Gold Rate: ಭಾನುವಾರ ಏರಿತು ಚಿನ್ನದ ದರ, ಇಂದು ಬೆಳ್ಳಿ ದರದಲ್ಲೂ ಹೆಚ್ಚಳ; ಆಭರಣ ಖರೀದಿಸುವುದಿದ್ದರೆ ಇಂದಿನ ದರ ಗಮನಿಸಿ
2023ನೇ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ವಾರಾಂತ್ಯದಲ್ಲಿ ಚಿನ್ನ ಖರೀದಿ ಮಾಡೋಣ ಎಂದುಕೊಂಡವರಿಗೆ ಇಂದು ನಿರಾಸೆ ಕಾಡುವುದು ಸಹಜ. ಇಂದು ಚಿನ್ನ ಹಾಗೂ ಬೆಳ್ಳಿ ಎರಡರ ದರದಲ್ಲೂ ಏರಿಕೆಯಾಗಿದೆ.
ಬೆಂಗಳೂರು: ಚಿನ್ನದ ಬೆಲೆಯಲ್ಲಿನ ಅನಿಶ್ಚಿತತೆಯ ಬಗ್ಗೆ ನಿಖರವಾಗಿ ಹೇಳುವುದು ನಿಜಕ್ಕೂ ಕಷ್ಟ. ಚಿನ್ನದ ಬೆಲೆ ಒಮ್ಮೆ ಏರಿಕೆಯಾದರೆ ಇದ್ದಕ್ಕಿದ್ದಂತೆ ಇಳಿಕೆಯಾಗುತ್ತದೆ. ಒಂದಿಷ್ಟು ದಿನಗಳಿಂದ ಕಡಿಮೆಯಾಗಿದ್ದ ಚಿನ್ನದ ದರ ಇದೀಗ ಮತ್ತೆ ಏರಿಕೆಯಾಗಿದೆ. ಇಂದು ಚಿನ್ನದೊಂದಿಗೆ ಬೆಳ್ಳಿ ಕೂಡ ಏರಿಕೆಯಾಗಿದ್ದು, ಚಿನ್ನ ಗ್ರಾಂ ಮೇಲೆ 20 ರೂ ಹೆಚ್ಚಾಗಿದೆ. ವರ್ಷಾಂತ್ಯ, ಭಾನುವಾರದ ಕಾರಣ ಇಂದು ಚಿನ್ನ ಖರೀದಿ ಮಾಡೋಣ ಎಂದು ಯೋಚಿಸುತ್ತಿದ್ದರೆ ಇಂದಿನ ದರ ಗಮನಿಸಿ. ಕರ್ನಾಟಕ ಹಾಗೂ ವಿವಿಧ ರಾಜ್ಯಗಳಲ್ಲಿ ಇಂದು ಚಿನ್ನದ ದರ ಎಷ್ಟಿದೆ ಎಂಬುದರ ವಿವರ ಇಲ್ಲಿದೆ.
22 ಕ್ಯಾರೆಟ್ ಚಿನ್ನದ ದರ
ಇಂದು 1 ಗ್ರಾಂ ಚಿನ್ನದ ಬೆಲೆ 5,820 ಆಗಿದೆ. ನಿನ್ನೆ 5,800 ರೂ. ಇದ್ದು, ಇಂದು 20 ರೂ. ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 46,650 ರೂ. ನೀಡಬೇಕು. ನಿನ್ನೆ 46,400 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 160 ರೂ. ಏರಿಕೆಯಾಗಿದೆ. ಇಂದಿನ 10 ಗ್ರಾಂ ಚಿನ್ನದ ಬೆಲೆ 58,200 ಆಗಿದ್ದರೆ, ನಿನ್ನೆ 58,000 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 200 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 5,82,000 ರೂ. ಇದೆ. ನಿನ್ನೆ 5,80,000 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 2,000 ರೂ. ಹೆಚ್ಚಾಗಿದೆ.
