Gold Rate Today; ವಾರಾಂತ್ಯ ಭಾನುವಾರ ಬೇರೆ, ಚಿನ್ನಾಭರಣ ಖರೀದಿ ಆಲೋಚನೆ ಇದೆಯಾ, ಚಿನ್ನ ಬೆಳ್ಳಿ ರೇಟ್ ಡೌನ್ ಆಗಿದೆ ನೋಡಿ
Gold Rate Today in Bengaluru; ಚಿನ್ನಾಭರಣ ಖರೀದಿಗೆ ಇದಕ್ಕಿಂತ ಬೇರೆ ಸಮಯ ಬೇಕಾ?, ವಾರಾಂತ್ಯ ಭಾನುವಾರ ಬೇರೆ, ಚಿನ್ನಾಭರಣ ಖರೀದಿ ಆಲೋಚನೆ ಇದೆಯಾ, ಚಿನ್ನ ಬೆಳ್ಳಿ ರೇಟ್ ಡೌನ್ ಆಗಿದೆ ನೋಡಿ. ಖರೀದಿಗೆ ಮೊದಲು ಈ ಸುದ್ದಿಯನ್ನೊಮ್ಮೆ ಗಮನಿಸಿ.
ಬೆಂಗಳೂರು: ವಾರಾಂತ್ಯದ ಭಾನುವಾರ. ಬಿಡುವಾಗಿದ್ದೇವೆ. ಚಿನ್ನಾಭರಣ ಏನಾದರೂ ಖರೀದಿ ಮಾಡಿದರೆ ಆದೀತು ಎಂಬ ಆಲೋಚನೆಯಲ್ಲಿದ್ದೀರಾ? ಹಾಗಾದರೆ ತಡ ಯಾಕೆ, ಚಿನ್ನ ಬೆಳ್ಳಿ ರೇಟ್ ಡೌನ್ ಆಗಿದೆ. ಕೇಂದ್ರ ಬಜೆಟ್‌ನಲ್ಲಿ ತೆರಿಗೆ ಪ್ರಮಾಣ ಕಡಿಮೆ ಮಾಡಿದ ನಂತರದಲ್ಲಿ ಚಿನ್ನ ಬೆಳ್ಳಿ ರೇಟ್ ಸ್ವಲ್ಪ ಇಳಿಕೆಯಾಗಿದೆ.
ಬೆಂಗಳೂರಿನ ಚಿನಿವಾರ ಪೇಟೆಯಲ್ಲಿ ಶನಿವಾರ (ಆಗಸ್ಟ್ 3)ದ ವಹಿವಾಟಿನ ಕೊನೆಗೆ 10 ಗ್ರಾಂ ಅಪರಂಜಿ ಚಿನ್ನದ ದರ 71,820 ರೂಪಾಯಿ ಇತ್ತು. ಇನ್ನು ಆಭರಣ ಚಿನ್ನದ ದರ 10 ಗ್ರಾಂಗೆ 66,430 ರೂಪಾಯಿ ಇತ್ತು. ಅದೇ ರೀತಿ ಬೆಳ್ಳಿಯ ಸ್ಪಾಟ್ ದರ ಕಿಲೋಗೆ 84,800 ರೂಪಾಯಿ ಇತ್ತು.
ಇನ್ನುಳಿದಂತೆ, ಚಿನ್ನ ಮತ್ತು ಬೆಳ್ಳಿಯ ದರ ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ತುಸು ಕಡಿಮೆಯಾಗಿತ್ತು. ಇಳಿಕೆಯ ಟ್ರೆಂಡ್ ಮುಂದುವರಿದಂತೆ ಕಾಣುತ್ತಿದ್ದು, ಕಳೆದ 10 ದಿನಗಳ ಅವಧಿಯಲ್ಲಿ 6 ದಿನ ಚಿನ್ನದ ದರ ಏರಿತ್ತು. ಉಳಿದಂತೆ 4 ದಿನ ಇಳಿಕೆ ದಾಖಲಿಸಿತ್ತು.
ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ದರ (22 carat gold rate)
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.
ಬೆಂಗಳೂರು- 64,700 ರೂಪಾಯಿ.
ಮಂಗಳೂರು- 64,700 ರೂಪಾಯಿ.
ಮೈಸೂರು-64,700 ರೂಪಾಯಿ.
ಚೆನ್ನೈ- 64,500 ರೂಪಾಯಿ.
ಮುಂಬೈ- 64,700 ರೂಪಾಯಿ.
ದೆಹಲಿ- 64,850 ರೂಪಾಯಿ.
ಕೋಲ್ಕತ- 64,700 ರೂಪಾಯಿ.
ಹೈದರಾಬಾದ್- 64,700 ರೂಪಾಯಿ.
ಕೇರಳ- 64,700 ರೂಪಾಯಿ.
ಪುಣೆ- 64,700 ರೂಪಾಯಿ.
ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ
ಬೆಂಗಳೂರು- 70,580 ರೂಪಾಯಿ.
ಮಂಗಳೂರು- 70,580 ರೂಪಾಯಿ.
ಮೈಸೂರು- 70,580 ರೂಪಾಯಿ.
ಚೆನ್ನೈ- 70,360 ರೂಪಾಯಿ.
ಮುಂಬೈ- 70,580 ರೂಪಾಯಿ.
ದೆಹಲಿ- 70,730ರೂಪಾಯಿ.
ಕೋಲ್ಕತ- 70,580 ರೂಪಾಯಿ.
ಹೈದರಾಬಾದ್- 70,580 ರೂಪಾಯಿ.
ಕೇರಳ- 70,580 ರೂಪಾಯಿ.
ಪುಣೆ- 70,580 ರೂಪಾಯಿ.
ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today): ಬೆಂಗಳೂರು- 85,750 ರೂಪಾಯಿ, ಮೈಸೂರು- 85,750 ರೂಪಾಯಿ, ಮಂಗಳೂರು- 85,750 ರೂಪಾಯಿ, ಮುಂಬೈ- 85,500 ರೂಪಾಯಿ, ಚೆನ್ನೈ- 90,900 ರೂಪಾಯಿ, ದೆಹಲಿ- 85,500 ರೂಪಾಯಿ, ಹೈದರಾಬಾದ್- 90,900 ರೂಪಾಯಿ, ಕೋಲ್ಕತ್ತ-85,500 ರೂಪಾಯಿ ಇದೆ.