ಬಂಗಾರದ ಬೆಲೆ ಕಳೆದ ಅಕ್ಷಯ ತೃತೀಯಕ್ಕಿಂತ ಈ ಸಲಕ್ಕೆ ಶೇ 13 ಹೆಚ್ಚಳ; 2014 ರಿಂದೀಚೆಗಿನ ವಾರ್ಷಿಕ ಚಿನ್ನದ ದರದ ಐತಿಹಾಸಿಕ ಟ್ರೆಂಡ್ ಹೀಗಿತ್ತು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಂಗಾರದ ಬೆಲೆ ಕಳೆದ ಅಕ್ಷಯ ತೃತೀಯಕ್ಕಿಂತ ಈ ಸಲಕ್ಕೆ ಶೇ 13 ಹೆಚ್ಚಳ; 2014 ರಿಂದೀಚೆಗಿನ ವಾರ್ಷಿಕ ಚಿನ್ನದ ದರದ ಐತಿಹಾಸಿಕ ಟ್ರೆಂಡ್ ಹೀಗಿತ್ತು

ಬಂಗಾರದ ಬೆಲೆ ಕಳೆದ ಅಕ್ಷಯ ತೃತೀಯಕ್ಕಿಂತ ಈ ಸಲಕ್ಕೆ ಶೇ 13 ಹೆಚ್ಚಳ; 2014 ರಿಂದೀಚೆಗಿನ ವಾರ್ಷಿಕ ಚಿನ್ನದ ದರದ ಐತಿಹಾಸಿಕ ಟ್ರೆಂಡ್ ಹೀಗಿತ್ತು

Akshaya Tritiya 2024: ಭಾರತದಲ್ಲಿ ಈಗ ಚಿನ್ನದ ದರ 70,000 ರೂಪಾಯಿ ಆಸುಪಾಸಿನಲ್ಲಿದೆ. ಬಂಗಾರದ ಬೆಲೆ ಕಳೆದ ಅಕ್ಷಯ ತೃತೀಯಕ್ಕಿಂತ ಈ ಸಲಕ್ಕೆ ಶೇ 13 ಹೆಚ್ಚಳವಾಗಿದೆ. 2014ರಿಂದೀಚೆಗಿನ ವಾರ್ಷಿಕ ಚಿನ್ನದ ದರದ ಐತಿಹಾಸಿಕ ಟ್ರೆಂಡ್ ಅವಲೋಕಿಸುವುದಕ್ಕೆ ಈ ದಿನ ಒಂದು ನಿಮಿತ್ತ.

Akshaya Tritiya 2024: ಬಂಗಾರದ ಬೆಲೆ ಕಳೆದ ಅಕ್ಷಯ ತೃತೀಯಕ್ಕಿಂತ ಈ ಸಲಕ್ಕೆ ಶೇ 13 ಹೆಚ್ಚಳವಾಗಿದೆ. (ಸಾಂಕೇತಿಕ ಚಿತ್ರ)
Akshaya Tritiya 2024: ಬಂಗಾರದ ಬೆಲೆ ಕಳೆದ ಅಕ್ಷಯ ತೃತೀಯಕ್ಕಿಂತ ಈ ಸಲಕ್ಕೆ ಶೇ 13 ಹೆಚ್ಚಳವಾಗಿದೆ. (ಸಾಂಕೇತಿಕ ಚಿತ್ರ)

ನವದೆಹಲಿ/ ಬೆಂಗಳೂರು: ಚಿನ್ನಾಭರಣ ಮಳಿಗೆಗಳಲ್ಲಿ ಇಂದಿನ ಬಂಗಾರದ ಬೆಲೆ ಏನೇ ಇರಬಹುದು, ಚಿನ್ನ ಖರೀದಿಸಿ ನಷ್ಟಕ್ಕೆ ಒಳಗಾದವರಿಲ್ಲ. ಇದು ಸಾಮಾನ್ಯ ಜನರ ನಡುವೆ ಚಾಲ್ತಿಯಲ್ಲಿರುವ ಮಾತು. ಇದೇಕೆ ಈಗ ಅಂತೀರಾ. ಇಂದು ಅಕ್ಷಯ ತೃತೀಯ (Akshaya Tritiya 2024). ಭಾರತದಲ್ಲಿ ಈಗ ಚಿನ್ನದ ಬೆಲೆ 70,000 ರೂಪಾಯಿ ಆಸುಪಾಸಿನಲ್ಲಿದೆ. ಬಂಗಾರದ ಬೆಲೆ ಕಳೆದ ಅಕ್ಷಯ ತೃತೀಯಕ್ಕಿಂತ ಈ ಸಲ ಶೇಕಡ 13 ಹೆಚ್ಚಳವಾಗಿದೆ ಎಂಬುದೇ ಸದ್ಯ ಚರ್ಚೆಯ ವಿಚಾರ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇಂದಿನ ಬಂಗಾರದ ಬೆಲೆ 70,000 ರೂಪಾಯಿ ಆಸುಪಾಸಿನಲ್ಲಿರುವಾಗ ಚಿನ್ನ ಖರೀದಿಸುವುದು ಸೂಕ್ತವೇ? ಎಂಬ ಪ್ರಶ್ನೆ ಸಹಜ. ಆದರೆ, ಸಿಎನ್‌ಬಿಸಿ ಟಿವಿ 18ನಲ್ಲಿ ಇದೇ ವಿಚಾರ ಚರ್ಚೆಯಾಗುತ್ತಿದ್ದ ವೇಳೆ ಪರಿಣತರು,"ಯಾರೇನೇ ಹೇಳಿ ಚಿನ್ನದ ದರ ಕಳೆದ ಅಕ್ಷಯ ತೃತೀಯಕ್ಕೆ ಹೋಲಿಸಿದರೆ ಈಗ ಶೇಕಡ 13 ಹೆಚ್ಚಳವಾಗಿದೆ" ಎಂದು ಹೇಳಿದ್ದು ಗಮನಸೆಳೆಯಿತು.

