RuPay credit cards; ರುಪೇ ಕ್ರೆಡಿಟ್ ಕಾರ್ಡ್ ಯುಪಿಐ ವಹಿವಾಟಿಗೆ ಇಂದಿನಿಂದ ಹೊಸ ರೀತಿಯ ರಿವಾರ್ಡ್ ಸಿಗಲಿದೆ
UPI reward benefits; ರುಪೇ ಕ್ರೆಡಿಟ್ ಕಾರ್ಡ್ ಬಳಕೆದಾರರ ಗಮನಕ್ಕೆ -ರುಪೇ ಕ್ರೆಡಿಟ್ ಕಾರ್ಡ್ ಯುಪಿಐ ವಹಿವಾಟಿಗೆ ಇಂದಿನಿಂದ ಹೊಸ ರೀತಿಯ ರಿವಾರ್ಡ್ ಸಿಗಲಿದೆ. ಎನ್‌ಪಿಸಿಐ ನಿರ್ದೇಶನದಂತೆ ರುಪೇ ಕಾರ್ಡ್ಸ್ ಇದನ್ನು ಜಾರಿಗೊಳಿಸಿದ್ದು, ಅದರ ವಿವರ ಈ ವರದಿಯಲ್ಲಿದೆ.
ನವದೆಹಲಿ: ನೀವು ರುಪೇ ಕ್ರೆಡಿಟ್ ಕಾರ್ಡ್ ಬಳಕೆದಾರರೇ (RuPay Credit Cardholders), ಹಾಗಾದ್ರೆ ನಿಮಗೊಂದು ತಾಜಾ ಮಾಹಿತಿ ಇದೆ. ಇಂದಿನಿಂದ (ಸೆಪ್ಟೆಂಬರ್ 1) ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ಪ್ರತಿಯೊಂದು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ವಹಿವಾಟುಗಳಿಗೆ ರಿವಾರ್ಡ್ ಸಿಗಲಿದೆ. ರಾಷ್ಟ್ರೀಯ ಪಾವತಿಗಳ ನಿಗಮ (ಎನ್‌ಪಿಸಿಐ) ನೀಡಿರುವ ಸೂಚನೆ ಪ್ರಕಾರ ರುಪೇ ಈ ರಿವಾರ್ಡ್‌ಗಳನ್ನು ಜಾರಿಗೊಳಿಸಿದೆ.
ರುಪೇ ಕ್ರೆಡಿಟ್ ಕಾರ್ಡ್ ಬಳಕೆದಾರರು ಇನ್ನು ವರ್ಧಿತ ರಿವಾರ್ಡ್ ಪಾಯಿಂಟ್ ಸಿಸ್ಟಮ್‌ನ ಪ್ರಯೋಜವನ್ನು ಪಡೆಯುತ್ತಾರೆ. ರಾಷ್ಟ್ರೀಯ ಪಾವತಿಗಳ ನಿಗಮ (NPCI)ವು ಇತರೆ ಯುಪಿಐ ವಹಿವಾಟು ಸೇವಾ ಪೂರೈಕೆದಾರರು ನೀಡುವಂತಹ ಅದೇ ಮಟ್ಟದ ರಿವಾರ್ಡ್ ಅನ್ನು ಬಳಕೆದಾರರಿಗೆ ನೀಡಬೇಕು ಎಂದು ರುಪೇಗೆ ಸೂಚಿಸಿತ್ತು.
ರುಪೇ ಕ್ರೆಡಿಟ್ ಕಾರ್ಡ್ ಬಳಕೆ; ಬದಲಾವಣೆ ಏನು ಮತ್ತು ಯಾಕೆ
ಪ್ರಸ್ತುತ ಅನ್ಯ ಕ್ರೆಡಿಟ್ ಕಾರ್ಡ್ ಕಂಪನಿಗಳು ಕಾರ್ಡ್ ಬಳಸಿ ಮಾಡುವ ಯುಪಿಐ ವಹಿವಾಟುಗಳಿಗೆ ನೀಡುವ ರಿವಾರ್ಡ್ ಪಾಯಿಂಟ್‌ಗಳು ಮತ್ತು ಪ್ರಯೋಜನಗಳನ್ನು ಅದೇ ರೀತಿ ರುಪೇ ಕ್ರೆಡಿಟ್ ಕಾರ್ಡ್‌ಗಳು ಬಳಕೆದಾರರು ಸೆಪ್ಟೆಂಬರ್ 1 ರಿಂದ ಅಂದರೆ ಇಂದಿನಿಂದ ಪಡೆಯಲಿದ್ದಾರೆ. ಇದರರ್ಥ ಯುಪಿಐ ಪಾವತಿಗಳು ಮತ್ತು ಸಾಂಪ್ರದಾಯಿಕ ಕಾರ್ಡ್ ವಹಿವಾಟುಗಳ ನಡುವಿನ ರಿವಾರ್ಡ್ ಪಾಯಿಂಟ್ಸ್ ಪಡೆಯುವಾಗ ರುಪೇ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಯಾವುದೇ ವ್ಯತ್ಯಾಸ ಕಂಡುಬರದು.
