Gold Price: ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಇಳಿಕೆ ಕಂಡ ಬಂಗಾರದ ದರ, ಬೆಳ್ಳಿ ದರ ಸ್ಥಿರ, ಕರ್ನಾಟಕದ ಇಂದಿನ ಚಿನ್ನ-ಬೆಳ್ಳಿ ಧಾರಣೆ ವಿವರ
Gold, Silver Price Today: ಕಳೆದ ಹಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಚಿನ್ನದ ದರ ಇಂದು ಇಳಿಕೆ ಕಂಡಿದೆ. ಕೃಷ್ಣ ಜನ್ಮಾಷ್ಟಮಿಯಂದು ಚಿನ್ನ ಅಥವಾ ಬೆಳ್ಳಿ ಖರೀದಿಸಲು ಬಯಸುವವರು ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ ಸೇರಿದಂತೆ ವಿವಿಧ ನಗರಗಳಲ್ಲಿ ದರ ಎಷ್ಟಿದೆ ಎಂದು ತಿಳಿದುಕೊಳ್ಳಿ.

ಬೆಂಗಳೂರು: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಹಲವು ಜನರಿಗೆ ಇಂದು ರಜಾ ದಿನವಾಗಿರಬಹುದು. ಈ ಹಬ್ಬದ ಶುಭ ಸಮಯದಲ್ಲಿ ಚಿನಿವಾರ ಪೇಟೆಗೆ ಹೋಗಿ ಚಿನ್ನದ ಸರ, ಚಿನ್ನದ ಬಳೆ, ಚಿನ್ನದ ಉಂಗುರು, ಬೆಳ್ಳಿ ಕಾಲ್ಗೆಜ್ಜೆ ಇತ್ಯಾದಿ ಚಿನ್ನಾಭರಣ ಖರೀದಿಸಲು ಬಯಸುವವರಿಗೆ ಇಂದು ಬೇಸರವಾಗದು. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ದರ ಇಳಿಕೆಯಾಗಿದೆ. ಬೆಳ್ಳಿ ದರ ಸ್ಥಿರವಾಗಿದೆ. ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ ಮತ್ತು ಹೊರರಾಜ್ಯಗಳ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬ ವಿವರ ಇಲ್ಲಿದೆ. ಇದು ಮಾಹಿತಿಗಾಗಿ ನೀಡಲಾದ ಚಿನಿವಾರ ಪೇಟೆಯ ಅಪ್‌ಡೇಟ್. ಜತೆಗೆ ,ಮಧ್ಯಾಹ್ನದ ವೇಳೆಗೆ ದರದಲ್ಲಿ ಬದಲಾವಣೆಯಾಗಬಹುದು. ಜತೆಗೆ, ಚಿನ್ನದ ದರ ಆಯಾ ಚಿನ್ನದಂಗಡಿಗಳಲ್ಲಿ ವ್ಯತ್ಯಾಸ ಇರಬಹುದು. ಮಜೂರಿ, ವೇಸ್ಟೇಜ್ ಇತ್ಯಾದಿ ಮೂಲಕವೂ ದರ ಬದಲಾವಣೆ ಕಾಣಬಹುದು. 22 ಕ್ಯಾರೆಟ್ ಚಿನ್ನದ ದರ (22 carat gold rate)
ಟ್ರೆಂಡಿಂಗ್ ಸುದ್ದಿ
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ ₹5,515 ರೂ ಇದೆ. ನಿನ್ನೆಯ 5,530 ರೂ ದರಕ್ಕೆ ಹೋಲಿಸಿದರೆ ರೂ., 15 ಇಳಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 44,120 ರೂ ಆಗಿದೆ. ನಿನ್ನೆ 44,240 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 120., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 55,150 ರೂ. ಇದೆ. ನಿನ್ನೆಯ 55,300 ರೂ. ಗೆ ಹೋಲಿಸಿದರೆ 150 ರೂ., ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,51,500 ರೂ. ನೀಡಬೇಕು. ನಿನ್ನೆಯ 5,53,000 ರೂ.ಗೆ ಹೋಲಿಸಿದರೆ ಇಂದು 1500ರೂ. ಇಳಿಕೆಯಾಗಿದೆ.
ಸೆಪ್ಟೆಂಬರ್ 6 ಕರ್ನಾಟಕದಲ್ಲಿ ಚಿನ್ನದ ದರ ( 22 ಕ್ಯಾರೆಟ್ )
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ ₹5,515 ರೂ ಇದೆ. ನಿನ್ನೆಯ 5,530 ರೂ ದರಕ್ಕೆ ಹೋಲಿಸಿದರೆ ರೂ., 15 ಇಳಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 44,120 ರೂ ಆಗಿದೆ. ನಿನ್ನೆ 44,240 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 120., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 55,150 ರೂ. ಇದೆ. ನಿನ್ನೆಯ 55,300 ರೂ. ಗೆ ಹೋಲಿಸಿದರೆ 150 ರೂ., ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,51,500 ರೂ. ನೀಡಬೇಕು. ನಿನ್ನೆಯ 5,53,000 ರೂ.ಗೆ ಹೋಲಿಸಿದರೆ ಇಂದು 1500ರೂ. ಇಳಿಕೆಯಾಗಿದೆ.
