ಝೊಮ್ಯಾಟೊದಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಿ, ನಂತರ ಕಾರ್ಯಕ್ರಮಕ್ಕೆ ಹೋಗದಿದ್ದರೆ ಅಲ್ಲೇ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿ!-business news book now sell anytime zomato introduces secondary market for event ticketing 5 point explainer uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಝೊಮ್ಯಾಟೊದಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಿ, ನಂತರ ಕಾರ್ಯಕ್ರಮಕ್ಕೆ ಹೋಗದಿದ್ದರೆ ಅಲ್ಲೇ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿ!

ಝೊಮ್ಯಾಟೊದಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಿ, ನಂತರ ಕಾರ್ಯಕ್ರಮಕ್ಕೆ ಹೋಗದಿದ್ದರೆ ಅಲ್ಲೇ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿ!

ಇವೆಂಟ್‌ ಟಿಕೆಟ್‌ ಬುಕ್ಕಿಂಗ್ ಕ್ಷೇತ್ರದಲ್ಲಿ ಹೊಸತೊಂದು ಕ್ರಾಂತಿ ಮಾಡಲು ಮುಂದಾಗಿರುವ ಝೊಮ್ಯಾಟೊ ಈಗ ಬುಕ್ ಮಾಡಿ, ಯಾವಾಗ ಬೇಕಾದರೂ ಮಾರಾಟ ಮಾಡಿ ಫೀಚರ್ ಪರಿಚಯಿಸಿದೆ. ಇದರಂತೆ, ಝೊಮ್ಯಾಟೊದಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಿ, ನಂತರ ಕಾರ್ಯಕ್ರಮಕ್ಕೆ ಹೋಗದಿದ್ದರೆ ಅಲ್ಲೇ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿ! ಎನ್ನುತ್ತಿದೆ ಕಂಪನಿ. ಇದರ ವಿವರ ಇಲ್ಲಿದೆ.

ಝೊಮ್ಯಾಟೊದಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಿ, ನಂತರ ಕಾರ್ಯಕ್ರಮಕ್ಕೆ ಹೋಗದಿದ್ದರೆ ಅಲ್ಲೇ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿ ಫೀಚರ್ ಬಳಕೆಗೆ ಬಂದಿದೆ. (ಸಾಂಕೇತಿಕ ಚಿತ್ರ)
ಝೊಮ್ಯಾಟೊದಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಿ, ನಂತರ ಕಾರ್ಯಕ್ರಮಕ್ಕೆ ಹೋಗದಿದ್ದರೆ ಅಲ್ಲೇ ದುಪ್ಪಟ್ಟು ದರಕ್ಕೆ ಮಾರಾಟ ಮಾಡಿ ಫೀಚರ್ ಬಳಕೆಗೆ ಬಂದಿದೆ. (ಸಾಂಕೇತಿಕ ಚಿತ್ರ)

ನವದೆಹಲಿ: ಫುಡ್‌ ಡೆಲಿವರಿ ನವೋದ್ಯಮ ತನ್ನ ವಹಿವಾಟಿನಲ್ಲಿ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಳ್ಳುತ್ತ ಸಾಗುತ್ತಿದ್ದು, ಈಗಾಗಲೇ ಕಾರ್ಯಕ್ರಮಗಳ ಟಿಕೆಟ್‌ ಮಾರಾಟದ (event ticketing) ವಿಭಾಗವನ್ನು ತೆರೆದಿದ್ದು, ಹೊಸದಾಗಿ ಬುಕ್‌ ನೌ, ಸೆಲ್ ಎನಿಟೈಮ್ (Book Now, Sell Anytime) ಎಂಬ ಫೀಚರ್‌ ಅನ್ನು ಪರಿಚಯಿಸಿದೆ.

