Gold Rate Today: ಸತತ ಎರಡನೇ ದಿನವೂ ಬಂಗಾರ ಬೆಲೆಯಲ್ಲಿ ಏರಿಕೆ, ಬೆಳ್ಳಿ ಭಾರಿ ತುಟ್ಟಿ; ಇಂದಿನ ಚಿನ್ನ-ಬೆಳ್ಳಿ ಧಾರಣೆ-business news gold price today in bengaluru 22 carat gold rate in mangaluru mysore karnataka silver price august 17 jra ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Rate Today: ಸತತ ಎರಡನೇ ದಿನವೂ ಬಂಗಾರ ಬೆಲೆಯಲ್ಲಿ ಏರಿಕೆ, ಬೆಳ್ಳಿ ಭಾರಿ ತುಟ್ಟಿ; ಇಂದಿನ ಚಿನ್ನ-ಬೆಳ್ಳಿ ಧಾರಣೆ

Gold Rate Today: ಸತತ ಎರಡನೇ ದಿನವೂ ಬಂಗಾರ ಬೆಲೆಯಲ್ಲಿ ಏರಿಕೆ, ಬೆಳ್ಳಿ ಭಾರಿ ತುಟ್ಟಿ; ಇಂದಿನ ಚಿನ್ನ-ಬೆಳ್ಳಿ ಧಾರಣೆ

Gold price Today: ಚಿನಿವಾರ ಪೇಟೆಯಲ್ಲಿ ಆಗಸ್ಟ್‌ 17ರ ಶನಿವಾರ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿ ಧಾರಣೆಯು ಏಕಾಏಕಿ 4000 ರೂಪಾಯಿ ಏರಿಕೆಯಾಗಿದ್ದು, ಬಂಗಾರದ ಬೆಲೆಯಲ್ಲೂ ಅಲ್ಪ ಹೆಚ್ಚಳವಾಗಿದೆ. ಚಿನ್ನ ಖರೀದಿಗೂ ಮುನ್ನ ಬೆಲೆಬಾಳುವ ಲೋಹಗಳ ಇಂದಿನ ಬೆಲೆ ತಿಳಿದುಕೊಳ್ಳಿ.

Gold price Today in Bengaluru; ಚಿನ್ನ-ಬೆಳ್ಳಿ ಧಾರಣೆ
Gold price Today in Bengaluru; ಚಿನ್ನ-ಬೆಳ್ಳಿ ಧಾರಣೆ

ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ಮರುದಿನ ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. ಆಗಸ್ಟ್‌ 16ರಂದು ದೇಶದ ಮಟ್ಟದಲ್ಲಿ ಚಿನ್ನದ ದರದಲ್ಲಿ ವ್ಯತ್ಯಾಸವಾಗದಿದ್ದರೂ, ನಗರ ಮಟ್ಟದಲ್ಲಿ 10 ರೂಪಾಯಿ ಏರಿಕೆಯಾಗಿತ್ತು. ಸತತ ಎರಡನೇ ದಿನವಾದ ಇಂದು (ಆಗಸ್ಟ್‌ 17ರ ಶನಿವಾರ) ಕೂಡಾ ಹಳದಿ ಲೋಹದ ಬೆಲೆಯಲ್ಲಿ ಪ್ರತಿ ಗ್ರಾಂಗೆ 10 ರೂಪಾಯಿ ಏರಿಕೆಯಾಗಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹೀಗಾಗಿ ಆಭರಣಪ್ರಿಯರು ತುಸು ಯೋಚಿಸಿ ಚಿನ್ನ ಖರೀದಿಗೆ ಮುಂದಾಗುವಂತಾಗಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲಿಯೂ ಭಾರಿ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 4000 ರೂಪಾಯಿ ಹೆಚ್ಚಳವಾಗಿದೆ.

