Gold Silver Price: ಚಿನ್ನಾಭರಣ ಖರೀದಿಸಲು ಶುಕ್ರವಾರ ಸುದಿನ; ಇಂದು ಚಿನ್ನದ ದರ ಸ್ಥಿರ, ಇಳಿಕೆ ಕಂಡ ಬೆಳ್ಳಿ ದರ
ಗಣೇಶ ಚತುರ್ಥಿ ಸಮೀಪದಲ್ಲಿದ್ದು, ಚಿನ್ನ, ಬೆಳ್ಳಿ ಖರೀದಿಸುವ ಯೋಚನೆ ಮಾಡಿದ್ದವರಿಗೆ ಶುಕ್ರವಾರ ಸುದಿನ. ಇಂದು ಚಿನ್ನದ ದರ ಸ್ಥಿರವಾಗಿದ್ದು, ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಇಂದು 1 ಗ್ರಾಂ ಚಿನ್ನದ ದರ 5,450 ಇದ್ದರೆ, ಬೆಳ್ಳಿ ಗ್ರಾಂಗೆ 72 ರೂ. ಆಗಿದೆ.
ಬೆಂಗಳೂರು: ಹಬ್ಬದ ದಿನಗಳು ಸಮೀಪ ಬಂದಾಗ ಚಿನ್ನ, ಬೆಳ್ಳಿ ಖರೀದಿ ಮಾಡುವುದು ಸಾಮಾನ್ಯ. ಆದರೆ ಇತ್ತೀಚಿನ ವರ್ಷಗಳಲ್ಲಿ ಚಿನ್ನದ ದರದಲ್ಲಿನ ಸತತ ಏರಿಕೆ ಚಿನ್ನ ಖರೀದಿಗೆ ಕೊಂಚ ತಡೆ ಹಾಕಿದೆ ಅಂತಲೇ ಹೇಳಬಹುದು. ಇದೀಗ ಗಣೇಶ ಚತುರ್ಥಿ ಹಬ್ಬ ಸಮೀಪದಲ್ಲಿದ್ದು ಚಿನ್ನ, ಬೆಳ್ಳಿ ಖರೀದಿಗೆ ಮನಸ್ಸು ಮಾಡಿದ್ದರೆ ಖಂಡಿತ ನಿಮಗೆ ಶುಭಸುದ್ದಿ ಇದೆ. ಕಳೆದ ಕೆಲವು ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಸ್ಥಿರವಾಗಿದೆ, ಬೆಳ್ಳಿ ದರ ಇಳಿಮುಖವಾಗಿದೆ. ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ದೇಶದ ವಿವಿಧ ರಾಜ್ಯಗಳ ಚಿನ್ನದ ದರ ಹೀಗಿದೆ.
ಟ್ರೆಂಡಿಂಗ್ ಸುದ್ದಿ
22 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,450 ರೂ ಇದೆ. 8 ಗ್ರಾಂ ಚಿನ್ನದ ದರ 43,600 ರೂ. ಇದೆ. ಇಂದು 10 ಗ್ರಾಂ ಚಿನ್ನಕ್ಕೆ 54,500 ಆಗಿದ್ದು, 100 ಗ್ರಾಂ ಚಿನ್ನದ ದರ 5,45,000 ರೂ. ಆಗಿದೆ.
