Gold Rate: ಗೋಲ್ಡ್ ರೇಟ್ ಎಷ್ಟು, ಬೆಂಗಳೂರು ಮೈಸೂರು ಮಂಗಳೂರು ದೆಹಲಿ ಚೆನ್ನೈ ಕೇರಳ ಸೇರಿದಂತೆ ವಿವಿಧ ನಗರಗಳಲ್ಲಿನ ಇಂದಿನ ಧಾರಣೆ
Gold and Silver Price Today: ಬೆಲೆಬಾಳುವ ಲೋಹ ಚಿನ್ನದ ದರ ಇಂದು ಕೂಡ ಇಳಿಕೆ ಕಂಡಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು 59,840 ರೂಪಾಯಿಗೆ ತಲುಪಿದೆ. ಕಳೆದ ಒಂದೆರಡು ದಿನಗಳಿಂದ ಭಾರತದಲ್ಲಿ ಚಿನ್ನದ ದರ ಇಳಿಕೆ ಕಾಣುತ್ತಿದೆ.
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ (Gold Price Update) ತುಸುತುಸುವೇ ಇಳಿಕೆ ಕಾಣುತ್ತಿದ್ದು, ಬೆಲೆಬಾಳುವ ಆಭರಣ ಖರೀದಿಸಲು ಬಯಸುವವರ ಮುಖದಲ್ಲಿ ತುಸು ಮಂದಹಾಸ ಮೂಡಿಸಿದೆ. ಇನ್ನು ಮದುವೆ ಇತ್ಯಾದಿ ಶುಭ ಕಾರ್ಯಕ್ರಮಗಳು ಹೆಚ್ಚು ನಡೆಯುವ ಸಮಯವಾಗಿರುವುದರಿಂದ ಚಿನ್ನಾಭರಣ ಖರೀದಿಸುವವರಿಗೆ ಕೊಂಚ ಹಣ ಉಳಿತಾಯವಾಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ದರದ ಏರಿಳಿತವು ಭಾರತದ ಚಿನ್ನದ ದರದ ಇಳಿಕೆ ಅಥವಾ ಏರಿಕೆ ಮೇಲೆ ಪರಿಣಾಮ ಬೀರುತ್ತಿದೆ. ಕರ್ನಾಟಕದ ಬೆಂಗಳೂರು, ಮೈಸೂರು, ಬಳ್ಳಾರಿ, ಮಂಗಳೂರು ಮಾತ್ರವಲ್ಲದೆ ಹೊರರಾಜ್ಯಗಳ ಪ್ರಮುಖ ನಗರಗಳಾದ ಕೇರಳ, ಚೆನ್ನೈ, ದೆಹಲಿ ಸೇರಿದಂತೆ ವಿವಿಧ ನಗರಗಳ ಚಿನ್ನ ಬೆಳ್ಳಿ ಧಾರಣೆ ವಿವರ ಇಲ್ಲಿ ನೀಡಲಾಗಿದೆ.
22 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ ₹5,485 ರೂ ಇದೆ. ನಿನ್ನೆಯ 5,500 ರೂ ದರಕ್ಕೆ ಹೋಲಿಸಿದರೆ ರೂ., 15 ಇಳಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 43,880 ರೂ ಆಗಿದೆ. ನಿನ್ನೆ 44,000 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 120., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 54,850 ರೂ. ಇದೆ. ನಿನ್ನೆಯ 55,000 ರೂ. ಗೆ ಹೋಲಿಸಿದರೆ 150 ರೂ., ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,48,500 ರೂ. ನೀಡಬೇಕು. ನಿನ್ನೆಯ 5,50,000 ರೂ.ಗೆ ಹೋಲಿಸಿದರೆ ಇಂದು 1500ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 5,984 ರೂ. ಇದೆ. ನಿನ್ನೆಯ 6,000 ರೂ.ಗೆ ಹೋಲಿಸಿದರೆ 16 ರೂ. ಇಳಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,872 ರೂ. ನೀಡಬೇಕಾಗುತ್ತದೆ. ನಿನ್ನೆ 48,000 ರೂ. ಇತ್ತು. ಇಂದು 128 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,840 ರೂ. ಇದೆ. ನಿನ್ನೆಯ 60,000 ರೂ. ಗೆ ಹೋಲಿಸಿದರೆ 160 ರೂ. ಇಳಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,98,400 ರೂ. ನೀಡಬೇಕು. ನಿನ್ನೆಯ 6,00,000 ರೂ.ಗೆ ಹೋಲಿಸಿದರೆ ಇಂದು 1600 ರೂ. ಇಳಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ದರ
10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 54,850 ರೂ. ಇದೆ. ಮಂಗಳೂರು 54,850 ರೂ., ಮೈಸೂರಿನಲ್ಲಿ 54,850 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,100 ರೂ., ಮುಂಬೈನಲ್ಲಿ 54,850 ರೂ., ದೆಹಲಿಯಲ್ಲಿ 55,000 ರೂ., ಕೋಲ್ಕತಾದಲ್ಲಿ 54,850 ರೂ., ಹೈದರಾಬಾದ್ 54,850 ರೂ., ಕೇರಳ 54,850 ರೂ., ಪುಣೆ 54,850 ರೂ., ಅಹಮದಾಬಾದ್ 54,900 ರೂ., ಜೈಪುರ 55,000 ರೂ., ಲಖನೌ 55,000 ರೂ., ಕೊಯಮುತ್ತೂರು 55,100 ರೂ., ಮಧುರೈ 55,100 ರೂ. ಹಾಗೂ ವಿಜಯವಾಡ 54,850 ರೂ., ಇದೆ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 59,840 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,110 ರೂ., ಮುಂಬೈನಲ್ಲಿ 59,840 ರೂ., ದೆಹಲಿಯಲ್ಲಿ 60,000 ರೂ., ಕೋಲ್ಕತಾದಲ್ಲಿ 59,840 ರೂ., ಹೈದರಾಬಾದ್ 59,840 ರೂ., ಕೇರಳ 59,840 ರೂ., ಪುಣೆ 59,840 ರೂ., ಅಹಮದಾಬಾದ್ 59,890 ರೂ., ಜೈಪುರ 60,000 ರೂ., ಲಖನೌ 60,000 ರೂ., ಕೊಯಮುತ್ತೂರು 60,110 ರೂ., ಮದುರೈ 60,110, ವಿಜಯವಾಡ 59,840 ರೂ. ಇದೆ.
ಬೆಳ್ಳಿ ದರ ಎಷ್ಟು?
ಚಿನಿವಾರ ಪೇಟೆಯ ಅಪ್ಡೇಟ್ ಪ್ರಕಾರ ಭಾನುವಾರ ಬೆಳ್ಳಿ ದರ ತುಸು ಇಳಿಕೆ ಕಂಡಿದೆ. ಒಂದು ಗ್ರಾಂ ಬೆಳ್ಳಿಗೆ 73.50 ರೂ., 8 ಗ್ರಾಂ ಬೆಳ್ಳಿಗೆ 588 ರೂ., 10 ಗ್ರಾಂ ಬೆಳ್ಳಿ ದರ 735 ರೂ., 100 ಗ್ರಾಂ ಬೆಳ್ಳಿಗೆ 7,350 ಮತ್ತು 1 ಕೆ.ಜಿ. ಬೆಳ್ಳಿ ದರ 73,500 ರೂಪಾಯಿ ಇದೆ.