ಕನ್ನಡ ಸುದ್ದಿ  /  Nation And-world  /  Business News Food Delivery To 51 Thousand Local People Anant Ambani Radhika Merchant Pre Wedding In Jamnagar Rmy

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಕ್ಕೂ ಮುನ್ನ 51 ಸಾವಿರ ಜನರಿಗೆ ಅನ್ನಸಂತರ್ಪಣೆ

ಭಾರತದ ನಂಬರ್ 1 ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭ ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ 3 ದಿನ ನಡೆಯಲಿದೆ.

ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಕ್ಕೂ ಮುನ್ನ ಗುಜರಾತ್‌ನ ಜಾಮ್‌ನಗರ ಸುತ್ತಮುತ್ತಲಿನ 51 ಸಾವಿರ ಸ್ಥಳೀಯರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಕ್ಕೂ ಮುನ್ನ ಗುಜರಾತ್‌ನ ಜಾಮ್‌ನಗರ ಸುತ್ತಮುತ್ತಲಿನ 51 ಸಾವಿರ ಸ್ಥಳೀಯರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಜಾಮ್‌ನಗರ (ಗುಜರಾತ್): ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯಲ್ಲಿನ ಶುಭ ಸಮಾರಂಭಕ್ಕೆ ಚಾಲನೆ ಸಿಕ್ಕಿದೆ. ಅಂಬಾನಿ ಕುಟುಂಬದ ಕಿರಿಯ ಮಗ ಮತ್ತು ಕೈಗಾರಿಕೋದ್ಯಮಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮಗಳು ಅನ್ನ ಸಂತರ್ಪಣೆಯೊಂದಿಗೆ ಪ್ರಾರಂಭವಾಯಿತು. ಜಾಮ್‌ನಗರದ ರಿಲಯನ್ಸ್ ಟೌನ್‌ಶಿಪ್ ಬಳಿಯ ಜೋಗ್ವಾಡ್ ಗ್ರಾಮದಲ್ಲಿ ಮುಕೇಶ್ ಅಂಬಾನಿ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಸೇರಿದಂತೆ ಅಂಬಾನಿ ಕುಟುಂಬದ ಇತರ ಸದಸ್ಯರು ಹಳ್ಳಿಗರಿಗೆ ಸಾಂಪ್ರದಾಯಿಕ ಗುಜರಾತಿ ಆಹಾರವನ್ನು ಉಣಬಡಿಸಿದರು. ರಾಧಿಕಾ ಅವರ ಅಜ್ಜಿ ಮತ್ತು ಪೋಷಕರಾದ ವೀರೇನ್ ಮತ್ತು ಶೈಲಾ ಮರ್ಚೆಂಟ್ ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸುಮಾರು 51 ಸಾವಿರ ಸ್ಥಳೀಯ ನಿವಾಸಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದು ಮುಂದಿನ ಕೆಲವು ದಿನಗಳವರೆಗೆ ಮುಂದುವರಿಯುತ್ತದೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಆಚರಣೆಗಳಿಗಾಗಿ ಸ್ಥಳೀಯ ಸಮುದಾಯದ ಆಶೀರ್ವಾದ ಪಡೆಯಲು ಅಂಬಾನಿ ಕುಟುಂಬವು ಅನ್ನ ಸಂತರ್ಪಣೆಯನ್ನು ಆಯೋಜಿಸಿದೆ. ಭೋಜನದ ನಂತರದಲ್ಲಿ ಕಾರ್ಯಕ್ರಮಕ್ಕೆ ಬಂದವರು ಸಾಂಪ್ರದಾಯಿಕ ಜನಪದ ಸಂಗೀತವನ್ನು ಆನಂದಿಸಿದರು. ಖ್ಯಾತ ಗುಜರಾತಿ ಗಾಯಕಿ ಕೀರ್ತಿದನ್ ಗಧ್ವಿ ತಮ್ಮ ಗಾಯನದ ಮೂಲಕ ನೆರದಿದ್ದವರನ್ನು ಆನಂದಗೊಳಿಸಿದರು.

