ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆರೋಗ್ಯ ಪಾನೀಯ ಪಟ್ಟಿಯಿಂದ ಬೋರ್ನ್‌ವಿಟಾ ಮತ್ತು ಆ ಮಾದರಿ ಉತ್ಪನ್ನಗಳು ಹೊರಕ್ಕೆ, ಇ ಕಾಮರ್ಸ್ ತಾಣಗಳಿಗೆ ಕೇಂದ್ರ ಸೂಚನೆ

ಆರೋಗ್ಯ ಪಾನೀಯ ಪಟ್ಟಿಯಿಂದ ಬೋರ್ನ್‌ವಿಟಾ ಮತ್ತು ಆ ಮಾದರಿ ಉತ್ಪನ್ನಗಳು ಹೊರಕ್ಕೆ, ಇ ಕಾಮರ್ಸ್ ತಾಣಗಳಿಗೆ ಕೇಂದ್ರ ಸೂಚನೆ

ಮಹತ್ವದ ವಿದ್ಯಮಾನ ಒಂದರಲ್ಲಿ, ಬೋರ್ನ್‌ವಿಟಾ ಮತ್ತು ಆ ಮಾದರಿ ಉತ್ಪನ್ನಗಳನ್ನು ಆರೋಗ್ಯ ಪಾನೀಯ ಪಟ್ಟಿಯಿಂದ ಹೊರಗಿಡುವಂತೆ ಇ ಕಾಮರ್ಸ್ ತಾಣಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.

ಆರೋಗ್ಯ ಪಾನೀಯ ಪಟ್ಟಿಯಿಂದ ಬೋರ್ನ್‌ವಿಟಾ ಮತ್ತು ಆ ಮಾದರಿ ಉತ್ಪನ್ನಗಳು ಹೊರಕ್ಕೆ ಇರಿಸುವಂತೆ ಇ ಕಾಮರ್ಸ್ ತಾಣಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಆರೋಗ್ಯ ಪಾನೀಯ ಪಟ್ಟಿಯಿಂದ ಬೋರ್ನ್‌ವಿಟಾ ಮತ್ತು ಆ ಮಾದರಿ ಉತ್ಪನ್ನಗಳು ಹೊರಕ್ಕೆ ಇರಿಸುವಂತೆ ಇ ಕಾಮರ್ಸ್ ತಾಣಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ನವದೆಹಲಿ: ಕ್ಯಾಡ್‌ಬರಿ ಕಂಪನಿಯ ಬೋರ್ನ್‌ವಿಟಾ (Bournvita) ಮತ್ತು ಇತರೆ ಬ್ರ್ಯಾಂಡ್‌ಗಳ ಇದೇ ಮಾದರಿಯ ಪಾನೀಯದ ಹುಡಿಗಳಿಗೆ ಆರೋಗ್ಯ ಪಾನೀಯಗಳ (healthy drinks) ವಿಭಾಗದಲ್ಲಿ ಸ್ಥಾನ ಇಲ್ಲ. ಹೆಲ್ದಿ ಡ್ರಿಂಕ್ಸ್ ಕೆಟಗರಿಯಿಂದ ಬೋರ್ನ್‌ವಿಟಾ (Bournvita) ಮತ್ತು ಇತರೆ ಬ್ರ್ಯಾಂಡ್‌ಗಳ ಇದೇ ಮಾದರಿಯ ಪಾನೀಯದ ಹುಡಿಗಳನ್ನು ತೆಗೆದುಹಾಕುವಂತೆ ನರೇಂದ್ರ ಮೋದಿ ಸರಕಾರ ಎಲ್ಲ ಇ-ಕಾಮರ್ಸ್ ತಾಣಗಳಿಗೆ ಸೂಚಿಸಿದೆ.

