UPI transactions: ಫೆಬ್ರವರಿ 1ರಿಂದ ನಿಮ್ಮ ಯುಪಿಐ ಐಡಿ ಹೀಗಿದ್ರೆ ಹಣ ವರ್ಗಾವಣೆಯಾಗದು, ಎನ್‌ಪಿಸಿಐ ಸುತ್ತೋಲೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Upi Transactions: ಫೆಬ್ರವರಿ 1ರಿಂದ ನಿಮ್ಮ ಯುಪಿಐ ಐಡಿ ಹೀಗಿದ್ರೆ ಹಣ ವರ್ಗಾವಣೆಯಾಗದು, ಎನ್‌ಪಿಸಿಐ ಸುತ್ತೋಲೆ

UPI transactions: ಫೆಬ್ರವರಿ 1ರಿಂದ ನಿಮ್ಮ ಯುಪಿಐ ಐಡಿ ಹೀಗಿದ್ರೆ ಹಣ ವರ್ಗಾವಣೆಯಾಗದು, ಎನ್‌ಪಿಸಿಐ ಸುತ್ತೋಲೆ

ಫೆಬ್ರವರಿ 1ರಿಂದ ಯುಪಿಐ ಐಡಿ ಮೂಲಕ ಮಾಡುವ ಹಣ ವರ್ಗಾವಣೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಎಲ್ಲಾದರೂ ನಿಮ್ಮ ಯುಪಿಐ ಐಡಿಯಲ್ಲಿ ಸ್ಪೆಷಲ್‌ ಕ್ಯಾರೆಕ್ಟರ್‌ಗಳು ಇದ್ದರೆ ಹಣ ಪಾವತಿಯಾಗದು ಎಂದು ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ)ವು ತನ್ನ ಸುತ್ತೊಲೆಯಲ್ಲಿ ತಿಳಿಸಿದೆ.

UPI transactions: ಫೆಬ್ರವರಿ 1ರಿಂದ ನಿಮ್ಮ ಯುಪಿಐ ಐಡಿ ಹೀಗಿದ್ರೆ ಹಣ ವರ್ಗಾವಣೆಯಾಗದು
UPI transactions: ಫೆಬ್ರವರಿ 1ರಿಂದ ನಿಮ್ಮ ಯುಪಿಐ ಐಡಿ ಹೀಗಿದ್ರೆ ಹಣ ವರ್ಗಾವಣೆಯಾಗದು

ಬೆಂಗಳೂರು: ಈಗಿನ ಡಿಜಿಟಲ್‌ ಇಂಡಿಯಾ ಕಾಲದಲ್ಲಿ ನೀವು ಈಗ ಎಟಿಎಂನಿಂದ ಹಣ ತೆಗೆಯುವುದು ಅಪರೂಪವಾಗಿರಬಹುದು. ಹಾಲು, ತರಕಾರಿ, ದಿನಸಿ, ರಿಚಾರ್ಜ್‌, ಟ್ಯಾಕ್ಸಿ, ಶಾಪಿಂಗ್‌ ಸೇರಿದಂತೆ ಪ್ರತಿದಿನ ಎಲ್ಲಾ ವ್ಯವಹಾರಕ್ಕೂ ಗೂಗಲ್‌ ಪೇ, ಫೋನ್‌ ಪೇ, ಭೀಮ್‌, ಪೇಟಿಎಂ ಇತ್ಯಾದಿಗಳನ್ನು ಬಳಸುತ್ತಿರಬಹುದು. ನೀವು ಮಾಡುವ ಪ್ರತಿಯೊಂದು ಯುಪಿಐ ಹಣ ವರ್ಗಾವಣೆಯಲ್ಲಿಯೂ ಒಂದು ವಹಿವಾಟು ಐಡಿ ದೊರಕುತ್ತದೆ. ಈ ಐಡಿಯು ಕೆಲವೊಮ್ಮೆ ಅಂಕೆಗಳನ್ನು, ಅಕ್ಷರಗಳನ್ನು ಹೊಂದಿರುತ್ತದೆ. ಕೆಲವೊಮ್ಮೆ ವಿಶೇಷ ಅಕ್ಷರಗಳನ್ನು (ಸ್ಪೆಷಲ್‌ ಕ್ಯಾರೆಕ್ಟರ್‌) ಹೊಂದಿರುತ್ತವೆ.

