ಕನ್ನಡ ಸುದ್ದಿ  /  Nation And-world  /  Business News Gold Price Near 3-week High Gold And Silver Price In Karnataka Bengaluru And Other City Pcp

Gold Rate Today: ಜಾಗತಿಕ ಮಾರುಕಟ್ಟೆಯ ಉತ್ಸಾಹದ ಪರಿಣಾಮ, ಭಾರತದಲ್ಲಿ ಬಂಗಾರದ ದರದಲ್ಲಿ ಭಾರೀ ಹೆಚ್ಚಳ

Gold Price Today: ಕರ್ನಾಟಕದಲ್ಲಿ ಇಂದು ಚಿನ್ನದ ದರ ಗ್ರಾಂಗೆ 30 ರೂ.ನಷ್ಟು ಹೆಚ್ಚಾಗಿದೆ. ಇದೇ ಸಮಯದಲ್ಲಿ ಬೆಳ್ಳಿ ದರ ತುಸು ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಳೆದ ಒಂದೆರಡು ದಿನಗಳಿಂದ ಬಡ್ಡಿದರ ಏರಿಕೆ ಭಯ ಕಡಿಮೆಯಾಗಿದ್ದು, ಚಿನಿವಾರ ಪೇಟೆಯ ಮೇಲೆ ಪರಿಣಾಮ ಬೀರಿದೆ.

Gold Rate Today: ಜಾಗತಿಕ ಮಾರುಕಟ್ಟೆಯ ಉತ್ಸಾಹದ ಪರಿಣಾಮ
Gold Rate Today: ಜಾಗತಿಕ ಮಾರುಕಟ್ಟೆಯ ಉತ್ಸಾಹದ ಪರಿಣಾಮ

ಬೆಂಗಳೂರು: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಹೆಚ್ಚಳವಾಗಿದೆ. ಅಮೆರಿಕದ ಬಡ್ಡಿದರ ಕಡಿತದ ಆತಂಕ ಕಡಿಮೆಯಾದ ಕಾರಣ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಗೆ ಗಮನ ನೀಡುತ್ತಿದ್ದಾರೆ. ನಿನ್ನೆ ಸ್ಪಾಟ್‌ ಗೋಲ್ಡ್‌ ದರ ಔನ್ಸ್‌ಗೆ 1,936.17 ಡಾಲರ್‌ಗೆ ತಲುಪಿತ್ತು. ಇದು ಕಳೆದ ಮೂರು ವಾರದಲ್ಲಿಯೇ ಅತ್ಯಧಿಕ, ನಿನ್ನೆ ಅಮೆರಿಕದ ಡಾಲರ್‌ ಮೌಲ್ಯ ಕುಸಿತಕಂಡಿತ್ತು. ಜಾಗತಿಕ ಮಾರುಕಟ್ಟೆಯ ಪ್ರಭಾವದ ಪರಿಣಾಮವಾಗಿ ಭಾರತದಲ್ಲಿಯೂ ಇಂದು ಚಿನ್ನದ ದರ ಭಾರೀ ಏರಿಕೆ ಕಾಣುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಚಿನ್ನದ ದರ ಹೆಚ್ಚಳ

ಇಂದು 22 ಗ್ರಾಂ ಚಿನ್ನದ ದರ ನಿನ್ನೆಗೆ ಹೋಲಿಸಿದರೆ ಗ್ರಾಂಗೆ 30 ರೂಪಾಯಿಯಷ್ಟು ಹೆಚ್ಚಾಗಿದೆ. ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,500 ರೂ ಇದೆ. ನಿನ್ನೆಯ 5,470 ರೂ ದರಕ್ಕೆ ಹೋಲಿಸಿದರೆ 30 ರೂಪಾಯಿಯಷ್ಟು ದರ ಹೆಚ್ಚಾಗಿದೆ. ಹತ್ತು ಗ್ರಾಂ ಚಿನ್ನದ ದರ 55,000 ರೂ. ಇದೆ. ನಿನ್ನೆಯ 54,700 ರೂ. ಗೆ ಹೋಲಿಸಿದರೆ 300 ರೂ. ಏರಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,50,000 ರೂ. ನೀಡಬೇಕು. ನಿನ್ನೆಯ 5,47,000 ರೂ.ಗೆ ಹೋಲಿಸಿದರೆ 3000 ರೂಪಾಯಿ ಏರಿಕೆಯಾಗಿದೆ.

