ಕನ್ನಡ ಸುದ್ದಿ  /  Nation And-world  /  Business News Gold Price Down In India Silver And Gold Rate Update In Kannada August 28 Price Details Pcp

Gold Rate Today: ಇಂದು ಚಿನ್ನದ ದರ ಇಳಿಕೆ, ಬೆಳ್ಳಿ ದರ ತಟಸ್ಥ, ಗ್ರಾಂಗೆ 6 ಸಾವಿರ ರೂ ಸನಿಹ ತಲುಪಿದ ಅಪರಂಜಿ ಚಿನ್ನದ ದರ

Gold And Silver Price: ಭಾರತದಲ್ಲಿ ಚಿನ್ನದ ದರ ಮಂಗಳವಾರ ತುಸು ಇಳಿಕೆ ಕಂಡಿದೆ. ಇತ್ತೀಚಿಗೆ ಚಿನ್ನದ ದರ ತುಸು ಏರಿಕೆ ಕಂಡಿತ್ತು. ಸದ್ಯ ಅಪರಂಜಿ ಚಿನ್ನದ ದರ ಗ್ರಾಂಗೆ 5,940 ರೂಪಾಯಿ ಇದೆ. ಗ್ರಾಂಗೆ ಆರು ಸಾವಿರ ರೂಪಾಯಿ ತಲುಪಲು ಇನ್ನು 60 ರೂಪಾಯಿ ಮಾತ್ರವಿದೆ.

Gold Rate Today: ಇಂದು ಚಿನ್ನದ ದರ ಇಳಿಕೆ, ಬೆಳ್ಳಿ ದರ ತಟಸ್ಥ
Gold Rate Today: ಇಂದು ಚಿನ್ನದ ದರ ಇಳಿಕೆ, ಬೆಳ್ಳಿ ದರ ತಟಸ್ಥ (PTI)

ಬೆಂಗಳೂರು: ಚಿನಿವಾರ ಪೇಟೆಯ ಇಂದು ಬೆಳಗ್ಗಿನ ಅಪ್‌ಡೇಟ್‌ ಪ್ರಕಾರ ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಚಿನ್ನದ ದರ ಇಳಿಕೆ ಕಂಡಿದೆ. ಇದೇ ಸಮಯದಲ್ಲಿ ಬೆಳ್ಳಿ ದರ ತಟಸ್ಥವಾಗಿದ್ದು, ನಿನ್ನೆಯ ದರದಲ್ಲಿಯೇ ಖರೀದಿಸಬಹುದು. ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ, ದೆಹಲಿ, ಚೆನ್ನೈ, ಕೇರಳ ಸೇರಿದಂತೆ ಕರ್ನಾಟಕದ ವಿವಿಧ ನಗರಗಳು ಮತ್ತು ಭಾರತದ ವಿವಿಧ ಪ್ರಮುಖ ನಗರಗಳಲ್ಲಿ ಚಿನ್ನಾಭರಣಗಳ ದರ ಎಷ್ಟಿದೆ ಎಂದು ತಿಳಿಯೋಣ.

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,445 ರೂ ಇದೆ. ನಿನ್ನೆಯ 5,450 ರೂ ದರಕ್ಕೆ ಹೋಲಿಸಿದರೆ 5 ರೂಪಾಯಿಯಷ್ಟು ದರ ಇಳಿಕೆಯಾಗಿದೆ. ಇಂದು 8 ಗ್ರಾಂ ಚಿನ್ನದ ಬೆಲೆ 43,560 ರೂಪಾಯಿ ಇದೆ. ನಿನ್ನೆ 43,600 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ದರ 40 ರೂ. ಇಳಿಕೆಯಾಗಿದೆ. ಕರ್ನಾಟಕದ ವಿವಿಧ ನಗರಗಳಲ್ಲಿ ಇಂದು ಹತ್ತು ಗ್ರಾಂ ಚಿನ್ನದ ದರ 54,450 ರೂ. ಇದೆ. ನಿನ್ನೆಯ 54,500 ರೂ. ಗೆ ಹೋಲಿಸಿದರೆ 50 ರೂ. ಇಳಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,44,500 ರೂ. ನೀಡಬೇಕು. ನಿನ್ನೆಯ 5,45,000 ರೂ.ಗೆ ಹೋಲಿಸಿದರೆ 500 ರೂಪಾಯಿ ಇಳಿಕೆಯಾಗಿದೆ.

