Gold Silver Price: ಚೌತಿಗೂ ಮುನ್ನ ದುಬಾರಿಯಾದ ಚಿನ್ನಾಭರಣ ಬೆಲೆ; ಇಂದು ಏರಿಕೆ ಕಂಡ ಚಿನ್ನ, ಬೆಳ್ಳಿ ದರ
ಕಳೆದೊಂದು ವಾರದಿಂದ ಇಳಿಮುಖವಾಗಿದ್ದ ಚಿನ್ನ, ಬೆಳ್ಳಿ ದರ ಇಂದು ಏರಿಕೆಯಾಗಿದೆ. ಚೌತಿಯ ಸಮಯದಲ್ಲಿ ಚಿನ್ನಾಭರಣ ಖರೀದಿಸುವ ಯೋಚನೆ ಮಾಡಿದವರಿಗೆ ಇದು ಕಹಿಸುದ್ದಿ. ಇಂದಿನ ಚಿನ್ನ ಹಾಗೂ ಬೆಳ್ಳಿ ದರ ತಿಳಿಯಿರಿ.
ಬೆಂಗಳೂರು: ಹಬ್ಬದ ದಿನಗಳ ಸಂದರ್ಭದಲ್ಲಿ ಚಿನ್ನದ ಬೆಲೆ ಏರಿಕೆಯಾಗುವುದು ಸಹಜ. ಇದಕ್ಕೆ ಪುಷ್ಠಿ ನೀಡುವಂತೆ ಕಳೆದ ಒಂದು ವಾರಗಳಿಂದ ಇಳಿಕೆ ಕಂಡಿದ್ದ ಚಿನ್ನ ಹಾಗೂ ಬೆಳ್ಳಿ ದರ ಇಂದು ಏರಿಕೆ ಕಂಡಿದೆ. ವಾರಾಂತ್ಯ ಹಾಗೂ ಚೌತಿ ಸಂಭ್ರಮದಲ್ಲಿರುವವರಿಗೆ ಚಿನ್ನದ ದರದ ಏರಿಕೆ ಶಾಕ್ ನೀಡಿದೆ. ಹಬ್ಬಕ್ಕೆ ಬೆಳ್ಳಿ ವಸ್ತುಗಳನ್ನು ಖರೀದಿ ಮಾಡಬೇಕು ಎಂದುಕೊಂಡಿರುವವರಿಗೂ ಇದು ಶಾಕಿಂಗ್ ನ್ಯೂಸ್ ಆಗಿದೆ. ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ದೇಶದ ವಿವಿಧ ರಾಜ್ಯಗಳ ಇಂದಿನ ಚಿನ್ನ ಹಾಗೂ ಬೆಳ್ಳಿ ದರವನ್ನು ತಿಳಿಯಿರಿ.
22 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,470 ರೂ ಆಗಿದೆ. ನಿನ್ನೆ 5,450 ರೂ. ಇತ್ತು. ಇಂದು 20 ರೂ. ಏರಿಕೆ ಕಂಡಿದೆ. ಇಂದಿನ 8 ಗ್ರಾಂ ಚಿನ್ನದ ದರ 43,760 ರೂ. ಇದೆ. ನಿನ್ನೆ 43,600 ರೂ. ಇದು ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 160 ರೂ ಏರಿಕೆಯಾಗಿದೆ. 10 ಗ್ರಾ ಚಿನ್ನ ಖರೀದಿಸುವುದಾದರೆ ಇಂದು 54,700 ರೂ. ನೀಡಬೇಕು. ನಿನ್ನೆ 10 ಗ್ರಾಂ ಚಿನ್ನದ ದರ 54,500 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 200 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಇಂದಿನ ಬೆಲೆ 5,47,000 ರೂ. ನಿನ್ನೆ 5,45,000 ರೂ. ಇತ್ತು. ನಿನ್ನೆಗಿಂತ ಇಂದು 2000 ರೂ. ಏರಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 5,967 ರೂ. ಇದೆ. ನಿನ್ನೆ 5,945 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 22 ರೂ. ಏರಿಕೆ ಕಂಡಿದೆ. ಇಂದಿನ 8 ಗ್ರಾಂ ಚಿನ್ನದ ದರ 47,736 ರೂ, ನಿನ್ನೆ 47,560 ರೂ. ಇದ್ದು, ನಿನ್ನೆಗೆ ಹೋಲಿಸಿದರೆ ಇಂದು 176 ರೂ. ಏರಿಕೆಯಾಗಿದೆ. ಇಂದಿನ 10 ಗ್ರಾಂ ಚಿನ್ನದ ದರ 59,670 ರೂ. ಇದೆ. ನಿನ್ನೆ 59,450 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 200 ರೂ. ಏರಿಕೆಯಾಗಿದೆ. ಇಂದಿನ 100 ಗ್ರಾಂ ಚಿನ್ನದ ದರ 5,96,700 ರೂ ಆಗಿದೆ. ನಿನ್ನೆ ಈ ದರ 5,94,500 ರೂ ಇತ್ತು, ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 2,200 ರೂ ಏರಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ
