Gold Rate Today; ಹೊಳಪು ಕಳೆದುಕೊಳ್ಳದ ಚಿನ್ನ ಬೆಳ್ಳಿ ದರ ಬೆಂಗಳೂರು, ಮಂಗಳೂರು ಮೈಸೂರಲ್ಲಿ ಹೀಗಿದೆ
Gold Silver Rate Today; ಎಲ್ಲ ರೀತಿಯಿಂದಲೂ ಹೊಳಪು ಕಳೆದುಕೊಳ್ಳದ ಚಿನ್ನ ಮತ್ತು ಬೆಳ್ಳಿ ಈಗ ಹೂಡಿಕೆದಾರರಿಗೂ ಅಚ್ಚುಮೆಚ್ಚು. ಮೌಲ್ಯ ಕಳೆದುಕೊಳ್ಳದ ಚಿನ್ನ ಬೆಳ್ಳಿ ದರ ಹೇಗಿದೆ ಎಂದು ಗಮನಿಸಿಕೊಂಡೇ ದಿನಚರಿ ಆರಂಭಿಸುವವರಿಗಾಗಿ ಈ ಸುದ್ದಿ.
ಬೆಂಗಳೂರು: ಚಿನ್ನ ಬೆಳ್ಳಿ ಖರೀದಿ ಮಾಡುತ್ತಾರೋ ಬಿಡುತ್ತಾರೋ, ಚಿನ್ನಾಭರಣ ಪ್ರಿಯರ ದಿನಚರಿ ಶುರುವಾಗುವುದೇ ಚಿನ್ನ ಬೆಳ್ಳಿ ದರ ಎಷ್ಟು ಎಂಬುದನ್ನು ಗಮನಿಸುವುದರ ಮೂಲಕವೇ. ನಿತ್ಯ ಬೆಳಗೆದ್ದು ಚಿನ್ನ ಬೆಳ್ಳಿ ದರ ನೋಡಿಕೊಂಡರೆ ಒಂಥರಾ ಸಮಾಧಾನ. ಕಾರಣ ಚಿನ್ನ ಬೆಳ್ಳಿ ಎರಡೂ ಈಗ ಆಪದ್ಧನಗಳ ಸಾಲಿಗೆ ಸೇರಿವೆ. ತಮ್ಮ ಬಳಿ ಇರುವ ಚಿನ್ನಾಭರಣಗಳ ಮೌಲ್ಯ ಗಮನಿಸಿಕೊಂಡು ಸಮಾಧಾನ ಪಡುವವರೂ ಇದ್ದಾರೆ.
ಇರಲಿ, ಈಗ ಚಿನ್ನ ಬೆಳ್ಳಿ ದರಗಳ ಕಡೆಗೆ ಗಮನಹರಿಸೋಣ. ಭಾರತದಲ್ಲಿ ಶುಕ್ರವಾರ (ಆಗಸ್ಟ್ 2) ವಹಿವಾಟಿನ ಕೊನೆಗೆ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 64,800 ರೂಪಾಯಿ ಇತ್ತು. ಇದು ಹಿಂದಿನ ದಿನಕ್ಕೆ ಹೋಲಿಸಿದರೆ 300 ರೂಪಾಯಿ ಹೆಚ್ಚು. ಇದೇ ರೀತಿ, 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 70,690 ರೂಪಾಯಿ ಇತ್ತು. ಇದು ಕೂಡ ಅಷ್ಟೆ ಹಿಂದಿನ ದಿನದ ವಹಿವಾಟಿಗೆ ಹೋಲಿಸಿದರೆ 330 ರೂಪಾಯಿ ಹೆಚ್ಚು. ಇನ್ನು ಬೆಳ್ಳಿ ದರದ ಕಡೆಗೆ ಗಮನಹರಿಸಿದರೆ, ಒಂದು ಕಿಲೋ ಬೆಳ್ಳಿಯ ಬೆಲೆ 87,200 ರೂಪಾಯಿ ಇತ್ತು. ಇದು ಹಿಂದಿನ ದಿನದ (ಗುರುವಾರ) ವಹಿವಾಟಿಗೆ ಹೋಲಿಸಿದರೆ 100 ರೂಪಾಯಿ ಹೆಚ್ಚು.
ಬೆಂಗಳೂರು, ಮಂಗಳೂರು, ಮೈಸೂರುಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ದರ (22 carat gold rate)
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಆಭರಣ ಚಿನ್ನದ ಇಂದಿನ ಬೆಲೆ 10 ಗ್ರಾಂಗೆ ಹೀಗಿದೆ.
ಬೆಂಗಳೂರು- 64,800 ರೂಪಾಯಿ.
ಮಂಗಳೂರು- 64,800 ರೂಪಾಯಿ.
ಮೈಸೂರು- 64,800 ರೂಪಾಯಿ.
ಚೆನ್ನೈ- 64,460 ರೂಪಾಯಿ.
ಮುಂಬೈ- 64,800 ರೂಪಾಯಿ.
ದೆಹಲಿ- 64,950 ರೂಪಾಯಿ.
ಕೋಲ್ಕತ- 64,800 ರೂಪಾಯಿ.
ಹೈದರಾಬಾದ್- 64,800 ರೂಪಾಯಿ.
ಕೇರಳ- 64,800 ರೂಪಾಯಿ.
ಪುಣೆ- 64,800 ರೂಪಾಯಿ.
ಬೆಂಗಳೂರು, ಮಂಗಳೂರು, ಮೈಸೂರಿಗಳಲ್ಲಿ ಇಂದು ಅಪರಂಜಿ ಚಿನ್ನ (24 carat gold rate)ದ ದರ
ಬೆಂಗಳೂರು- 70,690 ರೂಪಾಯಿ.
ಮಂಗಳೂರು- 70,690 ರೂಪಾಯಿ.
ಮೈಸೂರು- 70,690 ರೂಪಾಯಿ.
ಚೆನ್ನೈ- 70,470 ರೂಪಾಯಿ.
ಮುಂಬೈ- 70,690 ರೂಪಾಯಿ.
ದೆಹಲಿ- 70,840ರೂಪಾಯಿ.
ಕೋಲ್ಕತ- 70,690 ರೂಪಾಯಿ.
ಹೈದರಾಬಾದ್- 70,690 ರೂಪಾಯಿ.
ಕೇರಳ- 70,690 ರೂಪಾಯಿ.
ಪುಣೆ- 70,690 ರೂಪಾಯಿ.
ದೇಶದ ಪ್ರಮುಖ ನಗರಗಳಲ್ಲಿ ಒಂದು ಕಿಲೋ ಬೆಳ್ಳಿಯ ದರ (Silver Rate Today): ಬೆಂಗಳೂರು- 86,000 ರೂಪಾಯಿ, ಮೈಸೂರು- 86,000 ರೂಪಾಯಿ, ಮಂಗಳೂರು- 86,000 ರೂಪಾಯಿ, ಮುಂಬೈ- 87,200 ರೂಪಾಯಿ, ಚೆನ್ನೈ- 91,000 ರೂಪಾಯಿ, ದೆಹಲಿ- 86,500 ರೂಪಾಯಿ, ಹೈದರಾಬಾದ್- 91,000 ರೂಪಾಯಿ, ಕೋಲ್ಕತ್ತ-86,500 ರೂಪಾಯಿ ಇದೆ.