ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ; ವ್ಯಾಪಾರಿಗಳು, NCMC ಕಾರ್ಡ್ ಬಳಕೆದಾರರ ಗೊಂದಲಗಳಿಗೆ ಇಲ್ಲಿವೆ ಉತ್ತರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ; ವ್ಯಾಪಾರಿಗಳು, Ncmc ಕಾರ್ಡ್ ಬಳಕೆದಾರರ ಗೊಂದಲಗಳಿಗೆ ಇಲ್ಲಿವೆ ಉತ್ತರ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ; ವ್ಯಾಪಾರಿಗಳು, NCMC ಕಾರ್ಡ್ ಬಳಕೆದಾರರ ಗೊಂದಲಗಳಿಗೆ ಇಲ್ಲಿವೆ ಉತ್ತರ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ವ್ಯವಹಾರಗಳ ಮೇಲೆ ಆರ್‌ಬಿಐ ನಿರ್ಬಂಧ ಹೇರಿದೆ. ಈ ನಡುವೆ ಈ ಬ್ಯಾಂಕ್‌ ವ್ಯವಸ್ಥೆ ಮೂಲಕ ಪಾವತಿಯನ್ನು ನೆಚ್ಚಿಕೊಂಡಿರುವ ವ್ಯಾಪಾರಿಗಳು, ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್ (NCMC) ಬಳಸುತ್ತಿರುವವರು, ಭಾರತ್ ಬಿಲ್ ಪೇಮೆಂಟ್‌ ಸಿಸ್ಟಮ್ ಬಳಸಿ ಪೇಮೆಂಟ್‌ ನಡೆಸುವವರು ಮುಂದೆ ಏನು ಮಾಡಬಹುದು ಎಂಬ ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ; ವ್ಯಾಪಾರಿಗಳು, NCMC ಕಾರ್ಡ್ ಬಳಕೆದಾರರ ಗೊಂದಲಗಳಿಗೆ ಇಲ್ಲಿವೆ ಉತ್ತರ
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ನಿರ್ಬಂಧ; ವ್ಯಾಪಾರಿಗಳು, NCMC ಕಾರ್ಡ್ ಬಳಕೆದಾರರ ಗೊಂದಲಗಳಿಗೆ ಇಲ್ಲಿವೆ ಉತ್ತರ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ ಮೇಲೆ ಆರ್‌​ಬಿಐ ಹೇರಿದ ನಿರ್ಬಂಧದ ಡೆಡ್​ಲೈನ್ ಅನ್ನು ಮಾರ್ಚ್ 15ಕ್ಕೆ ವಿಸ್ತರಿಸಿದೆ. ಈ ಹಿಂದೆ ಫೆಬ್ರುವರಿ 29ರ ಗಡುವು ನೀಡಲಾಗಿತ್ತು. ಸದ್ಯ ಗಡುವು ವಿಸ್ತರಿಸುವ ಮೂಲಕ ಗ್ರಾಹಕರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಸದ್ಯ ಮಾರ್ಚ್ 15ರವರೆಗೆ ಗ್ರಾಹಕರಿಗೆ ಕಾಲಾವಕಾಶ ನೀಡಲಾಗಿದೆ. ಅಂದರೆ ಹೆಚ್ಚುವರಿ 15 ದಿನ ಅವಕಾಶ ನೀಡಲಾಗಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿರುವ ಗ್ರಾಹಕರು; ಅದರಲ್ಲೂ ವ್ಯಾಪಾರಿಗಳು, ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್ (NCMC) ಬಳಸುತ್ತಿರುವವರು, ಭಾರತ್ ಬಿಲ್ ಪೇಮೆಂಟ್‌ ಸಿಸ್ಟಮ್ ಬಳಸಿ ಪೇಮೆಂಟ್‌ ನಡೆಸುವವರು ಕೂಡಾ ತುಸು ನಿರಾಳರಾಗಬಹುದು. ಆದರೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ಖಾತೆ ಹೊಂದಿರುವ ಬಳಕೆದಾರರಿಗೆ ಇನ್ನೂ ಕೆಲವೊಂದು ಗೊಂದಲಗಳಿರುತ್ತವೆ. ಆ ಗೊಂದಲಗಳಿಗೆ ಇಲ್ಲಿ ಉತ್ತರಗಳಿವೆ.