24 ಕ್ಯಾರೆಟ್ ಚಿನ್ನದ ದರ
1 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ಇಂದು 6,349 ರೂ ಇದೆ. ನಿನ್ನೆ 6,323 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 26 ರೂ. ಹೆಚ್ಚಾಗಿದೆ. 8 ಗ್ರಾಂ ಚಿನ್ನಕ್ಕೆ ಇಂದು 50,792 ರೂ ಆಗಿದೆ. ನಿನ್ನೆ 50,584 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 208 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 63,490 ರೂ. ಕೊಡಬೇಕು. ನಿನ್ನೆ 63,230 ರೂ. ಇದ್ದು ಈ ದರಕ್ಕೆ ಹೋಲಿಸಿದರೆ ಇಂದು 260 ರೂ. ಜಾಸ್ತಿಯಾಗಿದೆ. ಹಾಗೆಯೇ 100 ಗ್ರಾಂ ಚಿನ್ನದ ದರ 6,34,900 ರೂ ಇದೆ. ನಿನ್ನೆ 6,32,300 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 2,600 ರೂ. ಹೆಚ್ಚಾಗಿದೆ.
ಕರ್ನಾಟಕದಲ್ಲಿ ಇಂದಿನ ಚಿನ್ನದ ದರ
ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 58,200 ರೂ ಇದ್ದರೆ, 24 ಕ್ಯಾರೆಟ್‌ಗೆ 63,490 ರೂ. ಇದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರರಾಜ್ಯಗಳಲ್ಲಿ ಚಿನ್ನದ ದರ
22 ಕ್ಯಾರೆಟ್ ಚಿನ್ನದ ದರ: 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು ಚೆನ್ನೈನಲ್ಲಿ 58,750 ರೂ., ಮುಂಬೈನಲ್ಲಿ 58,200 ರೂ., ದೆಹಲಿಯಲ್ಲಿ 58,350 ರೂ., ಕೋಲ್ಕತಾದಲ್ಲಿ 58,200 ರೂ., ಹೈದರಾಬಾದ್ 58,200 ರೂ., ಕೇರಳ 58,200 ರೂ., ಪುಣೆ 58,200 ರೂ., ಅಹಮದಾಬಾದ್ 58,250 ರೂ., ಜೈಪುರ 58,250 ರೂ., ಲಖನೌ 58,350 ರೂ., ಕೊಯಮತ್ತೂರು 58,750 ರೂ., ಮಧುರೈ 58,750 ರೂ. ಹಾಗೂ ವಿಜಯವಾಡದಲ್ಲಿ 58,200 ರೂ. ಇದೆ.
24 ಕ್ಯಾರೆಟ್ ಚಿನ್ನದ ದರ: 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಚೆನ್ನೈನಲ್ಲಿ 64,090 ರೂ., ಮುಂಬೈನಲ್ಲಿ 63,490 ರೂ., ದೆಹಲಿಯಲ್ಲಿ 63,640 ರೂ., ಕೋಲ್ಕತಾದಲ್ಲಿ 63,490 ರೂ., ಹೈದರಾಬಾದ್ 63,490 ರೂ., ಕೇರಳ 63,490 ರೂ., ಪುಣೆ 63,490 ರೂ., ಅಹಮದಾಬಾದ್ 63,540 ರೂ., ಜೈಪುರ 63,640 ರೂ., ಲಖನೌ 63,640 ರೂ., ಕೊಯಮತ್ತೂರು 64,090 ರೂ., ಮದುರೈ 64,090 ರೂ., ವಿಜಯವಾಡ 63,490 ರೂ. ಇದೆ.
ಬೆಳ್ಳಿ ದರ
ದೇಶದಲ್ಲಿ ಇಂದು ಕೂಡ ಬೆಳ್ಳಿ ದರ ಕೂಡ ಹೆಚ್ಚಾಗಿದೆ. 1ಗ್ರಾಂ ಬೆಳ್ಳಿಗೆ 77 ರೂ., ಇದೆ. 8ಗ್ರಾಂ ಬೆಳ್ಳಿ ಕೊಳ್ಳುವುದಾದರೆ 616 ರೂ. ನೀಡಬೇಕು. 10ಗ್ರಾಂ ಬೆಳ್ಳಿ ಖರೀದಿ ಮಾಡುವುದಾದರೆ ಇಂದು 770 ರೂ. ನೀಡಬೇಕು. 100 ಗ್ರಾಂ ಬೆಳ್ಳಿಗೆ ಇಂದು 7,700 ರೂ ಆಗಿದೆ. ಇಂದು 1 ಕೆಜಿ ಬೆಳ್ಳಿ ದರ 77,000 ರೂ., ಇದೆ.