Amazon Prime Day: ಜುಲೈ 15-16ರಂದು ಅಮೆಜಾನ್ ಪ್ರೈಮ್ ಡೇ ಸೇಲ್, 45 ಸಾವಿರ ಹೊಸ ಉತ್ಪನ್ನ, ಬೊಂಬಾಟ್ ಡಿಸ್ಕೌಂಟ್ ಉಂಟು, ಇಲ್ಲಿದೆ ವಿವರ
ಅಮೆಜಾನ್ ಪ್ರೈಮ್ ಸದಸ್ಯರಿಗಾಗಿ ಬಹುನಿರೀಕ್ಷಿತ ಅಮೆಜಾನ್ ಪ್ರೈಮ್ ಡೇ (Prime Day 2023) ಸದ್ಯದಲ್ಲಿಯೇ ಆರಂಭವಾಗಲಿದೆ. ಜುಲೈ 15-16ರಂದು ನಡೆಯಲಿರುವ ಈ ಇವೆಂಟ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಅಮೆಜಾನ್ ಇಂಡಿಯಾವು ವಾರ್ಷಿಕ ಎರಡು ದಿನದ "ಪ್ರೈಮ್ ಡೇ 2023" (Prime Day 2023) ಸದ್ಯದಲ್ಲಿಯೇ ಆರಂಭಿಸಲಿದೆ. ಜುಲೈ 15ರಿಂದ ಜುಲೈ 16ರವರೆಗೆ ನಡೆಯಲಿರುವ ಈ ಪ್ರೈಮ್ ಡೇಯಲ್ಲಿ ಸಾಕಷ್ಟು ಗ್ರೇಟ್ ಡೀಲ್‌ಗಳು ಮತ್ತು ಹೊಸ ಉತ್ಪನ್ನಗಳ ಲಾಂಚ್ ಕಾರ್ಯಕ್ರಮಗಳು ಇರಲಿವೆ.
ಸ್ಮಾರ್ಟ್‌ಫೋನ್‌ಗಳು, ಟೀವಿ, ಅಪ್ಲಿಯೆನ್ಸ್, ಫ್ಯಾಷನ್, ಬ್ಯೂಟಿ, ಗ್ರೋಸರಿ, ಅಮೆಜಾನ್ ಸಾಧನಗಳು, ಮನೆ ಮತ್ತು ಅಡುಗೆ ಮನೆ ವಸ್ತುಗಳು, ಫರ್ನಿಚರ್‌ಗಳು ಸೇರಿದಂತೆ ಹಲವು ಹೊಸ ಉತ್ಪನ್ನಗಳು ಲಾಂಚ್ ಆಗಲಿವೆ. ಇದರೊಂದಿಗೆ ವಿವಿಧ ಉತ್ಪನ್ನಗಳಿಗೆ ಗ್ರೇಟ್ ಡಿಸ್ಕೌಂಟ್ ಕೂಡ ಇರಲಿದೆ ಎಂದು ಅಮೆಜಾನ್ ತಿಳಿಸಿದೆ.
ಪ್ರೈಮ್ ದಿನದಂದು ಐಸಿಐಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಎಸ್‌ಬಿಐ ಕ್ರೆಡಿಟ್ ಕಾರ್ಡ್, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಂಐ ವ್ಯವಹಾರ, ಎಸ್‌ಬಿಐ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ವ್ಯವಹಾರಗಳಿಗೆ ಶೇಕಡ 10ರಷ್ಟು ಡಿಸ್ಕೌಂಟ್ ಕೂಡ ಇರಲಿದೆ. ಇದರೊಂದಿಗೆ ಶಾಪಿಂಗ್ ಮಾಡಿದವರಿಗೆ ಹೆಚ್ಚುವರಿಯಾಗಿ ಶೇಕಡ 5ರಷ್ಟು ದರ ವಿನಾಯಿತಿಯೂ ದೊರಕಲಿದೆ.