ಸೆಪ್ಟೆಂಬರ್ 6 ಕರ್ನಾಟಕದಲ್ಲಿ ಅಪರಂಜಿ ಚಿನ್ನದ ದರ
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 6,016 ರೂ. ಇದೆ. ನಿನ್ನೆಯ 6,032 ರೂ.ಗೆ ಹೋಲಿಸಿದರೆ 16 ರೂ. ಇಳಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48,128 ರೂ. ನೀಡಬೇಕಾಗುತ್ತದೆ. ನಿನ್ನೆ 48,256 ರೂ. ಇತ್ತು. ಇಂದು 128 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 60,160 ರೂ. ಇದೆ. ನಿನ್ನೆಯ 60,320 ರೂ. ಗೆ ಹೋಲಿಸಿದರೆ 160 ರೂ. ಇಳಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 6,01,600 ರೂ. ನೀಡಬೇಕು. ನಿನ್ನೆಯ 6,03,200 ರೂ.ಗೆ ಹೋಲಿಸಿದರೆ ಇಂದು 1600 ರೂ. ಇಳಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ
10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 55,150 ರೂ. ಇದೆ. ಮಂಗಳೂರು 55,150 ರೂ., ಮೈಸೂರಿನಲ್ಲಿ 55,150 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,450 ರೂ., ಮುಂಬೈನಲ್ಲಿ 55,150 ರೂ., ದೆಹಲಿಯಲ್ಲಿ 55,300 ರೂ., ಕೋಲ್ಕತಾದಲ್ಲಿ 55,150 ರೂ., ಹೈದರಾಬಾದ್ 55,150 ರೂ., ಕೇರಳ 55,150 ರೂ., ಪುಣೆ 55,150 ರೂ., ಅಹಮದಾಬಾದ್ 55,200 ರೂ., ಜೈಪುರ 55,300 ರೂ., ಲಖನೌ 55,300 ರೂ., ಕೊಯಮುತ್ತೂರು 55,450 ರೂ., ಮಧುರೈ 55,450 ರೂ. ಹಾಗೂ ವಿಜಯವಾಡ 55,150 ರೂ., ಇದೆ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 60,160 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,490 ರೂ., ಮುಂಬೈನಲ್ಲಿ 60,160 ರೂ., ದೆಹಲಿಯಲ್ಲಿ 60,310 ರೂ., ಕೋಲ್ಕತಾದಲ್ಲಿ 60,1600 ರೂ., ಹೈದರಾಬಾದ್ 60,160 ರೂ., ಕೇರಳ 60,160 ರೂ., ಪುಣೆ 60,160 ರೂ., ಅಹಮದಾಬಾದ್ 60,210 ರೂ., ಜೈಪುರ 60,310 ರೂ., ಲಖನೌ 60,310 ರೂ., ಕೊಯಮುತ್ತೂರು 60,490 ರೂ., ಮದುರೈ 60,490, ವಿಜಯವಾಡ 60,160 ರೂ. ಇದೆ.
ಬೆಳ್ಳಿ ದರ ಎಷ್ಟು?
ಒಂದು ಗ್ರಾಂ ಬೆಳ್ಳಿಗೆ 75.20 ರೂ., 8 ಗ್ರಾಂ ಬೆಳ್ಳಿಗೆ 601.60 ರೂ., 10 ಗ್ರಾಂ ಬೆಳ್ಳಿ ದರ 752 ರೂ., 100 ಗ್ರಾಂ ಬೆಳ್ಳಿಗೆ 7,520 ಮತ್ತು 1 ಕೆ.ಜಿ. ಬೆಳ್ಳಿ ದರ 75,200 ರೂಪಾಯಿ ಇದೆ.
(ಚಿನ್ನ ಬೆಳ್ಳಿ ದರ, ಷೇರುಪೇಟೆಯ ಓಪನಿಂಗ್ ಮತ್ತು ಕ್ಲೋಸಿಂಗ್ ಬೆಲ್, ವೈಯಕ್ತಿಕ ಹಣಕಾಸು, ಹೂಡಿಕೆ ಮಾಹಿತಿ, ಲೇಖನ, ಸುದ್ದಿಗಳನ್ನು ಓದಲು ಹಿಂದೂಸ್ತಾನ್ ಟೈಮ್ಸ್ ಕನ್ನಡದ ವಾಣಿಜ್ಯ ವಿಭಾಗಕ್ಕೆ ಭೇಟಿ ನೀಡಿ. ಲಿಂಕ್ ಇಲ್ಲಿದೆ)