ಅಪರಂಜಿ ಚಿನ್ನವೂ ದುಬಾರಿ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 6,000 ರೂ. ಇದೆ. ನಿನ್ನೆಯ 5,967 ರೂ.ಗೆ ಹೋಲಿಸಿದರೆ 33 ರೂ. ಏರಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48,000 ರೂ. ನೀಡಬೇಕಾಗುತ್ತದೆ. ನಿನ್ನೆ 47,736 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 264 ರೂಪಾಯಿ ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 60,000 ರೂ. ಇದೆ. ನಿನ್ನೆಯ 59,670 ರೂ. ಗೆ ಹೋಲಿಸಿದರೆ 330 ರೂ. ಏರಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 6,00,000 ರೂ. ನೀಡಬೇಕು. ಮಂಗಳವಾರದ 5,96,700 ರೂ.ಗೆ ಹೋಲಿಸಿದರೆ ಬುಧವಾರ 3300 ರೂ. ಏರಿಕೆಯಾಗಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ

ಇಂದು ಬೆಳಗ್ಗಿನ ಧಾರಣೆಯಂತೆ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 55,000 ರೂ. ಇದೆ. ಮಂಗಳೂರು 55,000 ರೂ., ಮೈಸೂರಿನಲ್ಲಿ 55,000 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 60,000 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ.

ಹೊರರಾಜ್ಯಗಳ ಚಿನ್ನದ ದರ

22 ಕ್ಯಾರೆಟ್‌ ಚಿನ್ನದ ದರ : ಚೆನ್ನೈನಲ್ಲಿ 55,300 ರೂ., ಮುಂಬೈನಲ್ಲಿ 55,000 ರೂ., ದೆಹಲಿಯಲ್ಲಿ 55,150 ರೂ., ಕೋಲ್ಕತಾದಲ್ಲಿ 55,000 ರೂ., ಹೈದರಾಬಾದ್‌ 55,000 ರೂ., ಕೇರಳ 55,000 ರೂ., ಪುಣೆ 55,000 ರೂ., ಅಹಮದಾಬಾದ್‌ 55,050 ರೂ., ಜೈಪುರ 55,150 ರೂ., ಲಖನೌ 55,150 ರೂ., ಕೊಯಮುತ್ತೂರು 55,300 ರೂ., ಮಧುರೈ 55,300 ರೂ. ಹಾಗೂ ವಿಜಯವಾಡ 55,000 ರೂ., ಇದೆ.

24 ಕ್ಯಾರೆಟ್‌ ಚಿನ್ನದ ದರ : ಚೆನ್ನೈನಲ್ಲಿ 60,330 ರೂ., ಮುಂಬೈನಲ್ಲಿ 60,000 ರೂ., ದೆಹಲಿಯಲ್ಲಿ 60,150 ರೂ., ಕೋಲ್ಕತಾದಲ್ಲಿ 60,000 ರೂ., ಹೈದರಾಬಾದ್‌ 60,000 ರೂ., ಕೇರಳ 60,000 ರೂ., ಪುಣೆ 60,000 ರೂ., ಅಹಮದಾಬಾದ್‌ 60,050 ರೂ., ಜೈಪುರ 60,150 ರೂ., ಲಖನೌ 60,150 ರೂ., ಕೊಯಮುತ್ತೂರು 60,330 ರೂ., ಮದುರೈ 60,330, ವಿಜಯವಾಡ 60,000 ರೂ. ಇದೆ.

ಕರ್ನಾಟಕದಲ್ಲಿ ಇಂದು ಬೆಳ್ಳಿ ದರ

ಒಂದು ಗ್ರಾಂ ಬೆಳ್ಳಿಗೆ 77.60 ರೂ., 8 ಗ್ರಾಂ ಬೆಳ್ಳಿಗೆ 620.80 ರೂ., 10 ಗ್ರಾಂ ಬೆಳ್ಳಿ ದರ 776 ರೂ., 100 ಗ್ರಾಂ ಬೆಳ್ಳಿಗೆ 7,760 ಮತ್ತು 1 ಕೆ.ಜಿ. ಬೆಳ್ಳಿ ದರ 77,600 ರೂಪಾಯಿ ಇದೆ.