ಗುರುಗ್ರಾಮ ಮೂಲದ ಝೊಮ್ಯಾಟೊ ಪರಿಚಯಿಸಿರುವ ಈಗ ಬುಕ್ ಮಾಡಿ, ಯಾವಾಗ ಬೇಕಾದರೂ ಮಾರಾಟ ಮಾಡಿ (Book Now, Sell Anytime) ಫೀಚರ್‌ನಲ್ಲಿ ಝೊಮ್ಯಾಟೊ ಆಪ್‌ ಮೂಲಕ ಈವೆಂಟ್ ಟಿಕೆಟ್‌ಗಳನ್ನು ಖರೀದಿಸಿದ ಬಳಕೆದಾರರಿಗೆ ಅಪ್ಲಿಕೇಶನ್‌ನಲ್ಲಿ ತಮ್ಮ ಟಿಕೆಟ್‌ಗಳನ್ನು ಮಾರಾಟ ಮಾಡುವುದಕ್ಕೂ ಅವಕಾಶ ನೀಡುತ್ತದೆ. ಈ ಫೀಚರ್ ಅನ್ನು ಸೆಪ್ಟೆಂಬರ್ 30ಕ್ಕೆ ಶುರುಮಾಡುವುದಾಗಿ ಕಂಪನಿ ಹೇಳಿಕೊಂಡಿದೆ.

ಝೊಮ್ಯಾಟೊ ಫೀಡಿಂಗ್ ಇಂಡಿಯಾ ಕನ್ಸರ್ಟ್‌ ಟಿಕೆಟ್ ಮಾರಾಟದೊಂದಿಗೆ ಹೊಸ ಫೀಚರ್‌ ಬಳಕೆಗೆ

ಝೊಮ್ಯಾಟೊ ಫೀಡಿಂಗ್ ಇಂಡಿಯಾ ಕನ್ಸರ್ಟ್‌ ಟಿಕೆಟ್ ಮಾರಾಟದೊಂದಿಗೆ ಈ ಫೀಚರ್‌ ಸೆಪ್ಟೆಂಬರ್ 30 ರಂದು ಬಳಕೆಗೆ ಬರಲಿದೆ. ಪಾಪ್ ಸಿಂಗರ್‌ ದುವಾ ಲಿಪಾ ಅವರ ಸಂಗೀತ ಕಾರ್ಯಕ್ರಮದ ಟಿಕೆಟ್ ಮಾರಾಟ ನಡೆಯಲಿದೆ. ಝೊಮ್ಯಾಟೋ ಬಳಕೆದಾರರು ಈಗ ಟಿಕೆಟ್ ಬುಕ್‌ ಮಾಡಿದ್ದು, ಬಳಿಕ ಅವರ ಯೋಜನೆಗಳು ಬದಲಾದರೆ ಅಂಥವರು ತಮ್ಮ ಟಿಕೆಟ್ ಅನ್ನು ಮೂಲ ಬೆಲೆಗಿಂತ ಕಡಿಮೆಗೆ ಅಥವಾ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಹೆಚ್ಚಿನ ಬೆಲೆಯನ್ನು ದುಪ್ಪಟ್ಟು ಬೆಲೆಗೆ ಸೀಮಿತಗೊಳಿಸಲಾಗಿದೆ ಎಂದು ಝೊಮ್ಯಾಟೊ ಲೈವ್‌ ಎಂಟರ್‌ಟೇನ್‌ಮೆಂಟ್‌ನ ಸಿಇಒ ಝೀನಾ ವಿಲ್ಕಾಸಿಮ್‌ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಈಗ ಬುಕ್ ಮಾಡಿ, ಯಾವಾಗ ಬೇಕಾದರೂ ಮಾರಾಟ ಮಾಡಿ; ಈ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ

1) ಝೊಮ್ಯಾಟೊ ಆಪ್‌ನಲ್ಲಿ ಬಳಕೆದಾರರು ಕಾರ್ಯಕ್ರಮದ ಟಿಕೆಟ್ ಅನ್ನು ಖರೀದಿಸಿದ ಬಳಿಕ, ಯಾವುದೋ ಕಾರಣಕ್ಕೆ ಅವರು ಆ ಕಾರ್ಯಕ್ರಮಕ್ಕೆ ಹೋಗಲಾಗದೇ ಇದ್ದ ಪರಿಸ್ಥಿತಿ ಉಂಟಾಗಬಹುದು.

2) ಅಂತಹ ಸಂದರ್ಭದಲ್ಲಿ ಆ ಟಿಕೆಟ್‌ ಕೊಟ್ಟ ದುಡ್ಡು ನಷ್ಟವಾಗಬಾರದು, ಇನ್ಯಾರಿಗೋ ಟಿಕೆಟ್ ಸಿಗದ ಹಾಗಾಗಬಾರದು ಎಂಬ ಕಾರಣಕ್ಕೆ ಆ ಟಿಕೆಟ್ ಅನ್ನು ಝೊಮ್ಯಾಟೋ ಆಪ್‌ನಲ್ಲೇ ಮರು ಮಾರಾಟ ಮಾಡಬಹುದು.

