ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gold Silver Price: ಅಕ್ಟೋಬರ್‌ ತಿಂಗಳ ಮೊದಲ ದಿನ ಚಿನ್ನದ ದರದಲ್ಲಿ ಇಳಿಕೆ; ಇಂದು ಬೆಳ್ಳಿ ದರದಲ್ಲಿ ತುಸು ಏರಿಕೆ

Gold Silver Price: ಅಕ್ಟೋಬರ್‌ ತಿಂಗಳ ಮೊದಲ ದಿನ ಚಿನ್ನದ ದರದಲ್ಲಿ ಇಳಿಕೆ; ಇಂದು ಬೆಳ್ಳಿ ದರದಲ್ಲಿ ತುಸು ಏರಿಕೆ

Gold Price Today: ವಾರ ಪೂರ್ತಿ ಇಳಿಕೆ ಕಂಡು ಚಿನ್ನಾಭರಣ ಪ್ರಿಯರಲ್ಲಿ ಸಂತಸ ಮೂಡಿಸಿದ್ದ ಬಂಗಾರದ ಬೆಲೆಯಲ್ಲಿ ಭಾನುವಾರವೂ ಇಳಿಕೆ ಕಂಡಿದೆ. ರಜಾದಿನವಾದ ಭಾನುವಾರ ಚಿನ್ನ ಕೊಳ್ಳುವ ಮನಸ್ಸು ಮಾಡಿದರೆ ಇಂದಿನ ಚಿನ್ನದ ಬೆಲೆ ಗಮನಿಸಿ. ಇಂದು ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿದೆ.

ಅಕ್ಟೋಬರ್‌ 1ರ ಚಿನ್ನ, ಬೆಳ್ಳಿ ದರ
ಅಕ್ಟೋಬರ್‌ 1ರ ಚಿನ್ನ, ಬೆಳ್ಳಿ ದರ (Ashok Munjani)

ಬೆಂಗಳೂರು: ಕಳೆದ ಒಂದು ವಾರದಿಂದ ಆಭರಣ ಪ್ರಿಯರಿಗೆ ನಿಜಕ್ಕೂ ಭರ್ಜರಿ ಸುದ್ದಿ. ಪ್ರತಿದಿನ ಚಿನ್ನದ ಬೆಲೆಯಲ್ಲಿ ಇಳಿಕೆ ಕಾಣುತ್ತಲೇ ಇದೆ. ಅಕ್ಟೋಬರ್‌ ತಿಂಗಳ ಮೊದಲ ದಿನವಾದ ಇಂದು ಚಿನ್ನದ ಬೆಲೆ ಕಡಿಮೆಯಾಗಿದೆ. ಭಾನುವಾರ ಚಿನ್ನ ಖರೀದಿ ಮಾಡುವ ಎಂದು ಯೋಚಿಸಿಕೊಂಡು ಕಾದವರಿಗೆ ಇಂದು ನಿಜಕ್ಕೂ ಶುಭಸುದ್ದಿ ಸಿಕ್ಕಿದೆ. ಇಂದು ಆಭರಣ ಕೊಳ್ಳಲು ಹೋಗುವ ಮನಸ್ಸು ಮಾಡಿದ್ದರೆ 22 ಹಾಗೂ 24 ಕ್ಯಾರೆಟ್‌ ಚಿನ್ನದ ಬೆಲೆಗಳನ್ನು ತಿಳಿಯಿರಿ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿನ ಇಂದಿನ ಚಿನ್ನದ ದರವನ್ನು ಗಮನಿಸಿ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,335 ರೂ ಆಗಿದೆ. ನಿನ್ನೆಯ 5,365 ರೂ ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 30 ರೂ. ಇಳಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 42,680 ರೂ ಆಗಿದೆ. ನಿನ್ನೆ 43,920 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 240 ರೂ. ಕಡಿಮೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 53,350 ರೂ. ಇದೆ. ನಿನ್ನೆಯ 53,650 ರೂ. ಗೆ ಹೋಲಿಸಿದರೆ 300 ರೂ., ಇಳಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,33,500 ರೂ. ನೀಡಬೇಕು. ನಿನ್ನೆಯ 5,36,500 ರೂ.ಗೆ ಹೋಲಿಸಿದರೆ ಇಂದು 3,000 ರೂ. ಇಳಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,820 ರೂ. ಆಗಿದೆ. ನಿನ್ನೆಯ 5,853 ರೂ.ಗೆ ಹೋಲಿಸಿದರೆ 33 ರೂ. ಇಳಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,560 ರೂ. ನೀಡಬೇಕಾಗುತ್ತದೆ. ನಿನ್ನೆ 46,824 ರೂ. ಇತ್ತು. ಇಂದು 264 ರೂ., ಇಳಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 58,200 ರೂ. ಇದೆ. ನಿನ್ನೆಯ 58,530 ರೂ. ಗೆ ಹೋಲಿಸಿದರೆ 330 ರೂ. ಇಳಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,82,000 ರೂ. ನೀಡಬೇಕು. ನಿನ್ನೆಯ 5,85,300 ರೂ.ಗೆ ಹೋಲಿಸಿದರೆ ಇಂದು 3,300 ರೂ. ಇಳಿಕೆಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಇಂದಿನ 22 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 53,350 ರೂ. ಇದೆ. ಮಂಗಳೂರು 53,350 ರೂ., ಮೈಸೂರಿನಲ್ಲಿ 53,350 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 53,600 ರೂ., ಮುಂಬೈನಲ್ಲಿ 53,350 ರೂ., ದೆಹಲಿಯಲ್ಲಿ 53,500 ರೂ., ಕೋಲ್ಕತಾದಲ್ಲಿ 53,350 ರೂ., ಹೈದರಾಬಾದ್‌ 53,350 ರೂ., ಕೇರಳ 53,350 ರೂ., ಪುಣೆ 53,350 ರೂ., ಅಹಮದಾಬಾದ್‌ 53,400 ರೂ., ಜೈಪುರ 53,500 ರೂ., ಲಖನೌ 53,500 ರೂ., ಕೊಯಮುತ್ತೂರು 53,600 ರೂ., ಮಧುರೈ 53,600 ರೂ. ಹಾಗೂ ವಿಜಯವಾಡ 53,350 ರೂ., ಇದೆ.

