Gold Silver Rate: ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಬಂಗಾರದಂತಹ ಸುದ್ದಿ; ಪುನಃ ಇಳಿಕೆ ಕಂಡ ಚಿನ್ನದ ದರ, ಬೆಳ್ಳಿ ದರದಲ್ಲೂ ಇಂದು ಇಳಿಕೆ
Gold Silver Price Today: ಕರ್ನಾಟಕ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರದಲ್ಲಿ ಇಳಿಕೆಯಾಗಿದ್ದು, ಇದು ಚಿನ್ನಾಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಒಂದೆರಡು ದಿನ ಏರಿಕೆ ಕಂಡು ದಿಗಿಲು ಮೂಡಿಸಿದ್ದ ಚಿನ್ನ, ಬೆಳ್ಳಿ ದರ ಇಂದು ಇಳಿಕೆ ಕಂಡು ಖುಷಿಗೆ ಕಾರಣವಾಗಿದೆ.

ಬೆಂಗಳೂರು: ನಿನ್ನೆ (ಸೆಪ್ಟೆಂಬರ್ 26) ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಬಂದ್ ಆಚರಿಸಲಾಗಿದ್ದು, ಬಂದ್ ಎಫೆಕ್ಟ್ ಕಾರಣಗಳಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಈ ನಡುವೆ ರಾಜ್ಯ ಹಾಗೂ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ದರದಲ್ಲಿ ಇಳಿಕೆಯಾಗಿದೆ. ಬೆಳ್ಳಿ ದರದಲ್ಲೂ ಕೂಡ ಇಳಿಕೆ ಕಂಡಿದೆ. ಚಿನ್ನದ ದರದಲ್ಲಿ ಏರಿಳಿತಕ್ಕೆ ಕಾರಣಗಳು ಹಲವಿರಬಹುದು. ಅಂತರರಾಷ್ಟ್ರೀಯ ಮಾರುಕಟ್ಟೆಯ ದರದಲ್ಲಿನ ವ್ಯತ್ಯಾಸವೂ ಇದಕ್ಕೆ ಕಾರಣವಿರಬಹುದು. ಇಂದು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿನ ಚಿನ್ನ, ಬೆಳ್ಳಿ ದರವನ್ನು ಗಮನಿಸಿ.
ಟ್ರೆಂಡಿಂಗ್ ಸುದ್ದಿ
22 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,475 ರೂ. ಆಗಿದ್ದು, ನಿನ್ನೆ 5,495 ರೂ. ಇತ್ತು, ಈ ದರಕ್ಕೆ ಹೋಲಿಸಿದರೆ ಇಂದು 20 ರೂ. ಇಳಿಕೆಯಾಗಿದೆ. ಇಂದು 8 ಗ್ರಾಂ ಚಿನ್ನ ಖರೀದಿಸುವುದಾದರೆ 43,800 ರೂ. ನೀಡಬೇಕು. ನಿನ್ನೆ 43,960 ರೂ ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 160 ರೂ. ಕಡಿಮೆಯಾಗಿದೆ. ಇಂದಿನ 10 ಗ್ರಾಂ ಚಿನ್ನದ ಬೆಲೆ 54,750, ನಿನ್ನೆಯ ಬೆಲೆ 54,950, ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 200 ರೂ. ಕಡಿಮೆಯಾಗಿದೆ. 100ಗ್ರಾಂ ಚಿನ್ನ ಕೊಳ್ಳುವುದಿದ್ದರೆ ಇಂದು 5,47,500 ರೂ ನೀಡಬೇಕು. ನಿನ್ನೆ 5,49,500 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 2000 ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 5,973 ರೂ. ಆಗಿದೆ. ನಿನ್ನೆ 5,995 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 22 ರೂ. ಕಡಿಮೆಯಾಗಿದೆ. ಇಂದು 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 47,784 ರೂ. ನೀಡಬೇಕು. ನಿನ್ನೆ 47,960 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 176 ರೂ. ಇಳಿಕೆಯಾಗಿದೆ. ಇಂದು 10 ಗ್ರಾಂ ಚಿನ್ನದ ಖರೀದಿ ಮಾಡುವುದಾದರೆ 59,950 ರೂ. ಕೊಡಬೇಕು. ನಿನ್ನೆ ಈ ದರ 59,950 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 220 ರೂ. ಕಡಿಮೆಯಾಗಿದೆ. ಇಂದಿನ 100 ಗ್ರಾಂ ಚಿನ್ನದ ದರ ಇಂದು 5,97,300. ನಿನ್ನೆ 5,99,500 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 2,200 ರೂ. ಇಳಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ
ಇಂದಿನ ಬೆಳಗಿನ ಧಾರಣೆಯಂತೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಬೆಂಗಳೂರಿನಲ್ಲಿ 54,750 ರೂ. ಇದೆ. ಮಂಗಳೂರಿನಲ್ಲಿ 54,750 ರೂ., ಮೈಸೂರಿನಲ್ಲಿ 54,750 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು.
