ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Silver Price: ಭಾನುವಾರವೂ ಏರಿಕೆ ಕಂಡ ಚಿನ್ನದ ದರ; ಇಂದು ಬೆಳ್ಳಿ ದರ ಸ್ಥಿರ

Gold Silver Price: ಭಾನುವಾರವೂ ಏರಿಕೆ ಕಂಡ ಚಿನ್ನದ ದರ; ಇಂದು ಬೆಳ್ಳಿ ದರ ಸ್ಥಿರ

ಕಳೆದ ಕೆಲವು ದಿನಗಳಿಂದ ಕಡಿಮೆಯಾಗಿದ್ದ ಚಿನ್ನದ ದರ ಹಬ್ಬದ ದಿನಗಳು ಸಮೀಪಿಸುತ್ತಿದ್ದಂತೆ ಏರುಗತಿಯತ್ತ ಸಾಗುತ್ತಿದೆ. ಇಂದು ಒಂದು ಗ್ರಾಂ ಚಿನ್ನಕ್ಕೆ 5,490 ರೂ ಆಗಿದೆ. ಇಂದು ಬೆಳ್ಳಿ ದರ ಸ್ಥಿರವಾಗಿದ್ದು ನಿನ್ನೆಯ ದರವೇ ಮುಂದುವರಿದಿದೆ.

ಭಾನುವಾರವೂ ಏರಿಕೆ ಕಂಡ ಚಿನ್ನದ ದರ
ಭಾನುವಾರವೂ ಏರಿಕೆ ಕಂಡ ಚಿನ್ನದ ದರ (REUTERS)

ಬೆಂಗಳೂರು: ನಾಳೆ ಹಾಗೂ ನಾಡಿದ್ದು ಗಣೇಶ ಚತುರ್ಥಿ. ದೇಶದಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ. ಹಬ್ಬದ ತಯಾರಿಗಳು ಜೋರಾಗಿಯೇ ನಡೆದಿದೆ. ಈ ನಡುವೆ ಚಿನಿವಾರ ಪೇಟೆಯಲ್ಲಿ ದರ ಏರಿಕೆಯ ಅಬ್ಬರವೂ ಜೋರಾಗಿದೆ. ನಿನ್ನೆಯು ಚಿನ್ನದ ದರದಲ್ಲಿ ಏರಿಕೆಯಾಗಿದ್ದು, ಇಂದು ಕೂಡ ಚಿನ್ನದ ದರದಲ್ಲಿ ಹೆಚ್ಚಳವಾಗಿದೆ. ನಿನ್ನೆ ಬೆಳ್ಳಿ ದರ ಏರಿಕೆ ಕಂಡಿದ್ದರೆ, ಇಂದು ಬೆಳ್ಳಿ ದರ ಸ್ಥಿರವಾಗಿದೆ. ಭಾನುವಾರ ಚಿನ್ನ ಖರೀದಿಸುವ ಹೋಗುವ ಯೋಚನೆ ಇದ್ದರೆ ಅದಕ್ಕೂ ಮೊದಲು ಇಂದಿನ ದರ ಗಮನಿಸಿ. ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ದೇಶದ ಪ್ರಮುಖ ರಾಜ್ಯಗಳ ಇಂದಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ದರ

