Gold Price Today: ಚಿನ್ನ ಬೆಳ್ಳಿ ದರ ಹೆಚ್ಚಳ, ಆಭರಣದ ಅಂಗಡಿಗೆ ಹೋಗುವ ಮುನ್ನ ಇಂದಿನ ಧಾರಣೆ ತಿಳಿದುಕೊಳ್ಳಿ
Gold and Silver Price Today: ಭಾರತದಲ್ಲಿ ಚಿನ್ನದ ದರ ಏರಿಕೆ ಕಂಡಿದೆ. ಗಣೇಶ ಚತುರ್ಥಿ ಮರುದಿನ ಚಿನ್ನ ಅಥವಾ ಬೆಳ್ಳಿ ಖರೀದಿಸಲು ಬಯಸುವವರು ಇಂದು ನಿನ್ನೆಗಿಂತ ಹೆಚ್ಚು ದರ ನೀಡಿ ಚಿನ್ನಾಭರಣ ಖರೀದಿಸಬೇಕಿದೆ.
ಬೆಂಗಳೂರು: ಹಬ್ಬದ ಋತುವಿನಲ್ಲಿ ಚಿನ್ನಾಭರಣ ದರ ತುಸು ತುಸುವೇ ಏರಿಕೆ ಕಾಣುತ್ತಿದೆ. ಗೌರಿ ಗಣೇಶ ಹಬ್ಬದ ಮರುದಿನವಾದ ಇಂದು ಕೂಡ ಚಿನ್ನ ಮತ್ತು ಬೆಳ್ಳಿ ದರ ತುಸು ಏರಿಕೆ ಕಂಡಿದೆ. ಚಿನ್ನಾಭರಣ ಖರೀದಿಸುವವರಿಗೆ ಕೆಲವು ನೂರು ರೂಪಾಯಿ ಏರಿಕೆಯ ಪರಿಣಾಮ ಉಂಟಾಗಲಿದೆ. ಚಿನ್ನವು ವರ್ಷದಿಂದ ವರ್ಷಕ್ಕೆ ಏರಿಕೆ ಕಾಣುತ್ತಿರುವುದರಿಂದ ಹಣದುಬ್ಬರ ಕಾಲದಲ್ಲಿ ಹೂಡಿಕೆಗೆ ಅತ್ಯುತ್ತಮವಾಗಿದೆ. ಹೀಗಾಗಿ, ಚಿನ್ನಾಭರಣ ಖರೀದಿಸಿದರೆ ನಷ್ಟವಿಲ್ಲ ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.
ಟ್ರೆಂಡಿಂಗ್ ಸುದ್ದಿ
22 ಕ್ಯಾರೆಟ್ ಚಿನ್ನದ ದರ (ಸೆಪ್ಟೆಂಬರ್ 19, 2023)
ಇಂದು 22 ಕ್ಯಾರೆಟ್ ಚಿನ್ನ ಖರೀದಿಸಲು ಅಥವಾ ಇನ್ನಿತರ ಅವಶ್ಯಕತೆಗಳಿಗೆ, ಹೂಡಿಕೆಯ ದೃಷ್ಟಿಯಿಂದ ಚಿನ್ನಾಭರಣ ಖರೀದಿಸಲು ಬಯಸಿದರೆ ದರ ಈ ಮುಂದಿನಂತೆ ಇರುತ್ತದೆ. ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,505 ರೂ ಇದೆ. ನಿನ್ನೆಯ 5,491 ರೂ ದರಕ್ಕೆ ಹೋಲಿಸಿದರೆ 14 ರೂಪಾಯಿಯಷ್ಟು ದರ ಹೆಚ್ಚಾಗಿದೆ.
ಇಂದು 8 ಗ್ರಾಂ ಚಿನ್ನದ ಬೆಲೆ 44,040 ರೂಪಾಯಿ ಇದೆ. ನಿನ್ನೆ 43,928 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ದರ 112 ರೂಪಾಯಿ ಏರಿಕೆಯಾಗಿದೆ. ಕರ್ನಾಟಕದ ವಿವಿಧ ನಗರಗಳಲ್ಲಿ ಇಂದು ಹತ್ತು ಗ್ರಾಂ ಚಿನ್ನದ ದರ 55,050 ರೂ. ಇದೆ. ನಿನ್ನೆಯ 54,910 ರೂ. ಗೆ ಹೋಲಿಸಿದರೆ 140 ರೂ. ಏರಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,50,500 ರೂ. ನೀಡಬೇಕು. ನಿನ್ನೆಯ 5,49,100 ರೂ.ಗೆ ಹೋಲಿಸಿದರೆ 1400 ರೂಪಾಯಿ ಏರಿಕೆಯಾಗಿದೆ.