24 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 5,945 ರೂ. ಇದೆ. 8 ಗ್ರಾಂ ಚಿನ್ನದ ದರ ಇಂದು 47,560 ರೂ. ಆಗಿದೆ. ಇಂದು 10 ಗ್ರಾಂ ಚಿನ್ನ ಖರೀದಿಸುವುದಾದರೆ 59,450 ರೂ. ನೀಡಬೇಕು. ಇಂದು 100 ಗ್ರಾಂ ಚಿನ್ನದ ದರ 5,94,500 ರೂ. ಇದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ
10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 54,500 ರೂ. ಇದೆ. ಮಂಗಳೂರು 54,500 ರೂ., ಮೈಸೂರಿನಲ್ಲಿ 54,500 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 54,800 ರೂ., ಮುಂಬೈನಲ್ಲಿ 54,500 ರೂ., ದೆಹಲಿಯಲ್ಲಿ 54,650 ರೂ., ಕೋಲ್ಕತಾದಲ್ಲಿ 54,500 ರೂ., ಹೈದರಾಬಾದ್ 54,500 ರೂ., ಕೇರಳ 54,500 ರೂ., ಪುಣೆ 54,500 ರೂ., ಅಹಮದಾಬಾದ್ 54,550 ರೂ., ಜೈಪುರ 54,650 ರೂ., ಲಖನೌ 54,650 ರೂ., ಕೊಯಮತ್ತೂರು 54,800 ರೂ., ಮಧುರೈ 54,800 ರೂ. ಹಾಗೂ ವಿಜಯವಾಡ 54,500 ರೂ., ಇದೆ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 59,780 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 59,450 ರೂ., ಮುಂಬೈನಲ್ಲಿ 59,600 ರೂ., ದೆಹಲಿಯಲ್ಲಿ 59,600 ರೂ., ಕೋಲ್ಕತಾದಲ್ಲಿ 59,450 ರೂ., ಹೈದರಾಬಾದ್ 59,450 ರೂ., ಕೇರಳ 59,450 ರೂ., ಪುಣೆ 59,450 ರೂ., ಅಹಮದಾಬಾದ್ 59,500 ರೂ., ಜೈಪುರ 59,600 ರೂ., ಲಖನೌ 59,600 ರೂ., ಕೊಯಮುತ್ತೂರು 59,780 ರೂ., ಮದುರೈ 59,780, ವಿಜಯವಾಡ 59,450 ರೂ. ಇದೆ.
ಬೆಳ್ಳಿ ದರದ ವಿವರ
ಇಂದು ಒಂದು ಗ್ರಾಂ ಬೆಳ್ಳಿಗೆ 72 ರೂ. ಇದೆ. ನಿನ್ನೆ 73 ರೂ. ಇದ್ದು ನಿನ್ನೆಗೆ ಹೋಲಿಸಿದರೆ ಇಂದು 1 ರೂ. ಕಡಿಮೆಯಾಗಿದೆ. ಇಂದು 8 ಗ್ರಾಂ ಬೆಳ್ಳಿ ದರ 576 ರೂ. ಆಗಿದೆ. ನಿನ್ನೆ 584 ರೂ. ಇದ್ದು, ನಿನ್ನೆಗಿಂತ ಇಂದು 8 ರೂ ಇಳಿಕೆಯಾಗಿದೆ. 10ಗ್ರಾಂ ಬೆಳ್ಳಿಗೆ ಇಂದು 720ರೂ. ನೀಡಬೇಕು, ನಿನ್ನೆ 730 ರೂ. ದರವಿದ್ದು, ಈ ದರಕ್ಕೆ ಹೋಲಿಸಿದರೆ ಇಂದು 10 ರೂ. ಇಳಿಕೆಯಾಗಿದೆ. 100 ಗ್ರಾಂ ಬೆಳ್ಳಿಯ ಇಂದಿನ ದರ 7,200 ರೂ, ನಿನ್ನೆ 7,300 ರೂ. ಇತ್ತು, ಈ ದರಕ್ಕೆ ಹೋಲಿಸಿದರೆ ಇಂದು 100 ಇಳಿಕೆ ಕಂಡಿದೆ. ಇಂದು 1 ಕೆಜಿ ಬೆಳ್ಳಿಗೆ 72,000 ರೂ. ನೀಡಬೇಕು, ನಿನ್ನೆ 73,000 ರೂ. ಇತ್ತು. ನಿನ್ನೆಗಿಂತ ಇಂದು 1,000 ರೂ ಕಡಿಮೆಯಾಗಿದೆ.
ವಿಭಾಗ