ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Silver Rate: ಆಭರಣ ಪ್ರಿಯರಿಗೆ ವಾರಾಂತ್ಯದಲ್ಲಿ ನಿರಾಸೆ; ಮತ್ತೆ ಏರಿಕೆ ಕಂಡ ಚಿನ್ನದ ದರ; ಬೆಳ್ಳಿ ದರ ಸ್ಥಿರ

Gold Silver Rate: ಆಭರಣ ಪ್ರಿಯರಿಗೆ ವಾರಾಂತ್ಯದಲ್ಲಿ ನಿರಾಸೆ; ಮತ್ತೆ ಏರಿಕೆ ಕಂಡ ಚಿನ್ನದ ದರ; ಬೆಳ್ಳಿ ದರ ಸ್ಥಿರ

Gold And Silver Price Today: ಕಳೆದ ಎರಡು ದಿನಗಳಿಂದ ಇಳಿಕೆ ಕಂಡು ಆಭರಣ ಪ್ರಿಯರಲ್ಲಿ ಸಂತಸಕ್ಕೆ ಕಾರಣವಾಗಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆ ಕಂಡಿದೆ. ಬೆಳ್ಳಿ ದರ ಸ್ಥಿರವಾಗಿದೆ. ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,495 ರೂ ಆಗಿದೆ.

ಸೆಪ್ಟೆಂಬರ್‌ 24ರ ಚಿನ್ನದ ದರ
ಸೆಪ್ಟೆಂಬರ್‌ 24ರ ಚಿನ್ನದ ದರ (PTI)

ಬೆಂಗಳೂರು: ವಾರಾಂತ್ಯದ ಭಾನುವಾರ ಚಿನ್ನ ಖರೀದಿ ಮಾಡೋಣ ಎಂದು ಯೋಚಿಸಿದವರಿಗೆ ಇಂದು ನಿರಾಸೆ ಕಾಡಬಹುದು. ಕಳೆದ ಎರಡು ದಿನಗಳಿಂದ ಚಿನ್ನದ ದರದಲ್ಲಿ ಇಳಿಕೆಯಾಗಿದ್ದು, ಭಾನುವಾರ ಮತ್ತೆ ಏರಿಕೆ ಕಂಡಿದೆ. ಇದರಿಂದ ಇಂದು ಚಿನ್ನ ಖರೀದಿ ಮಾಡಬೇಕು ಎಂದು ಯೋಚಿಸಿದವರಿಗೆ ಬೇಸರವಾಗಬಹುದು. ಇಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ಜಿಲ್ಲೆಗಳಲ್ಲೂ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಬೆಳ್ಳಿ ದರ ಸ್ಥಿರವಾಗಿದೆ. ದೇಶದ ವಿವಿಧ ರಾಜ್ಯಗಳ ಇಂದಿನ ಚಿನ್ನ, ಬೆಳ್ಳಿ ದರ ಹೀಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,495 ರೂ. ಆಗಿದೆ. ನಿನ್ನೆಯ 5,485 ರೂ ದರಕ್ಕೆ ಹೋಲಿಸಿದರೆ ಇಂದು ರೂ., 10 ಏರಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 43,960 ರೂ ಆಗಿದೆ. ನಿನ್ನೆ 43,880 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 80 ರೂ., ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 54,950 ರೂ. ಇದೆ. ನಿನ್ನೆ 54,850 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 100 ರೂ. ಏರಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,49,500 ರೂ. ನೀಡಬೇಕು. ನಿನ್ನೆಯ 5,48,500 ರೂ.ಗೆ ಹೋಲಿಸಿದರೆ ಇಂದು 1,000 ರೂ. ಏರಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,995 ರೂ. ಆಗಿದೆ. ನಿನ್ನೆಯ 5,984 ರೂ.ಗೆ ಹೋಲಿಸಿದರೆ 11 ರೂ. ಏರಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,960 ರೂ. ನೀಡಬೇಕಾಗುತ್ತದೆ. ನಿನ್ನೆ 47,872 ರೂ. ಇತ್ತು. ಇಂದು 88 ರೂ., ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,950 ರೂ. ಇದೆ. ನಿನ್ನೆಯ 59,840 ರೂ. ಗೆ ಹೋಲಿಸಿದರೆ 110 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,99,500 ರೂ. ನೀಡಬೇಕು. ನಿನ್ನೆಯ 5,98,400 ರೂ ಗೆ ಹೋಲಿಸಿದರೆ ಇಂದು 1, 100 ರೂ. ಏರಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

ಇಂದಿನ ಬೆಳಗಿನ ಧಾರಣೆಯಂತೆ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 54,950 ರೂ. ಇದೆ. ಮಂಗಳೂರಿನಲ್ಲಿ 54,950 ರೂ., ಮೈಸೂರಿನಲ್ಲಿ 54,950 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,210 ರೂ., ಮುಂಬೈನಲ್ಲಿ 54,950 ರೂ., ದೆಹಲಿಯಲ್ಲಿ 55,100 ರೂ., ಕೋಲ್ಕತಾದಲ್ಲಿ 54,950 ರೂ., ಹೈದರಾಬಾದ್‌ 54,950 ರೂ., ಕೇರಳ 54,950 ರೂ., ಪುಣೆ 54,950 ರೂ., ಅಹಮದಾಬಾದ್‌ 55,000 ರೂ., ಜೈಪುರ 55,100 ರೂ. ಲಖನೌ 55,100 ರೂ., ಕೊಯಮುತ್ತೂರು 55,210 ರೂ., ಮದುರೈ 55,210 ರೂ. ಹಾಗೂ ವಿಜಯವಾಡ 54,950 ರೂ., ಇದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 59,950 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,230 ರೂ., ಮುಂಬೈನಲ್ಲಿ 59,950 ರೂ., ದೆಹಲಿಯಲ್ಲಿ 60,100 ರೂ., ಕೋಲ್ಕತಾದಲ್ಲಿ 59,950 ರೂ., ಹೈದರಾಬಾದ್‌ 59,950 ರೂ., ಕೇರಳ 59,950 ರೂ., ಪುಣೆ 59,950 ರೂ., ಅಹಮದಾಬಾದ್‌ 60,000 ರೂ., ಜೈಪುರ 60,100 ರೂ., ಲಖನೌ 60,100 ರೂ., ಕೊಯಮುತ್ತೂರು 60,230 ರೂ., ಮದುರೈ 60,230, ವಿಜಯವಾಡ 59,950 ರೂ. ಇದೆ

ಇಂದಿನ ಬೆಳ್ಳಿ ದರ

ಇಂದು ಬೆಳ್ಳಿ ದರ ಸ್ಥಿರವಾಗಿದೆ. ಇಂದು 1 ಗ್ರಾಂ ಬೆಳ್ಳಿಗೆ 74.25 ರೂ. ಆಗಿದೆ. 8 ಗ್ರಾಂ ದರ ಇಂದು 594 ರೂ. ಆಗಿದೆ. ಇಂದಿನ 10 ಗ್ರಾಂ ಬೆಳ್ಳಿ ದರ 742.50 ಆಗಿದ್ದು, 100ಗ್ರಾಂ ಬೆಳ್ಳಿಗೆ ಇಂದು 7,425 ರೂ ಇದೆ. 1ಕೆಜಿ ಬೆಳ್ಳಿ ದರ ಇಂದು 74,250 ರೂ. ಆಗಿದೆ.

ಟಿ20 ವರ್ಲ್ಡ್‌ಕಪ್ 2024