10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 54,700 ರೂ. ಇದೆ. ಮಂಗಳೂರು 54,700 ರೂ., ಮೈಸೂರಿನಲ್ಲಿ 54,700 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,000 ರೂ., ಮುಂಬೈನಲ್ಲಿ 54,700 ರೂ., ದೆಹಲಿಯಲ್ಲಿ 54,850 ರೂ., ಕೋಲ್ಕತಾದಲ್ಲಿ 54,700 ರೂ., ಹೈದರಾಬಾದ್ 54,700 ರೂ., ಕೇರಳ 54,700 ರೂ., ಪುಣೆ 54,700 ರೂ., ಅಹಮದಾಬಾದ್ 54,750 ರೂ., ಜೈಪುರ 54,850 ರೂ., ಲಖನೌ 54,850 ರೂ., ಕೊಯಮತ್ತೂರು 55,000 ರೂ., ಮಧುರೈ 55,000 ರೂ. ಹಾಗೂ ವಿಜಯವಾಡ 54,700 ರೂ., ಇದೆ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 59,670 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,000 ರೂ., ಮುಂಬೈನಲ್ಲಿ 59,670 ರೂ., ದೆಹಲಿಯಲ್ಲಿ 59,820 ರೂ., ಕೋಲ್ಕತಾದಲ್ಲಿ 59,670 ರೂ., ಹೈದರಾಬಾದ್ 59,670 ರೂ., ಕೇರಳ 59,670 ರೂ., ಪುಣೆ 59,670 ರೂ., ಅಹಮದಾಬಾದ್ 59,720 ರೂ., ಜೈಪುರ 59,820 ರೂ., ಲಖನೌ 59,820 ರೂ., ಕೊಯಮುತ್ತೂರು 60,000 ರೂ., ಮದುರೈ 60,000, ವಿಜಯವಾಡ 59,670 ರೂ. ಇದೆ.
ಇಂದಿನ ಬೆಳ್ಳಿ ದರ
ಇಂದು ಬೆಳ್ಳಿ ದರದಲ್ಲೂ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ ಇಂದಿನ ದರ 73.50 ಇದೆ, ನಿನ್ನೆ 72 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 1.50 ರೂ. ಏರಿಕೆಯಾಗಿದೆ. ಇಂದು 8 ಗ್ರಾಂ ಚಿನ್ನದ ದರ 588 ರೂ. ಇದೆ. ನಿನ್ನೆ 576 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 12 ರೂ ಏರಿಕೆಯಾಗಿದೆ. ಇಂದು 10 ಗ್ರಾಂ ಬೆಳ್ಳಿ ದರ 735 ರೂ, ಇದೆ. ನಿನ್ನೆ ಈ ದರ 720 ರೂ. ಇತ್ತು, ಈ ದರಕ್ಕೆ ಹೋಲಿಸಿದರೆ ಇಂದು 15 ರೂ. ಏರಿಕೆ ಕಂಡಿದೆ. ಇಂದು 100 ಗ್ರಾಂ ಚಿನ್ನ ಖರೀದಿಸುವುದಾದರೆ 7,350 ರೂ ನೀಡಬೇಕು. ನಿನ್ನೆ ಈ ದರ 7,200 ರೂ ಇತ್ತು, ಇಂದು 150 ರೂ ಹೆಚ್ಚಾಗಿದೆ. ಇಂದು ಒಂದು ಕೆಜಿ ಬೆಳ್ಳಿ ದರ 73,500 ರೂ ಆಗಿದೆ. ನಿನ್ನೆ ಈ ದರ 72,000 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 1,500 ರೂ. ಏರಿಕೆ ಕಂಡಿದೆ.
ವಿಭಾಗ