6 ಸಾವಿರ ರೂ ಸನಿಹದಲ್ಲಿ ಅಪರಂಜಿ ಚಿನ್ನದ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,940 ರೂ. ಇದೆ. ನಿನ್ನೆಯ 5,945 ರೂ.ಗೆ ಹೋಲಿಸಿದರೆ 5 ರೂ. ಇಳಿಕೆಯಾಗಿದೆ. ಅಪರಂಜಿ ಚಿನ್ನದ ದರ 6 ಸಾವಿರ ರೂ ಸನಿಹದಲ್ಲಿದೆ. ಮುಂದಿನ ತಿಂಗಳು ಈ ಗಡಿ ದಾಟಬಹುದೇ ಕಾದು ನೋಡಬೇಕಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,520 ರೂ. ನೀಡಬೇಕಾಗುತ್ತದೆ. ನಿನ್ನೆ 47,560 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 40 ರೂಪಾಯಿ ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,400 ರೂ. ಇದೆ. ನಿನ್ನೆಯ 59,450 ರೂ. ಗೆ ಹೋಲಿಸಿದರೆ 50 ರೂ. ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,94,000 ರೂ. ನೀಡಬೇಕು. ಮಂಗಳವಾರದ 5,94,500 ರೂ.ಗೆ ಹೋಲಿಸಿದರೆ ಬುಧವಾರ 500 ರೂ. ಇಳಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

ಇಂದಿನ ಬೆಳಗ್ಗಿನ ಧಾರಣೆಯಂತೆ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 54,450 ರೂ. ಇದೆ. ಮಂಗಳೂರು 54,450 ರೂ., ಮೈಸೂರಿನಲ್ಲಿ 54,450 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 54,750 ರೂ., ಮುಂಬೈನಲ್ಲಿ 54,450 ರೂ., ದೆಹಲಿಯಲ್ಲಿ 54,600 ರೂ., ಕೋಲ್ಕತಾದಲ್ಲಿ 54,450 ರೂ., ಹೈದರಾಬಾದ್‌ 54,450 ರೂ., ಕೇರಳ 54,450 ರೂ., ಪುಣೆ 54,450 ರೂ., ಅಹಮದಾಬಾದ್‌ 54,500 ರೂ., ಜೈಪುರ 54,600 ರೂ., ಲಖನೌ 54,600 ರೂ., ಕೊಯಮುತ್ತೂರು 54,750 ರೂ., ಮಧುರೈ 54,750 ರೂ. ಹಾಗೂ ವಿಜಯವಾಡ 54,450 ರೂ., ಇದೆ.

ಪ್ರಮುಖ ನಗರಗಳಲ್ಲಿ ಅಪರಂಜಿ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 59,400 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 59,750 ರೂ., ಮುಂಬೈನಲ್ಲಿ 59,400 ರೂ., ದೆಹಲಿಯಲ್ಲಿ 59,550 ರೂ., ಕೋಲ್ಕತಾದಲ್ಲಿ 59,400 ರೂ., ಹೈದರಾಬಾದ್‌ 59,400 ರೂ., ಕೇರಳ 59,400 ರೂ., ಪುಣೆ 59,400 ರೂ., ಅಹಮದಾಬಾದ್‌ 59,450 ರೂ., ಜೈಪುರ 59,550 ರೂ., ಲಖನೌ 59,550 ರೂ., ಕೊಯಮುತ್ತೂರು 59,750 ರೂ., ಮದುರೈ 59,750, ವಿಜಯವಾಡ 59,400 ರೂ. ಇದೆ.

ಬೆಳ್ಳಿ ದರ ಎಷ್ಟು?

ಇಂದು ಬೆಳ್ಳಿ ದರ ತಟಸ್ಥವಾಗಿದೆ. ನಿನ್ನೆಯ ದರದಲ್ಲಿಯೇ ಇಂದು ಬೆಳ್ಳಿ ಖರೀದಿಸಬಹುದು. ಒಂದು ಗ್ರಾಂ ಬೆಳ್ಳಿಗೆ 75.50 ರೂ., 8 ಗ್ರಾಂ ಬೆಳ್ಳಿಗೆ 604 ರೂ., 10 ಗ್ರಾಂ ಬೆಳ್ಳಿ ದರ 755 ರೂ., 100 ಗ್ರಾಂ ಬೆಳ್ಳಿಗೆ 7,550 ಮತ್ತು 1 ಕೆ.ಜಿ. ಬೆಳ್ಳಿ ದರ 75,500 ರೂಪಾಯಿ ಇದೆ.