ಭಾರತದ ಇತರೆ ಕಡೆಗಳಲ್ಲಿ 22 ಕ್ಯಾರೆಟ್ ಚಿನ್ನದ ದರ ಈ ಮುಂದಿನಂತೆ ಇದೆ. ಚೆನ್ನೈನಲ್ಲಿ 55,050 ರೂ., ಮುಂಬೈನಲ್ಲಿ 54,750 ರೂ., ದೆಹಲಿಯಲ್ಲಿ 54,900 ರೂ., ಕೋಲ್ಕತಾದಲ್ಲಿ 54,750 ರೂ., ಹೈದರಾಬಾದ್ 54,750 ರೂ., ಕೇರಳ 54,750 ರೂ., ಪುಣೆ 54,750 ರೂ., ಅಹಮದಾಬಾದ್ 54,800 ರೂ., ಜೈಪುರ 54,900 ರೂ. ಲಖನೌ 54,900 ರೂ., ಕೊಯಮುತ್ತೂರು 55,050 ರೂ., ಮದುರೈ 55,050 ರೂ. ಹಾಗೂ ವಿಜಯವಾಡ 54,750 ರೂಪಾಯಿ ಇದೆ.
ವಿವಿಧ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಬೆಂಗಳೂರಿನಲ್ಲಿ 59,730 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,050 ರೂ., ಮುಂಬೈನಲ್ಲಿ 59,730 ರೂ., ದೆಹಲಿಯಲ್ಲಿ 59,880 ರೂ., ಕೋಲ್ಕತಾದಲ್ಲಿ 59,730 ರೂ., ಹೈದರಾಬಾದ್ 59,730 ರೂ., ಕೇರಳ 59,730 ರೂ., ಪುಣೆ 59,730 ರೂ., ಅಹಮದಾಬಾದ್ 59,780 ರೂ., ಜೈಪುರ 59,880 ರೂ., ಲಖನೌ 59,880 ರೂ., ಕೊಯಮುತ್ತೂರು 60,050 ರೂ., ಮದುರೈ 60,050, ವಿಜಯವಾಡ 59,730 ರೂ. ಇದೆ
ಇಂದಿನ ಬೆಳ್ಳಿ ದರ
ಬೆಳ್ಳಿ ದರದಲ್ಲೂ ಇಂದು ಇಳಿಕೆಯಾಗಿದೆ. ಇಂದು 1 ಗ್ರಾಂ ಬೆಳ್ಳಿ ದರ 73.50 ರೂ. ಇದೆ. ನಿನ್ನೆ 75 ರೂ. ಇದ್ದು ಈ ದರಕ್ಕೆ ಹೋಲಿಸಿದರೆ ಇಂದು 1.50 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು 588 ರೂ. ಇದ್ದು, ನಿನ್ನೆ 600 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಒಂದು 12 ರೂ. ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು 735 ರೂ. ಆಗಿದ್ದು ನಿನ್ನೆ 750 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 15 ರೂ. ಕಡಿಮೆಯಾಗಿದೆ. 100 ಗ್ರಾಂ ಬೆಳ್ಳಿಗೆ ಇಂದು 7,350 ರೂ. ನೀಡಬೇಕು. ನಿನ್ನೆ 7,500 ರೂ. ದರವಿತ್ತು. ಈ ದರಕ್ಕೆ ಹೋಲಿಸಿದರೆ ಇಂದು 150 ರೂ. ಇಳಿಕೆಯಾಗಿದೆ. ಇಂದು 1 ಕೆಜಿ ಬೆಳ್ಳಿಗೆ 73,500 ರೂ. ಇದೆ. ನಿನ್ನೆ 75,000 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 1,500 ರೂ ಕಡಿಮೆಯಾಗಿದೆ.
ವಿಭಾಗ