Closing Bell: ಭಾರತದ ಷೇರುಪೇಟೆಯಲ್ಲಿ ಮುಂದುವರಿದ ತಲ್ಲಣ, ನಷ್ಟದಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್‌, ನಿಫ್ಟಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Closing Bell: ಭಾರತದ ಷೇರುಪೇಟೆಯಲ್ಲಿ ಮುಂದುವರಿದ ತಲ್ಲಣ, ನಷ್ಟದಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್‌, ನಿಫ್ಟಿ

Closing Bell: ಭಾರತದ ಷೇರುಪೇಟೆಯಲ್ಲಿ ಮುಂದುವರಿದ ತಲ್ಲಣ, ನಷ್ಟದಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್‌, ನಿಫ್ಟಿ

ಭಾರತದ ಷೇರುಪೇಟೆಯಲ್ಲಿ ಇಂದು (ಫೆ.8) ಕೂಡ ಚಂಚಲ ವಹಿವಾಟು ನಡೆದಿದೆ. ವಲಯವಾರು ಷೇರುಗಳಲ್ಲಿ ಬಹುತೇಕ ಎಲ್ಲಾ ವಲಯಗಳು ಕೆಂಪು ಬಣ್ಣದಲ್ಲೇ ಮುಕ್ತಾಯಗೊಂಡಿವೆ. ಎಫ್‌ಎಂಸಿಜಿ ಹಾಗೂ ಬ್ಯಾಂಕಿಂಗ್‌ ಷೇರುಗಳು ಕೊಂಚ ಲಾಭ ಗಳಿಸಿವೆ. ಆರ್‌ಬಿಐ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೂ, ಮಾರುಕಟ್ಟೆಯಲ್ಲಿ ಇಳಿಕೆ ಪ್ರಮಾಣ ಹೆಚ್ಚಿತ್ತು.

 ಭಾರತದ ಷೇರುಪೇಟೆಯಲ್ಲಿ ಮುಂದುವರಿದ ತಲ್ಲಣ, ನಷ್ಟದಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್‌, ನಿಫ್ಟಿ
ಭಾರತದ ಷೇರುಪೇಟೆಯಲ್ಲಿ ಮುಂದುವರಿದ ತಲ್ಲಣ, ನಷ್ಟದಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್‌, ನಿಫ್ಟಿ (MINT_PRINT)

ಬೆಂಗಳೂರು: ಭಾರತದ ಷೇರುಪೇಟೆಯಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ. ನಿನ್ನೆಯು ಕೂಡ ಚಂಚಲ ವಹಿವಾಟಿಗೆ ಸಾಕ್ಷಿಯಾಗಿದ್ದ ಮಾರುಕಟ್ಟೆಯಲ್ಲಿ ಇಂದು ಬಹುತೇಕ ತಲ್ಲಣವಿತ್ತು. ಆರ್‌ಬಿಐ ತನ್ನ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೂ ಕೂಡ ಮಾರುಕಟ್ಟೆ ಕುಸಿತ ಕಂಡಿದೆ.

ಭಾರತದ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್‌ ಹಾಗೂ ನಿಫ್ಟಿ ಎರಡೂ ಇಂದು ಶೇ 1ರಷ್ಟು ಇಳಿಕೆ ಕಂಡಿವೆ. ಆರಂಭದಲ್ಲಿ ಷೇರುಪೇಟೆ ಧನಾತ್ಮಕವಾಗಿದ್ದರೂ ನಂತರ ವಹಿವಾಟಿನಲ್ಲಿ ನಿನ್ನೆಯಂತೆ ಏರಿಳಿತವಿತ್ತು.

ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 723.57 ಅಂಕ ಅಥವಾ ಶೇ 1 ರಷ್ಟು ಕಡಿಮೆಯಾಗಿ 71,428 ಕ್ಕೆ ಕೊನೆಗೊಂಡಿತು ಮತ್ತು ನಿಫ್ಟಿ 212.50 ಅಂಕ ಅಥವಾ ಶೇ 0.97 ರಷ್ಟು ಕುಸಿದು 21,718.00 ಕ್ಕೆ ತಲುಪಿದೆ. ಇಂದು ಸುಮಾರು 1,339 ಷೇರುಗಳು ಲಾಭಗಳಿಸಿದವು. 1,906 ನಷ್ಟ ಕಂಡರೆ, 65 ಷೇರುಗಳಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.

ಪವರ್ ಗ್ರಿಡ್, ಇಂಡಸ್‌ಇಂಡ್ ಬ್ಯಾಂಕ್, ಎಂ & ಎಂ ಮತ್ತು ಎನ್‌ಟಿಪಿಸಿ ಷೇರುಗಳು ಇಂದು ಅಧಿಕ ಲಾಭ ಗಳಿಸಿದ ಷೇರುಗಳಾಗಿದ್ದರೆ, ಐಟಿಸಿ, ಮಾರುತಿ ಸುಜುಕಿ, ನೆಸ್ಲೆ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ನಷ್ಟ ಕಂಡಿವೆ.

ಇಂದು ಬಿಎಸ್‌ಸಿ ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳು ಶೇ 0.39ರಷ್ಟು ಕುಸಿತ ಕಂಡಿದ್ದರೆ, ಮಿಡ್‌ಕ್ಯಾಪ್‌ ಸ್ಯೂಚಂಕಗಳು ಶೇ 0.05ರಷ್ಟು ನಷ್ಟ ಅನುಭವಿಸಿದೆ.

ನಿನ್ನೆ ಮಾರುಕಟ್ಟೆ ಮುಕ್ತಾಯ ವೇಳೆಗೂ ಷೇರುಪೇಟೆಯಲ್ಲಿ ನಷ್ಟ ಉಂಟಾಗಿರುವುದನ್ನು ಗಮನಿಸಬಹುದಾಗಿದೆ. ಇತ್ತೀಚಿಗೆ ಬಹುತೇಕ ದಿನಗಳಂದು ಷೇರುಪೇಟೆ ನಷ್ಟದಲ್ಲೇ ತನ್ನ ವಹಿವಾಟು ಮುಗಿಸಿದೆ.

ಇಂದು ವಲಯವಾರು ಷೇರುಗಳ ಪೈಕಿ ಬ್ಯಾಂಕಿಂಗ್‌ ಷೇರುಗಳಲ್ಲಿ ಕೊಂಚ ಲಾಭವಾಗಿದೆ. ಆದರೆ ಬಹುತೇಕ ವಯಲಗಳಲ್ಲಿ ನಷ್ಟದ ವಹಿವಾಟು ನಡೆದಿದ್ದು, ಇದು ಭಾರತದ ಷೇರುಪೇಟೆಯ ಮೇಲೆ ಪರಿಣಾಮ ಬೀರುವಂತೆ ಮಾಡಿದೆ.

ಇದನ್ನೂ ಓದಿ

Home Loan EMI: ಸತತ 6ನೇ ಬಾರಿ ರೆಪೋ ದರ ಸ್ಥಿರವಾಗಿಟ್ಟ ಆರ್‌ಬಿಐ; ಮನೆ ಸಾಲದ ಇಎಂಐ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ..

Home Loan EMI: ಭಾರತೀಯ ರಿಸರ್ವ್‌ ಬ್ಯಾಂಕ್‌ ಸತತ 6ನೇ ಬಾರಿ ರೆಪೋ ದರ ಸ್ಥಿರವಾಗಿಟ್ಟಿದೆ. ಆರ್‌ಬಿಐನ ಈ ಉಪಕ್ರಮದ ಕಾರಣ ಮನೆ ಸಾಲದ ಇಎಂಐ ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ ಎಂಬ ಸಂದೇಹ ಕಾಡುವುದು ಸಹಜ. ಇಲ್ಲಿದೆ ಇದಕ್ಕೆ ಸಂಬಂಧಿಸಿದ ವಿವರಣೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.