ಮುಕೇಶ್ ಅಂಬಾನಿ ಕುಟುಂಬದಿಂದ ಅನ್ನ ಸಂತರ್ಪಣೆ ಇದೇ ಮೊದಲಲ್ಲ

ಅಂದ ಹಾಗೆ ಮುಕೇಶ್ ಅಂಬಾನಿ ಅವರ ಕುಟುಂಬದಲ್ಲಿ ಈ ರೀತಿ ಅನ್ನ ಸಂತರ್ಪಣೆ ಸಂಪ್ರದಾಯ ಹಳೆಯದು. ಈ ಹಿಂದೆ ನೀತಾ ಅಂಬಾನಿ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿಯೂ ದೇಶದಾದ್ಯಂತ ಅನ್ನದಾನ ಆಯೋಜಿಸಲಾಗಿತ್ತು. ಅಂಬಾನಿ ಕುಟುಂಬವು ಮಂಗಳಕರ ಕಾರ್ಯಕ್ರಮ ನಡೆಸುವ ಸಂದರ್ಭಗಳಲ್ಲಿ ಅನ್ನ ಸಂತರ್ಪಣೆ ಮಾಡುತ್ತಾ ಬರುತ್ತಿದೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ದೇಶದಲ್ಲಿ ಜನರು ಬಿಕ್ಕಟ್ಟಿನಲ್ಲಿ ಇದ್ದಂಥ ಸಂದರ್ಭದಲ್ಲೂ ರಿಲಯನ್ಸ್ ಫೌಂಡೇಷನ್, ಅನಂತ್ ಅಂಬಾನಿ ಹಾಗೂ ಅವರ ತಾಯಿ ನೀತಾ ಅಂಬಾನಿ ನೇತೃತ್ವದಲ್ಲಿ, ವಿಶ್ವದ ಅತಿದೊಡ್ಡ ಆಹಾರ ವಿತರಣೆ ಕಾರ್ಯಕ್ರಮವನ್ನು ನಡೆಸಿತು. ಕುಟುಂಬದ ಸಂಪ್ರದಾಯವನ್ನು ಮುಂದುವರಿಸಿದ್ದು, ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮಗಳನ್ನು ಅನ್ನ ಸಂತರ್ಪಣೆಯನ್ನು ಪ್ರಾರಂಭಿಸಿದ್ದಾರೆ.

ಮುಕೇಶ್ ಅಂಬಾನಿ-ನಿತಾ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ರಾಧಿಕಾ ಮರ್ಚೆಂಡ್ ಅವರನ್ನು ವರಿಸಲಿದ್ದು, ವಿವಾಹದ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸಲಾಗಿದೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಅವರ ಎಂಗೇಜ್ಮೆಂಟ್ ಕಳೆದ ವರ್ಷವೇ ನಡೆದಿದ್ದು, ಇದೀಗ ವಿವಾಹ ಪೂರ್ಣ ಕಾರ್ಯಕ್ರಮ ನಾಳೆಯಿಂದ (2024ರ ಮಾರ್ಚ್ 1ರ ಶುಕ್ರವಾರದಿಂದ 3ರ ಭಾನುವಾರದ ವರೆಗೆ) ಮೂರು ದಿನಗಳ ವರೆಗೆ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಗುಜರಾತ್‌ನ ಜಾಮ್‌ನಗರದಲ್ಲಿ ನಡೆಯಲಿದೆ.

ಜಮ್‌ನಗರದ ರಿಲಯನ್ಸ್ ಗ್ರೀನ್ಸ್‌ನಲ್ಲಿ ಈ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲಿ ಸಿದ್ಧಗೊಂಡಿದೆ. 1997ರಲ್ಲಿ ರಿಲಯನ್ಸ್ ಜಾಮ್‌ಗರದಲ್ಲಿ ವಿಶ್ವದ ಅತಿದೊಡ್ಡ ಸಂಸ್ಕರಣಾ ಕಾಂಪ್ಲೆಕ್ಸ್ ನಿರ್ಮಾಣ ಮಾಡಿದೆ. ಈ ಪ್ರದೇಶದಲ್ಲಿ 1 ಕೋಟಿಗೂ ಅಧಿಕ ಸಸಿಗಳನ್ನು ನೆಟ್ಟು ಪೋಷಿಸಿದೆ.

ವಿಭಾಗ