ಟ್ರೆಂಡಿಂಗ್​ ಸುದ್ದಿ

ಎಫ್‌ಎಸ್‌ಎಸ್‌ಎಐ ಮತ್ತು ಮೊಂಡೆಲ್ಝ್‌ ಇಂಡಿಯಾ ಸಲ್ಲಿಸಿದ ಎಫ್‌ಎಸ್‌ಎಸ್‌ ಕಾಯ್ದೆ 2006ರ ನಿಯಮ ನಿಬಂಧನೆಗಳಂತೆ ಯಾವುದೇ ಆರೋಗ್ಯ ಪಾನೀಯಕ್ಕೆ ವ್ಯಾಖ್ಯಾನ ನೀಡಿಲ್ಲ ಎಂಬುದರ ಕಡೆಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಇತ್ತೀಚೆಗೆ ಗಮನಸೆಳೆದಿತ್ತು. ಇದರ ಬೆನ್ನಿಗೆ, ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಈ ಸೂಚನೆ ನೀಡಿದೆ ಎಂದು ಮನಿ ಕಂಟ್ರೋಲ್ ರಿಪೋರ್ಟ್ ವರದಿ ಮಾಡಿದೆ.

ಸಚಿವಾಲಯ ಪ್ರಕಟಿಸಿರುವ ಸುತ್ತೋಲೆ ಪ್ರಕಾರ, ಫುಡ್ ಸೇಫ್ಟಿ ಆಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ, ಮೊಂಡೆಲ್ಝ್ ಇಂಡಿಯಾ ಫುಡ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ವರದಿಯಲ್ಲಿ ಎಫ್‌ಎಸ್‌ಎಸ್‌ ಕಾಯ್ದೆ 2006ರ ನಿಯಮ ನಿಬಂಧನೆ ಪ್ರಕಾರ, ಹೆಲ್ತ್ ಡ್ರಿಂಕ್‌ಗೆ ವ್ಯಾಖ್ಯಾನ ನೀಡಿಲ್ಲ. ಇದರ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸಿಪಿಸಿಆರ್ ಕಾಯ್ದೆಯ ಸೆಕ್ಷನ್ 14ರ ಪ್ರಕಾರ ತನಿಖೆಗೆ ಆದೇಶಿಸಿದೆ. ಆದ್ದರಿಂದ ಬೋರ್ನ್‌ವಿಟಾ ಸೇರಿ ಅದೇ ಮಾದರಿಯ ಇತರೆ ಉತ್ಪನ್ನಗಳನ್ನು ಹೆಲ್ತ್ ಡ್ರಿಂಕ್ಸ್ ಕೆಟಗರಿಯಿಂದ ಹೊರಗಿಡಬೇಕು ಎಂದು ಇ ಕಾಮರ್ಸ್ ತಾಣಗಳಿಗೆ ಸೂಚಿಸಿದೆ.

ಈ ಮಾದರಿ ಉತ್ಪನ್ನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸಕ್ಕರೆ ಅಂಶ ಇದೆ ಎಂಬ ದೂರು ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ, ಈ ಆದೇಶ ಮಹತ್ವ ಪಡೆದುಕೊಂಡಿದೆ.

ಎಫ್‌ಎಸ್‌ಎಸ್‌ಎಐ ಸೂಚನೆಯೂ ಹೀಗೇ ಇತ್ತು

'ಆರೋಗ್ಯ ಪಾನೀಯ' ಅಥವಾ 'ಎನರ್ಜಿ ಡ್ರಿಂಕ್' ವರ್ಗಗಳ ಅಡಿಯಲ್ಲಿ ಡೇರಿ, ಏಕದಳ ಅಥವಾ ಮಾಲ್ಟ್ ಆಧಾರಿತ ಪಾನೀಯಗಳನ್ನು ಸೇರಿಸದಂತೆ ಎಫ್‌ಎಸ್‌ಎಸ್‌ಎಐ ಇ-ಕಾಮರ್ಸ್ ವೆಬ್‌ಸೈಟ್‌ಗಳಿಗೆ ಸೂಚನೆ ನೀಡಿದ ಬಳಿಕ, ಸಚಿವಾಲಯದ ಈ ಆದೇಶ ಬಂದಿದೆ.

