ಡ್

ಪೇಟಿಎಂ ಎಸ್ ಬಿಐ

ಕಾರ್ಡ್ ಪೇಟಿಎಂ ಎಸ್ ಬಿಐ ಕಾರ್ಡ್ ಸೆಲೆಕ್ಟ್‌

ಮಾಡಿ ರಿಲಯನ್ಸ್ ಎಸ್ ಬಿಐ ಕಾರ್ಡ್

ರಿಲಯನ್ಸ್ ಎಸ್ ಬಿಐ ಕಾರ್ಡ್ ಪ್ರೈಮ್

ಯಾತ್ರಾ ಎಸ್ ಬಿಐ ಕಾರ್ಡ್

ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಶುಲ್ಕ ಪರಿಷ್ಕರಣೆ

ಐಸಿಐಸಿಐ ಬ್ಯಾಂಕ್ ವಿವಿಧ ಕ್ರೆಡಿಟ್ ಕಾರ್ಡ್ ಸೇವಾ ಶುಲ್ಕಗಳಲ್ಲಿ ಬದಲಾವಣೆಗಳು ಇಂದು ಜಾರಿಗೆ ಬಂದಿದೆ. ಎಮರಾಲ್ಡ್ ಪ್ರೈವೇಟ್ ಮೆಟಲ್ ಕ್ರೆಡಿಟ್ ಕಾರ್ಡ್ ಹೊರತುಪಡಿಸಿ ಎಲ್ಲಾ ಕಾರ್ಡ್‌ಗಳಿಗೆ ಕಾರ್ಡ್ ಬದಲಿ ಶುಲ್ಕವನ್ನು 100 ರೂ.ಗಳಿಂದ 200 ರೂ.ಗೆ ಹೆಚ್ಚಿಸಲಾಗಿದೆ. ಹೆಚ್ಚುವರಿಯಾಗಿ, ಈ ಕೆಳಗಿನ ಶುಲ್ಕಗಳನ್ನು ರದ್ದುಗೊಂಡಿದೆ.

ಪ್ರತಿ ಚೆಕ್‌/ ಕ್ಯಾಶ್ ಪಿಕ್ ಅಪ್ ಶುಲ್ಕ 100 ರೂಪಾಯಿ

ಚಾರ್ಚ್‌ ಸ್ಲಿಪ್‌ ರಿಕ್ವೆಸ್ಟ್‌ ಶುಲ್ಕ 100 ರೂಪಾಯಿ

ಡಯಲ್-ಎ-ಡ್ರಾಫ್ಟ್ ವಹಿವಾಟು ಶುಲ್ಕ ಕರಡು ಮೌಲ್ಯದ 3 ಪ್ರತಿಶತ ಡಯಲ್-ಎ-ಡ್ರಾಫ್ಟ್ ವಹಿವಾಟು ಶುಲ್ಕ, ಕನಿಷ್ಠ 300 ರೂ.ಗಳ

ಔಟ್‌ ಸ್ಟೇಷನ್ ಚೆಕ್ ಸಂಸ್ಕರಣಾ ಶುಲ್ಕ ಶೇಕಡ 1 (ಚೆಕ್ ಮೌಲ್ಯ ಕನಿಷ್ಠ 100 ರೂಪಾಯಿ)

ಮೂರು ತಿಂಗಳಿಗಿಂತ ಹೆಚ್ಚು ವಹಿವಾಟಿನ ನಕಲು ಪ್ರತಿ ಹೇಳಿಕೆ ಪಡೆಯುವ ಶುಲ್ಕ 100 ರೂಪಾಯಿ

ಪಂಜಾಬ್‌ ನ್ಯಾಷನಲ್ ಬ್ಯಾಂಕ್ ಬದಲಾವಣೆಗಳು ಏನೇನು

ಪಿಎನ್‌ಬಿ ರುಪೇ ಪ್ಲಾಟಿನಂ ಡೆಬಿಟ್ ಕಾರ್ಡ್‌ ಲಾಂಜ್‌ ಆಕ್ಸೆಸ್‌ನಲ್ಲಿ ಬದಲಾವಣೆ ಆಗುತ್ತಿದೆ. ಇದರಂತೆ,ಪ್ರತಿ ತ್ರೈಮಾಸಿಕಕ್ಕೆ ಒಂದು ದೇಶೀಯ ವಿಮಾನ ನಿಲ್ದಾಣ ಅಥವಾ ರೈಲ್ವೇ ಲೌಂಜ್ ಪ್ರವೇಶ ವರ್ಷಕ್ಕೆ ಎರಡು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಲಾಂಜ್ ಪ್ರವೇಶಗಳು ಲಭ್ಯವಾಗಲಿವೆ.

ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವಿಲೀನ

ಏಕ್ಸಿಸ್ ಬಯ್ಆಂಕ್‌ ಜೊತೆಗೆ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರ ಖಾತೆಗಳು ವಿಲೀನವಾಗುತ್ತಿದ್ದು, ಜುಲೈ 15ರೊಳಗೆ ಇದು ಸಂಪೂರ್ಣಗೊಳ್ಳಲಿದೆ.

ಇವೆಲ್ಲದಕ್ಕೆ ಹೊರತಾಗಿ, ಆದಾಯ ತೆರಿಗೆ ರಿಟರ್ನ್‌ ಡೆಡ್‌ ಲೈನ್‌ ಜುಲೈ 31. ಇದು ತಪ್ಪಿದರೆ ಡಿಸೆಂಬರ್ 31ಕ್ಕೆ ದಂಡ ಸಹಿತ ಡೆಡ್‌ಲೈನ್ ನಿಗದಿಯಾಗಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.