ಕನ್ನಡ ಸುದ್ದಿ  /  Nation And-world  /  Business News Gold And Silver Price Today Bengaluru Mangaluru Mysuru Karnataka Bullion Market News In Kannada Rst

Gold Silver Rate: ಚಿನ್ನದ ದರದಲ್ಲಿ ಮತ್ತೆ ಇಳಿಕೆ, ಬೆಳ್ಳಿ ದರ ಏರಿಕೆ; ಚಿನ್ನಾಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ದರ ಗಮನಿಸಿ

Gold And Silver Price Today: ಇಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ಜಿಲ್ಲೆಗಳಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗಿದೆ. ಬೆಳ್ಳಿ ದರ ಏರಿಕೆ ಕಂಡಿದೆ. ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,485 ರೂ. ಆಗಿದೆ. ಬೆಳ್ಳಿ ಇಂದು 1 ಗ್ರಾಂಗೆ 74.25 ರೂ ಆಗಿದೆ.

ಸೆಪ್ಟೆಂಬರ್‌ 23ರ ಚಿನ್ನ, ಬೆಳ್ಳಿ ದರ
ಸೆಪ್ಟೆಂಬರ್‌ 23ರ ಚಿನ್ನ, ಬೆಳ್ಳಿ ದರ

ಬೆಂಗಳೂರು: ನಿನ್ನೆಯಷ್ಟೇ (ಸೆಪ್ಟೆಂಬರ್‌ 22) ಚಿನ್ನದ ದರದಲ್ಲಿ ಇಳಿಕೆಯಾಗಿದ್ದು, ಚಿನ್ನಾಭರಣ ಪ್ರಿಯರಿಗೆ ಸಂತಸ ನೀಡಿತ್ತು. ಇಂದು ಕೂಡ ಚಿನ್ನದ ದರದಲ್ಲಿ ಮತ್ತೆ ಇಳಿಕೆ ಕಂಡಿದ್ದು, ವಾರಾಂತ್ಯದಲ್ಲಿ ಚಿನ್ನ ಖರೀದಿ ಮಾಡಲು ಬಯಸುವವರಿಗೆ ಖಂಡಿತ ನಿರಾಸೆ ಉಂಟಾಗದು. ಕಳೆದ ವಾರ ಪೂರ್ತಿ ಚಿನ್ನದ ದರ ಏರಿಕೆಯತ್ತ ಮುಖ ಮಾಡಿತ್ತು. ಇಂದು ಕರ್ನಾಟಕ ರಾಜ್ಯ ಸೇರಿದಂತೆ ದೇಶದ ವಿವಿಧ ಜಿಲ್ಲೆಗಳಲ್ಲೂ ಚಿನ್ನದ ದರದಲ್ಲಿ ಇಳಿಕೆಯಾಗಿದ್ದು, ಬೆಳ್ಳಿ ದರ ಏರಿಕೆ ಕಂಡಿದೆ. ದೇಶದ ವಿವಿಧ ರಾಜ್ಯಗಳ ಇಂದಿನ ಚಿನ್ನಾಭರಣ ದರ ತಿಳಿಯಿರಿ.

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,485 ರೂ. ಆಗಿದೆ. ನಿನ್ನೆಯ 5,505 ರೂ ದರಕ್ಕೆ ಹೋಲಿಸಿದರೆ ಇಂದು ರೂ., 20 ಇಳಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 43,880 ರೂ ಆಗಿದೆ. ನಿನ್ನೆ 44,040 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 160 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 54,850 ರೂ. ಇದೆ. ನಿನ್ನೆ 55,050 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 200 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,48,500 ರೂ. ನೀಡಬೇಕು. ನಿನ್ನೆಯ 5,50,500 ರೂ.ಗೆ ಹೋಲಿಸಿದರೆ ಇಂದು 2,000 ರೂ. ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,984 ರೂ. ಆಗಿದೆ. ನಿನ್ನೆಯ 6,005 ರೂ.ಗೆ ಹೋಲಿಸಿದರೆ 21 ರೂ. ಇಳಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,872 ರೂ. ನೀಡಬೇಕಾಗುತ್ತದೆ. ನಿನ್ನೆ 48,040 ರೂ. ಇತ್ತು. ಇಂದು 168 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,840 ರೂ. ಇದೆ. ನಿನ್ನೆಯ 60,050 ರೂ. ಗೆ ಹೋಲಿಸಿದರೆ 210 ರೂ. ಇಳಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,98,400 ರೂ. ನೀಡಬೇಕು. ನಿನ್ನೆಯ 6,00,500 ರೂ ಗೆ ಹೋಲಿಸಿದರೆ ಇಂದು 2, 100 ರೂ. ಇಳಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

