Gold Rate: ಶುಕ್ರವಾರ ಭಾರಿ ಏರಿಕೆ ಕಂಡ ಚಿನ್ನದ ದರ; ಇಂದು ಬೆಳ್ಳಿ ದರ ಸ್ಥಿರ; ಕರ್ನಾಟಕದಲ್ಲಿ ಹಳದಿ ಲೋಹದ ಬೆಲೆ ಎಷ್ಟಿದೆ ಗಮನಿಸಿ
ವರ್ಷಾಂತ್ಯ ಸಮೀಪಿಸುತ್ತಿದ್ದಂತೆ ಚಿನ್ನದ ದರದಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಡಿಸೆಂಬರ್ ತಿಂಗಳ ಆರಂಭದಿಂದಲೂ ಇಳಿಮುಖವಾಗಿದ್ದ ಚಿನ್ನ, ಈ ಒಂದು ವಾರದಲ್ಲಿ ಭಾರಿ ಏರಿಕೆ ಕಂಡಿದೆ. ನಿನ್ನೆ ಬೆಳ್ಳಿ ದರದಲ್ಲಿ ಏರಿಕೆ ಕಂಡರೂ ಇಂದು ಸ್ಥಿರವಾಗಿದೆ.
ಬೆಂಗಳೂರು: ಚಿನ್ನದ ಬೆಲೆ ಮತ್ತೆ ಗನನಕ್ಕೇರುತ್ತಿದೆ. ದಿನೇ ದಿನೇ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುತ್ತಿದ್ದು, ಆಭರಣ ಪ್ರಿಯರಲ್ಲಿ ಬೇಸರ ಮೂಡಿಸಿದೆ. ವರ್ಷಾಂತ್ಯದಲ್ಲಿ ಚಿನ್ನ ಖರೀದಿ ಮಾಡೋಣ ಎಂದುಕೊಂಡವರಿಗೆ ಇದು ಭಾರಿ ನಿರಾಸೆ ತರಿಸುವ ವಿಚಾರವಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿನ್ನ ದುಪ್ಪಟ್ಟು ಏರಿಕೆಯಾಗಿದೆ. ಹಾಗೆಯೇ ಬೆಳ್ಳಿ ದರ ಇಂದು ಸ್ಥಿರವಾಗಿದೆ. ಹಾಗಾದರೆ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಒಂದು ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸೋಣ.
22 ಕ್ಯಾರೆಟ್ ಚಿನ್ನದ ದರ
ಇಂದು 1 ಗ್ರಾಂ ಚಿನ್ನದ ಬೆಲೆ 5,890 ರೂ. ಇದೆ. ನಿನ್ನೆ 5,850 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 40 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,120 ರೂ. ನೀಡಬೇಕು. ನಿನ್ನೆ 46,800 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 320 ರೂ. ಏರಿಕೆಯಾಗಿದೆ. ಇಂದಿನ 10 ಗ್ರಾಂ ಚಿನ್ನದ ಬೆಲೆ 58,900 ಆಗಿದ್ದರೆ, ನಿನ್ನೆ 58,500 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 400 ರೂ. ಹೆಚ್ಚಾಗಿದೆ. 100 ಗ್ರಾಂ ಚಿನ್ನದ ಬೆಲೆ 5,89,000 ರೂ. ಇದೆ. ನಿನ್ನೆ 5,85,000 ರೂ. ಇದ್ದು 4,000 ಏರಿಕೆಯಾಗಿದೆ.
24 ಕ್ಯಾರೆಟ್ ಚಿನ್ನದ ದರ
1 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ಇಂದು 6,425 ರೂ ಇದೆ. ನಿನ್ನೆ 6,382 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 43 ರೂ ಹೆಚ್ಚಾಗಿದೆ. 8 ಗ್ರಾಂ ಚಿನ್ನಕ್ಕೆ ಇಂದು 51,400 ರೂ ನೀಡಬೇಕು. ನಿನ್ನೆ 51,056 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ ಇಂದು 344 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 64,250 ರೂ. ಕೊಡಬೇಕು. ನಿನ್ನೆ 63,820 ರೂ. ಇತ್ತು, ನಿನ್ನೆಗಿಂತ ಇಂದು 430 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ 6,42,500 ರೂ ಇದೆ. ನಿನ್ನೆ 6,38,200 ರೂ. ಇದೆ. ಈ ದರಕ್ಕೆ ಹೋಲಿಸಿದರೆ 4,300 ರೂ. ಹೆಚ್ಚಾಗಿದೆ.
