ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price: ಅಪರಂಜಿ ಬಂಗಾರ ಗ್ರಾಂಗೆ 5,820 ರೂಪಾಯಿ; ಕರ್ನಾಟಕದಲ್ಲಿ ಇಂದಿನ 22 ಮತ್ತು 24 ಕ್ಯಾರೆಟ್‌ ಚಿನ್ನದ ದರ ವಿವರ

Gold Price: ಅಪರಂಜಿ ಬಂಗಾರ ಗ್ರಾಂಗೆ 5,820 ರೂಪಾಯಿ; ಕರ್ನಾಟಕದಲ್ಲಿ ಇಂದಿನ 22 ಮತ್ತು 24 ಕ್ಯಾರೆಟ್‌ ಚಿನ್ನದ ದರ ವಿವರ

Gold and Silver Price Today: ಡಾಲರ್‌ ದರ ಹೆಚ್ಚಳದ ಪರಿಣಾಮವೋ ಎಂಬಂತೆ ಕಳೆದ ಹಲವು ದಿನಗಳಿಂದ ಚಿನ್ನದ ದರ ಇಳಿಕೆ ಕಾಣುತ್ತಿದೆ. ಕರ್ನಾಟಕದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.

ಕರ್ನಾಟಕದಲ್ಲಿ ಇಂದಿನ 22 ಮತ್ತು 24 ಕ್ಯಾರೆಟ್‌ ಚಿನ್ನದ ದರ ವಿವರ
ಕರ್ನಾಟಕದಲ್ಲಿ ಇಂದಿನ 22 ಮತ್ತು 24 ಕ್ಯಾರೆಟ್‌ ಚಿನ್ನದ ದರ ವಿವರ (REUTERS)

ಬೆಂಗಳೂರು: ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿರುವ ಅಪಾಯದ ನಡುವೆಯೂ ಚಿನ್ನವು ಹೂಡಿಕೆದಾರರನ್ನು ಸೆಳೆಯುತ್ತಿಲ್ಲ. ಇದೇ ಕಾರಣಕ್ಕೆ ಚಿನ್ನದ ಮೇಲೆ ಹಣ ಹೂಡಲು ಹೂಡಿಕೆದಾರರು ಹಿಂಜರಿಯುತ್ತಿದ್ದಾರೆ. ಸ್ಪಾಟ್‌ ಚಿನ್ನದ ಬೆಲೆ ಕೆಲವು ದಿನಗಳ ಹಿಂದೆ ಎರಡು ತಿಂಗಳ ಕೆಳಮಟ್ಟಕ್ಕೆ ಇಳಿದಿತ್ತು. ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನವು ಬೇಡಿಕೆ ಕಳೆದುಕೊಳ್ಳುತ್ತಿರುವಾಗ ದರ ತುಸುತುಸು ಕಡಿಮೆಯಾಗುತ್ತಿದೆ. ಕಮಾಡಿಟಿ ಮಾರುಕಟ್ಟೆಯನ್ನು ಹೊರತುಪಡಿಸಿ ನೋಡುವುದಾದರೆ ಭಾರತದಲ್ಲಿ ಚಿನ್ನಾಭರಣದ ಮೇಲೆ ಮೋಹ ಕಡಿಮೆಯಾಗಿಲ್ಲ. ಹಬ್ಬಹರಿದಿನಗಳಿಗೆ, ಮದುವೆಯಂತಹ ಕಾರ್ಯಕ್ರಮಗಳಿಗೆ ಅಥವಾ ಭವಿಷ್ಯದ ಅವಶ್ಯಕತೆಗಾಗಿ ಚಿನ್ನ ಖರೀದಿಸುವುದು ಹೆಚ್ಚಾಗುತ್ತಿದೆ. ಚಿನ್ನದಂಗಡಿಗಳಲ್ಲಿ ಆಭರಣಗಳ ಬೇಡಿಕೆ ಹೆಚ್ಚಾಗುತ್ತಿದೆ. ಇಂದು ನೀವು ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು, ಬಳ್ಳಾರಿ ಮುಂತಾದ ನಗರಗಳಲ್ಲಿ ಚಿನ್ನ ಖರೀದಿಸಲು ಬಯಸುವುದಿದ್ದರೆ ದರ ವಿವರ ಇಲ್ಲಿ ನೀಡಲಾಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ದರ

ಇಂದು ಚಿನ್ನದ ದರ ತಟಸ್ಥವಾಗಿದೆ. ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,335 ರೂ ಆಗಿದೆ. 8 ಗ್ರಾಂ ಚಿನ್ನದ ಬೆಲೆ 42,680 ರೂ ಆಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 53,350 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,33,500 ರೂ.