ಭಾನುವಾರ ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,490 ರೂ ಆಗಿದೆ. ನಿನ್ನೆ 5,470 ರೂ. ಇತ್ತು. ಇಂದು 20 ರೂ. ಏರಿಕೆ ಕಂಡಿದೆ. ಇಂದಿನ 8 ಗ್ರಾಂ ಚಿನ್ನದ ದರ 43,920 ರೂ. ಇದೆ. ನಿನ್ನೆ 43,760 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 160 ರೂ. ಏರಿಕೆಯಾಗಿದೆ. 10 ಗ್ರಾ ಚಿನ್ನ ಖರೀದಿಸುವುದಾದರೆ ಇಂದು 54,900 ರೂ. ನೀಡಬೇಕು. ನಿನ್ನೆ 10 ಗ್ರಾಂ ಚಿನ್ನದ ದರ 54,700 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 200 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಇಂದಿನ ಬೆಲೆ 5,49,000 ರೂ. ನಿನ್ನೆ 5,47,000 ರೂ. ಇತ್ತು. ನಿನ್ನೆಗಿಂತ ಇಂದು 2000 ರೂ. ಏರಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,989 ರೂ. ಆಗಿದೆ. ನಿನ್ನೆ 5,967 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 22 ರೂ. ಏರಿಕೆ ಕಂಡಿದೆ. ಇಂದಿನ 8 ಗ್ರಾಂ ಚಿನ್ನದ ದರ 47,912 ರೂ, ನಿನ್ನೆ 47,736 ರೂ. ಇದ್ದು, ನಿನ್ನೆಗೆ ಹೋಲಿಸಿದರೆ ಇಂದು 176 ರೂ. ಏರಿಕೆಯಾಗಿದೆ. ಇಂದಿನ 10 ಗ್ರಾಂ ಚಿನ್ನದ ದರ 59,890 ರೂ. ಇದೆ. ನಿನ್ನೆ 59,670 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 200 ರೂ. ಏರಿಕೆಯಾಗಿದೆ. ಇಂದಿನ 100 ಗ್ರಾಂ ಚಿನ್ನದ ದರ 5,98,900 ರೂ ಆಗಿದೆ. ನಿನ್ನೆ ಈ ದರ 5,96,700 ರೂ ಇತ್ತು, ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 2,200 ರೂ ಏರಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 54,900 ರೂ. ಇದೆ. ಮಂಗಳೂರು 54,900 ರೂ., ಮೈಸೂರಿನಲ್ಲಿ 54,900 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,300 ರೂ., ಮುಂಬೈನಲ್ಲಿ 54,900 ರೂ., ದೆಹಲಿಯಲ್ಲಿ 55,050 ರೂ., ಕೋಲ್ಕತಾದಲ್ಲಿ 54,900 ರೂ., ಹೈದರಾಬಾದ್‌ 54,900 ರೂ., ಕೇರಳ 54,900 ರೂ., ಪುಣೆ 54,900 ರೂ., ಅಹಮದಾಬಾದ್‌ 54,950 ರೂ., ಜೈಪುರ 55,050 ರೂ., ಲಖನೌ 55,050 ರೂ., ಕೊಯಮತ್ತೂರು 55,300 ರೂ., ಮದುರೈ 55,300 ರೂ. ಹಾಗೂ ವಿಜಯವಾಡ 54,900 ರೂ., ಇದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 59,890 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,320 ರೂ., ಮುಂಬೈನಲ್ಲಿ 59,890 ರೂ., ದೆಹಲಿಯಲ್ಲಿ 60,040 ರೂ., ಕೋಲ್ಕತಾದಲ್ಲಿ 59,890 ರೂ., ಹೈದರಾಬಾದ್‌ 59,890 ರೂ., ಕೇರಳ 59,890 ರೂ., ಪುಣೆ 59,890 ರೂ., ಅಹಮದಾಬಾದ್‌ 59,940 ರೂ., ಜೈಪುರ 60,040 ರೂ., ಲಖನೌ 59,040 ರೂ., ಕೊಯಮುತ್ತೂರು 60,320 ರೂ., ಮದುರೈ 60,320, ವಿಜಯವಾಡ 59,890 ರೂ. ಇದೆ.

ಇಂದಿನ ಬೆಳ್ಳಿ ದರ

ಇಂದು ಬೆಳ್ಳಿ ದರ ಸ್ಥಿರವಾಗಿದೆ. ಒಂದು ಗ್ರಾಂ ಬೆಳ್ಳಿಗೆ ಇಂದಿನ ದರ 73.50 ಇದೆ. ಇಂದು 8 ಗ್ರಾಂ ಚಿನ್ನದ ದರ 588 ರೂ. ಇದೆ. ಇಂದು 10 ಗ್ರಾಂ ಬೆಳ್ಳಿ ದರ 735 ರೂ, ಇದೆ. ಇಂದು 100 ಗ್ರಾಂ ಚಿನ್ನ ಖರೀದಿಸುವುದಾದರೆ 7,350 ರೂ ನೀಡಬೇಕು. ಇಂದು ಒಂದು ಕೆಜಿ ಬೆಳ್ಳಿ ದರ 73,500 ರೂ ಆಗಿದೆ.

IPL_Entry_Point

ವಿಭಾಗ