ಅಪರಂಜಿ ಚಿನ್ನದ ದರ (ಸೆಪ್ಟೆಂಬರ್ 19, 2023)
ಅಪರಂಜಿ ಅಥವಾ 24 ಕ್ಯಾರೆಟ್ ಚಿನ್ನದ ದರ ಖರೀದಿಸಲು ನಿನ್ನೆಗೆ ಹೋಲಿಸಿದರೆ ಇಂದು ಹತ್ತು ರೂಪಾಯಿ ಹೆಚ್ಚು ನೀಡಬೇಕು. ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 6,005 ರೂ. ಇದೆ. ನಿನ್ನೆಯ 5,990 ರೂ.ಗೆ ಹೋಲಿಸಿದರೆ 15 ರೂ. ಏರಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48,040 ರೂ. ನೀಡಬೇಕಾಗುತ್ತದೆ. ನಿನ್ನೆ 47,920 ರೂ. ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 120 ರೂಪಾಯಿ ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 60,050 ರೂ. ಇದೆ. ನಿನ್ನೆಯ 59,900 ರೂ. ಗೆ ಹೋಲಿಸಿದರೆ 150 ರೂ. ಏರಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 6,00,500 ರೂ. ನೀಡಬೇಕು. ನಿನ್ನೆಯ 5,99,000 ರೂ.ಗೆ ಹೋಲಿಸಿದರೆ ಇಂದು 1500 ರೂ. ಏರಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ
ಇಂದಿನ ಬೆಳಗ್ಗಿನ ಧಾರಣೆಯಂತೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಬೆಂಗಳೂರಿನಲ್ಲಿ 55,050 ರೂ. ಇದೆ. ಮಂಗಳೂರು 55,050 ರೂ., ಮೈಸೂರಿನಲ್ಲಿ 55,050 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,400 ರೂ., ಮುಂಬೈನಲ್ಲಿ 55,050 ರೂ., ದೆಹಲಿಯಲ್ಲಿ 55,200 ರೂ., ಕೋಲ್ಕತಾದಲ್ಲಿ 55,050 ರೂ., ಹೈದರಾಬಾದ್ 55,050 ರೂ., ಕೇರಳ 55,050 ರೂ., ಪುಣೆ 55,050 ರೂ., ಅಹಮದಾಬಾದ್ 55,100 ರೂ., ಜೈಪುರ 55,200 ರೂ., ಲಖನೌ 55,200 ರೂ., ಕೊಯಮುತ್ತೂರು 55,400 ರೂ., ಮಧುರೈ 55,400 ರೂ. ಹಾಗೂ ವಿಜಯವಾಡ 55,050 ರೂ., ಇದೆ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಬೆಂಗಳೂರಿನಲ್ಲಿ 60,080 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,440 ರೂ., ಮುಂಬೈನಲ್ಲಿ 60,050 ರೂ., ದೆಹಲಿಯಲ್ಲಿ 60,210 ರೂ., ಕೋಲ್ಕತಾದಲ್ಲಿ 60,080 ರೂ., ಹೈದರಾಬಾದ್ 60,080 ರೂ., ಕೇರಳ 60,080 ರೂ., ಪುಣೆ 60,050 ರೂ., ಅಹಮದಾಬಾದ್ 60,110 ರೂ., ಜೈಪುರ 60,210 ರೂ., ಲಖನೌ 60,210 ರೂ., ಕೊಯಮುತ್ತೂರು 60,440 ರೂ., ಮದುರೈ 60,440, ವಿಜಯವಾಡ 60,050 ರೂ. ಇದೆ.
ಬೆಳ್ಳಿ ದರ
ಚಿನಿವಾರ ಪೇಟೆಯ ಅಪ್‌ಡೇಟ್ ಪ್ರಕಾರ ಸೋಮವಾರ ಬೆಳ್ಳಿ ದರ ಏರಿಕೆ ಕಂಡಿದೆ. ಒಂದು ಗ್ರಾಂ ಬೆಳ್ಳಿಗೆ 74 ರೂ., 8 ಗ್ರಾಂ ಬೆಳ್ಳಿಗೆ 592 ರೂ., 10 ಗ್ರಾಂ ಬೆಳ್ಳಿ ದರ 740 ರೂ., 100 ಗ್ರಾಂ ಬೆಳ್ಳಿಗೆ 7,400 ಮತ್ತು 1 ಕೆ.ಜಿ. ಬೆಳ್ಳಿ ದರ 754,000 ರೂಪಾಯಿ ಇದೆ.