ಇ-ಕಾಮರ್ಸ್ ಕಂಪನಿ ಅಮೇಜಾನ್ ಪ್ರಕಾರ ಪ್ರೈಮ್ ಡೇ ಸೇಲ್‌ನವತ್ತು 45 ಸಾವಿರ ಹೊಸ ಉತ್ಪನ್ನಗಳು ಮಾರಾಟವಾಗಲಿವೆ. ಭಾರತದ 400 ಮತ್ತು ಜಾಗತಿಕ ಬ್ರಾಂಡ್‌ಗಳು ಈ ನ್ಯೂ ಪ್ರಾಡಕ್ಟ್ ಲಾಂಚ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ. ಒನ್‌ಪ್ಲಸ್, ಐಕ್ಯೂ೦೦, ರಿಯಲ್ ಮಿ ನಾರ್ಜೊ, ಸ್ಯಾಮ್‌ಸಂಗ್, ಮೊಟೊರೊಲಾ, ಬೋಟ್, ಸೋನಿ, ಅಲೆನ್ ಸೊಲ್ಲಿ, ಲೈಫ್ಟ್‌ಸ್ಟೈಲ್, ಟೈಟಾನ್, ಫೋಸಿಲ್, ಪೂಮಾ, ಟಾಟಾ, ದಾಬಾರ್‌ನ ಹೊಸ ಉತ್ಪನ್ನಗಳು ಬಿಡುಗಡೆಯಾಗಲಿವೆ. ಸಣ್ಣ ಮತ್ತು ಮಧ್ಯಮ ಉದ್ಯಮದ 2000 ಹೊಸ ಉತ್ಪನ್ನಗಳು ಪ್ರೈಮ್ ಡೇಯಲ್ಲಿ ಲಾಂಚ್ ಆಗಲಿವೆ.
"ಪ್ರೈಮ್ ದಿನದ ಪ್ರಯುಕ್ತ ನಮ್ಮ ಗ್ರಾಹಕರು ಭಾರತಾದ್ಯಂತ ವೇಗದ ಡೆಲಿವರಿ ಪಡೆಯಲಿದ್ದಾರೆ. ಭಾರತದ 25 ನಗರಗಳ ಪ್ರೈಮ್ ಸದಸ್ಯರಿಗೆ ಅದೇ ದಿನ ಡೆಲಿವರಿ ದೊರಕಲಿದೆ. ಟೈರ್ 2 ನಗರಗಳ ಸದಸ್ಯರಿಗೆ 24-48 ಗಂಟೆಯೊಳಗೆ ಡೆಲಿವರಿ ದೊರಕಲಿದೆ. ಗ್ರಾಹಕರಿಗೆ ಹೊಸ ಲಾಂಚ್, ಸೇವಿಂಗ್ಸ್, ಬ್ಲಾಕ್‌ಬಸ್ಟರ್ ಎಂಟರ್‌ಟೇನ್‌ಮೆಂಟ್ ಇತ್ಯಾದಿಗಳು ದೊರಕಲಿವೆʼʼ ಎಂದು ಪ್ರೈಮ್ ಡೇ ಕುರಿತು ಅಮೆಜಾನ್ ಇಂಡಿಯಾ ಪ್ರೈಮ್ ಆಂಡ್ ಡೆಲಿವರಿ ಎಕ್ಸ್‌ಪಿರಿಯೆನ್ಸ್ ವಿಭಾಗದ ನಿರ್ದೇಶಕರಾದ ಆಕಾಶ್ ಸಾಹಿ ಮಾಹಿತಿ ನೀಡಿದ್ದಾರೆ.
20 ಸಾವಿರ ರೂನೊಳಗೆ ಖರೀದಿಸಬಹುದಾದ 10 ಸ್ಮಾರ್ಟ್‌ಫೋನ್
ಈಗ ಬಜೆಟ್ ಸ್ಮಾರ್ಟ್‌ಫೋನ್ ಎಂದರೆ ಹತ್ತು ಸಾವಿರ ರೂ.ನೊಳಗೆ ದೊರಕುವ ಫೋನ್‌ಗಳಲ್ಲ. ಗ್ರಾಹಕರು ತುಸುತುಸುವೇ ತಮ್ಮ ಬಜೆಟ್ ಹೆಚ್ಚಿಸಿಕೊಂಡು ಕೊಂಚ ಅತ್ಯುತ್ತಮ ಫೀಚರ್ ಇರುವ ಆದರೆ ತುಂಬಾ ದುಬಾರಿಯಾಗದಂತೆ ಎಚ್ಚರಿಕೆವಹಿಸಿಕೊಂಡು ಸ್ಮಾರ್ಟ್‌ಫೋನ್ ಖರೀದಿಸುತ್ತಾರೆ. ದೇಶದಲ್ಲಿ 20 ಸಾವಿರ ರೂಪಾಯಿಯೊಳಗಿನ ಸ್ಮಾರ್ಟ್‌ಫೋನ್ ಹುಡುಕುವವರು ಸಾಕಷ್ಟು ಸಂಖ್ಯೆಯಲ್ಲಿದ್ದು, ಅವರ ಹುಡುಕಾಟಕ್ಕೆ ಅನುಕೂಲವಾಗುವಂತೆ ಹತ್ತು ಸ್ಮಾರ್ಟ್‌ಫೋನ್‌ಗಳ ವಿವರ ಇಲ್ಲಿ ನೀಡಲಾಗಿದೆ. ಇಲ್ಲಿ ಕ್ಲಿಕ್ ಮಾಡಿ
ವಿಭಾಗ