ರಾಜಧಾನಿ ಬೆಂಗಳೂರು, ಕರಾವಳಿ ನಗರಿ ಮಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಆಗಸ್ಟ್‌ 16ರ ಶನಿವಾರದಂದು 22 ಕ್ಯಾರೆಟ್‌ನ ಚಿನ್ನದಲ್ಲಿ ಪ್ರತಿ ಗ್ರಾಂಗೆ 10 ರೂಪಾಯಿ ಏರಿಕೆಯಾಗಿದೆ. ಹೀಗಾಗಿ ಇಂದು 6565ರಲ್ಲಿ ಬೆಲೆ ನಿಂತಿದೆ. ನಿನ್ನೆ ಪ್ರತಿ ಗ್ರಾಂಗೆ 6555 ರೂಪಾಯಿ ಇತ್ತು. 10 ಗ್ರಾಂ ಚಿನ್ನದಲ್ಲಿ 100 ರೂಪಾಯಿ ಏರಿಕೆ ಕಂಡು 65,650ಕ್ಕೆ ಬಂದು ನಿಂತಿದೆ. ಜನವರಿ ಆರಂಭದಿಂದಲೂ ಕಳೆದ ಕೆಲವು ತಿಂಗಳುಗಳಲ್ಲಿ ಬೆಲೆಬಾಳುವ ಲೋಹಗಳ ಬೆಲೆಗಳು ಏರಿಕೆ ಕಂಡಿವೆ.

24 ಕ್ಯಾರೆಟ್‌ನ 10 ಗ್ರಾಮ್‌ ಚಿನ್ನಕ್ಕೆ 110 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಗ್ರಾಂಗೆ 7162 ರೂಪಾಯಿಯಂತೆ ಇಂದು 71620 ರೂಪಾಯಿ ಆಗಿದೆ. ನಿನ್ನೆ ವರಮಹಾಲಕ್ಷ್ಮೀ ಹಬ್ಬದ ನಿಮಿತ್ತ ಬಂಗಾರ ಖರೀದಿಗೆ ಹೆಂಗಳೆಯರು ಮುಂದಾಗಿದ್ದರು. ಹೀಗಾಗಿ ಸತತ ಎರಡನೇ ದಿನವೂ ಬಂಗಾರದ ಬೆಲೆಯಲ್ಲಿ ಏರಿಕೆಯಾಗಿದೆ.

ಒಂದೇ ದಿನದಲ್ಲಿ ಕೆಜಿ ಬೆಳ್ಳಿಗೆ 4 ಸಾವಿರ ರೂ ಹೆಚ್ಚಳ

ಇದೇ ವೇಳೆ, ಇಂದು ಬೆಳ್ಳಿಯ ಬೆಲೆಯಲ್ಲಿ ಪ್ರತಿ ಗ್ರಾಂಗೆ 4 ರೂಪಾಯಿ ಹೆಚ್ಚಳವಾಗಿದೆ. ಹೀಗಾಗಿ ಗ್ರಾಂಗೆ 84ರಂತೆ ಒಂದು ಕೆಜಿ ಬೆಳ್ಳಿ ಬೆಲೆ 84,000 ರೂಪಾಯಿ ಆಗಿದೆ. ಕಳೆದೆರಡು ವಾರಗಳಿಗೆ ಹೋಲಿಸಿದರೆ ಏಕಕಾಲಕ್ಕೆ ನಾಲ್ಕು ಸಾವಿರ ರೂಪಾಯಿ ಏರಿಕೆಯಾಗಿದ್ದು ಇದೇ ಮೊದಲು. ಆಗಸ್ಟ್‌ 13ರಂದು 1000 ರೂಪಾಯಿ ಏರಿಕೆಯಾಗಿತ್ತು. ಉಳಿದಂತೆ ಕೊನೆಯ ಹತ್ತು ದಿನಗಳಲ್ಲಿ ಬೆಳ್ಳಿ ಬೆಲೆ ಏರಿರಲಿಲ್ಲ.

ಪ್ರಮುಖ ನಗರಗಳಲ್ಲಿ ಚಿನ್ನದ ದರ

ಬೆಂಗಳೂರು- 65,650 ರೂಪಾಯಿ.

ಮಂಗಳೂರು-65,650 ರೂಪಾಯಿ.

ಮೈಸೂರು-65,650 ರೂಪಾಯಿ.

ಚೆನ್ನೈ- 65,650 ರೂಪಾಯಿ.