24 ಕ್ಯಾರೆಟ್‌ ಚಿನ್ನದ ದರ

ಅಪರಂಜಿ ಚಿನ್ನದ ದರ ಇಂದು ಕೂಡ ನಿನ್ನೆಯಷ್ಟೇ ಇದೆ. ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,820 ರೂ. ಇದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,560 ರೂ. ನೀಡಬೇಕಾಗುತ್ತದೆ. ಹತ್ತು ಗ್ರಾಂ ಚಿನ್ನದ ದರ ಇಂದು 58,200 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,82,000 ರೂ. ನೀಡಬೇಕು.

ವಿವಿಧ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 53,350 ರೂ. ಇದೆ. ಮಂಗಳೂರು 53,350 ರೂ., ಮೈಸೂರಿನಲ್ಲಿ 53,350 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು.

ಹೊರರಾಜ್ಯಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

ಚೆನ್ನೈನಲ್ಲಿ 53,600 ರೂ., ಮುಂಬೈನಲ್ಲಿ 53,350 ರೂ., ದೆಹಲಿಯಲ್ಲಿ 53,500 ರೂ., ಕೋಲ್ಕತಾದಲ್ಲಿ 53,350 ರೂ., ಹೈದರಾಬಾದ್‌ 53,350 ರೂ., ಕೇರಳ 53,350 ರೂ., ಪುಣೆ 53,350 ರೂ., ಅಹಮದಾಬಾದ್‌ 53,400 ರೂ., ಜೈಪುರ 53,500 ರೂ., ಲಖನೌ 53,500 ರೂ., ಕೊಯಮುತ್ತೂರು 53,600 ರೂ., ಮಧುರೈ 53,600 ರೂ. ಹಾಗೂ ವಿಜಯವಾಡ 53,350 ರೂ., ಇದೆ.

ವಿವಿಧ ನಗರಗಳಲ್ಲಿ ಅಪರಂಜಿ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 58,200 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ.

ಹೊರರಾಜ್ಯಗಳಲ್ಲಿ ಅಪರಂಜಿ ಚಿನ್ನದ ದರ

ಚೆನ್ನೈನಲ್ಲಿ 58,470 ರೂ., ಮುಂಬೈನಲ್ಲಿ 58,200 ರೂ., ದೆಹಲಿಯಲ್ಲಿ 58,350 ರೂ., ಕೋಲ್ಕತಾದಲ್ಲಿ 58,200 ರೂ., ಹೈದರಾಬಾದ್‌ 58,200 ರೂ., ಕೇರಳ 58,200 ರೂ., ಪುಣೆ 58,200 ರೂ., ಅಹಮದಾಬಾದ್‌ 58,250 ರೂ., ಜೈಪುರ 53,500 ರೂ., ಲಖನೌ 58,350 ರೂ., ಕೊಯಮುತ್ತೂರು 58,470 ರೂ., ಮದುರೈ 58,470, ವಿಜಯವಾಡ 58,200 ರೂ. ಇದೆ.

ಇಂದಿನ ಬೆಳ್ಳಿ ದರ

ಕರ್ನಾಟಕದಲ್ಲಿ ಇಂದು ಬೆಳ್ಳಿ ದರ ಇಳಿಕೆ ಕಂಡಿದೆ. ಒಂದು ಗ್ರಾಂ ಬೆಳ್ಳಿಗೆ 71.70 ರೂ., 8 ಗ್ರಾಂ ಬೆಳ್ಳಿಗೆ 573.60 ರೂ., 10 ಗ್ರಾಂ ಬೆಳ್ಳಿ ದರ 717 ರೂ., 100 ಗ್ರಾಂ ಬೆಳ್ಳಿಗೆ 7,170 ಮತ್ತು 1 ಕೆ.ಜಿ. ಬೆಳ್ಳಿ ದರ 71,700 ರೂಪಾಯಿ ಇದೆ.

ಟಿ20 ವರ್ಲ್ಡ್‌ಕಪ್ 2024