ಪೇಟಿಎಂ ಪೇಮೆಂಟ್ ಬ್ಯಾಂಕ್ ನೀಡಿದ ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್ (NCMC) ಬಳಕೆದಾರರ ಪ್ರಶ್ನೆಗಳು.

ಪ್ರಶ್ನೆ: ನನ್ನ ಬಳಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನೀಡಿದ NCMC ಕಾರ್ಡ್ ಇದೆ. 2024ರ ಮಾರ್ಚ್ 15ರ ನಂತರ ನಾನು ಅದನ್ನು ಬಳಸಬಹುದೇ?

ಉತ್ತರ: ಹೌದು. ಕಾರ್ಡ್‌ನಲ್ಲಿ ಲಭ್ಯವಿರುವ ಬ್ಯಾಲೆನ್ಸ್‌ನವರೆಗೆ ನಿಮ್ಮ NCMC ಕಾರ್ಡ್ ಅನ್ನು ನೀವು ಬಳಸಬಹುದು. ಆದರೆ, 2024ರ ಮಾರ್ಚ್ 15ರ ನಂತರ ನೀವು ಕಾರ್ಡ್‌ಗೆ ಹಣವನ್ನು ಟಾಪ್ ಅಪ್ ಮಾಡಲು ಸಾಧ್ಯವಾಗುವುದಿಲ್ಲ. ಇಂಥಾ ಅನನುಕೂಲತೆಯನ್ನು ತಪ್ಪಿಸಲು, ಮಾರ್ಚ್ 15ಕ್ಕಿಂತ ಮುನ್ನ ನೀವು ಬೇರೆ ಬ್ಯಾಂಕ್ ನೀಡುವ NCMC ಕಾರ್ಡ್ ಪಡೆದುಕೊಳ್ಳಲು ಸೂಚಿಸಲಾಗುತ್ತದೆ.

ಪ್ರಶ್ನೆ: ನನ್ನ ಬಳಿ ಪೇಟಿಎಂ ಪೇಮೆಂಟ್ ಬ್ಯಾಂಕ್ ನೀಡಿದ NCMC ಕಾರ್ಡ್ ಇದೆ. ಟಾಪ್-ಅಪ್, ರೀಚಾರ್ಜ್ ಸೇರಿ ಇತರ ವಿಧಾನಗಳ ಮೂಲಕ ನಾನು ಅದಕ್ಕೆ ಮಾರ್ಚ್ 15ರ ನಂತರ ಬ್ಯಾಲೆನ್ಸ್‌ ಹಾಕಬಹುದೇ?

ಉತ್ತರ: ಇಲ್ಲ. 2024ರ ಮಾರ್ಚ್ 15ರ ನಂತರ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನೀಡಿದ ನಿಮ್ಮ NCMC ಕಾರ್ಡ್‌ಗೆ ಟಾಪ್-ಅಪ್ ಅಥವಾ ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ನೀವು ಮಾರ್ಚ್ 15ರ ಮೊದಲು ಬೇರೊಂದು ಬ್ಯಾಂಕ್ ನೀಡುವ NCMC ಕಾರ್ಡ್ ಅನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

ಪ್ರಶ್ನೆ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ನೀಡಿದ ನನ್ನ ಹಳೆಯ NCMC ಕಾರ್ಡ್‌ನಿಂದ, ನನ್ನ ಕಾರ್ಡ್‌ ಬ್ಯಾಲೆನ್ಸ್ ಅನ್ನು ಮತ್ತೊಂದು ಬ್ಯಾಂಕ್‌ನಿಂದ ಪಡೆದ ಹೊಸ ಕಾರ್ಡ್‌ಗೆ ವರ್ಗಾಯಿಸಬಹುದೇ?

