Gold Silver Price: ಚಿನ್ನಾಭರಣ ಪ್ರಿಯರಿಗೆ ವಾರಾಂತ್ಯದಲ್ಲಿ ಭರ್ಜರಿ ಸುದ್ದಿ, ಇಂದು ಪುನಃ ಇಳಿಕೆ ಕಂಡ ಚಿನ್ನದ ದರ, ಬೆಳ್ಳಿ ದರವೂ ಇಳಿಕೆ
Gold Price Today: ಕಳೆದೊಂದು ವಾರದಿಂದ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನದ ದರ ಇಂದೂ ಇಳಿಕೆ ಕಂಡಿದೆ. ವಾರಾಂತ್ಯದಲ್ಲಿ ಚಿನ್ನ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ನಿಜಕ್ಕೂ ಭರ್ಜರಿ ಸುದ್ದಿ. ಇಂದು ಬೆಳ್ಳಿ ದರದಲ್ಲೂ ಇಳಿಕೆಯಾಗಿದೆ. ಇಂದಿನ 22 ಕ್ಯಾರೆಟ್ 1 ಗ್ರಾಂ ಚಿನ್ನದ ದರ 5,365 ರೂ ಆಗಿದೆ.
ಬೆಂಗಳೂರು: ಕಾವೇರಿ ನೀರಿಗಾಗಿ ನಿನ್ನೆ (ಸೆಪ್ಟೆಂಬರ್ 29) ಕರ್ನಾಟಕ ಬಂದ್ ಆಚರಿಸಲಾಗಿತ್ತು, ಈ ನಡುವೆ ಸಂಪೂರ್ಣ ಕರ್ನಾಟಕ ಸ್ಥಭ್ತವಾಗಿತ್ತು. ವ್ಯಾಪಾರ, ವಹಿವಾಟುಗಳು ಸ್ಥಗಿತಗೊಂಡಿದ್ದವು. ನಿನ್ನ ಬಂದ್ ಕಾರಣ ಜನರು ಹೊರಗಡೆ ಹೋಗಿರಲಿಲ್ಲ. ನಿನ್ನೆ ಚಿನ್ನದ ಖರೀದಿ ಮಾಡಲು ಯೋಚಿಸಿದ್ದು ಸಾಧ್ಯವಾಗದೇ ಇದ್ದವರು ಬೇಸರಿಸುವ ಅಗತ್ಯವಿಲ್ಲ. ಇಂದು ಕರ್ನಾಟಕ ಸೇರಿದಂತೆ ದೇಶದಲ್ಲಿ ಚಿನ್ನದ ದರದಲ್ಲಿ ಭಾರಿ ಇಳಿಕೆಯಾಗಿದೆ. ನಿನ್ನೆಯು ಚಿನ್ನದ ದರದಲ್ಲಿ ಇಳಿಕೆಯಾಗಿತ್ತು. ಇಂದು ಕರ್ನಾಟಕದ ಪ್ರಮುಖ ಪಟ್ಟಣಗಳು ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ತಿಳಿಯೋಣ.
ಟ್ರೆಂಡಿಂಗ್ ಸುದ್ದಿ
22 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ ₹5,365 ರೂ ಆಗಿದೆ. ನಿನ್ನೆಯ 5,390 ರೂ ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 25 ರೂ. ಇಳಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 42,920 ರೂ ಆಗಿದೆ. ನಿನ್ನೆ 43,120 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 200 ರೂ. ಕಡಿಮೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 53,650 ರೂ. ಇದೆ. ನಿನ್ನೆಯ 53,900 ರೂ. ಗೆ ಹೋಲಿಸಿದರೆ 250 ರೂ., ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,36,500 ರೂ. ನೀಡಬೇಕು. ನಿನ್ನೆಯ 5,39,000 ರೂ.ಗೆ ಹೋಲಿಸಿದರೆ ಇಂದು 2,500 ರೂ. ಇಳಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ದರ
ಇಂದು ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 5,853 ರೂ. ಆಗಿದೆ. ನಿನ್ನೆಯ 5,880 ರೂ.ಗೆ ಹೋಲಿಸಿದರೆ 27 ರೂ. ಇಳಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,820 ರೂ. ನೀಡಬೇಕಾಗುತ್ತದೆ. ನಿನ್ನೆ 47,040 ರೂ. ಇತ್ತು. ಇಂದು 216 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 58,530 ರೂ. ಇದೆ. ನಿನ್ನೆಯ 58,800 ರೂ. ಗೆ ಹೋಲಿಸಿದರೆ 270 ರೂ. ಇಳಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,85,300 ರೂ. ನೀಡಬೇಕು. ನಿನ್ನೆಯ 5,88,000 ರೂ.ಗೆ ಹೋಲಿಸಿದರೆ ಇಂದು 2,700 ರೂ. ಇಳಿಕೆಯಾಗಿದೆ.
