ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಈ ಕಂಪನಿಯ ಷೇರು ಇಂದು ಶೇಕಡ 18 ಏರಿತು, ವರ್ಷದಿಂದ ವರ್ಷಕ್ಕೆ ಷೇರು ಮೌಲ್ಯ ಶೇ 120 ವೃದ್ಧಿ

ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಈ ಕಂಪನಿಯ ಷೇರು ಇಂದು ಶೇಕಡ 18 ಏರಿತು, ವರ್ಷದಿಂದ ವರ್ಷಕ್ಕೆ ಷೇರು ಮೌಲ್ಯ ಶೇ 120 ವೃದ್ಧಿ

GRSE Share Price: ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಈ ಕಂಪನಿಯ ಷೇರು ಇಂದು ಶೇಕಡ 18 ಏರಿತು. ವರ್ಷದಿಂದ ವರ್ಷಕ್ಕೆ ಷೇರು ಮೌಲ್ಯ ಶೇ 120 ವೃದ್ಧಿಯಾಗಿದ್ದು, 2023ರ ಜುಲೈನಲ್ಲಿ ಇದರ ಬೆಲೆ 558.60 ರೂಪಾಯಿ ಇತ್ತು. ಈ ಷೇರು ಇನ್ನು ಕೂಡ ಬುಲ್ಲಿಷ್ ಆಗಿಯೇ ಇದೆ. ಸರಳವಾಗಿ ಹೇಳಬೇಕು ಎಂದರೆ ಏರುಗತಿಯಲ್ಲಿದೆ. ಇದರ ವಿವರ ಇಲ್ಲಿದೆ.

ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಈ ಕಂಪನಿಯ ಷೇರು ಇಂದು ಶೇಕಡ 18 ಏರಿತು, ವರ್ಷದಿಂದ ವರ್ಷಕ್ಕೆ ಷೇರು ಮೌಲ್ಯ ಶೇ 120 ವೃದ್ಧಿ (ಸಾಂಕೇತಿಕ ಚಿತ್ರ)
ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಈ ಕಂಪನಿಯ ಷೇರು ಇಂದು ಶೇಕಡ 18 ಏರಿತು, ವರ್ಷದಿಂದ ವರ್ಷಕ್ಕೆ ಷೇರು ಮೌಲ್ಯ ಶೇ 120 ವೃದ್ಧಿ (ಸಾಂಕೇತಿಕ ಚಿತ್ರ)

ಮುಂಬಯಿ: ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಎಂಜಿನಿಯರ್ಸ್ ಲಿಮಿಟೆಡ್ ನ ಷೇರುಗಳ ಖರೀದಿ ಭರಾಟೆ ಜೋರಾಗಿದೆ. ಈ ವಾರದ ಎರಡನೇ ವಹಿವಾಟು ದಿನವಾದ ಇಂದು (ಜೂನ್ 25), ಷೇರು ಸುಮಾರು 18 ಪ್ರತಿಶತದಷ್ಟು ಏರಿಕೆಯಾಗಿ ಷೇರು ದರ 2,065.25 ರೂಪಾಯಿ ಮಟ್ಟವನ್ನು ತಲುಪಿದೆ. ಇದು ಈ ಷೇರುಮೌಲ್ಯದ 52 ವಾರಗಳ ಗರಿಷ್ಠ ಮಟ್ಟವಾಗಿದೆ. ದಿನದ ವಹಿವಾಟಿನ ಕೊನೆಗೆ ಷೇರು ಮೌಲ್ಯ 1946.95 ರೂಪಾಯಿಯಲ್ಲಿ ವಹಿವಾಟು ಕೊನೆಗೊಳಿಸಿತು. ಹಿಂದಿನ ದಿನಕ್ಕಿಂತ ಶೇಕಡ 11.14 ಲಾಭವನ್ನು ತೋರಿಸಿದೆ.

2023ರ ಜುಲೈನಲ್ಲಿ ಈ ಷೇರು ಮೌಲ್ಯ 558.60 ರೂಪಾಯಿ ಇತ್ತು. ಇದು 52 ವಾರಗಳ ಕನಿಷ್ಠ ಮೌಲ್ಯವಾಗಿತ್ತು. ಈ ಸ್ಟಾಕ್ ವರ್ಷದಿಂದ ವರ್ಷಕ್ಕೆ (ವೈಟಿಡಿ) ಆಧಾರದ ಮೇಲೆ ಶೇಕಡಾ 120 ಕ್ಕಿಂತ ಹೆಚ್ಚು ಮಲ್ಟಿಬ್ಯಾಗರ್ ಆದಾಯವನ್ನು ನೀಡಿದೆ. ಆದಾಗ್ಯೂ, ತಜ್ಞರು ಈ ಸ್ಟಾಕ್ ಇನ್ನೂ ಬುಲಿಷ್ ಆಗಿದೆ ಎಂದು ಹೇಳುತ್ತಿದ್ದಾರೆ.