ಇಂದಿನ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 58,200 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 58,470 ರೂ., ಮುಂಬೈನಲ್ಲಿ 58,200 ರೂ., ದೆಹಲಿಯಲ್ಲಿ 58,350 ರೂ., ಕೋಲ್ಕತಾದಲ್ಲಿ 58,200 ರೂ., ಹೈದರಾಬಾದ್‌ 58,200 ರೂ., ಕೇರಳ 58,200 ರೂ., ಪುಣೆ 58,200 ರೂ., ಅಹಮದಾಬಾದ್‌ 58,250 ರೂ., ಜೈಪುರ 53,500 ರೂ., ಲಖನೌ 58,350 ರೂ., ಕೊಯಮುತ್ತೂರು 58,470 ರೂ., ಮದುರೈ 58,470, ವಿಜಯವಾಡ 58,200 ರೂ. ಇದೆ.

ಭಾನುವಾರ ಬೆಳ್ಳಿ ದರದಲ್ಲಿ ಏರಿಕೆ

ಚಿನಿವಾರ ಪೇಟೆಯ ಅಪ್‌ಡೇಟ್‌ ಪ್ರಕಾರ ಭಾನುವಾರ ಬೆಳ್ಳಿ ದರದಲ್ಲಿ ತುಸು ಏರಿಕೆಯಾಗಿದೆ. ಇಂದಿನ ಒಂದು ಗ್ರಾಂ ಬೆಳ್ಳಿಗೆ 73.50 ರೂ., ಆಗಿದೆ. ನಿನ್ನೆ 72.50 ರೂ. ಇದ್ದು, ಇಂದು 1 ರೂ ಏರಿಕೆಯಾಗಿದೆ. 8ಗ್ರಾಂ ಬೆಳ್ಳಿಗೆ ಇಂದು 588 ರೂ. ನೀಡಬೇಕು. ನಿನ್ನೆ 580 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಒಂದು 8 ರೂ. ಏರಿಕೆಯಾಗಿದೆ. 10 ಗ್ರಾಂ ಬೆಳ್ಳಿಗೆ ಇಂದು 735 ರೂ. ನೀಡಬೇಕು. ನಿನ್ನೆ 725 ರೂ. ಇತ್ತು. ನಿನ್ನೆಯ ದರಕ್ಕೆ ಹೋಲಿಸಿದರೆ ಇಂದು 10 ರೂ. ಏರಿಕೆಯಾಗಿದೆ. ಇಂದಿನ 100 ಗ್ರಾಂ ಬೆಳ್ಳಿ ದರ 7,350 ರೂ. ನಿನ್ನೆಯ ದರ 7,250 ಇದ್ದು, ಈ ದರಕ್ಕೆ ಹೋಲಿಸಿದರೆ ಇಂದು 100 ರೂ. ಏರಿಕೆಯಾಗಿದೆ. ಇಂದಿನ 1 ಕೆಜಿ ಬೆಳ್ಳಿ ದರ 73,500 ರೂ. ಇದ್ದು, ನಿನ್ನೆಯ ದರ 72,500 ರೂ, ಇತ್ತು, ಈ ದರಕ್ಕೆ ಹೋಲಿಸಿದರೆ ಇಂದು 1000 ರೂ. ಏರಿಕೆಯಾಗಿದೆ.

ವಿಭಾಗ