ಮುಂಬೈ- 65,650 ರೂಪಾಯಿ.

ದೆಹಲಿ- 65,800 ರೂಪಾಯಿ.

ಕೋಲ್ಕತ- 65,650 ರೂಪಾಯಿ.

ಹೈದರಾಬಾದ್- 65,650 ರೂಪಾಯಿ.

ಒಂದು ವಾರದಿಂದ ಏರುಗತಿಯಲ್ಲಿ ಬಂಗಾರ ದರ

ಆಗಸ್ಟ್‌ 8ರಂದು ಪ್ರತಿ ಗ್ರಾಂ ಚಿನ್ನದ ಬೆಲೆ 6350 ರೂಪಾಯಿ ಇತ್ತು. ಸತತ ಎರಡು ದಿನಗಳ ಏರಿಕೆ ಬಳಿಕ ಆಗಸ್ಟ್‌ 11ರಂದು 6445 ರೂಪಾಯಿಗೆ ಬಂದು ನಿಂತಿತ್ತು. ಬಳಿಕ ಮತ್ತೆ ಎರಡು ದಿನಗಳ ಏರಿಕೆ ಕಂಡು ಆಗಸ್ಟ್‌ 13ರಂದು 6565 ರೂಪಾಯಿಗೆ ಬಂದು ನಿಂತಿತ್ತು. ಆಗಸ್ಟ್‌ 14ಕ್ಕೆ 10 ರೂಪಾಯಿ ಇಳಿಕೆ ಕಂಡಿತ್ತು. ಸ್ವಾತಂತ್ರ್ಯ ದಿನದಂದು ಬೆಲೆಯಲ್ಲಿ ವ್ಯತ್ಯಾಸ ಆಗಿರಲಿಲ್ಲ. ಇದೀಗ ಸತತ ಎರಡು ದಿನಗಳಲ್ಲಿ ಮತ್ತೆ ಏರಿಕೆಯಾಗಿದೆ.

ಬೆಂಗಳೂರಿನ ಚಿನಿವಾರ ಪೇಟೆಯಲ್ಲಿ ಶುಕ್ರವಾರ (ಆಗಸ್ಟ್ 16)ದ ವಹಿವಾಟಿನ ಕೊನೆಗೆ ಸ್ಟಾಂಡರ್ಡ್‌ ಚಿನ್ನ (99.5 ಪರಿಶುದ್ಧ)ದ ದರ 10 ಗ್ರಾಂಗೆ 72,563 ರೂಪಾಯಿ, ಆಭರಣ ಚಿನ್ನದ ದರ ಗ್ರಾಂಗೆ 6,710 ರೂಪಾಯಿ ಮತ್ತು ಸ್ಪಾಟ್‌ ಬೆಳ್ಳಿದರ (0.999 ಪರಿಶುದ್ಧ) ಒಂದು ಕಿಲೋಗೆ 84,769 ರೂಪಾಯಿ ಇತ್ತು ಎಂದು ಪಿಟಿಐ ವರದಿ ಹೇಳಿದೆ.

ಇನ್ನು ಮುಂಬಯಿ ಚಿನಿವಾರ ಪೇಟೆಯಲ್ಲಿ ಶುಕ್ರವಾರ (ಆಗಸ್ಟ್ 16)ದ ವಹಿವಾಟಿನ ಕೊನೆಗೆ ಸ್ಪಾಟ್ ಬೆಳ್ಳಿದರ ಒಂದು ಕಿಲೋಗೆ 81,500 ರೂಪಾಯಿಗೆ ತಲುಪಿತ್ತು. ಸ್ಟಾಂಡರ್ಡ್ ಚಿನ್ನ (99.5 ಪರಿಶುದ್ಧ)ದ ದರ 10 ಗ್ರಾಂಗೆ 70,321 ರೂಪಾಯಿ, ಅಪರಂಜಿ ಚಿನ್ನ (99.9)ದ ದರ 10 ಗ್ರಾಂಗೆ 70,604 ರೂಪಾಯಿ ತಲುಪಿದೆ ಎಂದು ಪಿಟಿಐ ವರದಿ ಮಾಡಿದೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.