ಟಿವಿ ಚರ್ಚಾ ಕಾರ್ಯಕ್ರಮದಲ್ಲಿದ್ದ ಕಾಮಾ ಜುವೆಲ್ಲರಿ ಎಂಡಿ ಕೊಲಿನ್ ಶಾ, ಈ ಅಕ್ಷಯ ತೃತೀಯಕ್ಕೆ ಚಿನ್ನಾಭರಣಗಳ ಬೇಡಿಕೆ ದುಪ್ಪಟ್ಟಾಗಿದೆ. ಯುವ ಸಮೂಹ ಹೂಡಿಕೆಗಳಿಗಿಂತ ಆಭರಣ ಖರೀದಿ ಕಡೆಗೆ ಗಮನಹರಿಸಿರುವುದು ಕಂಡುಬಂದಿದೆ. ಗ್ರಾಹಕ ಮನಸ್ಥಿತಿಯಲ್ಲಿ ಆಗಿರುವ ಬದಲಾವಣೆ ಇದು ಎಂದು ಹೇಳಿದರು.

2014 ರಿಂದೀಚೆಗಿನ ವಾರ್ಷಿಕ ಚಿನ್ನದ ದರದ ಐತಿಹಾಸಿಕ ಟ್ರೆಂಡ್ ಹೀಗಿತ್ತು

ಚಿನ್ನದ ದರದ ಐತಿಹಾಸಿಕ ಟ್ರೆಂಡ್ ಗಮನಿಸಿದರೆ 2014 ರಿಂದೀಚೆಗೆ ವಾರ್ಷಿಕವಾಗಿ ಬಂಗಾರದ ಬೆಲೆ ಏರಿಕೊಂಡೇ ಸಾಗಿದೆ. ಅದರ ವಿವರ ಇಲ್ಲಿದೆ.

ವಾರ್ಷಿಕ ಚಿನ್ನದ ದರದ ಐತಿಹಾಸಿಕ ಟ್ರೆಂಡ್‌ 

ವರ್ಷಅಪರಂಜಿ ಚಿನ್ನದ ದರ (10 ಗ್ರಾಂ) ರೂಪಾಯಿ
201428,006.50
201526,343.50
201628,623.50
201729,667.50
201831,438.00
201935,220.00
202048,651.00
202148,720.00
202252,670.00
202365,330.00
2024 (ಮೇ 8)73,930.00

ಅಕ್ಷಯ ತೃತೀಯ 2024; ಏರುಗತಿಯಲ್ಲಿದೆ ಬಂಗಾರದ ಬೆಲೆ

ಚಿನ್ನದ ಬೆಲೆ ಏರುಗತಿಯಲ್ಲಿ ಇರುವ ಕಾರಣ ಖರೀದಿಸಿದರೆ ನಷ್ಟವಿಲ್ಲ ಎಂಬುದು ಬಹಳಷ್ಟು ಪರಿಣತರ ಅಭಿಪ್ರಾಯ. ಆದರೆ, ಚಿನ್ನದ ಆಭರಣಗಳಲ್ಲಿ ಹೂಡಿಕೆ ಮಾಡುವುದಕ್ಕಿಂತ ಗಟ್ಟಿ ಅಥವಾ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕ ಎನ್ನುತ್ತಾರೆ ಅನೇಕರು. ಇದಕ್ಕೆ ಪೂರಕವಾಗಿ ಆರು ವರ್ಷ ಹಿಂದೆ ಸಾವರಿನ್ ಗೋಲ್ಡ್ ಬಾಂಡ್‌ ಸಿರೀಸ್‌ VI 2017-18 ಖರೀದಿಸಿದ್ದರೆ ಇಂದು ಅದರ ಲಾಭ 4,196 ರೂಪಾಯಿ. ಅದೇ ರೀತಿ ಅದರ ಮೌಲ್ಯ ಶೇ 142 ವೃದ್ಧಿಯಾಗಿರುವುದನ್ನು ಆರ್‌ಬಿಐ ಪತ್ರಿಕಾ ಹೇಳಿಕೆಯಲ್ಲಿ ಇತ್ತೀಚೆಗೆ ವಿವರಿಸಿತ್ತು.

ಹೂಡಿಕೆಗೆ ಸಂಬಂಧಿಸಿದ ನವೋದ್ಯಮಗಳು ಗೋಲ್ಡ್ ಇಟಿಎಫ್‌, ಡಿಜಿಟಲ್ ಗೋಲ್ಡ್‌ನಲ್ಲಿ ಹೂಡಿಕೆ ಮಾಡುವುದಕ್ಕೆ ಸಲಹೆ ನೀಡುತ್ತವೆ. ಇದಕ್ಕೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಾವರಿನ್ ಗೋಲ್ಡ್ ಬಾಂಡ್‌ ಸಿರೀಸ್‌ ಅನ್ನು ಉದಾಹರಿಸುತ್ತಾರೆ. ಹೂಡಿಕೆ ಲಾಭದಾಯಕ ಎಂಬುದನ್ನು ಬಿಂಬಿಸುತ್ತಿದೆ. ಆದಾಗ್ಯೂ, ಹೂಡಿಕೆ ವೈಯಕ್ತಿಕ ನಿರ್ಧಾರವಾಗಿದ್ದು, ಪರಿಣತರ ಸಲಹೆ ಪಡೆದು ಸಮಾಲೋಚನೆ ಬಳಿಕ ನಿರ್ಧಾರ ತೆಗೆದುಕೊಳ್ಳುವುದು ಒಳಿತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.