ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Price: ಕರ್ನಾಟಕದಲ್ಲಿ 22 ಕ್ಯಾರೆಟ್‌, ಅಪರಂಜಿ ಚಿನ್ನದ ದರದಲ್ಲಿ ಇಳಿಕೆ; ಚಿನಿವಾರ ಪೇಟೆಯ ಇಂದಿನ ಧಾರಣೆ

Gold Price: ಕರ್ನಾಟಕದಲ್ಲಿ 22 ಕ್ಯಾರೆಟ್‌, ಅಪರಂಜಿ ಚಿನ್ನದ ದರದಲ್ಲಿ ಇಳಿಕೆ; ಚಿನಿವಾರ ಪೇಟೆಯ ಇಂದಿನ ಧಾರಣೆ

Gold Price Today: ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಮುಂದುವರೆದಿದೆ. ಗುರುವಾರ ಕರ್ನಾಟಕದ ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನದ ದರದಲ್ಲಿ ಗಮನಾರ್ಹ ಇಳಿಕೆ ಕಂಡಿದೆ.

Gold Price: ಕರ್ನಾಟಕದಲ್ಲಿ 22 ಕ್ಯಾರೆಟ್‌, ಅಪರಂಜಿ ಚಿನ್ನದ ದರದಲ್ಲಿ ಇಳಿಕೆ
Gold Price: ಕರ್ನಾಟಕದಲ್ಲಿ 22 ಕ್ಯಾರೆಟ್‌, ಅಪರಂಜಿ ಚಿನ್ನದ ದರದಲ್ಲಿ ಇಳಿಕೆ

ಬೆಂಗಳೂರು: ಜಾಗತಿಕ ಮಾರುಕಟ್ಟೆಯ ಪ್ರಭಾವವೋ ಎಂಬಂತೆ ರಾಜ್ಯದಲ್ಲಿ ಮತ್ತೆ ಚಿನ್ನದ ದರ ಇಳಿಕೆ ಕಂಡಿದೆ. ನಿನ್ನೆಯೂ ಚಿನ್ನದ ದರ ಇಳಿಕೆ ಕಂಡಿತ್ತು. ಗುರುವಾರ ಕರ್ನಾಟಕದಲ್ಲಿ ಅಪರಂಜಿ ಚಿನ್ನದ ದರ 10 ಗ್ರಾಂಗೆ 280 ರೂಪಾಯಿಷ್ಟು ಇಳಿಕೆ ಕಂಡಿದೆ. ಇದೇ ಸಮಯದಲ್ಲಿ 22 ಕ್ಯಾರೆಟ್‌ ಚಿನ್ನದ ದರ 10 ಗ್ರಾಂಗೆ 250 ರೂಪಾಯಿಯಷ್ಟು ಇಳಿಕೆ ಕಂಡಿದೆ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,450 ರೂ ಇದೆ. ನಿನ್ನೆಯ 5,475 ರೂ ದರಕ್ಕೆ ಹೋಲಿಸಿದರೆ ರೂ., 25 ಇಳಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 43,600 ರೂ ಆಗಿದೆ. ನಿನ್ನೆ 43,800 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 200., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 54,500 ರೂ. ಇದೆ. ನಿನ್ನೆಯ 54,750 ರೂ. ಗೆ ಹೋಲಿಸಿದರೆ 250 ರೂ., ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,45,000 ರೂ. ನೀಡಬೇಕು. ನಿನ್ನೆಯ 5,47,500 ರೂ.ಗೆ ಹೋಲಿಸಿದರೆ ಇಂದು 2500 ರೂ. ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,945 ರೂ. ಇದೆ. ನಿನ್ನೆಯ 5,973 ರೂ.ಗೆ ಹೋಲಿಸಿದರೆ 28 ರೂ. ಇಳಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,560 ರೂ. ನೀಡಬೇಕಾಗುತ್ತದೆ. ನಿನ್ನೆ 47,784 ರೂ. ಇತ್ತು. ಇಂದು 224 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,450 ರೂ. ಇದೆ. ನಿನ್ನೆಯ 59,730 ರೂ. ಗೆ ಹೋಲಿಸಿದರೆ 280 ರೂ. ಇಳಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,94,500 ರೂ. ನೀಡಬೇಕು. ನಿನ್ನೆಯ 5,97,300 ರೂ.ಗೆ ಹೋಲಿಸಿದರೆ ಇಂದು 2800 ರೂ. ಇಳಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 54,500 ರೂ. ಇದೆ. ಮಂಗಳೂರು 54,500 ರೂ., ಮೈಸೂರಿನಲ್ಲಿ 54,500 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 54,800 ರೂ., ಮುಂಬೈನಲ್ಲಿ 54,500 ರೂ., ದೆಹಲಿಯಲ್ಲಿ 54,650 ರೂ., ಕೋಲ್ಕತಾದಲ್ಲಿ 54,500 ರೂ., ಹೈದರಾಬಾದ್‌ 54,500 ರೂ., ಕೇರಳ 54,500 ರೂ., ಪುಣೆ 54,500 ರೂ., ಅಹಮದಾಬಾದ್‌ 54,550 ರೂ., ಜೈಪುರ 54,650 ರೂ., ಲಖನೌ 54,650 ರೂ., ಕೊಯಮುತ್ತೂರು 54,800 ರೂ., ಮಧುರೈ 54,800 ರೂ. ಹಾಗೂ ವಿಜಯವಾಡ 54,500 ರೂ., ಇದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 59,450 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 59,780 ರೂ., ಮುಂಬೈನಲ್ಲಿ 59,450 ರೂ., ದೆಹಲಿಯಲ್ಲಿ 59,600 ರೂ., ಕೋಲ್ಕತಾದಲ್ಲಿ 59,450 ರೂ., ಹೈದರಾಬಾದ್‌ 59,450 ರೂ., ಕೇರಳ 59,450 ರೂ., ಪುಣೆ 59,450 ರೂ., ಅಹಮದಾಬಾದ್‌ 59,500 ರೂ., ಜೈಪುರ 59,600 ರೂ., ಲಖನೌ 59,600 ರೂ., ಕೊಯಮುತ್ತೂರು 59,780 ರೂ., ಮದುರೈ 59,780, ವಿಜಯವಾಡ 59,450 ರೂ. ಇದೆ.

ಬೆಳ್ಳಿ ದರ ಇಳಿಕೆ

ಚಿನಿವಾರ ಪೇಟೆಯ ಅಪ್‌ಡೇಟ್‌ ಪ್ರಕಾರ ಗುರುವಾರ ಬೆಳ್ಳಿ ದರ ಇಳಿಕೆ ಕಂಡಿದೆ. ಒಂದು ಗ್ರಾಂ ಬೆಳ್ಳಿಗೆ 73 ರೂ., 8 ಗ್ರಾಂ ಬೆಳ್ಳಿಗೆ 584 ರೂ., 10 ಗ್ರಾಂ ಬೆಳ್ಳಿ ದರ 730 ರೂ., 100 ಗ್ರಾಂ ಬೆಳ್ಳಿಗೆ 7,300 ಮತ್ತು 1 ಕೆ.ಜಿ. ಬೆಳ್ಳಿ ದರ 73,000 ರೂಪಾಯಿ ಇದೆ.

IPL_Entry_Point