ಇಂದಿನ ಬೆಳಗಿನ ಧಾರಣೆಯಂತೆ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 54,850 ರೂ. ಇದೆ. ಮಂಗಳೂರಿನಲ್ಲಿ 54,850 ರೂ., ಮೈಸೂರಿನಲ್ಲಿ 54,850 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,100 ರೂ., ಮುಂಬೈನಲ್ಲಿ 54,850 ರೂ., ದೆಹಲಿಯಲ್ಲಿ 55,000 ರೂ., ಕೋಲ್ಕತಾದಲ್ಲಿ 54,850 ರೂ., ಹೈದರಾಬಾದ್‌ 54,850 ರೂ., ಕೇರಳ 54,850 ರೂ., ಪುಣೆ 54,850 ರೂ., ಅಹಮದಾಬಾದ್‌ 54,900 ರೂ., ಜೈಪುರ 55,000 ರೂ. ಲಖನೌ 55,000 ರೂ., ಕೊಯಮುತ್ತೂರು 55,100 ರೂ., ಮಧುರೈ 55,100 ರೂ. ಹಾಗೂ ವಿಜಯವಾಡ 54,850 ರೂ., ಇದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 59,840 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,110 ರೂ., ಮುಂಬೈನಲ್ಲಿ 59,840 ರೂ., ದೆಹಲಿಯಲ್ಲಿ 59,940 ರೂ., ಕೋಲ್ಕತಾದಲ್ಲಿ 59,840 ರೂ., ಹೈದರಾಬಾದ್‌ 59,840 ರೂ., ಕೇರಳ 59,840 ರೂ., ಪುಣೆ 59,840 ರೂ., ಅಹಮದಾಬಾದ್‌ 59,890 ರೂ., ಜೈಪುರ 59,940 ರೂ., ಲಖನೌ 59,940 ರೂ., ಕೊಯಮುತ್ತೂರು 60,110 ರೂ., ಮದುರೈ 60,110, ವಿಜಯವಾಡ 59,840 ರೂ. ಇದೆ

ಇಂದು ಬೆಳ್ಳಿ ದರ ಏರಿಕೆ

ಇಂದು ಬೆಳ್ಳಿ ದರ ಏರಿಕೆ ಕಂಡಿದೆ. ಇಂದು 1 ಗ್ರಾಂ ಬೆಳ್ಳಿಗೆ 74.25 ರೂ. ಆಗಿದೆ. ನಿನ್ನೆಯ 74 ರೂ. ಇದೆ. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 0.25 ಪೈಸೆ ಏರಿಕೆಯಾಗಿದೆ. 8 ಗ್ರಾಂ ದರ ಇಂದು 594 ರೂ. ಆಗಿದೆ. ನಿನ್ನೆ 592 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 2 ರೂ. ಹೆಚ್ಚಾಗಿದೆ. ಇಂದಿನ 10 ಗ್ರಾಂ ಬೆಳ್ಳಿ ದರ 742.50 ಆಗಿದ್ದು, ನಿನ್ನೆ 740 ರೂ. ಇತ್ತು. ನಿನ್ನೆ ದರಕ್ಕೆ ಹೋಲಿಸಿದರೆ ಇಂದು 2.50 ರೂ. ಏರಿಕೆ ಕಂಡಿದೆ. 100ಗ್ರಾಂ ಬೆಳ್ಳಿಗೆ ಇಂದಿ 7,425 ರೂ ಇದೆ. ನಿನ್ನೆ 7,400 ರೂ ಇದ್ದು, ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 25 ರೂ. ಏರಿಕೆಯಾಗಿದೆ. 1ಕೆಜಿ ಬೆಳ್ಳಿ ದರ ಇಂದು 74,250 ರೂ. ಆಗಿದ್ದು, ನಿನ್ನೆ 74,000 ರೂ ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 250 ರೂ ಏರಿಕೆಯಾಗಿದೆ.

ವಿಭಾಗ