ಉತ್ತರ: ಬ್ಯಾಲೆನ್ಸ್ ವರ್ಗಾವಣೆಯ ಆಯ್ಕೆ NCMC ಕಾರ್ಡ್‌ನಲ್ಲಿ ಲಭ್ಯವಿಲ್ಲ. ಹೀಗಾಗಿ, ಲಭ್ಯವಿರುವ ಮೊತ್ತದವರೆಗೆ ನೀವು ಕಾರ್ಡ್ ಅನ್ನು ಬಳಸಬಹುದು. ಒಂದು ವೇಳೆ ನಿಮ್ಮ ಕಾರ್ಡ್‌ನಲ್ಲಿ ಇನ್ನೂ ಬ್ಯಾಲೆನ್ಸ್ ಬಾಕಿ ಉಳಿದು, ಅದನ್ನು ನೀವು ಬಳಸಲು ಸಾಧ್ಯವಾಗಲಿಲ್ಲ ಎಂದರೆ, ರೀಫಂಡ್‌ ಮಾಡುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ವಿನಂತಿಸಬಹುದು.

ಪೇಮೆಂಟ್‌ಗಾಗಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬಳಸುವ ವ್ಯಾಪಾರಿಗಳು

ಪ್ರಶ್ನೆ: ನಾನು ವ್ಯಾಪಾರಿ. ನಾನು ಪೇಟಿಎಂ QR ಕೋಡ್, ಪೇಟಿಎಂ ಸೌಂಡ್‌ಬಾಕ್ಸ್ ಅಥವಾ ಪೇಟಿಎಂ POS ಟರ್ಮಿನಲ್ ಅನ್ನು ಬಳಸಿಕೊಂಡು ಪಾವತಿಗಳನ್ನು ಸ್ವೀಕರಿಸುತ್ತೇನೆ. ನನ್ನ ಖಾತೆ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನೊಂದಿಗೆ ಅಲ್ಲ. ಇನ್ನೊಂದು ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿದೆ. ಮಾರ್ಚ್ 15ರ ನಂತರವೂ ನಾನು ಈ ಸೆಟಪ್ ಅನ್ನು ಬಳಸಬಹುದೇ?

ಉತ್ತರ: ಹೌದು. ನಿಮ್ಮ ಹಣ ವರ್ಗಾವಣೆ ಮಾಡಲು ಅಥವಾ ಸ್ವೀಕರಿಸಲು ಪೇಟಿಎಂ ಪೇಮೆಂಟ್ ಬ್ಯಾಂಕ್ ಹೊರತುಪಡಿಸಿ ಇತರ ಯಾವುದೇ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ್ದರೆ, ನೀವು ಮಾರ್ಚ್ 15ರ ನಂತರವೂ ಈ ಸೆಟಪ್‌ (ನಾನು ಪೇಟಿಎಂ QR ಕೋಡ್, ಪೇಟಿಎಂ ಸೌಂಡ್‌ಬಾಕ್ಸ್ ) ಬಳಸುವುದನ್ನು ಮುಂದುವರಿಸಬಹುದು.

ಇದನ್ನೂ ಓದಿ | ಗ್ರಾಹಕರಿಗೆ ಸಿಹಿ ಸುದ್ದಿ; ಪೇಟಿಎಂ ಪೇಮೆಂಟ್ಸ್​ ಬ್ಯಾಂಕ್ ನಿರ್ಬಂಧದ ಡೆಡ್​ಲೈನ್​ ವಿಸ್ತರಣೆ, ಕೊನೆಯ ದಿನಾಂಕ ಯಾವಾಗ?

ಪ್ರಶ್ನೆ: ನಾನು ವ್ಯಾಪಾರಿ. ನಾನು ಪೇಟಿಎಂ QR ಕೋಡ್, ಪೇಟಿಎಂ ಸೌಂಡ್‌ಬಾಕ್ಸ್ ಅಥವಾ ಪೇಟಿಎಂ POS ಟರ್ಮಿನಲ್ ಅನ್ನು ಬಳಸಿಕೊಂಡು ಪಾವತಿಗಳನ್ನು ಸ್ವೀಕರಿಸುತ್ತೇನೆ. ನನ್ನ ಬ್ಯಾಂಕ್ ಖಾತೆಗೆ ಅಥವಾ ಪೇಟಿಎಂ ಬ್ಯಾಂಕ್‌ ವ್ಯಾಲೆಟ್‌ ಬಳಸಿಕೊಂಡು ಪಾವತಿಗಳನ್ನು ಸ್ವೀಕರಿಸುತ್ತೇನೆ. ಮಾರ್ಚ್ 15ರ ನಂತರವೂ ನಾನು ಈ ಸೆಟಪ್ ಅನ್ನು ಬಳಸುವುದನ್ನು ಮುಂದುವರಿಸಬಹುದೇ?