ಏರುಗತಿಯಲ್ಲಿದೆ ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಷೇರು ದರ

ರೆಲಿಗೇರ್ ಬ್ರೋಕಿಂಗ್‌ನ ಹಿರಿಯ ಉಪಾಧ್ಯಕ್ಷ (ಚಿಲ್ಲರೆ ಸಂಶೋಧನೆ) ರವಿ ಸಿಂಗ್ ಅವರು ಹೇಳುವ ಪ್ರಕಾರ, ಈ ಷೇರು 2,150 ರೂಪಾಯಿ ಮಟ್ಟವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಸ್ಟಾಪ್ ಲಾಸ್ ಅಥವಾ ನಷ್ಟದ ಮಿತಿಯನ್ನು 1,920 ರೂಪಾಯಿಗೆ ಇರಿಸಿಕೊಳ್ಳಿ. ಅಂದರೆ, ಅಲ್ಪಾವಧಿ ಹೂಡಿಕೆಯಲ್ಲಿ ಇದಕ್ಕಿಂತ ಕಡಿಮೆಗೆ ಹೋಗುವ ಸುಳಿವು ಸಿಕ್ಕಾಗ ಅದನ್ನು ಮಾರಾಟ ಮಾಡಿಬಿಡಬೇಕು.

ಟ್ರೆಂಡಿಂಗ್​ ಸುದ್ದಿ

ಆದಾಗ್ಯೂ, ಏಂಜೆಲ್ ಒನ್ ನ ತಾಂತ್ರಿಕ ಮತ್ತು ಉತ್ಪನ್ನಗಳ ಹಿರಿಯ ಸಂಶೋಧನಾ ವಿಶ್ಲೇಷಕ ಓಶೋ ಕೃಷ್ಣನ್, ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಕಂಪನಿಯು ಈ ಕ್ಯಾಲೆಂಡರ್ ವರ್ಷದಲ್ಲಿ ಬಲವಾದ ಕಾರ್ಯಕ್ಷಮತೆಯನ್ನು ತೋರಿಸಿದೆ. ಈ ಷೇರು ಪ್ರಸ್ತುತ ಅತಿಯಾಗಿ ಖರೀದಿಸಲ್ಪಡುವ ವಲಯದಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ, ಚಿಲ್ಲರೆ ಹೂಡಿಕೆದಾರರು ಎಚ್ಚರಿಕೆ ವಹಿಸಬೇಕಾದ್ದು ಅಗತ್ಯ. ಸರಿಯಾದ ಅಪಾಯ ನಿರ್ವಹಣೆಯೊಂದಿಗೆ ಈ ಸ್ಟಾಕ್ ಅನ್ನು ಖರೀದಿಸುವುದಕ್ಕೆ ಮುಂದಾಗಬಹುದು. ಅದೇ ಸಮಯದಲ್ಲಿ, ಆನಂದ್ ರಥಿ ಷೇರುಗಳು ಮತ್ತು ಸ್ಟಾಕ್ ಬ್ರೋಕರ್ಸ್ನ ಜಿಗರ್ ಎಸ್ ಪಟೇಲ್ ಅವರು, ಈ ಷೇರಿನ ಕನಿಷ್ಠ ಬೆಂಬಲ 1,900 ರೂಪಾಯಿ ಮತ್ತು ಗರಿಷ್ಠ 2,100 ರೂಪಾಯಿ ಎಂದು ಹೇಳಿದ್ದಾರೆ.

ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಮತ್ತು ಜಮರ್ನಿ ಕಂಪನಿ ಒಪ್ಪಂದ

ಇತ್ತೀಚೆಗೆ, ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ ಕಂಪನಿಯು ಜರ್ಮನಿ ಮೂಲದ ಹಡಗು ಕಂಪನಿಯೊಂದಿಗೆ ಶನಿವಾರ (ಜೂನ 22) ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದವು ನಾಲ್ಕು ಬಹು-ಪಾತ್ರ ಸರಕು ಹಡಗುಗಳ ನಿರ್ಮಾಣ ಮತ್ತು ಪೂರೈಕೆಗೆ ಸಂಬಂಧಿಸಿದೆ. ಒಪ್ಪಂದವು ಸುಮಾರು 54 ಮಿಲಿಯನ್ ಡಾಲರ್ ಮೌಲ್ಯದ್ದಾಗಿದೆ ಮತ್ತು 33 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಹಡಗುಗಳು 120 ಮೀಟರ್ ಉದ್ದ ಮತ್ತು 17 ಮೀಟರ್ ಅಗಲವಿದ್ದು, ಪ್ರತಿ ಹಡಗು 7,500 ಟನ್ ಸರಕುಗಳನ್ನು ಸಾಗಿಸಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಲೈವ್ ಹಿಂದೂಸ್ತಾನ್ ವರದಿ ಮಾಡಿದೆ.

ಗಾರ್ಡನ್ ರೀಚ್ ಶಿಪ್ ಬಿಲ್ಡರ್ಸ್ & ಎಂಜಿನಿಯರ್ಸ್ ರಕ್ಷಣಾ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಯುದ್ಧನೌಕೆ ನಿರ್ಮಾಣ ಕಂಪನಿಯಾಗಿದೆ. 2024 ರ ಮಾರ್ಚ್ ಹೊತ್ತಿಗೆ, ಸರ್ಕಾರವು ಕಂಪನಿಯಲ್ಲಿ ಶೇಕಡಾ 74.50 ರಷ್ಟು ಪಾಲನ್ನು ಹೊಂದಿತ್ತು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.