Gold Rate Today; ಚಿನ್ನ ಬೆಳ್ಳಿ ದರ ಇಳಿಕೆ; ಬೆಳ್ಳಿ ಬಂಗಾರದ ಆಭರಣ ಖರೀದಿಗೂ, ಹೂಡಿಕೆಗೂ ಈ ದಿನ ಬೆಸ್ಟ್
Gold Silver Rate Today; ಚಿನ್ನಾಭರಣ ಪ್ರಿಯರಿಗಷ್ಟೇ ಅಲ್ಲ, ಹೂಡಿಕೆದಾರರಿಗೂ ಚಿನ್ನ ಬೆಳ್ಳಿ ಅಚ್ಚುಮೆಚ್ಚು. ಚಿನ್ನ ಬೆಳ್ಳಿ ದರ ಇಳಿಕೆಯಾಗಿದ್ದು, ಚಿನ್ನ ಬೆಳ್ಳಿ ಆಭರಣ ಖರೀದಿಗೂ, ಹೂಡಿಕೆಗೂ ಈ ದಿನ ಬೆಸ್ಟ್. ನಿನ್ನೆ ಮತ್ತು ಇಂದಿನ ಚಿನ್ನ ಬೆಳ್ಳಿ ಧಾರಣೆ ವಿವರ ಹೀಗಿದೆ.
ಬೆಂಗಳೂರು: ಚಿನಿವಾರಪೇಟೆ ವಹಿವಾಟನ್ನು ಹೂಡಿಕೆದಾರರೂ, ಚಿನ್ನಾಭರಣ ಪ್ರಿಯರೂ ಗಮನಿಸುತ್ತಾರೆ. ನಿತ್ಯದ ಚಿನ್ನ ಬೆಳ್ಳಿ ದರದ ಮೇಲೆ ಸದಾ ನಿಗಾ ಇಟ್ಟಿರುತ್ತಾರೆ. ಕಳೆದ ಕೆಲವು ದಿನಗಳಿಂದ ಚಿನ್ನ ಬೆಳ್ಳಿ ದರ ಇಳಿಕೆಯ ಹಾದಿ ಅಥವಾ ಸ್ವಲ್ಪ ಮಟ್ಟಿನ ಸ್ಥಿರ ಹಾದಿಯಲ್ಲಿದ್ದು, ಚಿನ್ನಾಭರಣ ಖರೀದಿಗೂ, ಹೂಡಿಕೆಗೂ ಅವಕಾಶ ಮಾಡಿಕೊಟ್ಟಿದೆ.
ಬೆಂಗಳೂರು ಚಿನಿವಾರ ಪೇಟೆಯಲ್ಲಿ ನಿನ್ನೆ (ಆಗಸ್ಟ್ 7) ದಿನದ ವಹಿವಾಟು ಕೊನೆಯಾದಾಗ 10 ಗ್ರಾಂ ಸ್ಟ್ಯಾಂಡರ್ಡ್ (99.5 ಶುದ್ಧ) ಚಿನ್ನದ ದರ 70,850 ರೂಪಾಯಿ, 10 ಗ್ರಾಂ ಆಭರಣ ಚಿನ್ನದ ದರ 65,555 ರೂಪಾಯಿ ಮತ್ತು ಬೆಳ್ಳಿ (0.999 ಪರಿಶುದ್ಧ) ಸ್ಪಾಟ್ ದರ ಕಿಲೋಗೆ 81,600 ರೂಪಾಯಿ ಇತ್ತು.
ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ದರ (22 carat gold rate)
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ ನಿನ್ನೆ (ಆಗಸ್ಟ್ 7)ಗೆ ಹೋಲಿಸಿದರೆ ಇಂದು 10 ರೂಪಾಯಿ ಇಳಿಕೆಯಾಗಿದೆ.
ಬೆಂಗಳೂರು- 63,490 ರೂಪಾಯಿ.
ಮಂಗಳೂರು- 63,490 ರೂಪಾಯಿ.
ಮೈಸೂರು-63,490 ರೂಪಾಯಿ.
ಚೆನ್ನೈ- 63,290 ರೂಪಾಯಿ.
ಮುಂಬೈ- 63,490 ರೂಪಾಯಿ.
ದೆಹಲಿ- 64,640 ರೂಪಾಯಿ.
ಕೋಲ್ಕತ- 63,490 ರೂಪಾಯಿ.
ಹೈದರಾಬಾದ್- 63,490 ರೂಪಾಯಿ.
ಕೇರಳ- 63,490 ರೂಪಾಯಿ.
ಪುಣೆ- 63,490 ರೂಪಾಯಿ.
ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ
ಬೆಂಗಳೂರು- 69,260 ರೂಪಾಯಿ.
ಮಂಗಳೂರು- 69,260 ರೂಪಾಯಿ.
ಮೈಸೂರು- 69,260 ರೂಪಾಯಿ.
ಚೆನ್ನೈ- 69,050 ರೂಪಾಯಿ.
ಮುಂಬೈ- 69,260 ರೂಪಾಯಿ.
ದೆಹಲಿ- 69,410ರೂಪಾಯಿ.
ಕೋಲ್ಕತ- 69,260 ರೂಪಾಯಿ.
ಹೈದರಾಬಾದ್- 69,260 ರೂಪಾಯಿ.
ಕೇರಳ- 69,260 ರೂಪಾಯಿ.
ಪುಣೆ- 69,260 ರೂಪಾಯಿ.
ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today): ಚಿನಿವಾರ ಪೇಟೆಯಲ್ಲಿ ಒಂದು ಕಿಲೋ ಬೆಳ್ಳಿ ದರ 100 ರೂಪಾಯಿ ಇಳಿಕೆಯಾಗಿದೆ. ಬೆಂಗಳೂರು- 80,900 ರೂಪಾಯಿ, ಮೈಸೂರು- 80,900 ರೂಪಾಯಿ, ಮಂಗಳೂರು- 80,900 ರೂಪಾಯಿ, ಮುಂಬೈ- 81,900 ರೂಪಾಯಿ, ಚೆನ್ನೈ- 86,900 ರೂಪಾಯಿ, ದೆಹಲಿ- 81,900 ರೂಪಾಯಿ, ಹೈದರಾಬಾದ್- 86,900 ರೂಪಾಯಿ, ಕೋಲ್ಕತ್ತ-81,900 ರೂಪಾಯಿ ಇದೆ.