‘ಆರೋಗ್ಯ ಪಾನೀಯ’ವನ್ನು ಕಾನೂನಿನಲ್ಲಿ ವ್ಯಾಖ್ಯಾನಿಸಲಾಗಿಲ್ಲ. ಕಾನೂನು ಪ್ರಕಾರ, 'ಎನರ್ಜಿ ಡ್ರಿಂಕ್ಸ್' ಎಂಬುದು ಕೇವಲ ಸುವಾಸನೆಯುಳ್ಳ ನೀರು ಒಳಗೊಂಡ ಪಾನೀಯಗಳಷ್ಟೆ. ಗ್ರಾಹಕರ ದಾರಿ ತಪ್ಪಿಸುವ ಪದಗಳನ್ನು ಬಳಸಬಾರದು ಅಥವಾ ಅಂತಹ ಜಾಹೀರಾತು ಪ್ರಸಾರ ಮಾಡಬಾರದು ಎಂದು ಆಹಾರ ಸುರಕ್ಷತಾ ಸಂಸ್ಥೆ ಹೇಳಿದೆ.

ಎನ್‌ಸಿಪಿಸಿಆರ್ ಮುಖ್ಯಸ್ಥ ಪ್ರಿಯಾಂಕ್ ಕಾನೂಂಗೊ ಅವರು ಸಚಿವಾಲಯ, ಎಫ್‌ಎಸ್‌ಎಸ್‌ಎಐ, ರಾಜ್ಯಗಳ ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದ ಪ್ರಕಾರ, ಬೋರ್ನ್‌ವಿಟಾ ಮತ್ತು ಆ ಮಾದರಿಯ ಪಾನೀಯವನ್ನು 'ಆರೋಗ್ಯ ಪಾನೀಯ' ವರ್ಗದ ಅಡಿಯಲ್ಲಿ ಮಾರಾಟ ಮಾಡಬಾರದು ಎಂದು ಸೂಚಿಸಿರುವುದಾಗಿ ಹೇಳಿದ್ದಾರೆ.

ಓದಬಹುದಾದ ಇನ್ನಷ್ಟು ಸ್ಟೋರಿಗಳು

1) ಸೂಪರ್ ಹರ್ಕ್ಯುಲಸ್‌ನ ಕಾರ್ಗತ್ತಲ ಕಾರ್ಯಾಚರಣೆ; ಶಸ್ತ್ರ ಚಿಕಿತ್ಸೆ ಯಶಸ್ವಿ, ಯೋಧನಿಗೆ ಮರಳಿ ಸಿಕ್ಕಿದ ಕೈ- 5 ಅಂಶಗಳ ವಿವರ ವರದಿಗೆ ಇಲ್ಲಿ ಕ್ಲಿಕ್ ಮಾಡಿ

2) ಅಂಬೇಡ್ಕರ್ ಜಯಂತಿ; ಏಕರೂಪ ನಾಗರಿಕ ಸಂಹಿತೆ ಮತ್ತು ಶರೀಯತ್ ಕಾನೂನು ಬಗ್ಗೆ ಡಾ ಬಿಆರ್ ಅಂಬೇಡ್ಕರ್ ಹೇಳಿರುವುದಿಷ್ಟು- ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ

3) ಲೋಕಸಭಾ ಚುನಾವಣೆ ಮುಗಿದ ಕೂಡಲೇ ಏರ್‌ಟೆಲ್ ಜಿಯೋ ಟ್ಯಾರಿಫ್ ಹೆಚ್ಚಳ ನಿರೀಕ್ಷೆ; ಎಷ್ಟು ಏರಿಕೆ, ಯಾರು ಮೊದಲು ದರ ಏರಿಸುತ್ತಾರೆ

4) ಲೋಕಸಭಾ ಚುನಾವಣೆ; ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಷೋ ನಾಳೆ, ಸಂಚಾರ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ, ಪೂರ್ಣ ವಿವರ ಇಲ್ಲಿದೆ

5) ನೀರಿನ ಸಮಸ್ಯೆ ನಿವಾರಿಸಲು ಪಣ; ಬೆಂಗಳೂರು ಪೂರ್ವ ಭಾಗದಲ್ಲಿ ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಜಲಮಂಡಳಿ ತೀರ್ಮಾನ- ವಿವರ ಹೀಗಿದೆ

IPL_Entry_Point