ಎನ್‌ಪಿಸಿಐ ಇತ್ತೀಚಿಗೆ ನೀಡಿದ ನಿರ್ದೇಶನದ ಟಿಪ್ಪಣಿಯಲ್ಲಿ, ಕ್ರೆಡಿಟ್ ಕಾರ್ಡ್ ಬಳಕೆಯನ್ನು ಹೆಚ್ಚಿಸುವಲ್ಲಿ ರಿವಾರ್ಡ್ ಪಾಯಿಂಟ್ಸ್ ಪ್ರಾಮುಖ್ಯವನ್ನು ಎತ್ತಿ ತೋರಿಸಲಾಗಿದೆ. ಸಾಮಾನ್ಯ ವಹಿವಾಟುಗಳಿಗೆ ಹೋಲಿಸಿದರೆ ಯುಪಿಐ ವಹಿವಾಟುಗಳಿಗಾಗಿ ರುಪೇ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ವಿಭಿನ್ನ ರಿವಾರ್ಡ್ ಮತ್ತು ಪ್ರಯೋಜನ ಸಿಗುತ್ತಿರುವುದು ಗಮನಸೆಳೆದಿತ್ತು. ಈ ತಾರತಮ್ಯ ಹೋಗಲಾಡಿಸಲು ಎನ್‌ಪಿಸಿಐ ಎಲ್ಲ ಬ್ಯಾಂಕ್‌ಗಳು ಒಂದೇ ಮಾದರಿ ಉತ್ಪನ್ನಕ್ಕೆ ಸಮಾನ ರಿವಾಡ್ಸ್, ಪ್ರಯೋಜನಗಳು ಇರಬೇಕು ಎಂದು ಹೇಳಿತ್ತು. ವಿತರಕರು ಪರಸ್ಪರ ವಿನಿಮಯ ಶುಲ್ಕವನ್ನು ಸ್ವೀಕರಿಸದ ಸಂದರ್ಭಗಳನ್ನು ಹೊರತುಪಡಿಸಿ, ಯುಪಿಐ ವಹಿವಾಟುಗಳಿಗೆ ವಿಶೇಷ ಪ್ರಯೋಜನ ನೀಡುವುದನ್ನು ಕಡ್ಡಾಯಗೊಳಿಸಿದೆ,
ಎನ್‌ಪಿಸಿಐ ನಿರ್ದೇಶನ ಮತ್ತು ಬಳಕೆದಾರರ ಮೇಲೆ ಅದರ ಪರಿಣಾಮ
ರಾಷ್ಟ್ರೀಯ ಪಾವತಿಗಳ ನಿಗಮದ ಉಪಕ್ರಮವು ನ್ಯಾಯಸಮ್ಮತ ಪ್ರಯೋಜನ ಉತ್ತೇಜಿಸುವ ಮತ್ತು ಕ್ರೆಡಿಟ್ ಕಾರ್ಡ್ ಪೂರೈಕೆದಾರರ ನಡುವೆ ಸ್ಪರ್ಧೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇತರ ರೀತಿಯ ವಹಿವಾಟುಗಳಿಗೆ ಯುಪಿಐ ವಹಿವಾಟುಗಳಿಗೆ ಬಹುಮಾನಗಳನ್ನು ಪ್ರಕಟಿಸಿದೆ. ಇದರ ಮೂಲಕ ಎನ್‌ಪಿಸಿಐ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಹೆಚ್ಚು ಆಕರ್ಷಕ ಉತ್ಪನ್ನವನ್ನಾಗಿ ಮಾಡಲು ಮತ್ತು ಡಿಜಿಟಲ್ ಪಾವತಿಗಳಲ್ಲಿ ಅವುಗಳ ಬಳಕೆಯನ್ನು ಉತ್ತೇಜಿಸಲು ಪ್ರಯತ್ನಿಸಿದೆ.
ಬಳಕೆದಾರರ ಮೇಲೆ ಪರಿಣಾಮ: ಈ ಉಪಕ್ರಮವು ಬಳಕೆದಾರರನ್ನು ಯುಪಿಐ ವಹಿವಾಟುಗಳಿಗೆ ರುಪೇ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಉತ್ತೇಜಿಸುವುದಾಗಿದೆ ಈಗ ಇತರ ವಹಿವಾಟುಗಳಿಗೆ ಕಾರ್ಡ್ ಅನ್ನು ಬಳಸುವಾಗ ಸಿಗುವ ಪ್ರಯೋಜನ ಇನ್ನು ಇದರ ಮೂಲಕವೂ ಗ್ರಾಹಕರಿಗೆ ಸಿಗಲಿದೆ. ಈ ಕ್ರಮವು ರುಪೇ ಕ್ರೆಡಿಟ್ ಕಾರ್ಡ್‌ಗಳ ಆಕರ್ಷಣೆಯನ್ನು ಹೆಚ್ಚಿಸಲಿದೆ. ಡಿಜಿಟಲ್ ಪಾವತಿ ವಿಧಾನಗಳ ಹೆಚ್ಚಿನ ಅಳವಡಿಕೆಯನ್ನು ಉತ್ತೇಜಿಸುವ ನಿರೀಕ್ಷೆ ಇದೆ.
ಎನ್‌ಪಿಸಿಐನ ಹೊಸ ನಿರ್ದೇಶನವು ವೇಗವಾಗಿ ವಿಕಸನಗೊಳ್ಳುತ್ತಿರುವ ಡಿಜಿಟಲ್ ಪಾವತಿಗಳ ವ್ಯವಸ್ಥೆಯಲ್ಲಿ ಭಾರತದ್ದೇ ಆದ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವಂತೆ ರೂಪಿಸಲಿದೆ. ಸ್ಥಿರ ಪ್ರತಿಫಲಗಳು ಮತ್ತು ವರ್ಧಿತ ವಹಿವಾಟುಗಳೊಂದಿಗೆ ಬಳಕೆದಾರರಿಗೆ ನಮ್ಯತೆಯ ಪ್ರಯೋಜನವನ್ನು ನೀಡಲಿದೆ.