ಕರ್ನಾಟಕದಲ್ಲಿ ಇಂದಿನ ಚಿನ್ನದ ದರ
ಬೆಂಗಳೂರು, ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 58,900 ರೂ ಇದ್ದರೆ, 24 ಕ್ಯಾರೆಟ್‌ಗೆ 64,250 ರೂ. ಇದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇತ್ಯಾದಿ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರರಾಜ್ಯಗಳಲ್ಲಿ ಚಿನ್ನದ ದರ
22 ಕ್ಯಾರೆಟ್ ಚಿನ್ನದ ದರ: 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು ಚೆನ್ನೈನಲ್ಲಿ 59,450 ರೂ., ಮುಂಬೈನಲ್ಲಿ 58,900 ರೂ., ದೆಹಲಿಯಲ್ಲಿ 59,050 ರೂ., ಕೋಲ್ಕತಾದಲ್ಲಿ 58,900 ರೂ., ಹೈದರಾಬಾದ್ 58,900 ರೂ., ಕೇರಳ 58,900 ರೂ., ಪುಣೆ 58,900 ರೂ., ಅಹಮದಾಬಾದ್ 58,950 ರೂ., ಜೈಪುರ 59,050 ರೂ., ಲಖನೌ 59,050 ರೂ., ಕೊಯಮತ್ತೂರು 59,450 ರೂ., ಮಧುರೈ 59,450 ರೂ. ಹಾಗೂ ವಿಜಯವಾಡದಲ್ಲಿ 58,900 ರೂ. ಇದೆ.
24 ಕ್ಯಾರೆಟ್ ಚಿನ್ನದ ದರ: 10 ಗ್ರಾಂ 24 ಕ್ಯಾರೆಟ್ ಚಿನ್ನದ ದರ ಚೆನ್ನೈನಲ್ಲಿ 64,850 ರೂ., ಮುಂಬೈನಲ್ಲಿ 64,250 ರೂ., ದೆಹಲಿಯಲ್ಲಿ 64,400 ರೂ., ಕೋಲ್ಕತಾದಲ್ಲಿ 64,250 ರೂ., ಹೈದರಾಬಾದ್ 64,250 ರೂ., ಕೇರಳ 64,250 ರೂ., ಪುಣೆ 64,250 ರೂ., ಅಹಮದಾಬಾದ್ 64,300 ರೂ., ಜೈಪುರ 64,400 ರೂ., ಲಖನೌ 64,400 ರೂ., ಕೊಯಮತ್ತೂರು 64,850 ರೂ., ಮದುರೈ 64,850 ರೂ., ವಿಜಯವಾಡ 64,250 ರೂ. ಇದೆ.
ಬೆಳ್ಳಿ ದರ
ದೇಶದಲ್ಲಿ ಇಂದು ಬೆಳ್ಳಿ ದರ ತುಸು ಸ್ಥಿರವಾಗಿದೆ. 1ಗ್ರಾಂ ಬೆಳ್ಳಿಗೆ 76.75 ರೂ., ಇದೆ. 8ಗ್ರಾಂ ಬೆಳ್ಳಿ ಕೊಳ್ಳುವುದಾದರೆ 614 ರೂ. ನೀಡಬೇಕು. 10ಗ್ರಾಂ ಬೆಳ್ಳಿ ಖರೀದಿ ಮಾಡುವುದಾದರೆ ಇಂದು 767.50 ರೂ. ನೀಡಬೇಕು. 100 ಗ್ರಾಂ ಬೆಳ್ಳಿಗೆ ಇಂದು 7,675 ರೂ ಆಗಿದೆ. ಇಂದು 1 ಕೆಜಿ ಬೆಳ್ಳಿ ದರ 76,750 ರೂ., ಇದೆ.
ವಿಭಾಗ