ಇಂದಿನ 22 ಕ್ಯಾರೆಟ್ ಚಿನ್ನದ ದರ
10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 53,650 ರೂ. ಇದೆ. ಮಂಗಳೂರು 53,650 ರೂ., ಮೈಸೂರಿನಲ್ಲಿ 53,650 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 53,900 ರೂ., ಮುಂಬೈನಲ್ಲಿ 53,650 ರೂ., ದೆಹಲಿಯಲ್ಲಿ 53,800 ರೂ., ಕೋಲ್ಕತಾದಲ್ಲಿ 53,650 ರೂ., ಹೈದರಾಬಾದ್ 53,650 ರೂ., ಕೇರಳ 53,650 ರೂ., ಪುಣೆ 53,650 ರೂ., ಅಹಮದಾಬಾದ್ 53,700 ರೂ., ಜೈಪುರ 53,800 ರೂ., ಲಖನೌ 53,800 ರೂ., ಕೊಯಮುತ್ತೂರು 53,900 ರೂ., ಮಧುರೈ 53,900 ರೂ. ಹಾಗೂ ವಿಜಯವಾಡ 53,650 ರೂ., ಇದೆ.
ಇಂದಿನ 24 ಕ್ಯಾರೆಟ್ ಚಿನ್ನದ ದರ
10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 58,530 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 58,800 ರೂ., ಮುಂಬೈನಲ್ಲಿ 58,530 ರೂ., ದೆಹಲಿಯಲ್ಲಿ 58,680 ರೂ., ಕೋಲ್ಕತಾದಲ್ಲಿ 58,530 ರೂ., ಹೈದರಾಬಾದ್ 58,350 ರೂ., ಕೇರಳ 58,530 ರೂ., ಪುಣೆ 58,530 ರೂ., ಅಹಮದಾಬಾದ್ 58,580 ರೂ., ಜೈಪುರ 58,680 ರೂ., ಲಖನೌ 58,680 ರೂ., ಕೊಯಮುತ್ತೂರು 58,800 ರೂ., ಮದುರೈ 58,800, ವಿಜಯವಾಡ 58,530 ರೂ. ಇದೆ.
ಇಂದು ಬೆಳ್ಳಿ ದರದಲ್ಲೂ ಇಳಿಕೆ
ಚಿನಿವಾರ ಪೇಟೆಯ ಅಪ್‌ಡೇಟ್ ಪ್ರಕಾರ ಶನಿ ಬೆಳ್ಳಿ ದರದಲ್ಲೂ ಇಳಿಕೆಯಾಗಿದೆ. ಇಂದಿನ ಒಂದು ಗ್ರಾಂ ಬೆಳ್ಳಿಗೆ 72.50 ರೂ., ಇದೆ. ನಿನ್ನೆ 73 ರೂ. ಇದ್ದು ಇಂದು 0.50 ಪೈಸೆ ಕಡಿಮೆಯಾಗಿದೆ. 8ಗ್ರಾಂ ಬೆಳ್ಳಿಗೆ ಇಂದು 580 ರೂ. ನೀಡಬೇಕು. ನಿನ್ನೆ 584 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಒಂದು 4 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿಗೆ ಇಂದು 725 ರೂ. ನೀಡಬೇಕು. ನಿನ್ನೆ 30 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 5 ರೂ. ಇಳಿಕೆಯಾಗಿದೆ. ಇಂದಿನ 100 ಗ್ರಾಂ ಬೆಳ್ಳಿ ದರ 7,250 ರೂ. ನಿನ್ನೆಯ ದರ 7,300 ಇದ್ದು, ಈ ದರಕ್ಕೆ ಹೋಲಿಸಿದರೆ ಇಂದು 50 ರೂ. ಇಳಿಕೆಯಾಗಿದೆ. ಇಂದಿನ 1 ಕೆಜಿ ಬೆಳ್ಳಿ ದರ 72,500 ರೂ. ಇದ್ದು, ನಿನ್ನೆಯ ದರ 73,000 ರೂ, ಇತ್ತು, ಈ ದರಕ್ಕೆ ಹೋಲಿಸಿದರೆ ಇಂದು 500 ರೂ. ಇಳಿಕೆಯಾಗಿದೆ.
ವಿಭಾಗ