Gold Price: ಇಂದು ಮತ್ತೆ ಚಿನ್ನದ ದರ ಇಳಿಕೆ, ಚಿನಿವಾರ ಪೇಟೆಗೆ ಹೋಗುವ ಮುನ್ನ ಬಂಗಾರ ಬೆಳ್ಳಿ ದರ ತಿಳಿದುಕೊಳ್ಳಿ
Gold and Silver Rate Today: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಇಳಿಕೆ ಕಾಣುತ್ತಿದೆ. ಇಂದು ಕೂಡ ಅಪರಂಜಿ ಚಿನ್ನಕ್ಕೆ ಒಂದು ಗ್ರಾಂಗೆ 16 ರೂಪಾಯಿಷ್ಟು 10 ಗ್ರಾಂಗೆ 160 ರೂಪಾಯಿಯಷ್ಟು ದರ ಕಡಿಮೆಯಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಾಗುತ್ತಿರುವುದು, ಜಾಗತಿಕ ಆರ್ಥಿಕತೆ, ಹಣದುಬ್ಬರ ಇತ್ಯಾದಿಗಳು ಚಿನ್ನದ ದರ ಇಳಿಕೆಗೆ ಕಾರಣವಾಗಿದೆ.
ಬೆಂಗಳೂರು: ದೇಶದಲ್ಲಿ ಚಿನ್ನದ ದರ ಇತ್ತೀಚಿಗೆ ಸತತವಾಗಿ ಇಳಿಕೆ ಕಾಣುತ್ತಿದೆ. ಚಿನ್ನಾಭರಣ ಖರೀದಿಸುವವರು ಇದರಿಂದ ಖುಷಿಗೊಂಡಿದ್ದಾರೆ. ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡುವವರು ಇದರಿಂದ ಆತಂಕಗೊಂಡಿದ್ದಾರೆ. ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ ಸೇರಿದಂತೆ ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ ಈ ಮುಂದಿನಂತೆ ಇದೆ.
ಟ್ರೆಂಡಿಂಗ್ ಸುದ್ದಿ
22 ಕ್ಯಾರೆಟ್ ಚಿನ್ನದ ದರ (22 carat gold rate)
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ ₹5,320 ರೂ ಇದೆ. ನಿನ್ನೆಯ 5,335 ರೂ ದರಕ್ಕೆ ಹೋಲಿಸಿದರೆ ರೂ., 15 ಇಳಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 42,560 ರೂ ಆಗಿದೆ. ನಿನ್ನೆ 42,680 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 120., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 53,200 ರೂ. ಇದೆ. ನಿನ್ನೆಯ 53,350 ರೂ. ಗೆ ಹೋಲಿಸಿದರೆ 150 ರೂ., ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,32,000 ರೂ. ನೀಡಬೇಕು. ನಿನ್ನೆಯ 5,33,500 ರೂ.ಗೆ ಹೋಲಿಸಿದರೆ ಇಂದು 1500ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ದರ (24 carat gold rate)
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 5,804 ರೂ. ಇದೆ. ನಿನ್ನೆಯ 5,820 ರೂ.ಗೆ ಹೋಲಿಸಿದರೆ 16 ರೂ. ಇಳಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,432 ರೂ. ನೀಡಬೇಕಾಗುತ್ತದೆ. ನಿನ್ನೆ 46,560 ರೂ. ಇತ್ತು. ಇಂದು 128 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 58,040 ರೂ. ಇದೆ. ನಿನ್ನೆಯ 58,200 ರೂ. ಗೆ ಹೋಲಿಸಿದರೆ 160 ರೂ. ಇಳಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,80,400 ರೂ. ನೀಡಬೇಕು. ನಿನ್ನೆಯ 5,82,000 ರೂ.ಗೆ ಹೋಲಿಸಿದರೆ ಇಂದು 1600 ರೂ. ಇಳಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ
10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 53,200 ರೂ. ಇದೆ. ಮಂಗಳೂರು 53,200 ರೂ., ಮೈಸೂರಿನಲ್ಲಿ 53,200 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 53,356 ರೂ., ಮುಂಬೈನಲ್ಲಿ 53,200 ರೂ., ದೆಹಲಿಯಲ್ಲಿ 53,350 ರೂ., ಕೋಲ್ಕತಾದಲ್ಲಿ 53,200 ರೂ., ಹೈದರಾಬಾದ್ 53,200 ರೂ., ಕೇರಳ 53,200 ರೂ., ಪುಣೆ 53,200 ರೂ., ಅಹಮದಾಬಾದ್ 53,250 ರೂ., ಜೈಪುರ 53,350 ರೂ., ಲಖನೌ 53,350 ರೂ., ಕೊಯಮುತ್ತೂರು 53,356 ರೂ., ಮಧುರೈ 53,356 ರೂ. ಹಾಗೂ ವಿಜಯವಾಡ 53,200 ರೂ., ಇದೆ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 58,040 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 58,430 ರೂ., ಮುಂಬೈನಲ್ಲಿ 58,040 ರೂ., ದೆಹಲಿಯಲ್ಲಿ 58,190 ರೂ., ಕೋಲ್ಕತಾದಲ್ಲಿ 58,040 ರೂ., ಹೈದರಾಬಾದ್ 58,040 ರೂ., ಕೇರಳ 58,040 ರೂ., ಪುಣೆ 58,040 ರೂ., ಅಹಮದಾಬಾದ್ 58,090 ರೂ., ಜೈಪುರ 58,190 ರೂ., ಲಖನೌ 58,190 ರೂ., ಕೊಯಮುತ್ತೂರು 58,430 ರೂ., ಮದುರೈ 58,430, ವಿಜಯವಾಡ 58,040 ರೂ. ಇದೆ.
ಬೆಳ್ಳಿ ದರ ಎಷ್ಟು?
ಒಂದು ಗ್ರಾಂ ಬೆಳ್ಳಿಗೆ 71.25 ರೂ., 8 ಗ್ರಾಂ ಬೆಳ್ಳಿಗೆ 570 ರೂ., 10 ಗ್ರಾಂ ಬೆಳ್ಳಿ ದರ 712.50 ರೂ., 100 ಗ್ರಾಂ ಬೆಳ್ಳಿಗೆ 7,125 ಮತ್ತು 1 ಕೆ.ಜಿ. ಬೆಳ್ಳಿ ದರ 71,250 ರೂಪಾಯಿ ಇದೆ.