VIDEO: ಅನಂತ್ ಅಂಬಾನಿ ಕೈಯಲ್ಲಿದ್ದ 15 ಕೋಟಿ ರೂ. ಬೆಲೆಯ ವಾಚ್​ ನೋಡಿ ಫಿದಾ ಆದ್ರು ಮಾರ್ಕ್ ಜುಕರ್‌ಬರ್ಗ್ ದಂಪತಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Video: ಅನಂತ್ ಅಂಬಾನಿ ಕೈಯಲ್ಲಿದ್ದ 15 ಕೋಟಿ ರೂ. ಬೆಲೆಯ ವಾಚ್​ ನೋಡಿ ಫಿದಾ ಆದ್ರು ಮಾರ್ಕ್ ಜುಕರ್‌ಬರ್ಗ್ ದಂಪತಿ

VIDEO: ಅನಂತ್ ಅಂಬಾನಿ ಕೈಯಲ್ಲಿದ್ದ 15 ಕೋಟಿ ರೂ. ಬೆಲೆಯ ವಾಚ್​ ನೋಡಿ ಫಿದಾ ಆದ್ರು ಮಾರ್ಕ್ ಜುಕರ್‌ಬರ್ಗ್ ದಂಪತಿ

Anant Ambani Watch: ಫೇಸ್​ಬುಕ್​ ಮತ್ತು ಇತರ ಮೆಟಾ ಪ್ಲಾಟ್‌ಫಾರ್ಮ್‌ಗಳ ಸಿಇಒ ಮತ್ತು ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಹಾಗೂ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಅವರು ಅನಂತ್ ಅಂಬಾನಿ ಕೈಯಲ್ಲಿದ್ದ ವಾಚ್​ ನೋಡಿ ಫಿದಾ ಆಗಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ.

ಅನಂತ್ ಅಂಬಾನಿ ವಾಚ್​ ನೋಡಿ ಫಿದಾ ಆದ್ರು ಮಾರ್ಕ್ ಜುಕರ್‌ಬರ್ಗ್
ಅನಂತ್ ಅಂಬಾನಿ ವಾಚ್​ ನೋಡಿ ಫಿದಾ ಆದ್ರು ಮಾರ್ಕ್ ಜುಕರ್‌ಬರ್ಗ್

ಭಾರತದ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿದೆ. ಗುಜರಾತ್​​ನ ಜಾಮ್​​ನಗರದಲ್ಲಿ ಮುಕೇಶ್ ಅಂಬಾನಿ ಕಿರಿಯ ಮಗ, ಕೈಗಾರಿಕೋದ್ಯಮಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿವೆ. ಮಾರ್ಚ್ 1 ರಿಂದ ವಿವಾಹಪೂರ್ವ ಕಾರ್ಯಕ್ರಮಗಳು ಆರಂಭವಾಗಿದ್ದು, ಭಾರತದ ಉದ್ಯಮಿಗಳು, ಸೆಲೆಬ್ರಿಟಿಗಳು ಮಾತ್ರವಲ್ಲದೇ ಜಾಗತಿಕ ತಾರೆಯರು, ಗಣ್ಯರಿಗೆ ಆಹ್ವಾನ ನೀಡಲಾಗಿದ್ದು, ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಶನಿವಾರ (ಮಾರ್ಚ್ 2) ನಡೆದ ಕಾರ್ಯಕ್ರಮಕ್ಕೆ ಫೇಸ್​ಬುಕ್​ ಮತ್ತು ಇತರ ಮೆಟಾ ಪ್ಲಾಟ್‌ಫಾರ್ಮ್‌ಗಳ ಸಿಇಒ ಮತ್ತು ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಹಾಗೂ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಕೂಡ ಆಗಮಿಸಿದ್ದರು. ಇವರಿಬ್ಬರೂ ಅನಂತ್ ಅಂಬಾನಿ ಕೈಯಲ್ಲಿದ್ದ ವಾಚ್​ ನೋಡಿ ಫಿದಾ ಆಗಿದ್ದಾರೆ.