3) ಮರುಮಾರಾಟದ ಬೆಲೆಯನ್ನು ಖರೀದಿಸಿದವರು ನಿರ್ಧರಿಸಬಹುದಾಗಿದ್ದು, ಅವರು ಕಡಿಮೆ ಬೆಲೆಗೂ ಮಾರಾಟ ಮಾಡಬಹುದು. ಅಥವಾ ಹೆಚ್ಚಿನ ಬೆಲೆಯಲ್ಲೂ ಮಾರಾಟ ಮಾಡಬಹುದು. (ಹೆಚ್ಚಿನ ಬೆಲೆ ಅಂದರೆ ಎರಡುಪಟ್ಟು ಹೆಚ್ಚು ಬೆಲೆಗೆ ಸೀಮಿತ)

4) ಒಂದೊಮ್ಮೆ ಇನ್ನೊಬ್ಬ ಬಳಕೆದಾರ ಆ ಟಿಕೆಟ್ ಖರೀದಿಸಿದರೆ ಆಗ, ಮಾರಾಟ ಮಾಡಿದ ಬಳಕೆದಾರರ ಹೆಸರಲ್ಲಿದ್ದ ಟಿಕೆಟ್ ರದ್ದಾಗಲಿದೆ. ಖರೀದಿಸಿದವರಿಗೆ ಹೊಸ ಟಿಕೆಟ್ ಲಭ್ಯವಾಗಲಿದೆ. ಇದನ್ನು ಝೊಮ್ಯಾಟೊ ದೃಢೀಕರಿಸಲಿದೆ.

5) ಮಾರಾಟ ಮಾಡಿದವರಿಗೆ ಪೂರ್ಣ ಹಣ ಸಿಗಲಿದೆಯಾದರೂ, ತೆರಿಗೆ ಅನ್ವಯವಾಗಲಿದೆ.

ಉದಾಹರಣೆ ಸಹಿತ ವಿವರಿಸಬೇಕಾದರೆ, ಒಬ್ಬ ಬಳಕೆದಾರ 10 ಟಿಕೆಟ್‌ಗಳನ್ನು ಒಟ್ಟಿಗೆ ಝೋಮ್ಯಾಟೊ ಆಪ್‌ನಲ್ಲಿ ಆರಂಭಿಕ ರಿಯಾಯಿತಿ ದರದಂತೆ 1000 ರೂಪಾಯಿಗೆ ಖರೀದಿಸಿದ. ಬಳಿಕ ಆ ಕಾರ್ಯಕ್ರಮಕ್ಕೆ ಹೋಗಲಾಗದ ಕಾರಣ ಅವುಗಳನ್ನು ಝೊಮ್ಯಾಟೊ ಆಪ್‌ನಲ್ಲಿ ಮರು ಮಾರಾಟಕ್ಕೆ ಇರಿಸುತ್ತಾನೆ. ಟಿಕೆಟ್‌ನ ನಿಜವಾದ ದರ 2000 ರೂಪಾಯಿ ಆಗಿದ್ದು, ಅದನ್ನು ಮರುಮಾರಾಟ ಮಾಡುವಾಗ 4,000 ರೂಪಾಯಿ ದರ ತನಕ ನಿಗದಿ ಮಾಡಬಹುದಾಗಿದೆ ಎಂದು ಝೊಮ್ಯಾಟೋ ಲೈವ್‌ ಎಂಟರ್‌ಟೇನ್‌ಮೆಂಟ್‌ನ ಸಿಇಒ ಝೀನಾ ವಿಲ್ಕಾಸಿಮ್‌ ಬ್ಲಾಗ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ಭಾರತದ ಟಿಕೆಟ್ ಮಾರಾಟ ನವೋದ್ಯಮದಲ್ಲಿ ಇದು ಹೊಸ ಫೀಚರ್ ಆಗಿದ್ದು, ಬಳಕೆದಾರರ ಪ್ರತಿಕ್ರಿಯೆಗಾಗಿ ಕಂಪನಿ ಎದುರು ನೋಡುತ್ತಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.