Cigarette lighter: 20 ರೂಪಾಯಿ ಒಳಗಿನ ಸಿಗರೇಟ್‌ ಲೈಟರ್‌ ಆಮದು ನಿಷೇಧ; ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Cigarette Lighter: 20 ರೂಪಾಯಿ ಒಳಗಿನ ಸಿಗರೇಟ್‌ ಲೈಟರ್‌ ಆಮದು ನಿಷೇಧ; ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

Cigarette lighter: 20 ರೂಪಾಯಿ ಒಳಗಿನ ಸಿಗರೇಟ್‌ ಲೈಟರ್‌ ಆಮದು ನಿಷೇಧ; ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ

Cigarette lighter: ದೇಶೀಯ ಬೆಂಕಿಪೆಟ್ಟಿಗೆ ಉದ್ಯಮಕ್ಕೆ ಗಂಭೀರ ಹೊಡೆತ ನೀಡುತ್ತಿರುವ ಕಾರಣ ಮುಂದಿಟ್ಟು, ಕೇಂದ್ರ ಸರ್ಕಾರ 20 ರೂಪಾಯಿ ಒಳಗಿನ ಸಿಗರೇಟ್‌ ಲೈಟರ್‌ ಮದನ್ನು ನಿಷೇಧಿಸಿದೆ. ಜೂ.29ಕ್ಕೆ ಈ ಸಂಬಂಧ ಅಧಿಸೂಚನೆ ಪ್ರಕಟವಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಮನವಿ ಮೇರೆಗೆ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ

ಅನಿಲ ಇಂಧನ, ಮರುಪೂರಣ ಮಾಡದ ಅಥವಾ ಮರುಪೂರಣ ಮಾಡಬಹುದಾದ ಪಾಕೆಟ್ ಲೈಟರ್‌ಗಳ ಮೇಲೆ ನಿಷೇಧ ವಿಧಿಸಿದೆ ಕೇಂದ್ರ ಸರ್ಕಾರ.
ಅನಿಲ ಇಂಧನ, ಮರುಪೂರಣ ಮಾಡದ ಅಥವಾ ಮರುಪೂರಣ ಮಾಡಬಹುದಾದ ಪಾಕೆಟ್ ಲೈಟರ್‌ಗಳ ಮೇಲೆ ನಿಷೇಧ ವಿಧಿಸಿದೆ ಕೇಂದ್ರ ಸರ್ಕಾರ. (Representative image: Pixaby)

ನವದೆಹಲಿ: ದೇಶದ ವಿಶೇಷವಾಗಿ ತಮಿಳುನಾಡಿನ ಬೆಂಕಿಕಡ್ಡಿ ಉತ್ಪಾದನಾ ಉದ್ಯಮ (matchbox manufacturing industry)ಕ್ಕೆ ಬೆಂಬಲ ನೀಡುವ ಸಲುವಾಗಿ 20 ರೂಪಾಯಿಗಿಂತ ಕಡಿಮೆ ಬೆಲೆಯ ಸಿಗರೇಟ್‌ ಲೈಟರ್‌ ಆಮದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಈ ಸಂಬಂಧ ಕೇಂದ್ರ ಸರ್ಕಾರ ಜೂನ್‌ 29ರಂದು ಆದೇಶ ಹೊರಡಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಕಡಿಮೆ ಬೆಲೆಯ ಸಿಗರೇಟ್‌ ಲೈಟರ್‌ ಆಮದು ಮಾಡಿಕೊಳ್ಳುವುದರಿಂದ ತಮಿಳುನಾಡಿನ ಬೆಂಕಿಪೊಟ್ಟಣ ಉದ್ಯಮಕ್ಕೆ ಆಗುತ್ತಿರುವ ಹಾನಿಯನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು. ಮೇಕ್‌ ಇನ್‌ ಇಂಡಿಯಾಕ್ಕೆ ಬೆಂಬಲ ನೀಡುವ ಸಲುವಾಗಿ, ದೇಶದ ಅರ್ಥ ವ್ಯವಸ್ಥೆಗೆ ಬಲತುಂಬುವ ಸಲುವಾಗಿ ಕೇಂದ್ರ ಸರ್ಕಾರ ಈ ಆದೇಶ ಹೊರಡಿಸಿದೆ.

