ಕನ್ನಡ ಸುದ್ದಿ  /  Nation And-world  /  Business News Gold Silver Price Today Gold Price Up Silver Price Unchanged On September 9 Gold Rate In Kannada Pcp

Gold Price Today: ವಾರಾಂತ್ಯದಲ್ಲಿ ಏರಿಕೆ ಕಂಡ ಚಿನ್ನದ ದರ, ಬೆಳ್ಳಿ ದರ ಸ್ಥಿರ, ಕರ್ನಾಟಕದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ ವಿವರ

Gold rate in Kannada: ಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿ ಖರೀದಿಸಲು ಬಯಸುವವರಿಗೆ ಇಂದಿನ ಧಾರಣೆ ವಿವರ ಇಲ್ಲಿ ನೀಡಲಾಗಿದೆ. ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,500 ರೂ ಇದೆ. ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 6,000 ರೂ. ಇದೆ. ನಿನ್ನೆಗೆ ಹೋಲಿಸಿದರೆ ತುಸು ಹೆಚ್ಚಾಗಿದೆ.

ಏರಿಕೆ ಕಂಡ ಚಿನ್ನದ ದರ, ಬೆಳ್ಳಿ ದರ ಸ್ಥಿರ, ಕರ್ನಾಟಕದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ ವಿವರ
ಏರಿಕೆ ಕಂಡ ಚಿನ್ನದ ದರ, ಬೆಳ್ಳಿ ದರ ಸ್ಥಿರ, ಕರ್ನಾಟಕದಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ ದರ ವಿವರ

ಬೆಂಗಳೂರು: ಶನಿವಾರ ವಾರಾಂತ್ಯದ ರಜೆ ಇದೆಯೆಂದು ಚಿನಿವಾರ ಪೇಟೆಗೆ ಹೋದರೆ ಇಂದು ತುಸು ಹೆಚ್ಚು ದರ ನೀಡಬೇಕು. ನಿನ್ನೆಗೆ ಹೋಲಿಸಿದರೆ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬಳ್ಳಾರಿ ಸೇರಿದಂತೆ ವಿವಿಧ ನಗರಗಳಲ್ಲಿ ಚಿನ್ನದ ದರ ಏರಿಕೆ ಕಂಡಿದೆ.

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,500 ರೂ ಇದೆ. ನಿನ್ನೆಯ 5,490 ರೂ ದರಕ್ಕೆ ಹೋಲಿಸಿದರೆ ರೂ., 10 ಏರಿಕೆಯಾಗಿದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 44,000 ರೂ ಆಗಿದೆ. ನಿನ್ನೆ 43,920 ರೂ., ಇತ್ತು. ನಿನ್ನೆಗೆ ಹೋಲಿಸಿದರೆ ಇಂದು 80 ರೂ ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 55,000 ರೂ. ಇದೆ. ನಿನ್ನೆಯ54,900 ರೂ. ಗೆ ಹೋಲಿಸಿದರೆ 100 ರೂ., ಏರಿಕೆಯಾಗಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,50,000 ರೂ. ನೀಡಬೇಕು. ನಿನ್ನೆಯ 5,49,000ರೂ.ಗೆ ಹೋಲಿಸಿದರೆ ಇಂದು 1000 ರೂ. ಏರಿಕೆಯಾಗಿದೆ.

24 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 6,000 ರೂ. ಇದೆ. ನಿನ್ನೆಯ 5,989 ರೂ.ಗೆ ಹೋಲಿಸಿದರೆ 11 ರೂ. ಏರಿಕೆಯಾಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48,000ರೂ. ನೀಡಬೇಕಾಗುತ್ತದೆ. ನಿನ್ನೆ 47,912 ರೂ. ಇತ್ತು. ಇಂದು 88 ರೂ., ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 60,000ರೂ. ಇದೆ. ನಿನ್ನೆಯ59,890 ರೂ. ಗೆ ಹೋಲಿಸಿದರೆ 110 ರೂ. ಏರಿಕೆಯಾಗಿದೆ. ಇಂದು ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 6,00,000 ರೂ. ನೀಡಬೇಕು. ನಿನ್ನೆಯ 5,98,900 ರೂ.ಗೆ ಹೋಲಿಸಿದರೆ ಇಂದು 1100 ರೂ. ಏರಿಕೆಯಾಗಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 55,000 ರೂ. ಇದೆ. ಮಂಗಳೂರು 55,000 ರೂ., ಮೈಸೂರಿನಲ್ಲಿ 55,000 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು. ಚೆನ್ನೈನಲ್ಲಿ 55,300 ರೂ., ಮುಂಬೈನಲ್ಲಿ 55,000 ರೂ., ದೆಹಲಿಯಲ್ಲಿ 55,150 ರೂ., ಕೋಲ್ಕತಾದಲ್ಲಿ 55,000 ರೂ., ಹೈದರಾಬಾದ್‌ 55,000 ರೂ., ಕೇರಳ 55,000 ರೂ., ಪುಣೆ 55,000 ರೂ., ಅಹಮದಾಬಾದ್‌ 55,050 ರೂ., ಜೈಪುರ 55,150 ರೂ., ಲಖನೌ 55,150 ರೂ., ಕೊಯಮುತ್ತೂರು 55,300 ರೂ., ಮಧುರೈ 55,300 ರೂ. ಹಾಗೂ ವಿಜಯವಾಡ 55,000 ರೂ., ಇದೆ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್‌ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರಿನಲ್ಲಿ 60,000 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,330 ರೂ., ಮುಂಬೈನಲ್ಲಿ 60,000 ರೂ., ದೆಹಲಿಯಲ್ಲಿ 60,150 ರೂ., ಕೋಲ್ಕತಾದಲ್ಲಿ 60,000 ರೂ., ಹೈದರಾಬಾದ್‌ 60,000 ರೂ., ಕೇರಳ 60,000 ರೂ., ಪುಣೆ 60,000 ರೂ., ಅಹಮದಾಬಾದ್‌ 60,050 ರೂ., ಜೈಪುರ 60,150 ರೂ., ಲಖನೌ 60,150 ರೂ., ಕೊಯಮುತ್ತೂರು 60,330 ರೂ., ಮದುರೈ 60,330, ವಿಜಯವಾಡ 60,000 ರೂ. ಇದೆ.

ಬೆಳ್ಳಿ ದರ ಎಷ್ಟು?

ಚಿನಿವಾರ ಪೇಟೆಯ ಅಪ್‌ಡೇಟ್‌ ಪ್ರಕಾರ ಬುಧವಾರದ ಬೆಳ್ಳಿ ದರ ತಟಸ್ಥವಾಗಿದೆ. ನಿನ್ನೆಯ ದರದಲ್ಲಿಯೇ ಇಂದು ಖರೀದಿಸಬಹುದು. ಒಂದು ಗ್ರಾಂ ಬೆಳ್ಳಿಗೆ 74 ರೂ., 8 ಗ್ರಾಂ ಬೆಳ್ಳಿಗೆ 592 ರೂ., 10 ಗ್ರಾಂ ಬೆಳ್ಳಿ ದರ 740 ರೂ., 100 ಗ್ರಾಂ ಬೆಳ್ಳಿಗೆ 7,400 ಮತ್ತು 1 ಕೆ.ಜಿ. ಬೆಳ್ಳಿ ದರ 74,000 ರೂಪಾಯಿ ಇದೆ.