ಫೆಬ್ರವರಿ 1ರಿಂದ ವಿಶೇಷ ಅಕ್ಷರಗಳನ್ನು ಹೊಂದಿರುವ ಎಲ್ಲಾ ಯುಪಿಐ ವಹಿವಾಟುಗಳನ್ನು ನಿರಾಕರಿಸಲಾಗುತ್ತದೆ ಎಂದು ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (ಎನ್‌ಪಿಸಿಐ) ತನ್ನ ಸುತ್ತೊಲೆಯಲ್ಲಿ ತಿಳಿಸಿದೆ.

ಆಲ್ಫಾನ್ಯೂಮರಿಕ್ ಐಡಿಗಳು ಮಾತ್ರ

ಜನವರಿ 9ರ ಸುತ್ತೋಲೆಯಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಯುಪಿಐ ಐಡಿಗಳಲ್ಲಿ ಆಲ್ಫಾನ್ಯೂಮರಿಕ್ ಅಕ್ಷರಗಳನ್ನು ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಇದು ಯುಪಿಐ ಹಣ ವರ್ಗಾವಣೆಗೆ ಸಂಬಂಧಪಟ್ಟ ತಾಂತ್ರಿಕ ವಿಭಾಗದವರು ಮಾಡಬೇಕಾಗಿರುವ ಕೆಲಸ. ಬಳಕೆದಾರರಿಗೆ ಇದರಲ್ಲಿ ಯಾವುದೇ ಕೆಲಸ ಇರುವುದಿಲ್ಲ. ಹೀಗಿದ್ದರೂ ನೀವು ಬಳಸುವ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಇನ್ನೂ ಇದು ಕಾರ್ಯರೂಪಕ್ಕೆ ಬಾರದೆ ಇದ್ದರೆ ನಿರ್ದಿಷ್ಟ ಖಾತೆಯಿಂದ ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಾಗದು.

ವಿಶೇಷ ಅಕ್ಷರಗಳ ಐಡಿ ಹೊಂದಿರುವ ಯಾವುದೇ ವಹಿವಾಟನ್ನು ಕೇಂದ್ರ ವ್ಯವಸ್ಥೆಯು ನಿರಾಕರಿಸುತ್ತದೆ. ಭಾಗವಹಿಸುವ ಎಲ್ಲಾ ಯುಪಿಐ ಪ್ಲಾಟ್‌ಫಾರ್ಮ್‌ಗಳು ಇದನ್ನು ಗಮನಿಸಬೇಕು ಎಂದು ಸೂಚಿಸಲಾಗಿದೆ.

ಗಮನಾರ್ಹವಾಗಿ ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ 2016ರಲ್ಲಿ ನೋಟು ರದ್ದತಿಯ ನಂತರ ಯುಪಿಐ ಮೂಲಕ ಮಾಡುವ ಪಾವತಿಯು ಹೆಚ್ಚಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಡಿಸೆಂಬರ್‌ 2024ರಲ್ಲಿ ಯುಪಿಐ ವಹಿವಾಟು 16.73 ಶತಕೋಟಿ ಯೂನಿಟ್‌ಗೆ ತಲುಪಿದೆ. ನವೆಂಬರ್‌ ತಿಂಗಳಿಗೆ ಹೋಲಿಸಿದರೆ ಇದು ಶೇಕಡ 8ರಷ್ಟು ಹೆಚ್ಚಾಗಿದೆ. ಯುಪಿಐ ಮೂಲಕ ಹಣದ ವಹಿವಾಟನ್ನು ಮೌಲ್ಯದ ಲೆಕ್ಕದಲ್ಲಿ ನೋಡುವುದಾದರೆ, ಡಿಸೆಂಬರ್‌ನಲ್ಲಿ 23.25 ಲಕ್ಷ ಕೋಟಿ ರೂಪಾಯಿ ಹಣದ ವಹಿವಾಟು ಯುಪಿಐ ಮೂಲಕ ಆಗಿದೆ. 2024ರ ನವೆಂಬರ್‌ನಲ್ಲಿ 21.55 ಲಕ್ಷ ಕೋಟಿ ರೂಪಾಯಿಗೆ ಹೋಲಿಸಿದರೆ ಇದು ಗಮನಾರ್ಹ ಏರಿಕೆಯಾಗಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.