ಎಕ್ಸ್​ನಲ್ಲಿ (ಟ್ವಿಟರ್​​) ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಮದುಮಗ ಅನಂತ್ ಅಂಬಾನಿ ಅವರು ಮಾರ್ಕ್ ಜುಕರ್‌ಬರ್ಗ್ ಹಾಗೂ ಅವರ ಪತ್ನಿ ಪ್ರಿಸ್ಸಿಲ್ಲಾ ಚಾನ್ ಮತ್ತು ಇತರರೊಂದಿಗೆ ಮಾತನಾಡುತ್ತಾ ನಿಂತಿರುತ್ತಾರೆ. ಈ ವೇಳೆ ಮಾರ್ಕ್ ಜುಕರ್‌ಬರ್ಗ್ ಪತ್ನಿ ಪ್ರಿಸ್ಸಿಲ್ಲಾ ಚಾನ್ ಅವರು ಅನಂತ್ ಅಂಬಾನಿ ಕೈಯಲ್ಲಿ ಕಟ್ಟಿಕೊಂಡಿದ್ದ ವಾರ್ಚ್​ ನೋಡಿ ಬೆರಗಾಗುತ್ತಾರೆ. "ಈ ವಾಚ್​​ ಫೆಂಟಾಸ್ಟಿಕ್​ ಆಗಿದೆ. ತುಂಬಾ ಕೂಲ್​ ಆಗಿದೆ" ಎಂದು ಹೇಳುತ್ತಾರೆ. ಆಗ ಮಾರ್ಕ್ ಜುಕರ್‌ಬರ್ಗ್ ಅವರು ಹೌದು, "ನಾನು ನೋಡಿದ್ದೇನೆ, ಚೆನ್ನಾಗಿದೆ ಅಂತ ನಾನು ಆಗಲೇ ಹೇಳಿದೆ" ಎನ್ನುತ್ತಾರೆ.

ಹಾಗೆಯೇ ಮುಂದುವರೆದು, "ಏನ್​ ಗೊತ್ತಾ ನಾನು ಯಾವತ್ತೂ ವಾಚ್​​​ಗಳನ್ನ ತಗೋಬೇಕು ಅಂತ ಇಷ್ಟಪಡಲ್ಲ. ಆದ್ರೆ ಇದನ್ನ ನೋಡಿದ ಮೇಲೆ ವಾಚ್​ಗಳು ತುಂಬಾ ಕೂಲ್"​ ಅಂತ ನನಗೆ ಅನಿಸುತ್ತಿದೆ ಎಂದು ಜುಕರ್‌ಬರ್ಗ್ ಹೇಳುತ್ತಾರೆ. ಆಗ ಪತ್ನಿ ಪ್ರಿಸ್ಸಿಲ್ಲಾ "ನಂಗೂ ಇದು ಬೇಕೆನ್ನಿಸುತ್ತಿದೆ" ಎಂದು ಹೇಳುತ್ತಾರೆ. ಅಂದಹಾಗೆ ಈ ವಾಚ್​ ಬೆಲೆ ಬರೋಬ್ಬರಿ 15 ಕೋಟಿ ರೂಪಾಯಿಗೂ ಅಧಿಕ.

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮಗಳಲ್ಲಿ ಶಾರುಕ್​ ಖಾನ್​, ಆಮೀರ್ ಖಾನ್​, ಸಲ್ಮಾನ್​ ಖಾನ್​, ಆಲಿಯಾ ಭಟ್​-ರಣಬೀರ್​ ಕಪೂರ್​, ದೀಪಿಕಾ ಪಡುಕೋಣೆ-ರಣವೀರ್ ಸಿಂಗ್​, ಐಶ್ವರ್ಯಾ ರೈ , ಕರೀನಾ ಕಪೂರ್​​ ಸೇರಿದಂತೆ ಬಹುತೇಕ ಎಲ್ಲಾ ಖ್ಯಾತ ಬಾಲಿವುಡ್​ ತಾರೆಯರು ಪಾಲ್ಗೊಂಡಿದ್ದಾರೆ. ಎಂ ಎಸ್​ ಧೋನಿ-ಸಾಕ್ಷಿ ಸಿಂಗ್​ ದಂಪತಿ ಕೂಡ ಪಾಲ್ಗೊಂಡಿದ್ದರು. ಅಂತಾರಾಷ್ಟ್ರೀಯ ಕಲಾವಿದೆ, ಪಾಪ್​ ಗಾಯಕಿ ರಿಹಾನ್ನಾ ಅವರ ಪ್ರದರ್ಶನ ಕೂಡ ಇತ್ತು. ಹೀಗೆ ಬಹಳ ಎಂದರೆ ಬಹಳ ಅದ್ದೂರಿಯಾಗಿ ಕಾರ್ಯಕ್ರಮಗಳು ನಡೆಯುತ್ತಿವೆ. ಜುಲೈ 12 ರಂದು ಇವರು ಹಸೆಮಣೆ ಏರಲಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.