ಉತ್ತರ: ಇಲ್ಲ. ಮಾರ್ಚ್ 15ರ ನಂತರ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನೊಂದಿಗೆ ನಿಮ್ಮ ಬ್ಯಾಂಕ್ ಖಾತೆ ಅಥವಾ ವ್ಯಾಲೆಟ್‌ಗೆ ಯಾವುದೇ ಹಣ ಸ್ವೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಆದರೆ, ರಿಫಂಡ್‌, ಕ್ಯಾಶ್‌ಬ್ಯಾಕ್‌ಗಳು, ಪಾಲುದಾರ ಬ್ಯಾಂಕ್‌ಗಳಿಂದ ಸ್ವೀಪ್-ಇನ್ ಅಥವಾ ಬಡ್ಡಿಯನ್ನು ಸ್ವೀಕರಿಸಬಹುದು. ಇಂಥ ಯಾವುದೇ ಅನಾನುಕೂಲತೆ ಅಥವಾ ಅಡಚಣೆಯನ್ನು ತಪ್ಪಿಸಲು, ನೀವು ಬೇರೊಂದು ಬ್ಯಾಂಕ್ ಅಥವಾ ವ್ಯಾಲೆಟ್‌ನೊಂದಿಗೆ ಖಾತೆಗೆ ಲಿಂಕ್ ಮಾಡಲಾದ ಹೊಸ ಕ್ಯೂಆರ್‌ ಕೋಡ್ ಪಡೆದುಕೊಳ್ಳಬಹುದು.

ಭಾರತ್ ಬಿಲ್ ಪೇಮೆಂಟ್‌ ಸಿಸ್ಟಮ್ (BBPS)

ಪ್ರಶ್ನೆ: ಪೇಟಿಎಂ ಪೇಮೆಂಟ್‌ ಬ್ಯಾಂಕ್‌ ಖಾತೆಯನ್ನು ಬಳಸಿಕೊಂಡು ನಾನು ಭಾರತ್ ಬಿಲ್ ಪೇಮೆಂಟ್‌ ಸಿಸ್ಟಮ್ (BBPS) ಮೂಲಕ ಪಾವತಿಗಳನ್ನು ಮಾಡಬಹುದೇ?

ಉತ್ತರ: ಹೌದು. ನಿಮ್ಮ ಖಾತೆಯಲ್ಲಿ ಲಭ್ಯವಿರುವ ಬ್ಯಾಲೆನ್ಸ್‌ವರೆಗೆ ನಿಮ್ಮ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಯಿಂದ ಭಾರತ್ ಬಿಲ್ ಪಾವತಿ ವ್ಯವಸ್ಥೆಯ ಮೂಲಕ ಪಾವತಿಗಳನ್ನು ಮಾಡಬಹುದು. ಆದರೆ, ಮಾರ್ಚ್ 15ರ ನಂತರ ಪೇಟಿಎಂ ಪೇಮೆಂಟ್‌ ಬ್ಯಾಂಕ್‌ನೊಂದಿಗೆ ನಿಮ್ಮ ಖಾತೆಗಳಿಗೆ ಅಥವಾ ವ್ಯಾಲೆಟ್‌ಗಳಿಗೆ ಯಾವುದೇ ಹಣ ಕ್ರೆಡಿಟ್ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಮಾರ್ಚ್ 15ರ ಮೊದಲು BBPSಗಾಗಿ ನೀವು ಇನ್ನೊಂದು ಬ್ಯಾಂಕ್ ಖಾತೆಯೊಂದಿಗೆ ಪರ್ಯಾಯ ವ್ಯವಸ್ಥೆ ಮಾಡಬಹುದು.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.