ಡೈರೆಕ್ಟರೇಟ್ ಜನರಲ್ ಆಫ್ ಫಾರಿನ್ ಟ್ರೇಡ್ (DGFT) ಅಧಿಸೂಚನೆಯ ಪ್ರಕಾರ, "ಸಿಗರೇಟ್ ಲೈಟರ್‌ಗಳ ಆಮದು ನೀತಿಯನ್ನು...'ಮುಕ್ತ'ದಿಂದ 'ನಿಷೇಧಿತ'ಕ್ಕೆ ಪರಿಷ್ಕರಿಸಲಾಗಿದೆ. ಸಿಐಎಫ್‌ ಮೌಲ್ಯವು ಪ್ರತಿ ಲೈಟರ್‌ಗೆ 20 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನದಾಗಿದ್ದರೆ ಆಮದು ಅವಕಾಶ ಮುಕ್ತವಾಗಿರುತ್ತದೆ ಎಂದು ಅಧಿಸೂಚನೆ ಹೇಳಿದೆ. ಅನಿಲ ಇಂಧನ, ಮರುಪೂರಣ ಮಾಡದ ಅಥವಾ ಮರುಪೂರಣ ಮಾಡಬಹುದಾದ ಪಾಕೆಟ್ ಲೈಟರ್‌ಗಳ ಮೇಲೆ ನಿಷೇಧವನ್ನು ವಿಧಿಸಲಾಗಿದೆ.

ಸಿಐಎಫ್‌ ಮೌಲ್ಯ (ವೆಚ್ಚ, ವಿಮೆ ಮತ್ತು ಸರಕು ಸಾಗಣೆ) ಎಂಬುದು ಆಮದು ಮಾಡಿಕೊಳ್ಳುವ ಸರಕುಗಳ ಒಟ್ಟು ಮೌಲ್ಯವನ್ನು ನಿರ್ಧರಿಸಲು ಅಂತರರಾಷ್ಟ್ರೀಯ ವಾಣಿಜ್ಯದಲ್ಲಿ ಬಳಸಲಾಗುವ ವ್ಯಾಪಾರ ಪದವಾಗಿದೆ.

ಸಿಗರೇಟ್‌ ಲೈಟರ್‌ಗಳ ಆಮದು ವಿವರ

ಅನಿಲ ಇಂಧನ, ಮರುಪೂರಣ ಮಾಡಲಾಗದ ಪಾಕೆಟ್ ಲೈಟರ್‌ಗಳ ಆಮದು ಪ್ರಮಾಣವು 2022-23ರಲ್ಲಿ 0.66 ಮಿಲಿಯನ್ ಅಮೆರಿಕನ್‌ ಡಾಲರ್‌ ಆಗಿತ್ತು. ಇದು ಈ ಆರ್ಥಿಕ ವರ್ಷದಲ್ಲಿ ಏಪ್ರಿಲ್‌ನಲ್ಲಿ 0.13 ಮಿಲಿಯನ್ ಅಮೆರಿಕನ್‌ ಡಾಲರ್‌ ಆಗಿತ್ತು.

ಅದೇ ರೀತಿ, ಅನಿಲ ಇಂಧನ ಮತ್ತು ಮರುಪೂರಣ ಮಾಡಬಹುದಾದ ಪಾಕೆಟ್ ಲೈಟರ್‌ಗಳ ಆಮದು 2021-22 ರಲ್ಲಿ 7 ಮಿಲಿಯನ್‌ ಅಮೆರಿಕನ್‌ ಡಾಲರ್‌ಗೆ ವಿರುದ್ಧವಾಗಿ 2022-23 ರಲ್ಲಿ 8.87 ಮಿಲಿಯನ್‌ ಡಾಲರ್‌ಗೆ ತಲುಪಿದೆ. ಈ ಹಣಕಾಸು ವರ್ಷದ ಏಪ್ರಿಲ್‌ನಲ್ಲಿ ಇದು 0.96 ಮಿಲಿಯನ್ ಡಾಲರ್‌ ಆಗಿತ್ತು, ಇವುಗಳನ್ನು ಮುಖ್ಯವಾಗಿ ಸ್ಪೇನ್, ಟರ್ಕಿ ಮತ್ತು ಯುಎಇಯಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ತಮಿಳುನಾಡು ಸಿಎಂ ಸ್ಟಾಲಿನ್‌ ಅವರ ಪ್ರತಿಪಾದನೆ ಏನಾಗಿತ್ತು

ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು 2022ರ ಸೆಪ್ಟೆಂಬರ್‌ನಲ್ಲಿ ಆಮದು ಮಾಡಿಕೊಳ್ಳುವ ಸಿಗರೇಟ್ ಲೈಟರ್‌ಗಳನ್ನು ನಿಷೇಧಿಸುವಂತೆ ವಾಣಿಜ್ಯ ಮತ್ತು ವ್ಯಾಪಾರ ಸಚಿವಾಲಯಕ್ಕೆ ಪತ್ರ ಬರೆದಿದ್ದರು.

ಸ್ಟಾಲಿನ್‌ ಅವರು 2022ರ ಸೆಪ್ಟೆಂಬರ್ 8ರ ಪತ್ರದಲ್ಲಿ “ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಮ್ಯಾಚ್ ಬಾಕ್ಸ್ ಉತ್ಪಾದನಾ ಉದ್ಯಮವು ಉದ್ಯೋಗದ ಪ್ರಮುಖ ಮೂಲವಾಗಿದೆ. ಇದು ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ನೇರವಾಗಿ ಉದ್ಯೋಗ ನೀಡುವ ಸಾಂಪ್ರದಾಯಿಕ ಉದ್ಯಮವಾಗಿದೆ. ಅದರ ಉದ್ಯೋಗಿಗಳಲ್ಲಿ ಹೆಚ್ಚಿನವರು ಮಹಿಳೆಯರು. ಇದಲ್ಲದೆ, ಉದ್ಯಮವು ಒಂದು ಪ್ರದೇಶದಲ್ಲಿ ಮತ್ತು ಕೃಷಿಗೆ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿದೆ. ಮ್ಯಾಚ್‌ಬಾಕ್ಸ್ ಉದ್ಯಮವು ರಫ್ತು ಮೂಲಕ ಸುಮಾರು 400 ಕೋಟಿ ರೂಪಾಯಿಗಳಷ್ಟು ವಿದೇಶಿ ವಿನಿಮಯ ಆದಾಯವನ್ನು ಗಳಿಸುತ್ತದೆ.

“ಸಿಗರೇಟ್ ಲೈಟರ್‌ 10 ರೂಪಾಯಿಗೆ ಲಭ್ಯವಿವೆ. ಒಂದು ಲೈಟರ್‌ 20 ಮ್ಯಾಚ್‌ಬಾಕ್ಸ್‌ಗಳಿಗೆ ಪರ್ಯಾಯ. ಆದಾಗ್ಯೂ, ಈ ಮರುಪೂರಣ ಮಾಡಲಾಗದ ಲೈಟರ್‌ಗಳು ಅಪಾರ ಪ್ಲಾಸ್ಟಿಕ್ ತ್ಯಾಜ್ಯವನ್ನು ಉಂಟುಮಾಡುತ್ತವೆ. ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್‌ಗಳಿಂದ ಮಾಡಲ್ಪಟ್ಟಿದೆ ಮತ್ತು ಅವು ಬಳಸುವ ಇಂಧನದ ಆರೋಗ್ಯದ ಪರಿಣಾಮವು ತಿಳಿದಿಲ್ಲ.

ಆಮದು ಮಾಡಿಕೊಳ್ಳುವ ಸಿಗರೇಟ್ ಲೈಟರ್‌ಗಳು ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವುದನ್ನು ಮುಂದುವರಿಸಿದರೆ, ತಮಿಳುನಾಡಿನಲ್ಲಿ ಈ ಉದ್ಯಮದಲ್ಲಿ ತೊಡಗಿರುವ ಒಂದು ಲಕ್ಷಕ್ಕೂ ಹೆಚ್ಚು ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುತ್ತಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.