ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Silver Rate: ಸೋಮವಾರ ಚಿನ್ನದ ದರ ಸ್ಥಿರ, ಬೆಳ್ಳಿ ದರದಲ್ಲಿ ತುಸು ಏರಿಕೆ; ಚಿನ್ನ ಖರೀದಿಸುವ ಯೋಚನೆ ಇದ್ದರೆ ಇಂದಿನ ದರ ಗಮನಿಸಿ

Gold Silver Rate: ಸೋಮವಾರ ಚಿನ್ನದ ದರ ಸ್ಥಿರ, ಬೆಳ್ಳಿ ದರದಲ್ಲಿ ತುಸು ಏರಿಕೆ; ಚಿನ್ನ ಖರೀದಿಸುವ ಯೋಚನೆ ಇದ್ದರೆ ಇಂದಿನ ದರ ಗಮನಿಸಿ

Gold And Silver Price Today: ದೇಶದಲ್ಲಿ ಎರಡು ದಿನಗಳಿಂದ ಚಿನ್ನದ ದರದಲ್ಲಿ ಇಳಿಕೆಯಾಗಿದ್ದು, ಇಂದು ದರ ಸ್ಥಿರವಾಗಿದೆ. ಸೋಮವಾರ ಬೆಳ್ಳಿ ದರದಲ್ಲಿ ಕೊಂಚ ಏರಿಕೆ ಕಂಡಿದೆ. ಇಂದು ಒಂದು ಗ್ರಾಂ ಚಿನ್ನದ ದರ 5,495 ರೂ. ಆಗಿದೆ. ಬೆಳ್ಳಿ 1 ಗ್ರಾಂಗೆ 75 ರೂ. ಆಗಿದೆ.

ಸೆಪ್ಟೆಂಬರ್‌ 25ರ ಚಿನ್ನ ಬೆಳ್ಳಿ ದರ
ಸೆಪ್ಟೆಂಬರ್‌ 25ರ ಚಿನ್ನ ಬೆಳ್ಳಿ ದರ (REUTERS)

ಬೆಂಗಳೂರು: ಚಿನ್ನಾಭರಣದ ದರದಲ್ಲಿನ ಏರಿಳಿತ ಸಾಮಾನ್ಯವಾಗಿದ್ದು, ಕಳೆದ ವಾರ ಏರಿಕೆ ಕಂಡಿದ್ದ ಚಿನ್ನದ ದರ, ಎರಡು ದಿನಗಳಿಂದ ಇಳಿಕೆ ಕಂಡಿತ್ತು. ಇಂದು ದೇಶದಾದ್ಯಂತ ಚಿನ್ನದ ಬೆಲೆ ಸ್ಥಿರವಾಗಿದೆ. ಬೆಳ್ಳಿ ದರದಲ್ಲಿ ತುಸು ಏರಿಕೆಯಾಗಿದೆ. ನೀವು ಚಿನ್ನ, ಬೆಳ್ಳಿ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಚಿನಿವಾರ ಪೇಟೆಯ ಇಂದಿನ ದರ ಗಮನಿಸಿ. ಕರ್ನಾಟಕ ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರಗಳು ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,495 ರೂ. ಇದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 43,960 ರೂ. ಇದೆ. ಹತ್ತು ಗ್ರಾಂ ಚಿನ್ನಕ್ಕೆ ಇಂದು 54,950 ರೂ. ನೀಡಬೇಕು. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,49,500 ರೂ. ನೀಡಬೇಕು.

24 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,995 ರೂ. ಆಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,960 ರೂ. ನೀಡಬೇಕಾಗುತ್ತದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,950 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,99,500 ರೂ. ನೀಡಬೇಕು.

ಟ್ರೆಂಡಿಂಗ್​ ಸುದ್ದಿ

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

ಇಂದಿನ ಬೆಳಗಿನ ಧಾರಣೆಯಂತೆ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 54,950 ರೂ. ಇದೆ. ಮಂಗಳೂರಿನಲ್ಲಿ 54,950 ರೂ., ಮೈಸೂರಿನಲ್ಲಿ 54,950 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,210 ರೂ., ಮುಂಬೈನಲ್ಲಿ 54,950 ರೂ., ದೆಹಲಿಯಲ್ಲಿ 55,100 ರೂ., ಕೋಲ್ಕತಾದಲ್ಲಿ 54,950 ರೂ., ಹೈದರಾಬಾದ್‌ 54,950 ರೂ., ಕೇರಳ 54,950 ರೂ., ಪುಣೆ 54,950 ರೂ., ಅಹಮದಾಬಾದ್‌ 55,000 ರೂ., ಜೈಪುರ 55,100 ರೂ. ಲಖನೌ 55,100 ರೂ., ಕೊಯಮುತ್ತೂರು 55,210 ರೂ., ಮದುರೈ 55,210 ರೂ. ಹಾಗೂ ವಿಜಯವಾಡ 54,950 ರೂ., ಇದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 59,950 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,230 ರೂ., ಮುಂಬೈನಲ್ಲಿ 59,950 ರೂ., ದೆಹಲಿಯಲ್ಲಿ 60,100 ರೂ., ಕೋಲ್ಕತಾದಲ್ಲಿ 59,950 ರೂ., ಹೈದರಾಬಾದ್‌ 59,950 ರೂ., ಕೇರಳ 59,950 ರೂ., ಪುಣೆ 59,950 ರೂ., ಅಹಮದಾಬಾದ್‌ 60,000 ರೂ., ಜೈಪುರ 60,100 ರೂ., ಲಖನೌ 60,100 ರೂ., ಕೊಯಮುತ್ತೂರು 60,230 ರೂ., ಮದುರೈ 60,230, ವಿಜಯವಾಡ 59,950 ರೂ. ಇದೆ

ಇಂದಿನ ಬೆಳ್ಳಿ ದರ

ಇಂದು ಬೆಳ್ಳಿ ದರದಲ್ಲಿ ತುಸು ಏರಿಕೆಯಾಗಿದೆ. ಇಂದು 1 ಗ್ರಾಂ ಬೆಳ್ಳಿ ದರ 75 ರೂ. ಆಗಿದೆ. ನಿನ್ನೆ 47.25 ರೂ. ಆಗಿದ್ದು ಇಂದು 0.75 ರೂ. ಏರಿಕೆಯಾಗಿದೆ. 8 ಗ್ರಾಂ ದರ ಇಂದು 600 ರೂ. ಆಗಿದೆ. ನಿನ್ನೆ 594 ರೂ. ಇದ್ದು ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 6 ರೂ. ಏರಿಕೆಯಾಗಿದೆ. ಇಂದಿನ 10 ಗ್ರಾಂ ಬೆಳ್ಳಿ ದರ 750 ಆಗಿದ್ದು, ನಿನ್ನೆ 742.50 ರೂ. ಆಗಿತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 7.50 ರೂ ಹೆಚ್ಚಾಗಿದೆ. 100 ಗ್ರಾಂ ಬೆಳ್ಳಿಗೆ ಇಂದು 7,500 ರೂ. ಆಗಿದೆ, ನಿನ್ನೆ 7,425 ರೂ. ಇದ್ದು ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 75 ರೂ. ಏರಿಕೆಯಾಗಿದೆ. 1 ಕೆಜಿ ಬೆಳ್ಳಿ ದರ ಇಂದು 75,000 ರೂ ಇದ್ದು, ನಿನ್ನೆಯ 74,250 ರೂ. ಹೋಲಿಸಿದರೆ ಇಂದು 750 ರೂ. ಏರಿಕೆಯಾಗಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.